ದೀಪಾವಳಿ ಸಂದರ್ಭದಲ್ಲಿ ಕಾರುಗಳನ್ನು ಸುರಕ್ಷಿತವಾಗಿಸುವ ವಿಧಾನಗಳಿವು

ಕರೋನಾ ಬರುವ ಮುನ್ನ ಇದ್ದ ಸಂಭ್ರಮವಿಲ್ಲದಿದ್ದರೂ ಜನರು ದೀಪಾವಳಿಯನ್ನು ಸರಳವಾಗಿ ಆಚರಿಸುತ್ತಿದ್ದಾರೆ. ಕೆಲವೇ ಕೆಲವು ವರ್ಷಗಳ ಹಿಂದೆ ಜನರು ದೀಪವಳಿಗೂ ಮುನ್ನವೇ ಪಟಾಕಿ ಸಿಡಿಸುತ್ತಿದ್ದರು. ಆದರೆ ಈ ಬಾರಿ ಮೊದಲಿನ ಸಂಭ್ರಮ ಕಾಣುತ್ತಿಲ್ಲ. ಕರೋನಾ ವೈರಸ್ ಹರಡುವಿಕೆಯ ಭೀತಿ ಹಾಗೂ ಆರ್ಥಿಕ ಸಂಕಷ್ಟವೇ ಇದಕ್ಕೆ ಪ್ರಮುಖ ಕಾರಣ.

ದೀಪಾವಳಿ ಸಂದರ್ಭದಲ್ಲಿ ಕಾರುಗಳನ್ನು ಸುರಕ್ಷಿತವಾಗಿಸುವ ವಿಧಾನಗಳಿವು

ಆದರೆ ಎಂತಹ ಪರಿಸ್ಥಿತಿಯಲ್ಲೂ ಹಬ್ಬವನ್ನು ಆಚರಿಸದೇ ಸುಮ್ಮನೆ ಇರಬಾರದು ಎಂಬ ಕಾರಣಕ್ಕೆ ಕೆಲವರು ದೀಪಾವಳಿಯನ್ನು ಆಚರಿಸುತ್ತಿದ್ದಾರೆ. ದೀಪಾವಳಿಯ ಪಟಾಕಿ ಸದ್ದು ಅಲ್ಲಲ್ಲಿ ಕೇಳಿ ಬರುತ್ತಿದೆ. ದೀಪಾವಳಿಯ ಸಂದರ್ಭದಲ್ಲಿ ವಾಹನಗಳಿಗೆ ಹಾನಿಯಾಗುವುದು ಸಹಜ. ದೀಪಾವಳಿ ಸಂದರ್ಭದಲ್ಲಿ ವಾಹನಗಳನ್ನು ಹೇಗೆ ರಕ್ಷಿಸಬೇಕು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ದೀಪಾವಳಿ ಸಂದರ್ಭದಲ್ಲಿ ಕಾರುಗಳನ್ನು ಸುರಕ್ಷಿತವಾಗಿಸುವ ವಿಧಾನಗಳಿವು

ಪೋರ್ಟಬಲ್ ಅಗ್ನಿಶಾಮಕ

ನಿಮ್ಮ ವಾಹನದಲ್ಲಿ ಅಥವಾ ನಿಮ್ಮ ಮನೆಯಲ್ಲಿ ಸಣ್ಣ ಅಗ್ನಿಶಾಮಕಗಳನ್ನು ಇರಿಸಿ. ಇದರಿಂದ ಬೆಂಕಿಯಂತಹ ಯಾವುದೇ ಅವಘಡ ಸಂಭವಿಸಿದಾಗ ತಕ್ಷಣವೇ ಪರಿಹಾರ ಕಂಡು ಕೊಳ್ಳಬಹುದು. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಂಭವಿಸುವ ಅಪಘಾತಗಳಲ್ಲಿ ಅಗ್ನಿ ಅವಘಡವೂ ಸೇರಿದೆ.

