ಹಳೆಯ ವಾಹನಗಳನ್ನು ಸುರಕ್ಷಿತವಾಗಿಸುವ ಸರಳ ವಿಧಾನಗಳಿವು

ವಾಹನಗಳು ಈಗ ಹಿಂದೆಂದಿಗಿಂತಲೂ ಹೆಚ್ಚು ಸುರಕ್ಷಿತವಾಗಿವೆ. ಪ್ರಯಾಣಿಕರ ಸುರಕ್ಷತೆಯನ್ನು ಖಾತ್ರಿಪಡಿಸಲು ಸರ್ಕಾರವು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇದರ ಪರಿಣಾಮವಾಗಿ ಎಂಟ್ರಿ ಲೆವೆಲ್ ಕಾರುಗಳಲ್ಲಿಯೂ ಸಹ ಎಬಿಎಸ್, ಏರ್‌ಬ್ಯಾಗ್‌, ಹೈ-ಸ್ಪೀಡ್ ಅಲಾರ್ಮ್‌, ಇಬಿಡಿ, ಪಾರ್ಕಿಂಗ್ ಸೆನ್ಸಾರ್‌ಗಳು, ಸೀಟ್ ಬೆಲ್ಟ್ ರಿಮ್ಯಾಂಡರ್, ಸೀಟ್ ಬೆಲ್ಟ್ ಅಲಾರಂಗಳನ್ನು ನೀಡಲಾಗುತ್ತಿದೆ.

ಹಳೆಯ ವಾಹನಗಳನ್ನು ಸುರಕ್ಷಿತವಾಗಿಸುವ ಸರಳ ವಿಧಾನಗಳಿವು

ಈ ಫೀಚರ್ ಗಳು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸುತ್ತವೆ. ಆದರೆ ಈ ಯಾವುದೇ ಸುರಕ್ಷತಾ ಫೀಚರ್ ಗಳನ್ನು ಹೊಂದಿರದ ಹಲವು ಕಾರುಗಳು ಇನ್ನೂ ಬಳಕೆಯಲ್ಲಿವೆ. ಈ ಲೇಖನದಲ್ಲಿ ಹಳೆಯ ವಾಹನಗಳನ್ನು ಸುರಕ್ಷಿತ ವಾಹನಗಳಾಗಿ ಪರಿವರ್ತಿಸುವುದು ಹೇಗೆ ಎಂಬುದನ್ನು ನೋಡೋಣ.

ಹಳೆಯ ವಾಹನಗಳನ್ನು ಸುರಕ್ಷಿತವಾಗಿಸುವ ಸರಳ ವಿಧಾನಗಳಿವು

ಯಂತ್ರಗಳ ನವೀಕರಣ

ಹೆಚ್ಚಿನ ಅಪಘಾತಗಳು ಯಾಂತ್ರಿಕ ದೋಷದಿಂದ ಉಂಟಾಗುತ್ತವೆ. ಆದ್ದರಿಂದ ಹಾನಿಗೊಳಗಾದ ಅಥವಾ ಸವೆದ ಭಾಗಗಳನ್ನು ತಕ್ಷಣ ಬದಲಾಯಿಸುವುದು ಹಳೆಯ ವಾಹನಗಳನ್ನು ಸುರಕ್ಷಿತ ವಾಹನಗಳಾಗಿ ಪರಿವರ್ತಿಸುವ ಮೊದಲ ಹಂತವಾಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ ಬ್ರೇಕ್ ಪ್ಯಾಡ್ ಅನ್ನು ಸರಿಯಾದ ಸಮಯಕ್ಕೆ ಬದಲಿಸುವುದು ಒಳ್ಳೆಯದು.

ಹಳೆಯ ವಾಹನಗಳನ್ನು ಸುರಕ್ಷಿತವಾಗಿಸುವ ಸರಳ ವಿಧಾನಗಳಿವು

ಈಗ ಅಳವಡಿಸಿರುವ ಮೆಟಲ್ ಬ್ರೇಕ್ ಪ್ಯಾಡ್‌ಗಳ ಬದಲು ಸೆರಾಮಿಕ್ ಪ್ಯಾಡ್‌ಗಳನ್ನು ಬಳಸುವುದು ಉತ್ತಮ. ಸೆರಾಮಿಕ್ ಸ್ಟ್ರಿಪ್‌ಗಳು ದೀರ್ಘ ಕಾಲದವರೆಗೂ ಕಾರ್ಯ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿವೆ. ಅವುಗಳು ಸುಲಭವಾಗಿ ಸವೆಯುವುದಿಲ್ಲ. ಇವು ಕಡಿಮೆ ಶಾಖ ವಾಹಕವಾಗಿಯೂ ಕಾರ್ಯನಿರ್ವಹಿಸುತ್ತವೆ. ಈ ಹಿನ್ನೆಲೆಯಲ್ಲಿ ಆಟೋ ಮೊಬೈಲ್ ತಜ್ಞರು ಇವುಗಳನ್ನು ಶಿಫಾರಸು ಮಾಡುತ್ತಾರೆ.

