ತಲೆ ಇದ್ದವರಿಗೆ ಮಾತ್ರ ಸರಿಯಾದ ಶಿರಸ್ತ್ರಾಣ..!
ಅಂತೂ ಇಂತೂ ಒದ್ದಾಡಿಕೊಂಡು ಯಾರಲ್ಲೋ ಸಾಲ ಮಾಡಿಕೊಂಡು ಬೈಕ್ ಖರೀದಿಸಿದ್ದಾದ್ದರೋ ಆಯ್ತು ಇನ್ನೇನು ಹೋಗ್ಲಿ ಬಿಡಿ ಹೆಲ್ಮೆಟ್ ಹೇಗಿದ್ದಾರೇನಂತೇ..? ರಸ್ತೆಯಲ್ಲಿ ಸವಾರಿ ಮಾಡುವಾಗ ಶಿರಸ್ತ್ರಾಣ ಕಡ್ಡಾಯವಾಗಿ ಧರಿಸಬೇಕೆಂಬ ಸಂಚಾರ ನಿಯಮ ಚಾಲ್ತಿಯಲ್ತಿರುವ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಯಾವುದಾದರೊಂದು ಹೆಲ್ಮೆಟ್ ಖರೀದಿಸಿದ್ದಾರಯ್ತಾಪ್ಪ ಇನ್ನು ಕ್ವಾಲಿಟಿ ಗಿಲಿಟಿ ಬಗ್ಗೆ ಯಾರು ಪರಿಶೀಸುತ್ತಾರೇ ಸ್ವಲ್ಪ ಹೇಳಿ ನೋಡೋಣ?
ಹೌದು, ಸಾಮಾನ್ಯ ಬೈಕ್ ಸವಾರರಲ್ಲಿ ಇಂತಹ ಭಾವನೆ ಮೂಡುವುದು ಸಹಜ. ಬೈಕ್ ಖರೀದಿಸುವುದೇ ದೊಡ್ಡ ವಿಷಯ ಇನ್ನು ಹೆಲ್ಮೆಟ್ ಕ್ವಾಲಿಟಿ ವಿಷಯ ಎಲ್ಲಿಂದ ಬಂತು? ಇದೇ ಕಾರಣಕ್ಕಾಗಿ ಬಹುತೇಕರು ಬಳಿಕ ನಾನಾ ಕಿರಿಕಿರಿಗಳನ್ನು ಎದುರಿಸುತ್ತಾರೆ.
ಇವೆಲ್ಲವನ್ನು ತಪ್ಪಿಸಿಕೊಳ್ಳಲು ಆರಂಭದಲ್ಲೇ ಗುಣಮಟ್ಟದ ಹೆಲ್ಮೆಟ್ ಧರಿಸಿದ್ದರೆ ಸಮಸ್ಯೆಗೆ ಪರಿಹಾರವಾಯಿತ್ತಲ್ಲವೇ? ಈ ನಿಟ್ಟಿನಲ್ಲಿ ಚಿಂತನೆ ಮಾಡಿರುವ ನಮ್ಮ ಡ್ರೈವ್ ಸ್ಪಾರ್ಕ್ ತಂಡ ಹೆಲ್ಮೆಟ್ ಖರೀದಿ ವೇಳೆ ಗಮನ ಹರಿಸಬೇಕಾದ ಪ್ರಮುಖ ಅಂಶಗಳನ್ನು ಪಟ್ಟಿ ಮಾಡಿಕೊಡಲಿದ್ದೇವೆ. ಇದು ನಿಮ್ಮ ನೆರವಿಗೆ ಬರುವ ವಿಶ್ವಾಸ ನಮ್ಮದು. ನಿಮ್ಮ ಅಭಿಪ್ರಾಯಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ಮೂಖಾಂತರ ಹಂಚಿಕೊಳ್ಳಿರಿ...

ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಯಿಂದ ಹಿಡಿದು ದುಬಾರಿ ಹೆಲ್ಮೆಟ್‌ಗಳು ಲಭ್ಯವಿರುತ್ತದೆ. ಆದರೆ ಹೆಲ್ಮೆಟ್ ಖರೀದಿ ವಿಷಯದಲ್ಲಿ ಖಂಜೂಸ್ ಮಾಡಿಕೂಳ್ಳದೆ ಗುಣಮಟ್ಟದ ಉತ್ಪನ್ನ ಖರೀದಿಸಿದರೆ ಒಳಿತು. ಇದೇ ಕಾರಣಕ್ಕಾಗಿ ಶೀರ್ಷಿಕೆಯಲ್ಲಿ ತಲೆ ಇದ್ದವರಿಗೆ ಮಾತ್ರ ಸರಿಯಾದ ಹೆಲ್ಮೆಟ್ ಎಂಬುದನ್ನು ಉಲ್ಲೇಖಿಸಲಾಗಿದೆ.