ದೀಪಾವಳಿ ಸಂದರ್ಭದಲ್ಲಿ ಕಾರುಗಳನ್ನು ಸುರಕ್ಷಿತವಾಗಿಸುವ ವಿಧಾನಗಳಿವು

ಈ ಹಿನ್ನೆಲೆಯಲ್ಲಿ ಅಗ್ನಿಶಾಮಕಗಳನ್ನು ಪ್ರಮುಖವೆಂದು ಪರಿಗಣಿಸಲಾಗುತ್ತದೆ. ಬೆಂಕಿಯ ಸಣ್ಣ ಕಿಡಿ ಸಹ ಕ್ಷಣಾರ್ಧದಲ್ಲಿ ದೊಡ್ಡ ಅನಾಹುತವನ್ನು ಉಂಟು ಮಾಡುತ್ತದೆ. ಆದ್ದರಿಂದ ಈ ವಿಷಯದಲ್ಲಿ ನಿರ್ಲಕ್ಷ್ಯ ಮಾಡಬಾರದು ಎಂಬುದು ನಮ್ಮ ಸಲಹೆ.

ದೀಪಾವಳಿ ಸಂದರ್ಭದಲ್ಲಿ ಕಾರುಗಳನ್ನು ಸುರಕ್ಷಿತವಾಗಿಸುವ ವಿಧಾನಗಳಿವು

ಕಾರುಗಳನ್ನು ಸರಿಯಾಗಿ ಲಾಕ್ ಮಾಡಿ

ದೀಪಾವಳಿ ಸಂದರ್ಭದಲ್ಲಿ ಕಾರ್ ಅನ್ನು ಸರಿಯಾಗಿ ಮುಚ್ಚಲಾಗಿದೆಯೇ ಎಂದು ಪರಿಶೀಲಿಸಿ. ನಿರ್ದಿಷ್ಟವಾಗಿ ಹೇಳುವುದಾದರೆ, ಕಾರಿನ ಎಲ್ಲಾ ವಿಂಡೋಗಳನ್ನು ಮುಚ್ಚಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ. ಕಾರಿನ ಒಳಗಿರುವ ಸೀಟ್ ಹಾಗೂ ಮ್ಯಾಟ್ ಗಳಿಗೆ ಬೆಂಕಿ ಸುಲಭವಾಗಿ ತಗುಲುತ್ತದೆ.

ದೀಪಾವಳಿ ಸಂದರ್ಭದಲ್ಲಿ ಕಾರುಗಳನ್ನು ಸುರಕ್ಷಿತವಾಗಿಸುವ ವಿಧಾನಗಳಿವು

ಬೆಂಕಿಯ ಸಣ್ಣ ಕಿಡಿ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಫ್ಲವರ್ ಪಾಟ್, ಕೋನ್ ವೀಲ್ ಗಳು ಸಣ್ಣ ಪ್ರಮಾಣದ ಬೆಂಕಿಯ ಕಿಡಿಗಳನ್ನು ಅತಿ ವೇಗವಾಗಿ ಎಸೆಯಬಲ್ಲವು. ಇದರಿಂದಾಗಿ ಹಲವೆಡೆ ಬೆಂಕಿ ಕಾಣಿಸಿಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಕಾರಿನ ಎಲ್ಲಾ ಡೋರ್ ಹಾಗೂ ವಿಂಡೋಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ.

