ಮ್ಯಾನುವಲ್ ಕಾರು ಓಡಿಸುವಾಗ ಮಾಡಬಾರದ 5 ಅಂಶಗಳು!

By Nagaraja

ಕಳೆದ ಕೆಲವು ವರ್ಷಗಳಿಂದ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಕಾರುಗಳಲ್ಲಿ ಯಾವುದು ಅತ್ಯುತ್ತಮ ಎಂಬುದರ ಬಗ್ಗೆ ನಿರಂತರ ಚರ್ಚೆಗಳು ಜಾರಿಯಲ್ಲಿದೆ. ಈ ಸಂಬಂಧ ವಾಹನ ತಜ್ಞರು ತಾಂತ್ರಿಕ ಮಾಹಿತಿಗಳನ್ನು ಬಹಿರಂಗಪಡಿಸಿದರೆ ಗ್ರಾಹಕರು ತಮ್ಮ ಬಯಕೆಗಳಿಗೆ ಅನುಗುಣವಾಗಿ ಕಾರುಗಳನ್ನು ಆರಿಸುತ್ತಾರೆ.

ಆಟೋಮ್ಯಾಟಿಕ್ ಸುಲಭ ಚಾಲನೆಯನ್ನು ನೀಡುವುದಾದ್ದಲ್ಲಿ ಮ್ಯಾನುವಲ್ ಕಾರು ನೈಜ ಚಾಲನಾ ಇಷ್ಟಪಡುವವರಿಗೆ ಸೂಕ್ತವೆನಿಸಲಿದೆ. ಪ್ರಸ್ತುತ ಲೇಖನದಲ್ಲಿ ಮ್ಯಾನುವಲ್ ಕಾರನ್ನು ಓಡಿಸುವಾಗ ಚಾಲಕರು ಗಮನದಲ್ಲಿಟ್ಟುಕೊಳ್ಳಬೇಕಾದ ಅಥವಾ ಮಾಡಬಾರದ ಐದು ಪ್ರಮುಖ ಅಂಶಗಳ ಬಗ್ಗೆ ನಾವು ವಿವರವಾಗಿ ತಿಳಿಸಲಿದ್ದೇವೆ.

01. ಸ್ಟೀರಿಂಗ್ ಮೇಲೆ ಕೈಯಿರಲಿ

01. ಸ್ಟೀರಿಂಗ್ ಮೇಲೆ ಕೈಯಿರಲಿ

ಬಹುತೇಕ ಮಂದಿ ಅದರಲ್ಲೂ ಆಧುನಿಕ ಯುವ ಉತ್ಸಾಹಿ ಸವಾರರು ತಮ್ಮ ಬಲಗೈಯನ್ನು ಸ್ಟೀರಿಂಗ್ ವೀಲ್ ಮೇಲೂ, ಎಡಗೈಯನ್ನು ಗೇರ್ ನಾಬ್ ಮೇಲೆ ಇಟ್ಟುಕೊಂಡು ವಾಹನ ಚಾಲನೆ ಮಾಡುವ ಅಭ್ಯಾಸವನ್ನು ರೂಢಿ ಮಾಡಿಕೊಂಡಿರುತ್ತಾರೆ. ಇದರಿಂದ ಕೈಗಳಿಗೆ ನಿರಾಳತೆ ಅನುಭವವಾದರೂ ಗೇರ್ ಬಾಕ್ಸ್ ಗೆ ತೊಂದರೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗೊಂದು ವೇಳೆ ಗೇರ್ ನಾಬ್ ಮೇಲೆ ಒತ್ತಡದಿಂದ ಕೈಯಿಟ್ಟುಕೊಂಡಿದ್ದಲ್ಲಿ ನಿಮ್ಮ ತಿಳುವಳಿಕೆಯಿಲ್ಲದೆ ಗೇರ್ ಬದಲಾವಣೆಯಾಗುವ ಸಂಭವವಿದೆ. ಇದರಿಂದಾಗಿ ಕ್ರಮೇಣ ಗೇರ್ ಬಾಕ್ಸ್ ಗೆ ಪೆಟ್ಟಾಗುವ ಭೀತಿಯಿರುತ್ತದೆ. ಇದರಿಂದಾಗಿ ವಾಹನ ಚಾಲನೆ ವೇಳೆ '9ರಿಂದ 3' ಗಡಿಯಾರದ ಮುಳ್ಳು ಸೂಚಿಸುವಂತೆ ಚಾಲನೆ ಅಭ್ಯಸಿಸಿಕೊಳ್ಳುವುದು ಉತ್ತಮ.

