ಕಾರು ವಾರಂಟಿ: ಖಾತರಿ ಕರಾರಿನ ಮಾಹಿತಿ ತಿಳ್ಕೊಳ್ಳಿ

ಹೊಸ ಕಾರು ಖರೀದಿಸುವಾಗ ವಾರಂಟಿ(ಖಾತರಿ ಕರಾರು) ಸಿಗುತ್ತದೆ. ಹೆಚ್ಚಿನ ಕಾರು ಕಂಪನಿಗಳು ಕಡಿಮೆಯೆಂದ್ರೂ 2 ವರ್ಷ ವಾರಂಟಿ ನೀಡುತ್ತವೆ. ಹೊಸ ಕಾರು ವಾರಂಟಿ ಅಂದ್ರೇನು? ವಾರಂಟಿ ಸಮರ್ಪಕ ಬಳಕೆ ಹೇಗೆ? ವಾರಂಟಿ ಅಸಿಂಧುವಾಗುವುದು ಯಾವಾಗ?

ಹೀಗೆ ವಾರಂಟಿ ಸಂಬಂಧಿತ ನೂರಾರು ಪ್ರಶ್ನೆಗಳು ನಿಮ್ಮಲ್ಲಿರಬಹುದು. ವಾರಂಟಿ ಕುರಿತಾಗಿ ಕಾರು ಡೀಲರ್, ಸರ್ವಿಸ್ ಸ್ಟೇಷನುಗಳಲ್ಲಿ ನಿಮಗೆ ಕಹಿ ಅನುಭವವೂ ಆಗಿರಬಹುದು. ಹೊಸ ಕಾರು ವಾರಂಟಿ ಕುರಿತಾದ ಸಮಗ್ರ ಮಾಹಿತಿ ನೀಡುವ ಪ್ರಯತ್ನ ಇಲ್ಲಿದೆ.

ಕಾರು ಕಂಪನಿ ಮತ್ತು ನಿಮ್ಮ ನಡುವಿನ ಕಾನೂನು ಒಪ್ಪಂದ ಇದಾಗಿದೆ. ಕಾರು ಹಾಳಾದರೆ ಬಿಡಿಭಾಗಗಳನ್ನು ರಿಪೇರಿ ಮಾಡಿಕೊಡುತ್ತೇವೆ ಅಥವಾ ಬದಲಿ ಹಾಕಿ ಕೊಡುತ್ತೇವೆ ಎಂಬ ಕರಾರು ಇದಾಗಿದೆ. ಹೆಚ್ಚುವರಿ ಹಣ ಪಾವತಿ ಮೂಲಕ ವಾರೆಂಟಿ ವಿಸ್ತರಣೆ ಅವಕಾಶವನ್ನೂ ಕೆಲವು ಕಾರುಕಂಪನಿಗಳು ಈಗ ನೀಡುತ್ತವೆ.

ಏನೆಲ್ಲ ಕವರ್ ಆಗುತ್ತೆ?: ಪ್ರಮುಖ ಮೆಕಾನಿಕಲ್ ಮತ್ತು ಎಲೆಕ್ಟ್ರಿಕಲ್ ಬಿಡಿಭಾಗಗಳು ಕವರ್ ಆಗಿರುತ್ತವೆ. ವಾರಂಟಿ ಕಾರ್ಡನ್ನು ಜಾಗರೂಕವಾಗಿ ಓದೋದು ಅತ್ಯಂತ ಮುಖ್ಯ. ಕಾರಿನಲ್ಲಿರುವ ಸಕಲ ಭಾಗಗಳೂ ವಾರಂಟಿಯ ವ್ಯಾಪ್ತಿಗೆ ಬರುವುದಿಲ್ಲವೆನ್ನುವ ಅಂಶವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ಬ್ರೇಕ್ ಪ್ಯಾಡ್, ಬಲ್ಬ್, ಕ್ಲಚ್ ಡಿಸ್ಕ್ ಮತ್ತು ಹೆಚ್ಚಿನ ರಬ್ಬರ್ ಭಾಗಗಳು ಹೆಚ್ಚಾಗಿ ವಾರಂಟಿ ವ್ಯಾಪ್ತಿಯಲ್ಲಿ ಇರುವುದಿಲ್ಲ. ವಿಶೇಷವೆಂದರೆ ಕಾರಿನ ಟೈರ್, ಬ್ಯಾಟರಿ ಇತ್ಯಾದಿಗಳಿಗೆ ಕಾರು ಕಂಪನಿ ವಾರಂಟಿ ನೀಡಿರುವುದಿಲ್ಲ. ಇವಕ್ಕೆ ಟೈರ್ ಅಥವಾ ಬ್ಯಾಟರಿ ಕಂಪನಿಗಳ ಪ್ರತ್ಯೇಕ ವಾರಂಟಿಗಳಿರುತ್ತವೆ.

ಹೀಗಾಗಿ ವಾರಂಟಿ ಪುಸ್ತಕವನ್ನೊಮ್ಮೆ ಜಾಗರೂಕತೆಯಿಂದ ಓದಿ ಏನೆಲ್ಲ ಕವರ್ ಆಗಿದೆ ಮತ್ತು ಏನೆಲ್ಲ ಕವರ್ ಆಗಿಲ್ಲವೆಂದು ತಿಳಿದುಕೊಳ್ಳಿ. ವಾರಂಟಿ ಮುಗಿಯೋ ಮುನ್ನ ಸದುಪಯೋಗ ಮಾಡಿಕೊಳ್ಳದಿದ್ರೆ ನಿಮ್ಗೆ ನಷ್ಟ ಗ್ಯಾರಂಟಿ! ಇದಕ್ಕಾಗಿ ಮುಂದಿನ ಪುಟದಲ್ಲಿರುವ ಮಾಹಿತಿಯನ್ನೂ ತಿಳಿದುಕೊಳ್ಳಿ.

More from DriveSpark

Article Published On: Monday, September 3, 2012, 14:11 [IST]
English summary
The warranty of your car is an important aspect. You must know the ecact details about the car's warranty such as the period, sidtance covered and the parts that are not covered by warranty.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+