ಈ ಗ್ಲಾಸ್ ಗಳು ನಿಮ್ಮ ಕಾರಿನಲ್ಲಿದ್ದರೆ ಹೆಚ್ಚಿನ ಸುರಕ್ಷತೆ, ಹಣ ಸಹ ಉಳಿತಾಯ!

ಇತ್ತೀಚಿನ ವರ್ಷಗಳಲ್ಲಿ, ಕಾರುಗಳಲ್ಲಿನ ಯುವಿ ಕಟ್ ಗ್ಲಾಸ್‌ಗಳು (UV Cut Glasses) ಭಾರತದಲ್ಲಿ ಚಾಲಕರಿಗೆ ಪ್ರಮುಖ ಸುರಕ್ಷತಾ ವೈಶಿಷ್ಟ್ಯವಾಗಿದೆ. ಈ ಗ್ಲಾಸ್‌ಗಳು ಹಾನಿಕಾರಕ ಯುವಿ ಕಿರಣಗಳನ್ನು ನಿರ್ಬಂಧಿಸುತ್ತವೆ, ಕಣ್ಣಿನ ರಕ್ಷಣೆಯನ್ನು ಒದಗಿಸುತ್ತವೆ ಮತ್ತು ಚಾಲನಾ ಅನುಭವವನ್ನು ಹೆಚ್ಚಿಸುತ್ತವೆ. ಅದರ ಬಗ್ಗೆ ವಿವರವಾದ ಮಾಹಿತಿಯನ್ನು ನೋಡೋಣ

ಸೂರ್ಯನ ಕಿರಣ: ಯುವಿ ಕಟ್ ಗ್ಲಾಸ್‌ಗಳು ಸೂರ್ಯನ ಬೆಳಕನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ, ಇದರಿಂದಾಗಿ ಚಾಲಕನ ಕಣ್ಣುಗಳ ಮೇಲೆ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದು ವಿಶೇಷವಾಗಿ ಬೇಸಿಗೆ ಕಾಲದಲ್ಲಿ ಚಾಲಕರಿಗೆ ಸುರಕ್ಷಿತ ಮತ್ತು ಹೆಚ್ಚು ಆರಾಮದಾಯಕವಾಗಿ ಡ್ರೈವಿಂಗ್ ಮಾಡಲು ಅನುವು ಮಾಡಿಕೊಡುತ್ತದೆ. ಹೈವೇಗಳಲ್ಲಿ ಲಾಂಗ್ ಡ್ರೈವ್ ಹೋಗುವಾಗ ಸೂರ್ಯನ ಕಿರಣ ಕಣ್ಣಿಗೆ ಹೊಡೆಯುತ್ತದೆ. ಇಂತಹ ಸಂದರ್ಭಗಳಲ್ಲಿ ಈ ಯುವಿ ಕಟ್ ಗ್ಲಾಸ್‌ಗಳು ಹೆಚ್ಚು ಪ್ರಯೋಜನಕಾರಿಯಾಗಿದೆ.

UV Cut Glasses

ಹಾನಿಕಾರಕ ಕಿರಣಗಳನ್ನು ನಿರ್ಬಂಧಿಸುತ್ತದೆ: ಯುವಿ ಕಟ್ ಗ್ಲಾಸ್‌ಗಳು 99 ಪ್ರತಿಶತ ಯುವಿ ಕಿರಣಗಳನ್ನು ನಿರ್ಬಂಧಿಸಬಹುದು, ಚರ್ಮ ಮತ್ತು ಕಣ್ಣಿನ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಸೂಕ್ಷ್ಮ ಚರ್ಮ ಅಥವಾ ಕಣ್ಣು ಹೊಂದಿರುವ ಜನರಿಗೆ ಅವು ವಿಶೇಷವಾಗಿ ಉಪಯುಕ್ತವಾಗಿವೆ. ಈ ಯುವಿ ಕಟ್ ಗ್ಲಾಸ್‌ಗಳು ನಿಮ್ಮ ಕಾರಿನಲ್ಲಿ ಅಳವಡಿಸಿದರೆ ಹೆಚ್ಚು ಪ್ರಯೋಜನೆಕಾರಿಯಾಗಿದೆ.