02. ಎಡಗಾಲು ಕ್ಲಚ್ ನಿಂದ ದೂರವಿರಲಿ

02. ಎಡಗಾಲು ಕ್ಲಚ್ ನಿಂದ ದೂರವಿರಲಿ

ಗೇರ್ ಬಳಕೆ ಮಾಡುವಾಗ ಮಾತ್ರ ಕ್ಲಚ್ ಅವಶ್ಯಕತೆಯಿದೆ ಎಂಬುದನ್ನು ಮರೆಯಬಾರದು. ಸಾಮಾನ್ಯವಾಗಿ ವಾಹನ ಚಾಲಕರು ಕ್ಲಚ್ ಪೆಡಲ್ ಮೇಲೆ ಕಾಲಿಟ್ಟುಕೊಂಡೇ ವಾಹನ ಚಾಲನೆ ಮಾಡುತ್ತಾರೆ. ಇದು ತಾವು ಮಾಡುತ್ತಿರುವ ಅತಿ ದೊಡ್ಡ ಎಡವಟ್ಟಾಗಿದ್ದು, ಯಾವತ್ತೂ ಇಂತಹ ಕೆಟ್ಟ ಅಭ್ಯಾಸಕ್ಕೆ ಮುಂದಾಗಬಾರದು. ಇದರಿಂದ ಕ್ಲಚ್ ಪೆಡಲ್ ಗೆ ಪೆಟ್ಟಾಗುವ ಭೀತಿಯಿದೆ. ಇದನ್ನು ತಪ್ಪಿಸಲು ಡೆಡ್ ಪೆಡಲ್ ಮೇಲೆ ಕಾಲಿರಿಸಬಹುದಾಗಿದೆ.

03. ಸಮಯೋಚಿತವಾಗಿ ಹ್ಯಾಂಡ್ ಬ್ರೇಕ್ ಬಳಕೆ

03. ಸಮಯೋಚಿತವಾಗಿ ಹ್ಯಾಂಡ್ ಬ್ರೇಕ್ ಬಳಕೆ

ಎತ್ತರದ ಪ್ರದೇಶಗಳಲ್ಲಿ ಕಾರು ಮೇಲ್ಮುಖವಾಗಿ ಪದೇ ಪದೇ ನಿಂತು ನಿಂತು ಸಂಚರಿಸುವಾಗ ವಾಹನ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಚಾಲಕರು ಕ್ಲಚ್ ಪೆಡಲನ್ನು ಅರ್ಧದಷ್ಟು ತುಳಿಯುತ್ತಾರೆ. ಇದೇ ಸಂದರ್ಭದಲ್ಲಿ ಗಾಡಿ ಮುಂದಕ್ಕೆ ಚಲಿಸುವುದಕ್ಕಾಗಿ ಆಕ್ಸಿಲೇಟರ್ ಕೊಡುವ ಪ್ರಯತ್ನ ಮಾಡುತ್ತಾರೆ. ಹೀಗೆ ಮಾಡಿದ್ದಲ್ಲಿ ಕ್ಲಚ್ ಪ್ಲೇಟ್ ಗೆ ಹಾನಿಯುಂಟಾಗುವ ಸಂಭವವಿದೆ. ಇದರ ಬದಲು ಸಮಯೋಚಿತವಾಗಿ ಹ್ಯಾಂಡ್ ಬ್ರೇಕ್ ಬಳಕೆ ಮಾಡುವುದು ಉಚಿತ.

04. ಗೇರ್ ಬಳಕೆ

04. ಗೇರ್ ಬಳಕೆ

ಇಳಿಜಾರಿನಲ್ಲಿ ಸಂಚರಿಸುವಾಗ ಪೆಟ್ರೋಲ್ ಉಳಿತಾಯಕ್ಕಾಗಿ ವಾಹನ ನ್ಯೂಟ್ರಲ್ ನಲ್ಲಿಡುವುದು ಉತ್ತಮ ಎಂಬ ಭಾವನೆಯಿದೆ. ಆದರೆ ಇಂತಹ ಪ್ರವೃತ್ತಿ ತಪ್ಪಾಗಿದ್ದು, ಕೆಳಮಟ್ಟದ ಗೇರ್ ನಲ್ಲಿ ಇಳಿಮುಖವಾಗಿ ಸಂಚರಿಸುವುದು ಹೆಚ್ಚು ಸೂಕ್ತ.

05. ಆರ್ ಪಿಎಂ ಬಳಕೆ

05. ಆರ್ ಪಿಎಂ ಬಳಕೆ

ಇದು ಸ್ವಲ್ಪ ತಾಂತ್ರಿಕ ವಿಷಯವಾಗಿದ್ದು, ಮಾಲಿಕ ಮ್ಯಾನುವಲ್ ಬುಕ್ ನಲ್ಲಿ ಕೊಟ್ಟಿರುವಂತೆಯೇ ಆರ್ ಪಿಎಂ ಬಳಕೆಯ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದು ಉತ್ತಮ. ಇದರಿಂದಾಗಿ ಹೆಚ್ಚು ಇಂಧನ ಕ್ಷಮತೆ ಪಡೆಯಲು ನೆರವಾಗಲಿದೆ. ಅಷ್ಟೇ ಅಲ್ಲದೆ ಎಂಜಿನ್ ಹೆಚ್ಚು ಬಾಳ್ವಿಕೆ ಬರಲಿದೆ.

More from DriveSpark

Article Published On: Friday, September 2, 2016, 16:28 [IST]
English summary
Driving A Manual? Here Are Five Things You Should Never Do
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+