ದೀಪಾವಳಿ ಸಂದರ್ಭದಲ್ಲಿ ಕಾರುಗಳನ್ನು ಸುರಕ್ಷಿತವಾಗಿಸುವ ವಿಧಾನಗಳಿವು

ಪಾರ್ಕಿಂಗ್

ಕಾರನ್ನು ಸುರಕ್ಷಿತ ಸ್ಥಳದಲ್ಲಿ ನಿಲ್ಲಿಸುವುದು ಒಳ್ಳೆಯದು. ಪಾರ್ಕಿಂಗ್ ಲಾಟ್ ಅಥವಾ ಸರಿಯಾದ ಪಾರ್ಕಿಂಗ್ ಯಾರ್ಡ್‌ನಂತಹ ಮುಚ್ಚಿದ ಕಂಟೇನರ್‌ನಲ್ಲಿ ಕಾರನ್ನು ಸುರಕ್ಷಿತವಾಗಿ ನಿಲ್ಲಿಸುವುದು ಉತ್ತಮ. ಇದೇ ವೇಳೆ ಕಾರ್ ಅನ್ನು ಸಾಮಾನ್ಯ ಕಾರ್ ಕವರ್ ನೊಂದಿಗೆ ಮುಚ್ಚದಂತೆ ಎಚ್ಚರಿಕೆ ವಹಿಸಿ.

ದೀಪಾವಳಿ ಸಂದರ್ಭದಲ್ಲಿ ಕಾರುಗಳನ್ನು ಸುರಕ್ಷಿತವಾಗಿಸುವ ವಿಧಾನಗಳಿವು

ಕಾರ್ ಕವರ್‌ಗಳಿಗೆ ಸುಲಭವಾಗಿ ಬೆಂಕಿ ತಗುಲುತ್ತದೆ. ಇವುಗಳಿಂದ ಕಾರನ್ನು ಮುಚ್ಚುವುದು ಒಳ್ಳೆಯದಲ್ಲ. ಅದರಲ್ಲೂ ದೀಪಾವಳಿ ಹಬ್ಬದಲ್ಲಿ ಪಟಾಕಿ ಹೆಚ್ಚು ಸಿಡಿಯುವ ಸಮಯದಲ್ಲಿ ಕಾರಿನ ಕವರ್'ಗೆ ಬೆಂಕಿ ತಗುಲಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಆದ್ದರಿಂದ ಕಾರ್ ಅನ್ನು ಮುಚ್ಚಿದ ಪ್ರದೇಶದಲ್ಲಿ ನಿಲ್ಲಿಸುವುದು ಒಳ್ಳೆಯದು.

ದೀಪಾವಳಿ ಸಂದರ್ಭದಲ್ಲಿ ಕಾರುಗಳನ್ನು ಸುರಕ್ಷಿತವಾಗಿಸುವ ವಿಧಾನಗಳಿವು

ಜವಾಬ್ದಾರಿಯಿಂದ ಚಾಲನೆ ಮಾಡಿ

ರಸ್ತೆ ಅಥವಾ ವಸತಿ ಪ್ರದೇಶವನ್ನು ಪ್ರವೇಶಿಸುವಾಗ ಎಚ್ಚರಿಕೆಯಿಂದ ಚಾಲನೆ ಮಾಡಿ. ಹಬ್ಬದ ಸಮಯವಾದ್ದರಿಂದ ರಸ್ತೆಗಳಲ್ಲಿ ಹೆಚ್ಚು ಜನ ಸೇರಿರುತ್ತಾರೆ. ಪಟಾಕಿ ಹೊಗೆಯಿಂದ ಕೆಲವೊಮ್ಮೆ ವಾಹನಗಳು ಸಂಚರಿಸುವುದು ಜನರಿಗೆ ತಿಳಿಯದಂತಾಗುತ್ತದೆ. ಈ ಕಾರಣಕ್ಕೆ ಇತರರ ಸುರಕ್ಷತೆಗಾಗಿಯಾದರೂ ಕಡಿಮೆ ವೇಗದಲ್ಲಿ ವಾಹನ ಚಾಲನೆ ಮಾಡುವುದು ಉತ್ತಮ.