ದೃಷ್ಟಿ ಸ್ಪಷ್ಟತೆಯನ್ನು ಸುಧಾರಿಸಿ: ಈ ಗ್ಲಾಸ್‌ಗಳು ಬೆಳಕು ಮತ್ತು ಶಾಖದ ಒಳಹೊಕ್ಕು ಕಾರುಗಳನ್ನು ಕಡಿಮೆ ಮಾಡುವ ಮೂಲಕ ದೃಷ್ಟಿ ಸ್ಪಷ್ಟತೆಯನ್ನು ಸುಧಾರಿಸುತ್ತದೆ, ಚಾಲಕರು ಮತ್ತು ಪ್ರಯಾಣಿಕರಿಗೆ ಗೋಚರತೆಯನ್ನು ಹೆಚ್ಚಿಸುತ್ತದೆ. ಇದು ಸುರಕ್ಷಿತ ಪ್ರಯಾಣಕ್ಕೆ ಹೆಚ್ಚಿನ ಮಟ್ಟಿಗೆ ಸಹಾಯ ಮಾಡುತ್ತದೆ. ಇದು ಅಪಘಾತಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಬಿಸಿಲಿನ ಬೇಗೆಯಲ್ಲೂ ಉತ್ತಮ ಡ್ರೈವಿಂಗ್ ಅನುಭವ ಪಡೆಯಲು ಸಹಾಯ ಮಾಡುತ್ತದೆ.

UV Cut Glasses

ಕಾರ್ ಇಂಟೀರಿಯರ್‌ಗಳ ಜೀವಿತಾವಧಿಯನ್ನು ಹೆಚ್ಚಿಸುತ್ತದೆ: UV ಕಟ್ ಗ್ಲಾಸ್‌ಗಳು ಕಾರಿನ ಒಳಾಂಗಣವನ್ನು ಸೂರ್ಯನ ಬೆಳಕಿನಿಂದ ರಕ್ಷಿಸುತ್ತದೆ ಮತ್ತು ಇದರಿಂದಾಗಿ ಅವುಗಳ ಜೀವಿತಾವಧಿಯನ್ನು ಹೆಚ್ಚಿಸುತ್ತದೆ. ಇದು ಕಾರಿನ ಮರುಮಾರಾಟ ಮೌಲ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಕಾರಿನ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುತ್ತದೆ.

ಇಂಟಿರಿಯರ್: ಯುವಿ ಕಟ್ ಗ್ಲಾಸ್‌ಗಳು ಕಾರಿನ ಇಂಟಿರಿಯರ್ ಅಥವಾ ಒಳಬಾಗದಲ್ಲಿ ಸೂರ್ಯನ ಬೆಳಕಿನಿಂದ ರಕ್ಷಿಸುತ್ತದೆ ಮತ್ತು ಇದರಿಂದಾಗಿ ಅವುಗಳ ಜೀವಿತಾವಧಿಯನ್ನು ಹೆಚ್ಚಿಸುತ್ತದೆ. ಇದು ಕಾರಿನ ಮರುಮಾರಾಟ ಮೌಲ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಕಾರಿನ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುತ್ತದೆ. ಇದರಿಂದ ನಿಮ್ಮ ಕಾರನ್ನು ಉತ್ತಮ ಸ್ಥಿತಿಯಲ್ಲಿಡಲು ಇದು ಹೆಚ್ಚು ಸಹಾಯ ಮಾಡುತ್ತದೆ.

