ಮಳೆಗಾಲದಲ್ಲಿ ಸುರಕ್ಷಿತ ಚಾಲನೆ; 10 ಸಲಹೆಗಳು
"ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ" ಈ ಜನಪ್ರಿಯ ಹಾಡನ್ನೊಮ್ಮ ಕೇಳಿನೋಡಿ. ಹೌದು, ಪ್ರತಿಯೊಬ್ಬರೂ ಮಳೆಯನ್ನು ಪ್ರೀತಿಸುತ್ತಾರೆ. ಆದರೆ ಮಳೆಗಾಲದಲ್ಲಿ ವಾಹನ ಚಾಲನೆ ಮಾತ್ರ ತುಂಬಾನೇ ಕಷ್ಟ. ಮಳೆ..ಎಲ್ಲೆಲ್ಲೂ ಮಳೆ..ಮಳೆ ಬಂತೆದಂರೆ ಸಾಕು ರಸ್ತೆಯೆಲ್ಲ ನೀರು, ಕೆಸರಾಗಿ ಮಾರ್ಪಡುತ್ತದೆ. ಅಷ್ಟಕ್ಕೂ ಮಳೆ ಬಂದ ಮೇಲೆ ಕಾರು ಸವಾರಿಯಂತೂ ಸಾಹಸ ಮಾಡಿದ್ದಂತೆ.
ಅಂದ ಹಾಗೆ ಮಳೆಗಾಲದಲ್ಲಿ ವಾಹನ ಸಂಚಾರ ಎಷ್ಟು ಆನಂದದಾಯಕವೋ ಅಷ್ಟೇ ಸವಾಲಿನಿಂದ ಕೂಡಿರುತ್ತದೆ. ಹಾಗಾಗಿ ನಿಮ್ಮ ಸುರಕ್ಷತೆಗಾಗಿ, ಮಳೆಗಾಲದಲ್ಲಿ ಡ್ರೈವಿಂಗ್ ಮಾಡುವುದನ್ನು ಸಾಧ್ಯವಾದಷ್ಟು ತಪ್ಪಿಸಿದರೆ ಒಳಿತು. ಅದರಲ್ಲಂತೂ ಧಾರಾಕಾರ ಮಳೆಯಾಗುತ್ತಿರುವ ಸಂದರ್ಭದಲ್ಲಿ ಹಾಗೆಯೇ ರಾತ್ರಿ ವೇಳೆಯಲ್ಲಿ ದೂರ ಪ್ರಯಾಣವನ್ನು ಕೈಗೊಳ್ಳದಿರಿ. ಅಷ್ಟಕ್ಕೂ ಮಳೆಗಾಲದಲ್ಲಿ ಸುರಕ್ಷಿತ ಚಾಲನೆಗಾಗಿ ಡ್ರೈವ್ ಸ್ಪಾರ್ಕ್ 10 ಸಲಹೆಗಳನ್ನು ನಿಮ್ಮ ಮುಂದಿಡುತ್ತಿದೆ.

ಮುನ್ನೆಚ್ಚರಿಕೆ
ವಿಶೇಷವಾಗಿಯೂ ಮಳೆಗಾಲದಲ್ಲಿ ನೀವು ಸ್ವಲ್ಪನೂ ಅಚಾತುರ್ಯ ತೋರಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾಗಿ ಕೆಲವೊಂದು ಮುನ್ನಚ್ಚೆರಿಕೆಗಳನ್ನು ಅನುಸರಿಸಿದರೆ ಒಳಿತು.

ಮಳೆಗಾಲದಲ್ಲಿ ಕಾರು ಚಾಲನೆ
ಮಳೆಗಾಲದಲ್ಲಿ ಡ್ರೈವಿಂಗ್ ಸಂದರ್ಭದಲ್ಲಿ ಅದರಲ್ಲೂ ವಿಶೇಷವಾಗಿಯೂ ರಾತ್ರಿ ವೇಳೆಯಲ್ಲಿ ಕಾರು ಚಲಾಯಿಸುತ್ತಿರುವಾಗ ಬಹುತೇಕ ಮಾರ್ಗ ಮಧ್ಯೆ ಸಂಚರಿಸುತ್ತಿರುವುದಾಗಿ ಖಾತ್ರಿಪಡಿಸಿ. ಇದರರ್ಥ ಲೇನ್ ನಿಯಮ ಉಲ್ಲಂಘಿಸಬೇಕೇಂದಲ್ಲ. ಬದಲಾಗಿ ಬದಿಗೆ ಸರಿಯುವುದನ್ನು ಸಾಧ್ಯವಾದಷ್ಟು ತಪ್ಪಿಸಿ...

ಮುಂದಿರುವ ವಾಹನವನ್ನು ಹಿಂಬಾಲಿಸಿ
ಜೋರಾಗಿ ಮಳೆ ಸುರಿಯುತ್ತಿರುವ ಸಂದರ್ಭದಲ್ಲಿ ಮುಂದಿರುವ ವಾಹನವನ್ನು ಓವರ್ ಟೇಕ್ ಮಾಡುವ ಗೋಜಿಗೆ ಹೋಗದಿರಿ. ಅಲ್ಲದೆ ಮುಂದಿನ ವಾಹನದೊಂದಿಗೆ ಸ್ವಲ್ಪ ಅಂತರವನ್ನು ಕಾಯ್ದುಕೊಳ್ಳಿ. ಇದರಿಂದ ಬ್ರೇಕ್ ಒತ್ತುವಷ್ಟು ಸದಾವಕಾಶ ನಿಮಗೆ ದೊರಕಲಿದೆ.

