ಮಳೆಗಾಲದಲ್ಲಿ ಕಾರ್ ಸ್ಟಾರ್ಟ್‌ ಮಾಡುವ ಮುನ್ನ ಎಚ್ಚರ: ಇವನ್ನು ಯಾರೂ ಹೇಳುವುದಿಲ್ಲ!

ಮಳೆಗಾಲ ಬಂತೆಂದರೆ ಸಾಕು ಕಾರು ಮಾಲೀಕರಿಗೆ ಕಾರುಗಳ ನಿರ್ವಹಣೆ ದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ಅಲ್ಲದೇ ಮಳೆ ಬಂದರೆ ರಸ್ತೆಗಳಲ್ಲಿ ಕಾಲುವೆಗಳ ರೀತಿಯಲ್ಲಿ ನೀರು ಹರಿಯುತ್ತದೆ. ಇನ್ನು ಕೆಲವು ರಸ್ತೆಗಳು ಕೆಸರು ತುಂಬಿ ವಾಹನ ಸವಾರರು ಮುಂದೆ ಸಾಗಲು ಹರಸಾಹಸ ಪಡಬೇಕಾಗುತ್ತದೆ. ಹಾಗಾಗಿ ಮಳೆಗಾಲದಲ್ಲಿ ಡ್ರೈವ್ ಮಾಡುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಅದರಲ್ಲೂ ಮಳೆನಾಡು ರೀತಿಯ ಪ್ರದೇಶಗಳಲ್ಲಿ ಡ್ರೈವ್ ಮಾಡುವಾಗ ತುಂಬಾ ಮುನ್ನಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಅಂದಹಾಗೆ ಮಳೆಗಾಲದಲ್ಲಿ ಕಾರುಗಳನ್ನು ಹೇಗೆಲ್ಲಾ ನಿರ್ವಹಣೆ ಮಾಡಬೆಕು ಹಾಗೂ ಮಳೆ ಬಂದಾಗ ಏನೆಲ್ಲಾ ಸಿದ್ದತೆಗಳಿರಬೇಕು ಎಂಬುದನ್ನು ಇಲ್ಲಿ ನೋಡೋಣ.

ವಿಂಡ್ ಶೀಲ್ಡ್ ವೈಪರ್ ಸ್ವಚ್ಛಗೊಳಿಸಿ: ನಿಮ್ಮ ವಿಂಡ್ ಶೀಲ್ಡ್ ವೈಪರ್‌ಗಳು ಉತ್ತಮ ಸ್ಥಿತಿಯಲ್ಲಿವೆ ಎಂದು ಖಚಿತಪಡಿಸಿಕೊಳ್ಳಿ. ವಿಂಡ್ ಶೀಲ್ಡ್ ಬಿರುಕು ಬಿಡುವ ಅಥವಾ ಹಾನಿಗೊಳಗಾದ ವೈಪರ್ ಬ್ಲೇಡ್‌ಗಳನ್ನು ಬದಲಿಸಿ. ವೈಪರ್ ಬ್ಲೇಡ್‌ಗಳ ಪರಿಣಾಮಕಾರಿತ್ವಕ್ಕೆ ಅಡ್ಡಿಯಾಗುವ ಕೊಳೆಯನ್ನು ತೆಗೆದುಹಾಕಲು ಒದ್ದೆಯಾದ ಬಟ್ಟೆಯಿಂದ ನಿಯಮಿತವಾಗಿ ಸ್ವಚ್ಛಗೊಳಿಸಬೇಕು.

monsoon-car-care-tips-windshield-to-tyre-pressure-monitoring

ಪರಿಶೀಲಿಸಿ ಮೇಂಟೇನ್ ಮಾಡಿ: ಮಾನ್ಸೂನ್ ಸಮಯದಲ್ಲಿ ಉತ್ತಮ ಗೋಚರತೆ ತುಂಬಾ ಅತ್ಯಗತ್ಯ. ಎಲ್ಲಾ ಹೆಡ್ ಲೈಟ್‌ಗಳು, ಟೈಲ್ ಲೈಟ್‌ಗಳು, ಬ್ರೇಕ್ ಲೈಟ್‌ಗಳು ಮತ್ತು ಟರ್ನ್ ಸಿಗ್ನಲ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂದು ಪರಿಶೀಲಿಸಿ. ಸೂಕ್ತ ಗೋಚರತೆ ಇಲ್ಲದಿದ್ದಲ್ಲಿ ಲೈಟ್ ಕವರ್‌ಗಳಿಗೆ ಕೊಳೆಯಿದೆಯೇ ಪರಿಶೀಲಿಸಿ, ಒಂದು ವೇಳೆ ಹಾಗಿಲ್ಲದಿದ್ದಲ್ಲಿ ಕೂಡಲೇ ಲೈಟಿಂಗ್ ಸೆಟಪ್ ಬದಲಾಯಿಸುವುದು ಒಳಿತು.