ಯುವಿ ಕಟ್ ಗ್ಲಾಸ್‌ಗಳು ಕಾರಿನಲ್ಲಿ ಸೂರ್ಯನಿಂದ ಉಂಟಾಗುವ ಹಾಟ್ ಸ್ಪಾಟ್‌ಗಳ ರಚನೆಯನ್ನು ನಿಯಂತ್ರಿಸುತ್ತದೆ, ಹೀಗಾಗಿ ಕಾರಿನೊಳಗಿನ ಶಾಖವನ್ನು ಕಡಿಮೆ ಮಾಡುತ್ತದೆ. ಕಾರನ್ನು ಹೆಚ್ಚು ಆರಾಮದಾಯಕವಾಗಿಸಲು ಮತ್ತು ಓಡಿಸಲು ಆನಂದದಾಯಕವಾಗಿಸಲು ಇದು ಹೆಚ್ಚಿನ ಪ್ರಮಾಣದಲ್ಲಿ ಸಹಾಯ ಮಾಡುತ್ತದೆ. ಕಾರಿನೊಳಗಿನ ತಾಪಮಾನವು ಸಮವಾಗಿರುತ್ತದೆ. ಇದರಿಂದ ನಿಮ್ಮ ಕಾರಿನಲ್ಲಿ ಯುವಿ ಕಟ್ ಗ್ಲಾಸ್‌ಗಳು ಅಳವಡಿಸಿದರೆ ಹೆಚ್ಚು ಪ್ರಯೋಜನೆಗಳಿವೆ.

ಐಷಾರಾಮಿ ಕಾರುಗಳಲ್ಲಿ ಜನಪ್ರಿಯ: ಯುವಿ ಕಟ್ ಗ್ಲಾಸ್‌ಗಳು ಭಾರತದಲ್ಲಿ ಐಷಾರಾಮಿ ಕಾರುಗಳಲ್ಲಿ ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿವೆ, ಜನರು ಹೆಚ್ಚಿನ ಮಟ್ಟದ ಸುರಕ್ಷತೆ ಮತ್ತು ಸೌಕರ್ಯದೊಂದಿಗೆ ಈ ಗ್ಲಾಸ್‌ಗಳಿಗೆ ಆದ್ಯತೆ ನೀಡುತ್ತಾರೆ. ಹಾಗಾಗಿ ಪ್ರಸಿದ್ಧ ಕಾರು ತಯಾರಿಕಾ ಕಂಪನಿಗಳು ತಮ್ಮ ಕಾರುಗಳಲ್ಲಿ ಈ ಗ್ಲಾಸ್‌ಗಳನ್ನು ಅಳವಡಿಸುತ್ತಿದ್ದಾರೆ.

ಪವರ್ ಉಳಿತಾಯ: ಕಾರಿನೊಳಗಿನ ತಾಪಮಾನವನ್ನು ನಿಯಂತ್ರಿಸುವ ಮೂಲಕ, ಯುವಿ ಕಟ್ ಗ್ಲಾಸ್ಗಳು ಎಸಿಯ ಅಗತ್ಯವನ್ನು ಕಡಿಮೆ ಮಾಡುತ್ತದೆ, ಇದು ಪವರ್ ಉಳಿತಾಯ ಮತ್ತು ಉತ್ತಮ ಮೈಲೇಜ್ ಅನ್ನು ನೀಡುತ್ತದೆ. ಇದರಿಂದ ಕಾರಿನ ಮೈಲೇಜ್ ಹೆಚ್ಚುತ್ತದೆ. ಇಂಧನ ವೆಚ್ಚ ಕಡಿಮೆಯಾಗಲಿದೆ. ನೀವು ಸಾಕಷ್ಟು ಹಣವನ್ನು ಸಹ ಉಳಿಸಬಹುದು. ಇದರಿಂದ ಯುವಿ ಕಟ್ ಗ್ಲಾಸ್‌ಗಳು ಹೆಚ್ಚು ಉಪಯೋಕ್ತವಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮತ್ತು ಶೇರ್ ಮಾಡಲ್ಯ್ ಮರೆಯದಿರಿ.

More from DriveSpark

Article Published On: Monday, September 4, 2023, 20:08 [IST]
English summary
Uv cut glasses in cars necessity and benefits
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+