ವಾಹನಗಳಲ್ಲಿನ ಹೆಡ್‌ಲೈಟ್‌‌ಗಳ ಜೀವಿತಾವಧಿಯನ್ನು ಹೆಚ್ಚಿಸಲು ಈ ಟಿಪ್ಸ್ ಫಾಲೋ ಮಾಡಿ..

ವಾಹನಗಳಲ್ಲಿ ಹೆಡ್‌ಲೈಟ್‌‌ಗಳ ಜೀವಿತಾವಧಿಯನ್ನು ಹೆಚ್ಚಿಸಲು ಹಲವಾರು ಸರಳ ಮಾರ್ಗಗಳಿದ್ದು, ಹೆಡ್‌ಲ್ಯಾಂಪ್ ಕಾರ್ಯಕ್ಷಮತೆಯನ್ನು ಸುಧಾರಿಸಲು ಈ ಕೆಳಗಿನ ಕೆಲವು ಸಲಹೆಗಳು ಖಂಡಿತವಾಗಿಯೂ ನಿಮ್ಮ ನೆರವಿಗೆ ಬರಬಲಿವೆ.

ವಾಹನಗಳಲ್ಲಿನ ಹೆಡ್‌ಲೈಟ್‌‌ಗಳ ಜೀವಿತಾವಧಿಯನ್ನು ಹೆಚ್ಚಿಸುತ್ತೆ ಈ ಟಿಪ್ಸ್

ನೀವು ನಿಮ್ಮ ಕಾರು ಬೈಕ್ ಅಥವಾ ಇತರೆ ವಾಹನಗಳ ಹೆಡ್‌ಲೈಟ್‌ಗಳನ್ನು ಆಗಾಗ್ಗೆ ಬದಲಾಯಿಸುತ್ತಿದ್ದರೆ ಖಂಡಿತವಾಗಿ ಇಲ್ಲಿ ನೀಡಲಾಗಿರುವ ಕೆಲವು ಸಲಹೆಗಳು ಸಹಕಕಾರಿಯಾಗಿದ್ದು, ಕೆಲವು ಸರಳ ಸಲಹೆಗಳು ಹೆಡ್‌ಲೈಟ್‌ಗಳ ಜೀವಿತಾವಧಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ವಾಹನಗಳಲ್ಲಿನ ಹೆಡ್‌ಲೈಟ್‌‌ಗಳ ಜೀವಿತಾವಧಿಯನ್ನು ಹೆಚ್ಚಿಸುತ್ತೆ ಈ ಟಿಪ್ಸ್

ಹೊಸ ವಾಹನಗಳಲ್ಲಿ ನೀಡಲಾಗುವ ವಿವಿಧ ಹೆಡ್‌ಲೈಟ್‌ಗಳು ಕಾಲಾನಂತರದಲ್ಲಿ ಕಾರ್ಯಕ್ಷಮತೆ ಕುಗ್ಗುವುದರ ಜೊತೆ ಮಸುಕಾಗುತ್ತವೆ. ಹಾಗೆಯ್ ಹೆಡ್‌ಲೈಟ್‌ಗಳು ಮಬ್ಬಾಗಲು ಆರಂಭಿಸಲಿದ್ದು, ಇವಕ್ಕೆ ಹಲವಾರು ಕಾರಣಗಳಿವೆ.

ವಾಹನಗಳಲ್ಲಿನ ಹೆಡ್‌ಲೈಟ್‌‌ಗಳ ಜೀವಿತಾವಧಿಯನ್ನು ಹೆಚ್ಚಿಸುತ್ತೆ ಈ ಟಿಪ್ಸ್

ವಾಹನಗಳಲ್ಲಿ ಜೋಡಿಸಲಾಗುವ ಬಲ್ಬ್‌ಗಳ ಪ್ರಕಾರ ಮತ್ತು ಗುಣಮಟ್ಟವು ಹೆಡ್‌ಲೈಟ್‌ಗಳ ಜೀವಿತಾವಧಿಯನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದ್ದು, ಹಾಗೆಯೇ ನೀವು ವಾಸಿಸುವ ನಗರದ 'ಹವಾಮಾನ' ಕೂಡಾ ಈ ವಿಷಯದಲ್ಲಿ ಪ್ರಭಾವ ಬೀರುತ್ತದೆ.

