ನಿಮ್ಮ ಟೈರ್‌ನಲ್ಲಿ ಈ ಸಮಸ್ಯೆಗಳಿದ್ದಲ್ಲಿ ಕೂಡಲೇ ಬದಲಾಯಿಸಿ... ಜೊತೆಗೆ ಈ ವಿಷಯಗಳೂ ನೆನಪಿರಲಿ

ಬೈಕ್‌ಗೆ ರಸ್ತೆಯೊಂದಿಗೆ ಸಂಪರ್ಕದಲ್ಲಿರುವ ಒಂದೇ ಒಂದು ಅಂಶವೆಂದರೆ ಅದು ಟೈರ್‌ಗಳು. ಹಾಗಾಗಿ ನಾವು ಉಪಯೋಗಿಸುವ ಟೈರ್‌ಗಳು ಸರಿಯಾದ ಗುಣಮಟ್ಟದಲ್ಲಿರುಬೇಕಾದುದು ತುಂಬಾನೇ ಅವಶ್ಯಕ. ಟೈರ್‌ ಬಳಕೆಯ ಗುಣಮಟ್ಟದಲ್ಲಿ ಕೊಂಚ ಏರುಪೇರಾದರೂ, ಅಪಾಯದ ಜೊತೆಗೆ ನಮ್ಮ ಬೈಕ್‌ನ ಪರ್ಫಾಮೆನ್ಸ್‌ನಲ್ಲೂ ಅಡ್ಡ ಪರಿಣಾಮ ಬೀರುವುದರಲ್ಲಿ ಎರಡು ಮಾತಿಲ್ಲ.

 ನಿಮ್ಮ ಟೈರ್‌ನಲ್ಲಿ ಈ ಸಮಸ್ಯೆಗಳು ಇದ್ದರೆ ಕೂಡಲೇ ಬದಲಾಯಿಸಿ... ಜೊತೆಗೆ ಈ ವಿಷಯಗಳೂ ನೆನಪಿರಲಿ.

ಇದೇ ಕಾರಣಕ್ಕಾಗಿ ಸರಿಯಾದ ಸಮಯದಲ್ಲಿ ಬೈಕ್‌ನ ಟೈರ್‌ ಬದಲಾಯಿಸುವುದು ತುಂಬಾನೇ ಮುಖ್ಯ. ಹಾಗಾಗಿ ನಿಮ್ಮ ಬೈಕ್‌ನ ಟೈರನ್ನು ಯಾವ ಸಮಯದಲ್ಲಿ ಬದಲಾಯಿಸಬೇಕು ಹಾಗೂ ಅದರ ಜೊತೆಗೆ ನೀವು ಕಡೆಗಣಿಸಲೇಬಾರದ ಪ್ರಮುಖ ಅಂಶಗಳೇನು ಎಂಬುದನ್ನು ತಿಳಿಯಲು ಈ ಲೇಖನವನ್ನು ಕೊನೆಯವರೆಗೆ ಓದಿ.

 ನಿಮ್ಮ ಟೈರ್‌ನಲ್ಲಿ ಈ ಸಮಸ್ಯೆಗಳು ಇದ್ದರೆ ಕೂಡಲೇ ಬದಲಾಯಿಸಿ... ಜೊತೆಗೆ ಈ ವಿಷಯಗಳೂ ನೆನಪಿರಲಿ.

1. ಅತಿಯಾಗಿ ಸವೆದ ಟೈರ್‌ನ ಮೇಲ್ಪದರ

ಎಲ್ಲಾ ಟೈರ್‌ಗಳಲ್ಲೂ ಟೈರ್‌ನ ಮೇಲ್ಬಾಗದ ಪದರ ಪ್ರಮುಖ ಪಾತ್ರ ವಹಿಸುತ್ತದೆ. ನಾವು ಬೈಕ್‌ ಚಲಾಯಿಸುವಾಗ ನಮ್ಮ ಪ್ರಯಾಣ ಆರಾಮದಾಯಕವಾಗಿರಿಸಲು ಟೈರ್‌ನ ಮೇಲ್ಬಾಗ ಪ್ರಮುಖವಾದುದ್ದು. ಇದನ್ನು ಗ್ರಿಪ್‌ ಎಂದು ಸಹ ಕರೆಯುತ್ತಾರೆ. ಟೈರ್‌ನ ಮೇಲ್ಬಾಗದ ಗ್ರಿಪ್‌ ನಾವು ಬಳಸುವ ಆಧಾರದ ಮೇಲೆ ಸವೆದು ಹೋಗುತ್ತಿರುತ್ತದೆ.

