ಹೋಂಡಾ 150ಸಿಸಿ ಸ್ಪೋರ್ಟ್ ಬೈಕ್ ರೈಡಿಗೆ ರೆಡಿಯಾಗಿ..

ಜಪಾನಿನ ಬೈಕ್ ಕಂಪನಿಯ ಅಂಗಸಂಸ್ಥೆ ಎಚ್ ಎಂಎಸ್ಐ ಮಾರ್ಚ್ ತಿಂಗಳಲ್ಲಿ ಪರಿಚಿಸುವ ಬೈಕಿನ ದರ 1.15 ಲಕ್ಷ ರು. ಆಸುಪಾಸಿನಲ್ಲಿರಲಿದೆ. ಹೀಗಾಗಿ ಇದು ಬಜಾಜ್ ಕೆಟಿಎಂ ಡ್ಯೂಕ್ 200 ಬೈಕಿಗೆ ನೇರವಾದ ಪ್ರತಿಸ್ಪರ್ಧೆ ಒಡ್ಡಲಿದೆ. ಕೆಟಿಎಂ ಡ್ಯೂಕ್ ಬೈಕ್ ದರ 1.17 ಲಕ್ಷ ರು. ಆಸುಪಾಸಿನಲ್ಲಿದೆ.
ಸಿಬಿಆರ್ 150ಆರ್ ಬೈಕ್ 150ಸಿಸಿ ಎಂಜಿನ್ ಹೊಂದಿದೆ. ಈಗ ರಸ್ತೆಯಲ್ಲಿರುವ ಸಿಬಿಆರ್250ಆರ್ ದರ ಸುಮಾರು 1.45 ಲಕ್ಷ ರು. ಆಸುಪಾಸಿನಲ್ಲಿದೆ. ನೂತನ ಬೈಕ್ ಯಮಹಾ ಆರ್15ಗೂ ಪೈಪೋಟಿ ನೀಡಲಿದೆ. ಯಮಹಾ ಆರ್15 ದರ ಸುಮಾರು 1.07 ಲಕ್ಷ ರು. ಇದೆ.
ಆದರೆ ಹೋಂಡಾ 150ಸಿಸಿಗೆ ಹೋಲಿಸಿದರೆ ಬಜಾಜ್ ಕೆಟಿಎಂ ಹೆಚ್ಚು ಶಕ್ತಿಶಾಲಿಯಾಗಿದೆ. ಕಳೆದ ತಿಂಗಳು ದೆಹಲಿಯಲ್ಲಿ ನಡೆದ ವಾಹನ ಪ್ರದರ್ಶನದಲ್ಲಿ ಎಚ್ಎಂಎಸ್ಐ ಸಿಬಿಆರ್150ಆರ್ ಬೈಕನ್ನು ಪ್ರದರ್ಶಿಸಿತ್ತು. ಆದರೆ ಆಗ ನೂತನ ಬೈಕ್ ದರವನ್ನು ಪ್ರಕಟಿಸಿರಲಿಲ್ಲ.
ಕಂಪನಿಯು ಒಂದು ಸಾವಿರ ಸಿಸಿಯ ಸಿಬಿಆರ್ ಬೈಕನ್ನು ಕೂಡ ದೇಶದ ರಸ್ತೆಗೆ ಪರಿಚಯಿಸಲಿದೆಯಂತೆ. (ಕನ್ನಡ ಡ್ರೈವ್ ಸ್ಪಾರ್ಕ್ )


Click it and Unblock the Notifications