ದೀಪಾವಳಿ ಸಂದರ್ಭದಲ್ಲಿ ಕಾರುಗಳನ್ನು ಸುರಕ್ಷಿತವಾಗಿಸುವ ವಿಧಾನಗಳಿವು

ಪಟಾಕಿಗಳನ್ನು ಸುಡುವವರು ಕೆಲವೊಮ್ಮೆ, ಅವುಗಳನ್ನು ಹತ್ತಿಸಿದ ನಂತರ ಸ್ಫೋಟಕ್ಕೆ ಹೆದರಿ ಮನೆಯೊಳಗೆ ಅವಿತು ಕೊಳ್ಳುತ್ತಾರೆ. ಅಂತಹ ಪ್ರದೇಶಗಳಿಗೆ ತೆರಳುವ ವಾಹನ ಸವಾರರು ತೊಂದರೆಗೆ ಸಿಲುಕುತ್ತಾರೆ. ಇದರಿಂದ ದೊಡ್ಡ ಅಪಾಯವುಂಟಾಗ ಬಹುದು. ಇಂತಹ ಪ್ರದೇಶಗಳನ್ನು ಪ್ರವೇಶಿಸುವಾಗ ಹೆಚ್ಚು ಕಾಳಜಿ ವಹಿಸುವುದು ಅವಶ್ಯಕ.

ದೀಪಾವಳಿ ಸಂದರ್ಭದಲ್ಲಿ ಕಾರುಗಳನ್ನು ಸುರಕ್ಷಿತವಾಗಿಸುವ ವಿಧಾನಗಳಿವು

ಪ್ರಥಮ ಚಿಕಿತ್ಸೆ ಪೆಟ್ಟಿಗೆ

ಪ್ರಥಮ ಚಿಕಿತ್ಸಾ ಕಿಟ್ ನಿಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಸಣ್ಣ ಬೆಂಕಿ ಸಹ ಗಂಭೀರ ಹಾನಿ ಉಂಟು ಮಾಡಬಹುದು. ಆದ್ದರಿಂದ ಹೆಚ್ಚಿನ ಗಮನ ಹರಿಸುವುದು ಅಗತ್ಯ. ಪ್ರಥಮ ಚಿಕಿತ್ಸಾ ಕಿಟ್‌ನಂತಹ ವೈದ್ಯಕೀಯ ಉಪಕರಣಗಳನ್ನು ಹೊಂದಿರುವುದು ಒಳ್ಳೆಯದು.

ದೀಪಾವಳಿ ಸಂದರ್ಭದಲ್ಲಿ ಕಾರುಗಳನ್ನು ಸುರಕ್ಷಿತವಾಗಿಸುವ ವಿಧಾನಗಳಿವು

ಇನ್ನು ದೀರ್ಘಕಾಲದವರೆಗೆ ಕಾರುಗಳನ್ನು ಹೊಂದಿದ್ದರೆ, ಅವುಗಳ ಜೊತೆಗೆ ಮರೆಯಲಾಗದ ನೆನಪುಗಳಿರುತ್ತವೆ. ಈ ಕಾರಣಕ್ಕೆ ಬಹುತೇಕ ಜನರು ಆ ಕಾರುಗಳನ್ನು ಮಾರಾಟ ಮಾಡಲು ಇಚ್ಛಿಸುವುದಿಲ್ಲ. ಆದರೆ ಹಳೆಯ ಕಾರುಗಳಲ್ಲಿ ಕಂಡು ಬರುವ ಕೆಲವು ಲಕ್ಷಣಗಳು ಆ ಕಾರುಗಳನ್ನು ಮಾರಾಟ ಮಾಡಿ ಹೊಸ ಖರೀದಿಸುವುದು ಉತ್ತಮ ಎಂಬುದನ್ನು ಸೂಚಿಸುತ್ತವೆ. ಹಳೆಯ ಕಾರು ಅಂದಾಕ್ಷಣ ಅದು ಬಳಕೆಗೆ ಯೋಗ್ಯವಿಲ್ಲ ಎಂದು ತೀರ್ಮಾನಿಸಲು ಸಾಧ್ಯವಿಲ್ಲ. ಆದರೆ ಬಳಕೆಯ ಯೋಗ್ಯವಾದ ಮಾನದಂಡಗಳಿದ್ದಲ್ಲಿ ಮುಂದುವರಿಸಬಹುದು.