ಹಳೆಯ ವಾಹನಗಳನ್ನು ಸುರಕ್ಷಿತವಾಗಿಸುವ ಸರಳ ವಿಧಾನಗಳಿವು

ಹಾಗೆ ಸಸ್ಪೆಂಷನ್ ವಿಷಯದಲ್ಲಿಯೂ ಎಚ್ಚರ ವಹಿಸಬೇಕು. ಕಾರುಗಳಿಗೆ ಹೆಚ್ಚಿನ ಹಾನಿ ಉಂಟುಮಾಡುವ ಮತ್ತೊಂದು ಫೀಚರ್ ಗಳೆಂದರೆ ಸಸ್ಪೆಂಷನ್'ಗಳು. ಇವು ಭಾರತದ ಒರಟು ರಸ್ತೆಗಳಲ್ಲಿ ಹೆಚ್ಚು ಪರಿಣಾಮ ಬೀರುತ್ತವೆ. ಸಸ್ಪೆಂಷನ್ ಗಳನ್ನು ಅಪ್‌ಗ್ರೇಡ್ ಮಾಡುವುದು ಸುರಕ್ಷಿತ ಸವಾರಿಗೆ ಕಾರಣವಾಗುತ್ತದೆ. ಇದರಿಂದ ವಾಹನಗಳ ಮೇಲೆ ಉತ್ತಮ ನಿಯಂತ್ರಣವನ್ನು ಹೊಂದಲು ಸಾಧ್ಯವಾಗುತ್ತದೆ.

ಹಳೆಯ ವಾಹನಗಳನ್ನು ಸುರಕ್ಷಿತವಾಗಿಸುವ ಸರಳ ವಿಧಾನಗಳಿವು

ಕಾರನ್ನು ಚಾಲನೆ ಮಾಡುವ ಶೈಲಿಯಲ್ಲಿ ಬದಲಾವಣೆ

ವಾಹನ ಚಾಲಕರು ಅನುಸರಿಸಬೇಕಾದ ಪ್ರಮುಖ ವಿಷಯಗಳಲ್ಲಿ ಇದು ಸಹ ಒಂದು. ವಾಹನಗಳ ಸರಾಸರಿ ವೇಗ ಹಾಗೂ ರಸ್ತೆ ನಿಯಮಗಳನ್ನು ಸರಿಯಾಗಿ ಪಾಲಿಸಬೇಕು. ಇದು ನಮಗೆ ಅರ್ಧದಷ್ಟು ಭದ್ರತೆಯನ್ನು ನೀಡುತ್ತದೆ. ಜೊತೆಗೆ ಚಾಲಕರು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಾಗಿರಬೇಕು.

ಹಳೆಯ ವಾಹನಗಳನ್ನು ಸುರಕ್ಷಿತವಾಗಿಸುವ ಸರಳ ವಿಧಾನಗಳಿವು

ರಸ್ತೆಯಲ್ಲಿ ಯಾವಾಗ ಏನು ಬೇಕಾದರೂ ಸಂಭವಿಸಬಹುದು. ಈ ಕಾರಣಕ್ಕೆ ಕಾರು ಚಾಲಕರು ಬ್ರೇಕ್ ಹಾಗೂ ಸ್ಟೀಯರಿಂಗ್ ವ್ಹೀಲ್ ತಮ್ಮ ನಿಯಂತ್ರಣದಲ್ಲಿದೆ ಎಂಬುದನ್ನು ಖಚಿತಪಡಿಸಿ ಕೊಳ್ಳುವುದು ಒಳ್ಳೆಯದು. ಇವುಗಳಿಂದ ಗರಿಷ್ಠ ಸುರಕ್ಷಿತ ಪ್ರಯಾಣವನ್ನು ಖಚಿತಪಡಿಸಿಕೊಳ್ಳಬಹುದು.

