ಟ್ರಾಫಿಕ್ ಪೊಲೀಸರು ವಾಹನದ ಫೋಟೋ ತೆಗೆದಿದ್ದರೇ ಒಂದೇ ನಿಮಿಷದಲ್ಲಿ ದಂಡದ ಮಾಹಿತಿ ಪಡೆಯಿರಿ

ಟ್ರಾಫಿಕ್ ಪೊಲೀಸರ ಎದುರಿಗೆ ನಿಯಮಗಳನ್ನು ಉಲ್ಲಂಘಿಸಿದಾಗ ಮಾತ್ರ ಈ ಹಿಂದೆ ತಡೆದು ದಂಡ ವಿಧಿಸಲಾಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ, ಪೊಲೀಸರು ರಸ್ತೆಯಲ್ಲಿ ಕಾರ್ಯಾಚರಣೆ ಮಾಡದಿದ್ದರೂ ನಾವು ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಲಾಗುತ್ತದೆ. ಎಲ್ಲವೂ ಸಿಸಿ ಕ್ಯಾಮರಾಗಳ ಮಹಿಮೆ, ಒಮ್ಮೆಲೆ ಪೊಲೀಸರಿಗೆ ಸಿಕ್ಕಿಬಿದ್ದರೆ ನಮ್ಮ ಹಳೆಯ ದಂಡಗಳನ್ನು ಪಾವತಿಸಬೇಕಾಗುತ್ತದೆ.

ಈ ಹಿಂದೆ ಪೊಲೀಸರಿಗೆ ಸಿಕ್ಕಿಬಿದ್ದರೆ ದಂಡ ಪಾವತಿಸದೇ ನಾವು ತೆರಳಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ರಸ್ತೆಯಲ್ಲಿ ಟ್ರಾಫಿಕ್ ಪೊಲೀಸರ ಕಾರ್ಯಾಚರಣೆ ಕಡಿಮೆಯಾಗಿದ್ದು, ಚಾಲಕರ ಬೇಕಾಬಿಟ್ಟಿ ಓಡಾಟ ಹೆಚ್ಚಾಗಿದೆ. ಜನರಿಗೆ ಟ್ರಾಫಿಕ್ ನಿಯಮಗಳನ್ನು ಪಾಲಿಸುವುದೇ ದೊಡ್ಡ ಸಮಸ್ಯೆಯಾಗಿದೆ. ಹೆಲ್ಮೆಟ್ ಧರಿಸದಿರುವುದು, ಸಿಗ್ನಲ್ ಜಂಪ್, ತ್ರಿಬಲ್ ರೈಡಿಂಗ್ ಹೀಗೆ ನಿಯಮ ಉಲ್ಲಂಘನೆಗಳ ಬಗ್ಗೆ ಹೇಳುತ್ತಾ ಹೋದರೇ ಈ ಲೇಖನ ಕೂಡ ಸಾಲುವುದಿಲ್ಲ. ಈಗ ಒಮ್ಮೆ ಪೊಲೀಸರಿಗೆ ಸಿಕ್ಕರೆ ನಮ್ಮ ಅಷ್ಟೂ ದಂಡದ ಮೊತ್ತವನ್ನು ಹೊರತೆಗೆಯುತ್ತಾರೆ.