ಸಂಪೂರ್ಣವಾಗಿ ಮುಖ ಆವರಿಸಿದ ಹೆಲ್ಮೆಟ್
ಹೆಲ್ಮೆಟ್ ಖರೀದಿ ವೇಳೆ ಗಮನವಹಿಸಬೇಕಾದ ಪ್ರಮುಖ ಅಂಶವೆಂದರೆ, ಇದು ನಿಮ್ಮ ಮುಖ ಹಾಗೂ ತಲೆಯನ್ನು ಸಂಪೂರ್ಣವಾಗಿ ಆವರಿಸಿಕೊಳ್ಳುತ್ತದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳತಕ್ಕದ್ದು. ಕೆಲವರು ಅಂದಚಂದವಾದ ಹೆಲ್ಮೆಟ್ ಖರೀದಿಸಲು ಪ್ರಯತ್ನಿಸುತ್ತಾರೆ. ಆದರೆ ಅಪಘಾತ ವೇಳೆಯಲ್ಲಿ ಇದು ನಿಮ್ಮ ನೆರವಿಗೆಬರಲಾರದು ಎಂಬುದನ್ನು ಗಮನಿಸಲು ಮರೆಯದಿರಿ.

ಐಎಸ್‌ಐ ಮುದ್ರೆ
ನೀವು ಕೊಂಡುಕೊಳ್ಳುತ್ತಿರುವ ಶಿರಸ್ತ್ರಾಣ, ಇಂಡಿಯನ್ ಸ್ಟಾಂಡರ್ಡ್ ಇಸ್ಸ್ಟಿಟ್ಯೂಟ್‌ನಿಂದ (ಐಎಸ್‌ಐ) ಧೃಢೀಕರಣ ಪಡೆದುಕೊಂಡಿದ್ದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿರಿ. ಹಾಗೆಯೇ ಗ್ಯಾರಂಟಿ ಇತ್ಯಾದಿ ವಿಚಾರಗಳ ಬಗ್ಗೆ ಆರಂಭದಲ್ಲೇ ಮಾಹಿತಿ ಪಡೆದುಕೊಳ್ಳಿರಿ.

ರಸ್ತೆ ಬೀದಿಗಳಲ್ಲಿನ ಹೆಲ್ಮೆಟ್
ಕೆಲವರು ಅಗ್ಗದ ದರಕ್ಕೆ ಮನಸೋತು ರಸ್ತೆ ಬೀದಿಗಳಲ್ಲಿರುವ ಲಭಿಸುವ ಸಾಮಾನ್ಯ ಹೆಲ್ಮೆಟ್‌ಗೆ ಮೊರೆ ಹೋಗುತ್ತೇವೆ. ಗುಣಮಟ್ಟ ರಹಿತ ಇಂತಹ ಹೆಲ್ಮೆಟ್‌ಗಳ ಖರೀದಿ ಸ್ವಯಂ ಆಗಿ ಅಪಾಯವನ್ನು ಆಹ್ವಾನಿಸಿದಂತೆ.

ಬಿಡಿಸುವ ಹೆಲ್ಮೆಟ್
ಹೆಲ್ಮೆಟ್ ಖರೀದಿ ವಿಷಯದಲ್ಲಿ ಗಮನ ವಹಿಸಬೇಕಾದ ಇನ್ನೊಂದು ಪ್ರಮುಖ ಅಂಶವೆಂದರೆ, ನಿಮ್ಮ ಶಿರಸ್ತ್ರಾಣದ ಗಾಜುಗಳು ಬಿಡಿಸುವಂತಿರಬೇಕು. ಇದನ್ನು ನಿಮ್ಮ ಅಗತ್ಯಕ್ಕೆ ಅನುಸಾರವಾಗಿ ಹೊಂದಾಣಿಸಬಹುದಾಗಿದೆ.

ಸ್ಟೈಲಿಷ್ ಹೆಲ್ಮೆಟ್
ಕೆಲವೊಂದು ಬಾರಿ ಶೈಲಿ ಹಾಗೂ ವಿನ್ಯಾಸಕ್ಕೆ ಮಾರು ಹೋಗಿ ಅಸುರಕ್ಷಿತ ಹೆಲ್ಮೆಟ್‌ಗಳನ್ನು ನಮ್ಮ ಯುವ ಸಮೂಹ ಖರೀದಿಸುವ ಹಲವಾರು ಪ್ರಸಂಗಗಳನ್ನು ಗಮನಿಸಿರುತ್ತೇವೆ. ಆದರೆ ಹೆಲ್ಮೆಟ್‌ಗಳು ನಿಮ್ಮ ಜೀವರಕ್ಷಕ ಎಂಬುದನ್ನು ಮರೆಯದಿರಿ.