ಹಳೆಯ ವಾಹನಗಳನ್ನು ಸುರಕ್ಷಿತವಾಗಿಸುವ ಸರಳ ವಿಧಾನಗಳಿವು

ಪಾರ್ಕಿಂಗ್ ಕ್ಯಾಮೆರಾ ಹಾಗೂ ಸೆನ್ಸಾರ್'ಗಳು

ಕಾರಿನ ಹಿಂಬದಿಯ ಕ್ಯಾಮೆರಾ ಹಾಗೂ ಸೆನ್ಸಾರ್‌ಗಳು ಈಗ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಇವುಗಳನ್ನು ಬಳಸುವುದರಿಂದ ಕಾರುಗಳ ಹಿಂಬದಿಯಲ್ಲಿ ನಡೆಯುವ ಅವಘಡಗಳನ್ನು ತಪ್ಪಿಸಬಹುದು. ನಿರ್ದಿಷ್ಟವಾಗಿ ಹೇಳುವುದಾದರೆ ಇವು ಪಾದಚಾರಿಗಳ ಸುರಕ್ಷತೆಯನ್ನು ಖಚಿತಪಡಿಸುತ್ತವೆ.

ಹಳೆಯ ವಾಹನಗಳನ್ನು ಸುರಕ್ಷಿತವಾಗಿಸುವ ಸರಳ ವಿಧಾನಗಳಿವು

ಕಾರಿನ ಒಳಭಾಗ

ಹಳೆಯ ಕಾರುಗಳು ಚಾಲಕ ಹಾಗೂ ಪ್ರಯಾಣಿಕರ ಮೇಲೆ ಪರಿಣಾಮ ಬೀರುವಂತಹ ಕೆಲವು ಭಾಗಗಳನ್ನು ಹೊಂದಿರುತ್ತವೆ. ಅವುಗಳನ್ನು ಬದಲಾಯಿಸುವುದು ಒಳ್ಳೆಯದು. ಅಹಿತಕರ ಎನಿಸುವಂತಹ ಯಾವುದಾದರೂ ಆಸನಗಳಿದ್ದರೆ ತೆಗೆದುಹಾಕುವುದು ಉತ್ತಮ. ಈಗ ಮಾರುಕಟ್ಟೆಯಲ್ಲಿ ಹೆಚ್ಚು ಆರಾಮದಾಯಕ ಅನುಭವವನ್ನು ನೀಡುವಂತಹ ಸೀಟುಗಳನ್ನು ಮಾರಾಟ ಮಾಡಲಾಗುತ್ತದೆ. ಸುರಕ್ಷತೆ ಪ್ರಯಾಣಕ್ಕೆ ಇವು ಸಹ ನೆರವಾಗುತ್ತವೆ.

ಹಳೆಯ ವಾಹನಗಳನ್ನು ಸುರಕ್ಷಿತವಾಗಿಸುವ ಸರಳ ವಿಧಾನಗಳಿವು

ಎಕ್ಸ್'ಟಿರಿಯರ್

ಕಾರುಗಳ ಟಯರ್, ಹೆಡ್‌ಲ್ಯಾಂಪ್, ಸ್ಟಾಪ್ ಲೈಟ್, ಇಂಡಿಕೇಟರ್'ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಕಾಲ ಕಾಲಕ್ಕೆ ಪರಿಶೀಲಿಸಿ. ಭಾರತದಲ್ಲಿ ವಾಹನಗಳ ಲೈಟ್'ಗಳು ಸರಿಯಾಗಿ ಕಾರ್ಯನಿರ್ವಹಿಸದ ಕಾರಣಕ್ಕೆ ಹಲವಾರು ಅಪಘಾತಗಳು ಸಂಭವಿಸಿವೆ. ಅದೇ ರೀತಿ ಸವೆದು ಹೋಗಿರುವ ಟಯರ್ ಗಳಿಂದಲೂ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ಈ ವಿಷಯದ ಬಗ್ಗೆಯೂ ಹೆಚ್ಚು ಗಮನ ಹರಿಸುವುದು ಉತ್ತಮ. ಪ್ರಯಾಣಕ್ಕೆ ಮುನ್ನ ಟಯರ್‌ನಲ್ಲಿ ಸಾಕಷ್ಟು ಗಾಳಿ ಇದೆ ಎಂದು ಖಚಿತಪಡಿಸಿಕೊಳ್ಳುವುದು ಸಹಸುರಕ್ಷಿತ ಪ್ರಯಾಣಕ್ಕೆ ದಾರಿ ಮಾಡಿಕೊಡುತ್ತವೆ.