ಟ್ರಾಫಿಕ್ ಪೊಲೀಸರು ವಾಹನದ ಫೋಟೋ ತೆಗೆದಿದ್ದರೇ ಒಂದೇ ನಿಮಿಷದಲ್ಲಿ ದಂಡದ ಮಾಹಿತಿ ಪಡೆಯಿರಿ

ಆದರೆ ಇಲ್ಲಿ ಸಮಸ್ಯೆ ಏನೆಂದರೆ ಸಿಸಿ ಕ್ಯಾಮರಾಗಳು ಅಥವಾ ಪೊಲೀಸರು ನಿಯಮಗಳನ್ನು ಉಲ್ಲಂಘಿಸಿದಾಗ ವಾಹನ ಸಮೇತ ಚಾಲಕನ ಪೋಟೋ ತೆಗೆದು ಕಳುಹಿಸಲಾಗುತ್ತದೆ. ಕೆಲವೊಮ್ಮೆ ವಾಹನ ಸಂಖ್ಯೆ ತಪ್ಪಾಗಿ ದಾಖಲಾದರೆ ಮತ್ಯಾರಿಗೋ ದಂಡ ಹೋಗುತ್ತದೆ. ಇಂತಹ ಘಟನೆಗಳು ಹಲವಾರು ನಡೆದಿವೆ. ಜೊತೆಗೆ ನಗರಗಳಲ್ಲಿನ ಸಣ್ಣ ರಸ್ತೆಗಳಲ್ಲೂ ಸಿಸಿ ಕ್ಯಾಮರಾಗಳು ಅಳವಡಿಸಿರುವುದರಿಂದ ನಾವು ತಿಳಿಯದೇ ಅಥವಾ ಆತುರದಲ್ಲಿ ಹೋದಾಗ ನಮ್ಮ ಗಮನಕ್ಕೆ ಬಾರದೇ ಚಲನ್ ದಾಖಲಾಗಿರುತ್ತದೆ.

ಇಂತಹ ದಂಡ ನಮಗೂ ವಿಧಿಸಲಾಗಿರುತ್ತದಯೇ ಎಂಬ ಅನುಮಾನ ಹಲವರಲ್ಲಿ ಕಾಡುತಿರುತ್ತದೆ. ಆದರೆ ಅದನ್ನು ಖಚಿತಪಡಿಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ತುಂಬಾ ಜನರಿಗೆ ಗೊತ್ತಿರುವುದಿಲ್ಲ. ನಿಯಮ ಉಲ್ಲಂಘಿಸಿದ ಒಬ್ಬ ವ್ಯಕ್ತಿಯನ್ನು ಪೊಲೀಸರು ಫೋಟೋ ತೆಗೆದಿದ್ದರೆ. ಪೊಲೀಸರು ತೆಗೆದ ಫೋಟೋದ ಆಧಾರದ ಮೇಲೆ ನಿಮ್ಮ ಚಲನ್ ಕಟ್ ಆಗಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ತುಂಬಾ ಸುಲಭವಾಗಿ ತಿಳಿಯಬಹದು. ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ನಿಮ್ಮ ಮೊಬೈಲ್ ಮೂಲಕ ತಿಳಿದುಕೊಳ್ಳಿ.

ಟ್ರಾಫಿಕ್ ಪೊಲೀಸರು ವಾಹನದ ಫೋಟೋ ತೆಗೆದಿದ್ದರೇ ಒಂದೇ ನಿಮಿಷದಲ್ಲಿ ದಂಡದ ಮಾಹಿತಿ ಪಡೆಯಿರಿ

ಮೊದಲು https://echallan.parivahan.gov.in/ ವೆಬ್‌ಸೈಟ್‌ಗೆ ಹೋಗಿ ಆನ್‌ಲೈನ್‌ನಲ್ಲಿ ದಂಡ ಪಾವತಿ ಆಯ್ಕೆ ಇರುತ್ತದೆ. ಆ ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ ನಿಮ್ಮ ಪೆನಾಲ್ಟಿ ಫ್ರೀ ಚಲನ್ ಅನ್ನು ಕಂಡುಹಿಡಿಯಲು ನೀವು 3 ವಿಭಿನ್ನ ಮಾರ್ಗಗಳನ್ನು ಪಡೆಯುತ್ತೀರಿ. ನಿಮಗೆ ನೀಡಲಾದ ಸೆಲ್ ಸಂಖ್ಯೆಯನ್ನು ನೀವು ಹೊಂದಿದ್ದರೆ ಆ ಸಂಖ್ಯೆಯನ್ನು ಬಳಸಿಕೊಂಡು ನೀವು ಹುಡುಕಬಹುದು. ಇಲ್ಲದಿದ್ದರೆ, ನೀವು ವಾಹನದ ನೋಂದಣಿ ಸಂಖ್ಯೆ, ಎಂಜಿನ್ ಅಥವಾ ಚಾಸಿಸ್ ಸಂಖ್ಯೆಯ ಕೊನೆಯ 5 ಅಂಕೆಗಳಿಂದಲೂ ಹುಡುಕಬಹುದು.