 ನಿಮ್ಮ ಟೈರ್‌ನಲ್ಲಿ ಈ ಸಮಸ್ಯೆಗಳು ಇದ್ದರೆ ಕೂಡಲೇ ಬದಲಾಯಿಸಿ... ಜೊತೆಗೆ ಈ ವಿಷಯಗಳೂ ನೆನಪಿರಲಿ.

ಈ ಟೈರ್ ಸವೆದಂತೆ ಅದರ ರಸ್ತೆಯ ಮೇಲಿನ ಹಿಡಿತ ಕಡಿಮೆಯಾಗುತ್ತದೆ. ಹಾಗಾಗಿ ಅತಿಯಾಗಿ ಸವೆದ ಟೈರ್‌ ಉಪಯೋಗಿಸದೇ, ಒಂದು ಹಂತಕ್ಕೆ ಬಂದಾಗ ಟೈರ್‌ ಬದಲಾಯಿಸುವುದು ಉತ್ತಮ.

 ನಿಮ್ಮ ಟೈರ್‌ನಲ್ಲಿ ಈ ಸಮಸ್ಯೆಗಳು ಇದ್ದರೆ ಕೂಡಲೇ ಬದಲಾಯಿಸಿ... ಜೊತೆಗೆ ಈ ವಿಷಯಗಳೂ ನೆನಪಿರಲಿ.

2. ಟೈರ್‌ ಏಜ್‌/ ಟೈರ್‌ ಆಯಸ್ಸು

ಹೌದು, ಪ್ರತಿಯೊಂದು ಟೈರ್‌ಗೂ ಟೈರ್‌ ಏಜ್‌ ಎಂಬ ಅಂಶವೊಂದಿದೆ. ಅಂದರೆ ಎಲ್ಲಾ ಟೈರ್‌ಗಳನ್ನು ಇಂತಿಷ್ಟು ಕಾಲ ಮಾತ್ರವೇ ಉಪಯೋಗಿಸಲು ಯೋಗ್ಯವಾಗಿರುತ್ತದೆ, ಅದರ ನಂತರವೂ ಅದೇ ಟೈರ್‌ ಉಪಯೋಗಿಸುವುದು ಸೂಕ್ತವಲ್ಲ. ಇದನ್ನು ಹೇಗೆ ತಿಳಿಯುವುದೆಂದರೆ, ಎಲ್ಲಾ ಟೈರ್‌ ನ ಮೇಲೂ ಅದರ ಮ್ಯಾನುಫಾಕ್ಚರಿಂಗ್‌ ಡೇಟ್‌ ಇರುತ್ತದೆ.

 ನಿಮ್ಮ ಟೈರ್‌ನಲ್ಲಿ ಈ ಸಮಸ್ಯೆಗಳು ಇದ್ದರೆ ಕೂಡಲೇ ಬದಲಾಯಿಸಿ... ಜೊತೆಗೆ ಈ ವಿಷಯಗಳೂ ನೆನಪಿರಲಿ.

ಅಂದರೆ ಅದನ್ನು ಯಾವಾಗ ತಯಾರಿಸಿದ್ದು ಎಂದು ತಿಳಿಯುವ ದಿನಾಂಕ ಇರುತ್ತದೆ. ಆ ದಿನಾಂಕದಿಂದ ಸುಮಾರು 6 ವರ್ಷಗಳ ಕಾಲ ಆ ಟೈರನ್ನು ಬಳಸಬಹುದು. ಅದನ್ನು ನೀವು ಬಳಸಿದರೂ, ಬಳಸದೇ ಇದ್ದರೂ, ನಿಗದಿತ ಕಾಲಾವಧಿ ಮುಗಿದ ಮೇಲೆ ಟೈರ್‌ ಬದಲಾಯಿಸುವುದು ಉತ್ತಮ.

