ಕಾರಿನ ವಿಂಡ್‌ಶೀಲ್ಡ್ ಉತ್ತಮವಾಗಿಡುವ ಸರಳ ವಿಧಾನಗಳಿವು

ವಿಂಡ್‌ಶೀಲ್ಡ್ ಕಾರಿನ ಅವಿಭಾಜ್ಯ ಅಂಗವಾಗಿದೆ. ಆದರೆ ಹೆಚ್ಚಿನ ಜನರು ವಿಂಡ್‌ಶೀಲ್ಡ್‌ಗೆ ಅಷ್ಟು ಪ್ರಾಮುಖ್ಯತೆಯನು ನೀಡುವುದಿಲ್ಲ. ಕಾರಿನ ಇತರ ಭಾಗಗಳಂತೆ ವಿಂಡ್‌ಶೀಲ್ಡ್ ನಿರ್ವಹಣೆಗೂ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವುದು ಬಹಳ ಮುಖ್ಯಾವಾಗಿದೆ.

ಕಾರಿನ ವಿಂಡ್‌ಶೀಲ್ಡ್ ಉತ್ತಮವಾಗಿಡುವ ಸರಳ ವಿಧಾನಗಳಿವು

ವಿಂಡ್‌ಶೀಲ್ಡ್ ಸದಾ ಸ್ವಚ್ಚವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯಾವಾಗಿದ್ದು, ಇಲ್ಲದಿದ್ದರೆ ಚಾಲಕನಿಗೆ ಸರಿಯಾಗಿ ಮುಂಬಾಗ ಕಾಣುವುದಿಲ್ಲ. ವಿಂಡ್‌ಶೀಲ್ಡ್ ಅಪಘಾತದ ಸಮಯದಲ್ಲಿ ಇದು ಸಾಕಷ್ಟು ಪರಿಣಾಮ ಬೀರುತ್ತದೆ, ಇನ್ನು ಕಾರಿನ ಮುಂಭಾಗಕ್ಕೆ ಚಿಕ್ಕ ಕಲ್ಲು ಅಥವಾ ಪುಟ್ಟದಾದ ವಸ್ತುಗಳು ಬಿದ್ದಾಗ ವಿಂಡ್‌ಶೀಲ್ಡ್ ರಕ್ಷಣೆಯನ್ನು ನೀಡುತ್ತದೆ. ಇದರಿಂದ ವಿಂಡ್‌ಶೀಲ್ಡ್ ಅನ್ನು ಉತ್ತಮವಾಗಿಡುವುದು ನಿಮ್ಮ ಕಾರಿನ ಇತರ ಭಾಗಗಳಷ್ಟೇ ಮುಖ್ಯವಾಗಿದೆ. ಇದರಿಂದ ಕಾರಿನ ವಿಂಡ್‌ಶೀಲ್ಡ್ ಉತ್ತಮವಾಗಿಡುವ ಸರಳ ವಿಧಾನಗಳು ಇಲ್ಲಿವೆ.

ಕಾರಿನ ವಿಂಡ್‌ಶೀಲ್ಡ್ ಉತ್ತಮವಾಗಿಡುವ ಸರಳ ವಿಧಾನಗಳಿವು

ವೈಪರ್ ಬದಲಾಯಿಸಿ

ನಿಮ್ಮ ಕಾರಿನ ಪ್ರತಿ ಆರು ತಿಂಗಳಿಗೊಮ್ಮೆ ವೈಪರ್‌ಗಳನ್ನು ಬದಲಾಯಿಸಬೇಕು, ಆದರೆ ವಿಂಡ್‌ಶೀಲ್ಡ್‌ನಲ್ಲಿ ಸ್ಕ್ರ್ಯಾಚ್ ಗುರುತುಗಳನ್ನು ಬಿಳುತ್ತಿದ್ದರೆ ನೀವು ಅದಕ್ಕೂ ಮೊದಲೇ ಬದಲಾಯಿಸಬಹುದು.. ಸೂರ್ಯನ ಬೆಳಕು ನೇರವಾಗಿ ಬೀಳುವ ಪ್ರದೇಶಗಳಲ್ಲಿ ಕಾರು ಪಾರ್ಕ್ ಮಾಡಿದರೆ ಅದರ ಶಾಖಕ್ಕೆ ವೈಪರ್ ರಬ್ಬರ್ ಬೇಗ ಕರಗುತ್ತದೆ. ಮತ್ತು ಅದು ನಿಮ್ಮ ವಿಂಡ್‌ಶೀಲ್ಡ್ ಅನ್ನು ಹಾನಿಗೊಳಿಸುತ್ತದೆ.

MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಕಾರಿನ ವಿಂಡ್‌ಶೀಲ್ಡ್ ಉತ್ತಮವಾಗಿಡುವ ಸರಳ ವಿಧಾನಗಳಿವು

ನೀವು ಹಾನಿಗೊಳಗಾದ ವೈಪರ್ ಅನ್ನು ಬಳಸುವಾಗ, ಅದು ವಿಂಡ್‌ಶೀಲ್ಡ್‌ನಲ್ಲಿ ಅನ್ನು ಶಾಶ್ವತವಾಗಿ ಹಾನಿಗೊಳಿಸುತ್ತದೆ. ಇನ್ನು ನೀರಲ್ಲದೇ ಬರಿ ವೈಪರ್ ಅನ್ನು ಆನ್ ಮಾಡಬೇಡಿ. ನೀರು ಇರುವಾಗ ವೈಪರ್ ಅನ್ನು ಬಳಿಸಿ.

ಕಾರಿನ ವಿಂಡ್‌ಶೀಲ್ಡ್ ಉತ್ತಮವಾಗಿಡುವ ಸರಳ ವಿಧಾನಗಳಿವು

ಅಂತರವನ್ನು ಕಾಪಾಡಿ

ನಿಮ್ಮ ಮುಂದೆ ಹೋಗುವ ವಾಹನದಿಂದ ನೀವು ಯಾವಾಗಲೂ ಉತ್ತಮ ಮತ್ತು ಸುರಕ್ಷಿತ ದೂರವನ್ನು ಕಾಯ್ದುಕೊಳ್ಳಬೇಕು. ಏಕೆಂದರೆ ಮುಂಭಾಗದಲ್ಲಿ ಚಲಿಸುವ ಕಾರಿನ ಹಿಂಬದಿಯ ಚಕ್ರಕ್ಕೆ ತಗುಲಿ ರಸ್ತೆಯಲ್ಲಿದ್ದ ಕಲ್ಲುಗಳು ಅಥವಾ ಇನ್ನಿತರ ವಸ್ತುಗಳು ನಿಮ್ಮ ಕಾರಿನ ವಿಂಡ್‌ಶೀಲ್ಡ್ ಮೇಲೆ ಹಾರಬಹುದು.

MOST READ: ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳಿವು

ಕಾರಿನ ವಿಂಡ್‌ಶೀಲ್ಡ್ ಉತ್ತಮವಾಗಿಡುವ ಸರಳ ವಿಧಾನಗಳಿವು

ಚಿಕ್ಕ ಕಲ್ಲುಗಳು ಅದರೂ ಸಹ ಅದು ಬಂದು ಹೊಡೆಯುವ ವೇಗಕ್ಕೆ ನಿಮ್ಮ ವಿಂಡ್‌ಶೀಲ್ಡ್ ಅನ್ನು ಹಾನಿಗೊಳಿಸಬಹುದು. ಇದನ್ನು ಗಮನದಲ್ಲಿಟ್ಟು ಕಾರು ಚಲಾಯಿಸುವಾಗ ಮುಂಭಾಗದ ವಾಹನೊದೊಂದಿಗೆ ಒಂದು ನಿಯಮಿತ ಅಂತರವನ್ನು ಕಾಪಾಡಿಗೊಳ್ಳಿ.

ಕಾರಿನ ವಿಂಡ್‌ಶೀಲ್ಡ್ ಉತ್ತಮವಾಗಿಡುವ ಸರಳ ವಿಧಾನಗಳಿವು

ನ್ಯೂಸ್ ಪೇಪರ್ ಬಳಿಸಿ

ಇನ್ನು ನೀವು ಕಾರಿನ ವಿಂಡ್‌ಶೀಲ್ಡ್ ಸ್ವಚ್ಚಗೊಳಿಸುವಾಗ ಅಥವಾ ಕಲೆ ಬೀಳುವುದು ಏನಾದರೂ ಬಿದ್ದಾಗ ಬ್ರಷ್ ಗಳನ್ನು ಬಳಸಬೇಡಿ. ನೀರು ಹಾಕಿ ಬಳಿಕ ನ್ಯೂಸ್ ಪೇಪರ್ ಬಳಿಸಿ ವಿಂಡ್‌ಶೀಲ್ಡ್ ಅನ್ನು ಸ್ವಚ್ಚಗೊಳಿಸಬಹುದು.