ವಾಹನಗಳಲ್ಲಿನ ಹೆಡ್‌ಲೈಟ್‌‌ಗಳ ಜೀವಿತಾವಧಿಯನ್ನು ಹೆಚ್ಚಿಸುತ್ತೆ ಈ ಟಿಪ್ಸ್

ಆದರೆ ಹೆಡ್‌ಲೈಟ್‌ಗಳ ಜೀವಿತಾವಧಿಯನ್ನು ಹೆಚ್ಚಿಸುವ ಸಲುವಾಗಿ ನಾವು ತಾಪಮಾನದಂತಹ ವಿಷಯಗಳನ್ನು ಬದಲಾಯಿಸಲು ಸಾಧ್ಯವಿಲ್ಲವಾದರೂ ಹೆಡ್‌ಲೈಟ್‌ಗಳ ಜೀವಿತಾವಧಿಯನ್ನು ಹೆಚ್ಚಿಸಲು ಇನ್ನೂ ಕೆಲವು ಸರಳ ಮಾರ್ಗಗಳಿವೆ.

ವಾಹನಗಳಲ್ಲಿನ ಹೆಡ್‌ಲೈಟ್‌‌ಗಳ ಜೀವಿತಾವಧಿಯನ್ನು ಹೆಚ್ಚಿಸುತ್ತೆ ಈ ಟಿಪ್ಸ್

ಆದ್ದರಿಂದ ನೀವು ಹೊಸ ವಾಹನಗಳಿಗೆ ದೀರ್ಘಾವಧಿಯ ಜೀವಿತಾವಧಿಯನ್ನು ಹೊಂದಿರುವ ಬಲ್ಬ್‌ಗಳನ್ನು ಆಯ್ಕೆ ಮಾಡಬೇಕಾಗುತ್ತದೆ. ಮಾರುಕಟ್ಟೆಯಲ್ಲಿ ಹೆಡ್ಲೈಟ್ ಬಲ್ಬ್‌ಗಳಿಗೆ ಸಂಬಂಧಿಸಿದಂತೆ ಹ್ಯಾಲೊಜೆನ್, ಕ್ಸೆನಾನ್ ಮತ್ತು ಎಲ್ಇಡಿ ಆಯ್ಕೆ ಮಾಡಲಾಗುತ್ತದೆ.

ವಾಹನಗಳಲ್ಲಿನ ಹೆಡ್‌ಲೈಟ್‌‌ಗಳ ಜೀವಿತಾವಧಿಯನ್ನು ಹೆಚ್ಚಿಸುತ್ತೆ ಈ ಟಿಪ್ಸ್

ಹ್ಯಾಲೊಜೆನ್ ಮಾದರಿಯ ಬಲ್ಬ್‌ಗಳು ಸರಿ ಸುಮಾರು 1 ಸಾವಿರ ಗಂಟೆಗಳ ಕಾಲ ಮಾತ್ರ ಪ್ರಕಾಶಮಾನವಾಗಿರಲಿದ್ದು, ತದನಂತರ ಅವುಗಳನ್ನು ಮರುಬಳಕೆ ಮಾಡುವುದು ಕಷ್ಟ. ಮತ್ತೊಂದೆಡೆ ಕ್ಸೆನಾನ್ ಬಲ್ಬ್‌ಗಳು ಹ್ಯಾಲೊಜೆನ್ ಬಲ್ಬ್‌ಗಳಿಗಿಂತ ಎರಡು ಪಟ್ಟು ಜೀವಿತಾವಧಿಯನ್ನು ಹೊಂದಿದ್ದು, ಇವು ಸುಮಾರು 2 ಸಾವಿರ ಗಂಟೆಗಳ ಕಾಲ ಪ್ರಕಾಶಮಾನತೆಯ ಸಾಮರ್ಥ ಹೊಂದಿರುತ್ತವೆ.

ವಾಹನಗಳಲ್ಲಿನ ಹೆಡ್‌ಲೈಟ್‌‌ಗಳ ಜೀವಿತಾವಧಿಯನ್ನು ಹೆಚ್ಚಿಸುತ್ತೆ ಈ ಟಿಪ್ಸ್

ಮೇಲಿನ ಹ್ಯಾಲೊಜೆನ್ ಮತ್ತು ಕ್ಸೆನಾನ್ ಸಾಕಾಗುವುದಿಲ್ಲ ಎಂದು ನೀವು ಭಾವಿಸಿದರೆ ಕೊನೆಯದಾಗಿ ಎಲ್ಇಡಿ ಬಲ್ಬ್‌ಗಳನ್ನು ಪರಿಗಣಿಸಬಹುದು. ಇವು ಹೆಚ್ಚು ಕಾಲ ಬಾಳಿಕೆ ಬರುವ ಬಯಸುವವರಿಗೆ ಅನುಕೂರಕಲವಾಗಿವೆ.