ಇಲ್ಲದಿದ್ದರೆ, ನೀವು ಯಾವುದೇ ದಂಡವನ್ನು ಹೊಂದಿದ್ದೀರಾ ಎಂಬುದರ ಬಗ್ಗೆ ತಿಳಿಯಲು ನಿಮ್ಮ ಡಿಎಲ್ ಸಂಖ್ಯೆಯಿಂದ ಹುಡುಕುವ ಆಯ್ಕೆಯೂ ಇದೆ. ನಿಮ್ಮ ಮಾಹಿತಿಯನ್ನು ನೀವು ನೀಡಿದರೆ, ಸಿಸಿಟಿವಿ ಸ್ಮಾರ್ಟ್ ಕ್ಯಾಮೆರಾಗಳು ಮತ್ತು ಪೊಲೀಸರು ತಮ್ಮ ಸೆಲ್ ಫೋನ್‌ಗಳಲ್ಲಿ ದಾಖಲಿಸಿದ ಉಲ್ಲಂಘನೆಗಳು ಸೇರಿದಂತೆ ಈ ಹಿಂದಿನ ದಂಡಗಳನ್ನು ನೀವು ನೋಡಬಹುದು. ಒಂದು ವೇಳೆ ಇತರರ ದಂಡವನ್ನು ನಿಮ್ಮ ವಾಹನದ ಮೇಲೆ ಹಾಕಿದ್ದರೇ ಟ್ರಾಫಿಕ್ ಕಛೇರಿಗೆ ಭೆಟಿ ನೀಡಿ ಇತ್ಯರ್ಥ ಮಾಡಿಕೊಳ್ಳಬಹುದು.

ಟ್ರಾಫಿಕ್ ಪೊಲೀಸರು ವಾಹನದ ಫೋಟೋ ತೆಗೆದಿದ್ದರೇ ಒಂದೇ ನಿಮಿಷದಲ್ಲಿ ದಂಡದ ಮಾಹಿತಿ ಪಡೆಯಿರಿ

ದಂಡವನ್ನು ಈ ರೀತಿ ಪಾವತಿಸಿ:
ಚಲನ್‌ನ ಮಾಹಿತಿಯು ಎಲ್ಲಿ ಗೋಚರಿಸುತ್ತದೆಯೋ, ಅದರ ಪಕ್ಕದಲ್ಲಿಯೇ ಪಾವತಿ ಮಾಡುವ ಆಯ್ಕೆಯನ್ನು ಸಹ ನೀವು ನೋಡಬಹದು. ಅದರ ಮೇಲೆ ಕ್ಲಿಕ್ ಮಾಡಿ ಮತ್ತು ಪಾವತಿಗೆ ಅಗತ್ಯವಿರುವ ಮಾಹಿತಿಯನ್ನು ಭರ್ತಿ ಮಾಡಿದ ನಂತರ ಪಾವತಿ ಮಾಡಬಹುದು. ಇದು ತುಂಬಾ ಸುಲಭ ವಿಧನವಾಗಿದ್ದು, ದಂಡ ಬಿದ್ದಿರುವ ಬಗ್ಗೆ ಅನುಮಾವಿದ್ದವರು ಯಾವುದೇ ಖರ್ಚಿಲ್ಲದೇ ಮಾಹಿತಿ ಪಡೆದುಕೊಳ್ಳಬಹುದು. ಅಲ್ಲದೇ ಅಲ್ಲೇ ದಂಡ ಪಾವತಿ ಮಾಡಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Thursday, April 6, 2023, 17:20 [IST]
English summary
Traffic violation fine information echallan parivahan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+