ಪ್ರತಿ ಕಾರುಗಳಲ್ಲಿ ಇರಲೇಬೇಕಾದ ಸುರಕ್ಷತಾ ವೈಶಿಷ್ಟ್ಯಗಳಿವು! ಖರೀದಿಗೂ ಮುನ್ನ ಪರಿಶಿಲಿಸಿ...
ಹೊಸ ಕಾರನ್ನು ಖರೀದಿಸುವಾಗ ಪ್ರತಿಯೊಬ್ಬರು ಪ್ರಮುಖವಾಗಿ ಮೊದಲು ಅದರ ಬೆಲೆ, ಮೈಲೇಜ್ ಆನಂತರವಷ್ಟೇ ಸುರಕ್ಷತೆಯ ಬಗ್ಗೆ ವಿಚಾರಿಸುತ್ತಾರೆ. ಆದರೆ ನಮ್ಮ ಪ್ರಕಾರ ಮೊದಲು ಅದರ ಸುರಕ್ಷತಾ ಮಟ್ಟವನ್ನು ಪರಿಶೀಲಿಸಬೇಕು ಎಂಬುದು ನಮ್ಮ ಒತ್ತಾಯ.
ಖರೀದಿದಾರರಲ್ಲಿ ಇತ್ತೀಚೆಗೆ ಸುರಕ್ಷತೆಯ ಬಗ್ಗೆ ಕಾಳಜಿ ಕೂಡ ಬೆಳೆದಿದೆ, ಇದೇ ಕಾರಣಕ್ಕೆ ಕಾರು ತಯಾರಕರು ತಮ್ಮ ಮಾದರಿಗಳಿಗೆ ಹೆಚ್ಚುವರಿ ಸುರಕ್ಷತಾ ವೈಶಿಷ್ಟ್ಯಗಳನ್ನು ಸೇರಿಸುತ್ತಿದ್ದಾರೆ. ಎಲ್ಲಾ ಕಾರುಗಳು ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರದಿದ್ದರೂ, ಕೆಲವು ಅಗತ್ಯವಾದ ಫೀಚರ್‌ಗಳನ್ನು ಹೊಂದಿರಲೇಬೇಕು. ತಿಳಿಯದವರಿಗೆ ಪ್ರತಿ ಕಾರು ಹೊಂದಿರಬೇಕಾದ ಐದು ಪ್ರಮುಖ ಸುರಕ್ಷತಾ ವೈಶಿಷ್ಟ್ಯಗಳನ್ನು ಕೆಳಗೆ ನೀಡಲಾಗಿದೆ.

ಬ್ಲೈಂಡ್ ಸ್ಪಾಟ್ ಡಿಟೆಕ್ಷನ್: ಕೆಲವು ಬ್ಲೈಂಡ್ ಸ್ಪಾಟ್‌ಗಳು ಹಲವು ಕಾರಣಗಳಿಂದ ಚಾಲಕನಿಗೆ ಕಾಣಿಸುವುದಿಲ್ಲ. ಇದರಿಂದ ಕೆಲವೊಮ್ಮೆ ಅಪಘಾತಕ್ಕೆ ಕಾರಣವಾಗಬಹುದು, ಆದ್ದರಿಂದ ಮೇಲ್ವಿಚಾರಣೆ ಮಾಡಬೇಕಾಗುತ್ತದೆ. ಈ ಬ್ಲೈಂಡ್ ಸ್ಪಾಟ್ ಎಂಬ ಸಮಸ್ಯೆ ಎಲ್ಲಾ ಕಾರುಗಳಲ್ಲಿ ಚಾಲಕರಿಗೆ ಸಾಮಾನ್ಯ ಸಮಸ್ಯೆಯಾಗಿರುತ್ತದೆ. ಹಾಗಾಗಿ ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಸಿಸ್ಟಮ್ ಡ್ರೈವರ್‌ಗೆ ಸೆನ್ಸಾರ್‌ಗಳ ಮೂಲಕ ಸಹಕರಿಸುತ್ತದೆ. ಇದು ಪ್ರತಿ ಕಾರಿನಲ್ಲಿ ಇರಬೇಕಾದ ಪ್ರಮುಖ ವೈಶಿಷ್ಟ್ಯವಾಗಿದೆ.
(EBD) ಜೊತೆಗೆ (ABS): EBD (ಎಲೆಕ್ಟ್ರಾನಿಕ್ ಬ್ರೇಕ್-ಫೋರ್ಸ್ ಡಿಸ್ಟ್ರಿಬ್ಯೂಷನ್) ಜೊತೆಗೆ ABS (ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್) ಕಾರಿನ ಹಠಾತ್ ಬ್ರೇಕಿಂಗ್ ಸಮಯದಲ್ಲಿ ಸಹಾಯ ಮಾಡುತ್ತದೆ. ಇದ್ದಕ್ಕಿದ್ದಂತೆ ಜೋರಾಗಿ ಬ್ರೇಕ್ ಅನ್ನು ಅನ್ವಯಿಸಿದಾಗ, ಕಾರಿನ ಚಕ್ರಗಳು ಲಾಕ್ ಆಗಿ ನಿಯಂತ್ರಣ ತಪ್ಪುತ್ತವೆ. EBD ಜೊತೆಗೆ ABS ಇದ್ದಾಗ ಚಕ್ರಗಳು ಲಾಕ್ ಆಗುವುದರ ಜೊತೆಗೆ ಸ್ಕಿಡ್ ಆಗುವುದನ್ನು ತಡೆಯುತ್ತದೆ. ಹೀಗಾಗಿ ಹಠಾತ್ ಬ್ರೇಕಿಂಗ್ ಸಮಯದಲ್ಲಿ ಉತ್ತಮ ನಿಯಂತ್ರಣವನ್ನು ನಿಡುತ್ತದೆ.

ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC): ಈ ವೈಶಿಷ್ಟ್ಯವು ಕಾರಿನ ಸ್ಟೀರಿಂಗ್ ಚಕ್ರದ ಕೋನವನ್ನು ಅದರ ಪ್ರತ್ಯೇಕ ಚಕ್ರದ ತಿರುಗುವಿಕೆಯೊಂದಿಗೆ ಮೇಲ್ವಿಚಾರಣೆ ಮಾಡುತ್ತದೆ. ತುರ್ತು ಸಂದರ್ಭದಲ್ಲಿ, ESC ಬ್ರೇಕ್ ಅನ್ನು ಅನ್ವಯಿಸಿ ನಿಯಂತ್ರಣವನ್ನು ಮರಳಿ ಪಡೆಯಲು ಎಂಜಿನ್ ಶಕ್ತಿಯನ್ನು ಸಮತೋಲನಗೊಳಿಸುತ್ತದೆ. ಒದ್ದೆಯಾದ ರಸ್ತೆಗಳ ಮೂಲೆಗಳಲ್ಲಿ ಅಥವಾ ಕಡಿಮೆ ಎಳೆತದ (Low traction) ಸಂದರ್ಭದಲ್ಲಿ ಓವರ್‌ಸ್ಟಿರಿಂಗ್ ಸಂದರ್ಭದಲ್ಲಿ ಸಂಭವಿಸಬಹುದಾದ ಅಪಘಾತಗಳಿಂದ ರಕ್ಷಿಸುತ್ತದೆ.
ಏರ್‌ಬ್ಯಾಗ್‌ಗಳು: ಏರ್‌ಬ್ಯಾಗ್‌ಗಳು ಅಪಘಾತದ ಸಮಯದಲ್ಲಿ ವಾಹನದ ಒಳಭಾಗಕ್ಕೆ ಆಗುವ ಹಾನಿಯ ಸಾಧ್ಯತೆಯನ್ನು ಕಡಿಮೆ ಮಾಡುವುದರಿಂದ ಪ್ರತಿ ಕಾರು ಒಳಗೊಂಡಿರಬೇಕಾದ ಪ್ರಮುಖ ಸುರಕ್ಷತಾ ವೈಶಿಷ್ಟ್ಯವಾಗಿದೆ. ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು ಕಾರಿನಲ್ಲಿ ಇರಬೇಕಾದರೆ, ಕನಿಷ್ಠ ಆರು ಏರ್‌ಬ್ಯಾಗ್‌ಗಳನ್ನು ಹೊಂದಿರುವ ಮಾದರಿಯನ್ನು ಖರೀದಿಸಬೇಕು. ಏರ್‌ಬ್ಯಾಗ್‌ಗಳು ಸೀಟ್‌ಬೆಲ್ಟ್‌ಗಳನ್ನು ಧರಿಸಿದಾಗ ಮಾತ್ರ ತೆರೆದುಕೊಲ್ಳುತ್ತವೆ ಎಂಬುದನ್ನು ಕಂಡಿತ ತಿಳಿದಿರಬೇಕು.

ಇವೆಲ್ಲವೂ ಸಾಮಾನ್ಯವಾಗಿ ಪ್ರತಿ ಕಾರಿನಲ್ಲಿ ಕಂಡಿತ ಇರಬೇಕು. ವಾಹನದಲ್ಲಿನ ಪ್ರಯಾಣಿಕರ ಜೀವ ಹಾನಿಯನ್ನು ತಪ್ಪಿಸುವ ಪ್ರಮುಖ ಸಾಧನಗಳಾಗಿವೆ. ಕಾರು ಖರೀದಿದಾರರು ಬೆಲೆಯನ್ನು ಬದಿಗಿಟ್ಟು ತುಸು ಹೆಚ್ಚು ಖರ್ಚಾದರೂ ಮೇಲಿನ ಈ ಫೀಚರ್‌ಗಳನ್ನು ಪರಿಶೀಲಿಸಿ ಕಾರನ್ನು ಖರೀದಿಸುವುದು ಉತ್ತಮ. ಏಕೆಂದರೆ ಜೀವ ಉಳಿಸಿಕೊಂಡರೆ ಏನು ಬೇಕಾದರೂ ಮಾಡಬಹುದು. ಕಡಿಮೆ ಬೆಲೆಯೆಂದು ಸೇಫ್ಟಿಯಿಲ್ಲದ ಕಾರುಗಳನ್ನು ಖರೀದಿಸಿ ಜೀವಕ್ಕೆ ಕುತ್ತು ತಂದುಕೊಳ್ಳುವುದು ಮೂರ್ಖತನ ಎಂಬುದು ನಮ್ಮ ಅನಿಸಿಕೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮತ್ತು ಶೇರ್ ಮಾಡಲ್ಯ್ ಮರೆಯದಿರಿ.


Click it and Unblock the Notifications