ಗಾಜಿನ ಗುಣಮಟ್ಟ
ಇನ್ನು ಶಿರಸ್ತ್ರಾಣಗಳಲ್ಲಿ ಗುಣಮಟ್ಟದ ಗಾಜುಗಳು ಅತ್ಯಂತ ಮುಖ್ಯ ಪಾತ್ರ ವಹಿಸುತ್ತದೆ. ಹಾಗಾಗಿ ಗಾಜು ಕ್ವಾಲಿಟಿ ಗಮನವಹಿಸಲು ಮರೆಯದಿರಿ.

ಕಪ್ಪು ಬಣ್ಣದ ಗ್ಲಾಸ್
ಯಾವುದೇ ಕಾರಣಕ್ಕೂ ಕಡು ಕಪ್ಪು ಬಣ್ಣದ ಹೆಲ್ಮೆಟ್ ಗಾಜುಗಳನ್ನು ಬಳಸದಿರಿ. ಇದು ಪಾರದರ್ಶಕತೆ ಹೊಂದಿರುವುದನ್ನು ಖಾತ್ರಿಪಡಿಸಿಕೊಳ್ಳಿ. ಹಾಗೊಂದು ವೇಳೆ ತೆಳು ಕಪ್ಪು ಬಣ್ಣವನ್ನು ಆಯ್ಕೆ ಮಾಡುವುದರಿಂದ ತಪ್ಪೇನಿಲ್ಲ.

ಗುಣಮಟ್ಟ ಪರೀಕ್ಷಿಸಿ
ಇವೆಲ್ಲದರ ಬಳಿಕ ಹೆಲ್ಮೆಟ್‌ಗೆ ಯಾವುದೇ ಡ್ಯಾಮೇಜ್ ಸಂಭವಿಸಿಲ್ಲ ಎಂಬುದನ್ನು ಪರೀಕ್ಷಿಸಿಕೊಳ್ಳಿ.

ಹೆಲ್ಮೆಟ್ ಒಳಮೈ
ಶಿರಸ್ತ್ರಾಣದ ಆಂತರಿಕ ಭಾಗಗಳ ವಿನ್ಯಾಸ ಹೇಗೆ ಗರಿಷ್ಠ ಮಟ್ಟದಲ್ಲಿರುತ್ತದೆಯೋ ಹಾಗೆಯೇ ಇದರಲ್ಲಿ ಆಳವಡಿಸಲಾಗಿರುವ ಪರಿಕರಗಳ ಬಗ್ಗೆಯೂ ತಿಳಿದುಕೊಳ್ಳಿರಿ. ಯಾಕೆಂದರೆ ಕಳಪೆ ಗುಣಮಟ್ಟದ ಸಾಧನಗಳನ್ನು ಬಳಸಿದರೆ ಅದು ನಿಮ್ಮ ಕೂದಲುದುರುವಿಕೆಗೂ ಕಾರಣವಾಗಬಹುದು ಎಂಬುದರ ಬಗ್ಗೆ ಹುಷಾರಾಗಿರಿ.

ಹೆಲ್ಮೆಟ್ ಗಾತ್ರ
ಇನ್ನು ನಿಮಗೆ ಆರಾಮದಾಯಕವಾಗುವ ರೀತಿಯಲ್ಲಿ ಹೆಲ್ಮೆಟ್ ಗಾತ್ರ ಹೊಂದಿರಬೇಕು. ಯಾವತ್ತೂ ತುಂಬಾನೇ ಬಿಗಿಯಾದ ಅಥವಾ ಸಡಿಲವಾದ ಶಿರಸ್ತ್ರಾಣ ಬಳಸದಿರಿ.

ಕಡೆಯದಾಗಿ ಹೆಲ್ಮೆಟ್ ಲಾಕ್
ಏತನ್ಮಧ್ಯೆ ಹಲವಾರು ಪ್ರಕರಣಗಳಲ್ಲಿ ದ್ವಿಚಕ್ರ ಸವಾರರು ಹೆಲ್ಮೆಟ್ ಲಾಕ್ ಧರಿಸದೇ ಸವಾರಿ ಮಾಡುವ ಪ್ರಸಂಗ ಎದುರಾಗುತ್ತದೆ. ಹಾಗಾಗಿ ಹೆಲ್ಮೆಟ್ ಲಾಕ್ ಮಾಡಲು ಮರೆಯದಿರಿ. ಹೆಲ್ಮೆಟ್ ಸ್ವಿಚ್ ಸರಿಯಾಗಿ ಕೆಲಸ ನಿರ್ವಹಿಸುತ್ತದೆಯೇ ಎಂಬುದನ್ನು ಸಹ ಖಾತ್ರಿಪಡಿಸಬೇಕು. ಅಂತೆಯೇ ಕುತ್ತಿಗೆ ಹಾಗೂ ಹೆಲ್ಮೆಟ್ ಲಾಕ್ ನಡುವೆಸಾಕಷ್ಟು ಅಂತರವನ್ನು ಕಾಪಾಡಿರಿ.


Click it and Unblock the Notifications