ಹಳೆಯ ವಾಹನಗಳನ್ನು ಸುರಕ್ಷಿತವಾಗಿಸುವ ಸರಳ ವಿಧಾನಗಳಿವು

ಕ್ಲಚ್ ಕಾರಿನ ಪ್ರಮುಖ ಭಾಗಗಳಲ್ಲಿ ಒಂದಾಗಿದೆ. ಆದರೆ ಕೆಲವರು ಕ್ಲಚ್ ಬಳಸುವಾಗ ಸಾಕಷ್ಟು ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ಕ್ಲಚ್‌ನ ಜೀವಿತಾವಧಿ ಕಡಿಮೆಯಾಗುತ್ತದೆ. ಆದರೆ ಕೆಲವು ಸರಳ ವಿಧಾನಗಳ ಮೂಲಕ ಕ್ಲಚ್'ನ ಜೀವಿತಾವಧಿಯನ್ನು ಹೆಚ್ಚಿಸಬಹುದು. ಆ ವಿಧಾನಗಳು ಯಾವುವು ಎಂಬುದನ್ನು ನೋಡುವುದಾದರೆ, ಹಲವು ಕಾರು ಚಾಲಕರು ತಮ್ಮ ಪಾದಗಳನ್ನು ಕ್ಲಚ್ ಪೆಡಲ್ ಮೇಲೆ ಇಟ್ಟು ವಿಶ್ರಾಂತಿ ಪಡೆಯುವ ಅಭ್ಯಾಸವನ್ನು ಹೊಂದಿದ್ದಾರೆ. ಆದರೆ ಇದು ನಿಜಕ್ಕೂ ಕೆಟ್ಟ ಅಭ್ಯಾಸ ಎಂದು ಹಲವರಿಗೆ ತಿಳಿದಿಲ್ಲ.

ಹಳೆಯ ವಾಹನಗಳನ್ನು ಸುರಕ್ಷಿತವಾಗಿಸುವ ಸರಳ ವಿಧಾನಗಳಿವು

ಕ್ಲಚ್ ಮೇಲೆ ಅನಗತ್ಯವಾಗಿ ಪಾದಗಳನ್ನು ಇರಿಸಿದರೆ, ಕ್ಲಚ್‌ನ ಜೀವಿತಾವಧಿ ಕಡಿಮೆಯಾಗುತ್ತದೆ. ಹಾಗಾಗಿ ಕ್ಲಚ್ ಬಳಸುವಾಗ ಮಾತ್ರ ಪಾದವನ್ನು ಕ್ಲಚ್ ಮೇಲೆ ಇಟ್ಟರೆ ಒಳ್ಳೆಯದು. ಬಳಕೆಯಲ್ಲಿಲ್ಲದಿದ್ದಾಗ ಅನಗತ್ಯವಾಗಿ ಕ್ಲಚ್ ಮೇಲೆ ಪಾದ ಇಡುವುದನ್ನು ತಪ್ಪಿಸಿ. ಅಗತ್ಯವಿದ್ದಾಗ ಕ್ಲಚ್ ಪೆಡಲ್ ಅನ್ನು ಸಂಪೂರ್ಣವಾಗಿ ಒತ್ತಿರಿ. ಅಗತ್ಯವಿಲ್ಲದಿದ್ದಾಗ ನಿಮ್ಮ ಪಾದವನ್ನು ಅದರ ಮೇಲೆ ಇಡಬೇಡಿ. ಕಾರ್ ಕ್ಲಚ್‌ನ ಜೀವಿತಾವಧಿಯನ್ನು ಹೆಚ್ಚಿಸುವ ಸರಳ ಮಾರ್ಗಗಳಲ್ಲಿ ಇದು ಸಹ ಒಂದು.ಸಿಗ್ನಲ್‌ನಲ್ಲಿ ಕಾಯುತ್ತಿರುವಾಗ ಕಾರ್ ಅನ್ನು ನ್ಯೂಟ್ರಲ್'ನಲ್ಲಿಡಿ. ಇದು ತುಂಬಾ ಸರಳ ವಿಧಾನ. ಆದರೆ ಹಲವಾರು ಚಾಲಕರು ಸಿಗ್ನಲ್‌ಗಳಲ್ಲಿ ಕಾಯುವಾಗ ಕ್ಲಚ್ ಅನ್ನು ಬಳಸುತ್ತಾರೆ. ಸಿಗ್ನಲ್‌ಗಳಿಗಾಗಿ ಕಾಯುತ್ತಿರುವಾಗ ಕ್ಲಚ್ ಅನ್ನು ತುಳಿಯುವುದು ಕೆಟ್ಟ ಅಭ್ಯಾಸ.

ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Simple tips to make old vehicles safer details
Story first published: Tuesday, November 2, 2021, 12:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X