ನಿಧಾನವಾಗಿ ಚಲಿಸಿ...
ನಿಧಾನವೇ ಪ್ರಧಾನ. ಅವಸರವೇ ಅಘಾತಕ್ಕೆ ಕಾರಣ ಎಂಬ ವಾಹನ ವೇದ ವ್ಯಾಕವನ್ನು ಮರೆಯದಿರಿ.

ಕ್ರೂಸ್ ಕಂಟ್ರೋಲ್
ಇಂದಿನ ಎಲ್ಲ ಆಧುನಿಕ ಕಾರುಗಳಲ್ಲಿ ಕ್ರೂಸ್ ಕಂಟ್ರೋಲ್‌ಗಳಿರುತ್ತದೆ. ಆದರೆ ಮಳೆಗಾಲದಲ್ಲಿ ಇದರ ಬಳಕೆ ಸೂಕ್ತವಲ್ಲ. ಯಾಕೆಂದರೆ ಸಡನ್ ಬ್ರೇಕ್ ಹಾಕಿದ ಸಂದರ್ಭದಲ್ಲಿ ಕಾರು ಸ್ಕಿಡ್ ಆಗುವ ಸಂಭವವಿದೆ.

ಬ್ರೇಕ್ ಪರೀಕ್ಷೆ
ಇನ್ನು ಮಳೆಗಾಲ ಆರಂಭಕ್ಕೂ ಮುನ್ನ ಹಾಗೆಯೇ ಮಳೆಗಾಲ ಸಂದರ್ಭದಲ್ಲಿ ಬ್ರೇಕ್ ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂಬುದನ್ನು ಆಗಾಗ ಪರೀಕ್ಷೆ ಮಾಡಿಸಿಕೊಳ್ಳಲು ಮರೆಯದಿರಿ. ನಿಧಾನವಾಗಿಯೇ ಬ್ರೇಕ್‌ಗಳನ್ನು ಹಾಕಿ. ಯಾಕೆಂದರೆ ರಸ್ತೆಗಳಲ್ಲಿ ತುಂಬಾ ನೀರು ತುಂಬಿಕೊಂಡಿರುವಾಗ ಬ್ರೇಕ್ ರಬ್ಬರ್‌ಗಳು ಒದ್ದೆಯಾಗುತ್ತದೆ. ಇದೂ ಬ್ರೇಕ್ ಮೇಲೆ ಪರಿಣಾಮ ಬೀರಲಿದ್ದು, ನಿಮ್ಮ ನಿಯಂತ್ರಣಕ್ಕೆ ಬರಲಿದೆ ಎಂಬುದರಲ್ಲಿ ಯಾವುದೇ ಗ್ಯಾರಂಟಿ ಇಲ್ಲ.

ರಾತ್ರಿ ಪಯಣ ಬೇಡ
ಈ ಮೊದಲೇ ತಿಳಿಸಿರುವಂತೆಯೇ ರಾತ್ರಿ ಪಯಣವನ್ನು ಸಾಧ್ಯವಾದಷ್ಟು ತಡೆಗಟ್ಟಿರಿ.

ಗೌರವ ನೀಡಿ ಗೌರವ ಗಳಿಸಿ
ಇತರ ಹಗುರ ಹಾಗೂ ಘನ ವಾಹನಗಳಿಗೆ ಗೌರವ ನೀಡುತ್ತಾ ಡ್ರೈವಿಂಗ್ ಮುಂದುವರಿಯಿರಿ. ಇದರಿಂದ ಸಾಧ್ಯವಾದಷ್ಟು ಅಪಾಯವನ್ನು ದೂರವಿರಿಸಬಹುದು.

ಕೆಸರು ರಸ್ತೆಯಲ್ಲಿ ಪಯಣ ಬೇಡ
ಗ್ರಾಮೀಣ ಪ್ರದೇಶದಲ್ಲಿ ಕೆಸರಿನಿಂದ ಆವೃತ್ತವಾದ ಆಫ್ ರೋಡ್‌ಗಳು ಹೆಚ್ಚಾಗಿ ಕಾಣಸಿಗುತ್ತದೆ. ಇಂತಹ ಪಯಣವನ್ನು ಸಾಧ್ಯವಾದಷ್ಟು ತಪ್ಪಿಸಿದರೆ ಒಳಿತು.

ವೈಪರ್, ಚಕ್ರ ಪರೀಕ್ಷೆ
ಮಳೆಗಾಲದಲ್ಲಿ ವಾಹನದಲ್ಲಿ ಡ್ರೈವಿಂಗ್ ಮಾಡುವ ಮುನ್ನ ವೈಪರ್ ಸಮರ್ಪಕವಾಗಿದೆಯೇ ಪರಿಶೀಲಿಸಿರಿ. ಹಾಗೆಯೇ ಟೈರ್‌ಗಳು ಸರಿಯಾದ ಟ್ರೆಡ್ ಡೆಪ್ತ್ ಹೊಂದಿದ್ದೀಯಾ ಎಂಬುದನ್ನು ಪರೀಕ್ಷಿಸಿ..


Click it and Unblock the Notifications