ವಾಹನಗಳಲ್ಲಿನ ಹೆಡ್‌ಲೈಟ್‌‌ಗಳ ಜೀವಿತಾವಧಿಯನ್ನು ಹೆಚ್ಚಿಸುತ್ತೆ ಈ ಟಿಪ್ಸ್

ಹೀಗಾಗಿ ಆಟೋಮಾರುಕಟ್ಟೆಯಲ್ಲಿ ಹೊಸ ವಾಹನ ಸವಾರರು ಹೆಚ್ಚಾಗಿ ಎಲ್‌ಇಡಿ ಬಲ್ಬ್‌ಗಳಿಗೆ ಆದ್ಯತೆ ನೀಡುತ್ತಿದ್ದು, ಇವು ಸಾಮಾನ್ಯ ಮಾದರಿಗಳಿಗಿಂತಲ ಹೆಚ್ಚು ಪ್ರಕಾಶಮಾನ ಬೆಳಕಿನೊಂದಿಗೆ ಸುಮಾರು 20 ಸಾವಿರ ಗಂಟೆಗಳ ಕಾಲ ಬೆಳಗುವ ಸಾಮರ್ಥ್ಯ ಹೊಂದಿವೆ.

ವಾಹನಗಳಲ್ಲಿನ ಹೆಡ್‌ಲೈಟ್‌‌ಗಳ ಜೀವಿತಾವಧಿಯನ್ನು ಹೆಚ್ಚಿಸುತ್ತೆ ಈ ಟಿಪ್ಸ್

ಎಲ್ಇಡಿ ಬಲ್ಬ‌ಗಳು ಹ್ಯಾಲೊಜೆನ್ ಮತ್ತು ಕ್ಸೆನಾನ್ ಮಾದರಿಯ ಬಲ್ಬ್ಗಳಿಗಿಂತಲೂ ಹೆಚ್ಚು ಕಾಲ ಬಾಳಿಕೆ ಬರಲಿದ್ದು, ನೀವು ಎಲ್ಇಡಿ ಬಲ್ಬ್‌ಗಳಿಗೆ ಬದಲಾಯಿಸಿದರೆ ನಿಮ್ಮ ಹೆಡ್‌ಲೈಟ್‌ಗಳ ಜೀವಿತಾವಧಿಯನ್ನು ನೀವು ಸುಲಭವಾಗಿ ವಿಸ್ತರಿಸಬಹುದು.

ವಾಹನಗಳಲ್ಲಿನ ಹೆಡ್‌ಲೈಟ್‌‌ಗಳ ಜೀವಿತಾವಧಿಯನ್ನು ಹೆಚ್ಚಿಸುತ್ತೆ ಈ ಟಿಪ್ಸ್

ಹಾಗಂತ ಎಲ್ಇಡಿ ಬಲ್ಬ‌ಗಳು ಹ್ಯಾಲೊಜೆನ್ ಮತ್ತು ಕ್ಸೆನಾನ್ ಮಾದರಿಯನ್ನು ಬಳಸಲೇಬಾರ ಎನ್ನುವ ಪ್ರಶ್ನೆ ಉತ್ತರವೆನೆಂದರೆ ಆದ್ಯತೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಇಡಿ ಬಲ್ಬ‌ಗಳನ್ನು ಜೋಡಣೆ ಮಾಡಬಹುದಾಗಿದ್ದು, ಹೆಡ್‌ಲೈಟ್ ಹೆಚ್ಚು ಕಾಲ ಉಳಿಯಬೇಕೆಂದು ನೀವು ಬಯಸಿದರೆ ಉತ್ತಮ ಗುಣಮಟ್ಟದ ಬಲ್ಬ್‌ಗಳನ್ನು ಖರೀದಿಸಿ.

ವಾಹನಗಳಲ್ಲಿನ ಹೆಡ್‌ಲೈಟ್‌‌ಗಳ ಜೀವಿತಾವಧಿಯನ್ನು ಹೆಚ್ಚಿಸುತ್ತೆ ಈ ಟಿಪ್ಸ್

ವಿಶ್ವಾಸಾರ್ಹ ತಯಾರಕ ಕಂಪನಿಗಳಿಂದಲೇ ಖರೀದಿಸಿ!