 ನಿಮ್ಮ ಟೈರ್‌ನಲ್ಲಿ ಈ ಸಮಸ್ಯೆಗಳು ಇದ್ದರೆ ಕೂಡಲೇ ಬದಲಾಯಿಸಿ... ಜೊತೆಗೆ ಈ ವಿಷಯಗಳೂ ನೆನಪಿರಲಿ.

3.ಇದ್ದಕ್ಕಿದ್ದ ಹಾಗೆ ಟೈರ್‌ನಲ್ಲಿ ಗಾಳಿಯ ಸಮಸ್ಯೆ

ನೀವು ಬಳಸುತ್ತಿರುವ ಟೈರ್‌ನಲ್ಲಿ ಇದ್ದಕ್ಕಿದ್ದ ಹಾಗೆ ಗಾಳಿಯ ಒತ್ತಡ ಕಡಿಮೆಯಾಗಲು ಆರಂಭಿಸಿದರೆ, ಟೈರ್‌ ದುರ್ಬಲವಾಗುತ್ತಿದೆ ಎಂದರ್ಥ. ಒಮ್ಮೆಲೇ ಗಾಳಿ ಕಮ್ಮಿಯಾಗಲು ಹಲವಾರು ಕಾರಣಗಳಿರಬಹುದು. ದುರ್ಬಲ ಟೈರ್‌, ಹಾನಿಗೊಳಗಾದ ಟೈರ್‌ ಹೀಗೆ ಕಾರಣ ಬೇರೆ ಬೇರೆ ಇರಬಹುದು. ಹೀಗಾದಾಗ ಅದನ್ನು ರಿಪೇರಿ ಮಾಡಿದರೂ ಸಹ ಅದೇ ಸಮಸ್ಯೆಗಳು ಮರುಕಳಿಸುತ್ತಿದ್ದರೆ ಅದನ್ನು ಬದಲಾಯಿಸುವುದು ಉತ್ತಮ.

 ನಿಮ್ಮ ಟೈರ್‌ನಲ್ಲಿ ಈ ಸಮಸ್ಯೆಗಳು ಇದ್ದರೆ ಕೂಡಲೇ ಬದಲಾಯಿಸಿ... ಜೊತೆಗೆ ಈ ವಿಷಯಗಳೂ ನೆನಪಿರಲಿ.

4.ಟೈರ್‌ ಒಂದೇ ಕಡೆ ಸವೆಯುತ್ತಿರುವುದು

ನಿಮ್ಮ ಬೈಕ್‌ನ ಟೈರ್‌ ಒಂದೇ ಕಡೆ ಜಾಸ್ತಿ ಸವೆಯುತ್ತಿದೆ ಎಂದಾದರೆ ಅದಕ್ಕೆ ಕಾರಣ ಹಲವಿರಬಹುದು, ಅದರಲ್ಲಿ ವ್ಹೀಲ್‌ ಅಲೈನ್‌ಮೆಂಟ್‌ ಸರಿಯಾಗಿ ಇಲ್ಲದಿರುವುದು ಅಥವಾ ವ್ಹೀಲ್‌ ಬ್ಯಾಲೆನ್ಸಿಂಗ್‌ ಸರಿಯಾಗದೇ ಇರುವುದು ಆಗಿರಬಹುದು. ಇದೇ ಕಾರಣಕ್ಕಾಗಿ ಟೈರ್‌ನ ಅಲೈನ್‌ಮೆಂಟನ್ನು ಗಮನಿಸುತ್ತಿರಬೇಕು, ಕೊಂಚ ಏರುಪೇರಾದಂತೆ ಗಮನಕ್ಕೆ ಬಂದರೆ ಕೂಡಲೇ ಗ್ಯಾರೇಜ್‌ಗೆ ಹೋಗಿ ಅದನ್ನು ಸರಿಮಾಡಿಸಬೇಕು. ಇನ್ನು ಒಂದೇ ಕಡೆ ಟೈರ್‌ ಸವೆಯುತ್ತಿದ್ದರೆ ಅದನ್ನು ಸರಿಮಾಡಿಸಿ ಮತ್ತೆ ಬಳಸುವುದಕ್ಕಿಂತ ಬೇರೆ ಟೈರ್‌ ಬಳಸಿ.