ಟೈರ್‌ಗಳನ್ನು ಪರಿಶೀಲಿಸಿ: ಮಳೆಗಾಲದಲ್ಲಿ ಮೊದಲು ಮಾಡಬೇಕಾದ ಪ್ರಮುಖ ಕಾರ್ಯ ಎಂದರೆ ಟೈರ್‌ಗಳ ಆರೈಕೆ. ಟೈರ್ ಒತ್ತಡವನ್ನು ನಿಯಮಿತವಾಗಿ ಪರಿಶೀಲಿಸಬೇಕು, ತೇವಗೊಂಡಿರುವ ರಸ್ತೆಗಳಲ್ಲಿ ಉತ್ತಮ ಹಿಡಿತವನ್ನು ಕಾಪಾಡಿಕೊಳ್ಳಲು ಹಾಳಾದ ಟೈರ್‌ಗಳು ಸಹಕರಿಸುವುದಿಲ್ಲ. ಹಾಗಾಗಿ ನಿಮ್ಮ ಕಾರುಗಳಲ್ಲಿ ಹಳೆಯ ಟೈರ್‌ಗಳಿದ್ದರೆ ಅವು ಮಳೆಯ ರಸ್ತೆಗಳಿಗೆ ಹೊಂದಿಕೊಳ್ಳುತ್ತವೆಯೇ ಪರಿಶೀಲಿಸಿ.

monsoon-car-care-tips-windshield-to-tyre-pressure-monitoring

ನಿಧಾನವಾಗಿ ಚಾಲನೆ ಮಾಡಿ: ಮಳೆಯಲ್ಲಿ ಚಾಲನೆ ಮಾಡುವಾಗ ವೇಗ ಕಮ್ಮಿಯಿರಬೇಕು. ನಿಮ್ಮ ಡ್ರೈವಿಂಗ್ ಅನ್ನು ರಸ್ತೆಯ ಪರಿಸ್ಥಿತಿಗಳಿಗೆ ಹೊಂದಿಸಿಕೊಳ್ಳಬೇಕು, ಜಾರುವ ರಸ್ತೆಗಳಲ್ಲಿ ಹಠಾತ್ ಬ್ರೇಕಿಂಗ್ ಅಥವಾ ವೇಗವನ್ನು ಕಡಿಮೆ ಮಾಡಬೆಕು. ಮಾನ್ಸೂನ್ ಸಮಯದಲ್ಲಿ ನಿಮ್ಮ ಕಾರು ಮತ್ತು ನಿಮ್ಮ ಮುಂದಿರುವ ವಾಹನದ ನಡುವೆ ಎಷ್ಟು ಅಂತರವಿದ್ದರೆ ಅಷ್ಟು ಒಳಿತು ಎಂಬುದನ್ನು ಮರೆಯದಿರಿ.

ನೀರನ್ನು ತಪ್ಪಿಸಿ: ಭಾರಿ ಮಳೆ ಬಿದ್ದು ಬೀದಿಗಳಲ್ಲಿ ಪ್ರವಾಹದಂತಹ ಸನ್ನಿವೇಶಗಳಿದ್ದಲ್ಲಿ ಕಾರು ಚಾಲನೆ ಮಾಡದಿರುವುದೇ ಒಳ್ಳೆಯದು. ನೀರಿನ ಬಲವು ನಿಮ್ಮ ಕಾರಿನ ಎಂಜಿನ್ ಮತ್ತು ಎಲೆಕ್ಟ್ರಿಕ್ ವ್ಯವಸ್ಥೆಗಳನ್ನು ಹಾನಿಗೊಳಿಸುತ್ತದೆ. ಒಂದು ವೇಳೆ ನೀವು ನೀರಿನ ಮೂಲಕ ಹೋಗುವ ಅನಿವಾರ್ಯ ಪರಿಸ್ಥಿತಿ ಇದ್ದರೇ, ಎಂಜಿನ್ ಕಂಪಾರ್ಟ್ಮೆಂಟ್‌ಗೆ ನೀರು ಪ್ರವೇಶಿಸುವುದನ್ನು ಕಡಿಮೆ ಮಾಡಲು ನಿಧಾನವಾಗಿ ಮತ್ತು ಸ್ಥಿರವಾಗಿ ಮುಂದುವರಿಯಬೇಕು.

monsoon-car-care-tips-windshield-to-tyre-pressure-monitoring

ಭಾರಿ ಮಳೆ ಅಥವಾ ಕಡಿಮೆ ಗೋಚರತೆಯ ಪರಿಸ್ಥಿತಿಗಳಲ್ಲಿ, ನಿಮ್ಮ ಸ್ವಂತ ಗೋಚರತೆಯನ್ನು ಸುಧಾರಿಸಲು ನಿಮ್ಮ ಲೋ ಬೀಮ್ ಹೆಡ್ ಲೈಟ್‌ಗಳನ್ನು ಆನ್ ಮಾಡಿ. ಹಾಗೆಯೇ ನಿಮ್ಮ ರಸ್ತೆಯಲ್ಲಿ ಇತರ ಚಾಲಕರನ್ನು ಎಚ್ಚರಿಸಿ. ಹೀಗೆ ಮಾಡುವುದರಿಂದ ಸಂಭವನೀಯ ಅನಾಹುತಗಳನ್ನು ತಪ್ಪಿಸಬಹುದು. ಈ ಸಲಹೆಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, July 12, 2024, 8:30 [IST]
English summary
Monsoon car care tips windshield to tyre pressure monitoring
Read more on tips india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+