ದೀಪಾವಳಿ ಸಂದರ್ಭದಲ್ಲಿ ಕಾರುಗಳನ್ನು ಸುರಕ್ಷಿತವಾಗಿಸುವ ವಿಧಾನಗಳಿವು

ಈ ಲಕ್ಷಣಗಳು ಕಂಡುಬಂದಲ್ಲಿ ಹೊಸ ಕಾರು ಖರೀದಿಸುವುದು ಒಳಿತು. ಕೆಲವೊಮ್ಮೆ ಹಳೆಯ ಕಾರುಗಳು ಹೆಚ್ಚು ಸಮಸ್ಯೆಗಳನ್ನು ಎದುರಿಸುತ್ತವೆ. ಹಳೆಯ ಕಾರುಗಳಲ್ಲಿರುವ ಸಸ್ಪೆಂಷನ್ ಅಥವಾ ಟ್ರಾನ್ಸ್ ಮಿಷನ್ ಸೆಟಪ್'ಗಳನ್ನು ಸರಿಪಡಿಸಲು ದುಬಾರಿ ಬೆಲೆ ತೆರಬೇಕಾಗುತ್ತದೆ. ಈ ಸಂದರ್ಭಗಳಲ್ಲಿ ಹಳೆ ಕಾರುಗಳ ಸರಿಪಡಿಸಲು ಪದೇ ಪದೇ ಖರ್ಚು ಮಾಡುವುದಕ್ಕಿಂತ ಎಕ್ಸ್‌ಚೆಂಜ್ ಆಫರ್‌ಗಳಲ್ಲಿ ಹೊಸ ಕಾರು ಖರೀದಿಸುವುದು ಸೂಕ್ತ.

ದೀಪಾವಳಿ ಸಂದರ್ಭದಲ್ಲಿ ಕಾರುಗಳನ್ನು ಸುರಕ್ಷಿತವಾಗಿಸುವ ವಿಧಾನಗಳಿವು

ಇಂತಹ ಸಮಸ್ಯೆಗಳನ್ನು ತಕ್ಷಣವೇ ಪತ್ತೆ ಹಚ್ಚಿ ಸರಿಪಡಿಸಬೇಕು. ಕೆಲವೊಮ್ಮೆ ಈ ಭಾಗಗಳನ್ನು ಸರಿಪಡಿಸಲು ಕಾರಿನ ಮೌಲ್ಯಕ್ಕಿಂತ ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಹಳೆಯ ಕಾರಿಗೆ ಹೆಚ್ಚು ಹಣ ಖರ್ಚು ಮಾಡುತ್ತಲೇ ಇರಬೇಕಾಗುತ್ತದೆ. ಈ ರೀತಿ ಖರ್ಚು ಮಾಡುವುದಕ್ಕಿಂತ ಹೊಸ ಕಾರು ಖರೀದಿಸುವುದು ಉತ್ತಮ. ಅನಗತ್ಯ ಖರ್ಚು ತಪ್ಪಿಸಲು ಇದರಿಂದ ಸಹಾಯವಾಗುತ್ತದೆ. ಕೆಲವೊಮ್ಮೆ ಕಾರುಗಳು ಎಂಜಿನ್ ಹೊಂದಿರುತ್ತವೆ ಎಂಬುದನ್ನು ಮರೆಯುತ್ತೇವೆ. ಕಾರುಗಳನ್ನು ಒಂದು ನಿರ್ದಿಷ್ಟ ಮಟ್ಟಕ್ಕಿಂತ ಹೆಚ್ಚಾಗಿ ಸತತವಾಗಿ ಚಾಲನೆ ಮಾಡಲು ಸಾಧ್ಯವಿಲ್ಲ. ಧೀರ್ಘಕಾಲದ ಎಂಜಿನ್ ಬಳಕೆಯು ಕೆಲವೊಮ್ಮೆ ವಿಶ್ವಾಸಾರ್ಹತೆಯನ್ನು ಕಳೆದು ಕೊಳ್ಳುತ್ತದೆ.

ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Tips to keep cars and bikes safe during diwali festival details
Story first published: Thursday, November 4, 2021, 14:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X