MOST READ: ಕರೋನಾ ವೈರಸ್ ಬಗ್ಗೆ ಜನ ಜಾಗೃತಿ ಮೂಡಿಸಲು ಉಬರ್ ಜೊತೆಗೆ ಕೈಜೋಡಿಸಿದ ಪೊಲೀಸ್ ಇಲಾಖೆ

ಕಾರಿನ ವಿಂಡ್‌ಶೀಲ್ಡ್ ಉತ್ತಮವಾಗಿಡುವ ಸರಳ ವಿಧಾನಗಳಿವು

ನೆರಳಿನಲಿ ಕಾರು ಪಾರ್ಕ್ ಮಾಡಿ

ಸೂರ್ಯನ ಶಾಖವು ಕಾರಿನ ದೊಡ್ಡ ಶತ್ರುಗಳಲ್ಲಿ ಒಂದಾಗಿದೆ. ನಿಮ್ಮ ಕಾರನ್ನು ಯಾವಾಗಲೂ ಗ್ಯಾರೇಜ್‌ನಲ್ಲಿ ನಿಲ್ಲಿಸುವುದು ಉತ್ತಮವಾಗಿದೆ. ನೀವು ಗ್ಯಾರೇಜ್ ಹೊಂದಿಲ್ಲದಿದ್ದರೆ, ನೀವು ಕಾರನ್ನು ನೆರಳಿನಲ್ಲಿ ನಿಲ್ಲಿಸಬಹುದು ಅಥವಾ ಸೂರ್ಯ ಕಿರಣಗಳಿಂದ ನಿಮ್ಮ ಕಾರನ್ನು ರಕ್ಷಿಸುವ ಉತ್ತಮ ಗುಣಮಟ್ಟದ ಕವರ್ ಬಳಸಬಹುದು.

ಕಾರಿನ ವಿಂಡ್‌ಶೀಲ್ಡ್ ಉತ್ತಮವಾಗಿಡುವ ಸರಳ ವಿಧಾನಗಳಿವು

ಕಾರಿನ ಗಾಜು ಶಾಖವನ್ನು ಹೀರಿಕೊಳ್ಳುತ್ತದೆ ಮತ್ತು ಹೊರಗಿನ ತಾಪಮಾನಕ್ಕಿಂತ ಆಂತರಿಕ ತಾಪಮಾನವು ಹೆಚ್ಚಿಸುತ್ತದೆ. ಇದು ವಿಂಡ್‌ಶೀಲ್ಡ್ ಮತ್ತು ಇತರ ಗಾಜಿನ ಪ್ರದೇಶಗಳ ಮೇಲೆ ಒತ್ತಡವನ್ನುಂಟು ಮಾಡುತ್ತದೆ, ಅದು ವಿಂಡ್‌ಶೀಲ್ಡ್ ಒಡೆಯಲು ಕಾರಣವಾಗಬಹುದು. ಅಥವಾ ಹಿಂದಿನ ಬಿರುಕು ಹೊಂದಿದ್ದರೆ ಅದು ವಿಸ್ತರಿಸುತ್ತದೆ, ಅದು ವಿಂಡ್‌ಶೀಲ್ಡ್ ಅನ್ನು ಮತ್ತಷ್ಟು ದುರ್ಬಲಗೊಳ್ಳುತ್ತದೆ.

ಕಾರಿನ ವಿಂಡ್‌ಶೀಲ್ಡ್ ಉತ್ತಮವಾಗಿಡುವ ಸರಳ ವಿಧಾನಗಳಿವು

ನಿಮ್ಮ ಕಾರಿನ ಇತರ ಭಾಗಗಳಂತೆ ವಿಂಡ್‌ಶೀಲ್ಡ್ ನಿರ್ವಹಣೆಗೂ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿ. ವಿಂಡ್‌ಶೀಲ್ಡ್ ನಿರ್ವಹಣೆಯು ದೊಡ್ಡ ಕೆಲಸವಲ್ಲ. ಆದರೆ ಸ್ವಲ್ಫ ವಿಂಡ್‌ಶೀಲ್ಡ್ ಬಗ್ಗೆ ಗಮನಹರಿಸಿದರೆ ಸಾಕು. ಆದರೆ ಬಹುಮುಖ್ಯ ವಿಂಡ್‌ಶೀಲ್ಡ್ ಅನ್ನು ಸ್ವಚ್ಚವಾಗಿ ಇಡುವುದನ್ನು ಅಭ್ಯಾಸಮಾಡಿಕೊಳುವುದು ಬಹಳ ಉತ್ತಮವಾಗಿದೆ.

Most Read Articles

Kannada
English summary
How To Take Care Of Your Car’s Windshield. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X