ಅತ್ಯಂತ ಕಡಿಮೆ ಬೆಲೆಗೆ ಸಿಗುವ ಕಾರಣ ಮಾರುಕಟ್ಟೆಯಲ್ಲಿ ಗುಣಮಟ್ಟದಲ್ಲದ ಹೆಡ್‌ಲೈಟ್ ಬಲ್ಬ್ ಗಳನ್ನು ಖರೀದಿಸಿದರೆ ಅವು ಹೆಚ್ಚು ಕಾಲ ಉಳಿಯುವುದಿಲ್ಲ. ಎರಡರಿಂದ ಮೂರು ವಾರಗಳಲ್ಲಿ ಆ ಬಲ್ಬ್‌ಗಳು ನಿಷ್ಕ್ರಿಯವಾಗುವುದರಲ್ಲಿ ಆಶ್ಚರ್ಯವಿಲ್ಲ.

ವಾಹನಗಳಲ್ಲಿನ ಹೆಡ್‌ಲೈಟ್‌‌ಗಳ ಜೀವಿತಾವಧಿಯನ್ನು ಹೆಚ್ಚಿಸುತ್ತೆ ಈ ಟಿಪ್ಸ್

ಉತ್ತಮ ಕಂಪನಿಗಳಿಂದ ಖರೀದಿಸಿದ ಬಲ್ಬ್‌ಗಳು ಉತ್ತಮ ಗುಣಮಟ್ಟದಿಂದ ಕೂಡಿರಲಿದ್ದು, ಗುಣಮಟ್ಟದ ಬಲ್ಬ್ ಗಳ ಬೆಲೆ ತುಸು ಹೆಚ್ಚಿದ್ದರೂ ತೊಂದರೆಯಿಲ್ಲ. ಆದರೆ ಆಕರ್ಷಕ ವಿನ್ಯಾಸ ಮತ್ತು ಬೆಲೆ ಕಡಿಮೆ ಎನ್ನವ ಕಾರಣಕ್ಕೆ ಗುಣಮಟ್ಟದಲ್ಲದ ಹೆಡ್‌ಲೈಟ್‌ಗಳ ಖರೀದಿಯಂದ ದೂರವಿರಿ.

ವಾಹನಗಳಲ್ಲಿನ ಹೆಡ್‌ಲೈಟ್‌‌ಗಳ ಜೀವಿತಾವಧಿಯನ್ನು ಹೆಚ್ಚಿಸುತ್ತೆ ಈ ಟಿಪ್ಸ್

ಪ್ರಸ್ತುತ ಮಾರುಕಟ್ಟೆಯಲ್ಲಿ ಆನ್‌ಲೈನ್ ಶಾಪಿಂಗ್ ತಾಣಗಳು ಹೆಚ್ಚುತ್ತಿದ್ದು, ಇವುಗಳಲ್ಲಿ ಹೆಡ್‌ಲೈಟ್‌ಗಳ ಬಲ್ಬ್‌ಗಳನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದ್ದು, ಅವುಗಳನ್ನು ನೋಡಿದ ತಕ್ಷಣ ಖರೀದಿಸುವಂತೆ ಕಾಣಿಸುತ್ತದೆ.

ವಾಹನಗಳಲ್ಲಿನ ಹೆಡ್‌ಲೈಟ್‌‌ಗಳ ಜೀವಿತಾವಧಿಯನ್ನು ಹೆಚ್ಚಿಸುತ್ತೆ ಈ ಟಿಪ್ಸ್

ಆದರೆ ಅಂತಹ ಬಲ್ಬ್‌ಗಳಿಂದ ಯಾವಾಗಲೂ ದೂರವಿರಿ. ಮತ್ತು ಆನ್‌ಲೈನ್‌ನಲ್ಲಿ ಖರೀದಿಸಿವುದಾರೆ ಬ್ರಾಂಡ್‌ಗಳ ಬೆಗೆಗೆ ತಿಳಿದುಕೊಂಡು ವ್ಯವಹಾರ ಮುಂದುವರಿಸಬಹುದು. ಅದಕ್ಕಾಗಿ ನೀವು ಯಾವ ಹೆಡ್‌ಲೈಟ್‌ಗಳಲ್ಲಿ ಯಾವುದು ಉತ್ತಮ? ಎನ್ನುವ ಅನೇಕ ವಿಮರ್ಶೆಗಳ ಮೂಲಕ ಮಾಹಿತಿ ಪಡೆದುಕೊಳ್ಳಬಹುದು.

ವಾಹನಗಳಲ್ಲಿನ ಹೆಡ್‌ಲೈಟ್‌‌ಗಳ ಜೀವಿತಾವಧಿಯನ್ನು ಹೆಚ್ಚಿಸುತ್ತೆ ಈ ಟಿಪ್ಸ್

ಹೆಡ್‌ಲೈಟ್ ಜೋಡಣೆ ನಿಖರವಾಗಿರಲಿ!

ಆನ್‌ಲೈನ್ ಮೂಲಕ ಹೆಡ್‌ಲೈಟ್ ಖರೀದಿಸಿದರೆ ಅದರ ಜೋಡಣೆ ಮಾಡುವ ಪ್ರಕ್ರಿಯೆಯಲ್ಲಿ ವ್ಯತ್ಯಾಸವಾಗಬಹುದು. ಸರಿಯಾಗಿ ಜೋಡಣೆ ಮಾಡದಿದ್ದಲ್ಲಿ ಹೆಡ್‌ಲೈಟ್‌ಗಳು ವಿವಿಧ ಸಮಸ್ಯೆಗಳನ್ನು ಉಂಟುಮಾಡಬಹುದು. ಹಾಗಾಂತ ಹೆಡ್‌ಲೈಟ್‌ಗಳನ್ನು ಸರಿಯಾಗಿ ಅಳವಡಿಸುವುದು ರಾಕೆಟ್ ಅನ್ನು ಬಾಹ್ಯಾಕಾಶಕ್ಕೆ ಕಳುಹಿಸುವಷ್ಟು ಕಷ್ಟಕರವಾದ ಕೆಲಸವಲ್ಲ. ಇದು ತುಂಬಾ ಸರಳವಾಗಿದೆ.

ವಾಹನಗಳಲ್ಲಿನ ಹೆಡ್‌ಲೈಟ್‌‌ಗಳ ಜೀವಿತಾವಧಿಯನ್ನು ಹೆಚ್ಚಿಸುತ್ತೆ ಈ ಟಿಪ್ಸ್

ಆದಾಗ್ಯೂ ಸರಳ ಜೋಡಣೆ ಪ್ರಕ್ರಿಯೆಯಲ್ಲಿನ ಅಜಾಗರೂಕತೆಯ ಬಗೆಗೆ ಎಚ್ಚರಿಕೆ ವಹಿಸಬೇಕು. ಹೆಡ್‌ಲೈಟ್ ಜೋಡಣೆಗಾಗಿ ಕಂಪನಿಗಳು ನೀಡುವ ಮಾರ್ಗಸೂಚಿಗಳನ್ನು ಎಚ್ಚರಿಕೆಯಿಂದ ಅನುಸರಿಸಬೇಕು. ಬಲ್ಬ್‌ಗಳನ್ನು ಅಳವಡಿಸುವಾಗ ಹೆಡ್‌ಲೈಟ್ ಹಿಂದಿನ ತಂತಿಗಳನ್ನು ಹಾನಿಯಾಗದಂತೆ ಜೋಡಣೆ ಮಾಡಿ ಬಲ್ಬ್ ಕ್ಲಸ್ಟರ್ ಹೊಂದಿಸಬೇಕು.

ವಾಹನಗಳಲ್ಲಿನ ಹೆಡ್‌ಲೈಟ್‌‌ಗಳ ಜೀವಿತಾವಧಿಯನ್ನು ಹೆಚ್ಚಿಸುತ್ತೆ ಈ ಟಿಪ್ಸ್

ಒಂದು ವೇಳೆ ಆನ್‌ಲೈನ್‌ನಲ್ಲಿ ಖರೀದಿಸಿ ಸ್ವತಃ ಜೋಡಣೆ ಮಾಡಲು ಸಾಧ್ಯವಿಲ್ಲವಾದರೆ ನುರಿತ ಮೆಕ್ಯಾನಿಕ್ ಸಂಪರ್ಕಿಸಬಹುದಾಗಿದ್ದು, ಈ ಮೂಲಕ ಸರಳ ವಿಧಾನಗಳೊಂದಿಗೆ ಹೆಡ್‌ಲೈಟ್ ಕಾರ್ಯಕ್ಷಮತೆಯನ್ನು ಹೆಚ್ಚಿಸಬಹುದು.

More from DriveSpark

Article Published On: Saturday, April 23, 2022, 18:23 [IST]
English summary
Simple tips for to extend the life of your vehicle headlights details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+