 ನಿಮ್ಮ ಟೈರ್‌ನಲ್ಲಿ ಈ ಸಮಸ್ಯೆಗಳು ಇದ್ದರೆ ಕೂಡಲೇ ಬದಲಾಯಿಸಿ... ಜೊತೆಗೆ ಈ ವಿಷಯಗಳೂ ನೆನಪಿರಲಿ.

5.ಆಗಾಗ ಪಂಕ್ಚರ್‌ ಆಗುತ್ತಿರುವುದು

ತುಂಬಾ ಸವೆದ ಟೈರ್‌ಗಳಲ್ಲಿ ಆಗಾಗ ಪಂಕ್ಚರ್‌ ಆಗುವುದು ತೀರಾ ಸಾಮಾನ್ಯವಾದ ವಿಷಯ. ಸಮಯ ಕಳೆದಂತೆ, ಟೈರ್‌ನ ಗ್ರಿಪ್‌ಗಳು ತೀರಾ ಸವೆದು ಕೊನೆಗೆ ಅದು ಬೈಕ್‌ ಚಲಾವಣೆಯಲ್ಲಿರುವಾಗಲೇ ಸಿಡಿಯುವ ಸಾಧ್ಯತೆಗಳು ತುಂಬಾ ಇರುತ್ತದೆ. ತೀರಾ ಸವೆದ ಟೈರ್‌ಗಳನ್ನು ಬಳಸುತ್ತಿರುವಾಗಲೇ ಅದು ಸಿಡಿದು ಸಾವು-ನೋವುಗಳಾಗಿರುವ ಉದಾಹರಣೆಗಳು ನಮ್ಮ ಮುಂದಿವೆ. ಹಾಗಾಗಿ ಪದೇ ಪದೇ ಪಂಕ್ಚರ್‌ ಆಗುತ್ತಿರುವ ಟೈರ್‌ಗಳನ್ನು ಬದಲಾಯಿಸಿ ಆ ಜಾಗಕ್ಕೆ ಹೊಸ ಟೈರ್‌ಗಳನ್ನು ಬಳಸುವುದು ನಿಜಕ್ಕೂ ಸ್ವಾಗತಾರ್ಹವಾಗಿರುವಂತಹ ನಿರ್ಧಾರ.

 ನಿಮ್ಮ ಟೈರ್‌ನಲ್ಲಿ ಈ ಸಮಸ್ಯೆಗಳು ಇದ್ದರೆ ಕೂಡಲೇ ಬದಲಾಯಿಸಿ... ಜೊತೆಗೆ ಈ ವಿಷಯಗಳೂ ನೆನಪಿರಲಿ.

6. ಸೈಡ್‌ವಾಲ್‌ ಹಾನಿಗೊಳಗಾಗಿರುವುದು

ಟೈರ್‌ನಲ್ಲಿ ಸೈಡ್‌ವಾಲ್‌ಗಳು ಹಾನಿಗೊಳಗಾಗಿದ್ದರೆ ಮತ್ತೆ ಅದನ್ನೇ ಬಳಸುವುದರಲ್ಲಿ ಅರ್ಥವಿಲ್ಲ. ಯಾಕೆಂದರೆ ಪದೇ ಪದೇ ಟೈರ್‌ ನಿಮಗೆ ಕೈ ಕೊಡುತ್ತಿರುತ್ತದೆ. ಇನ್ನು ನೀವು ಆ ಹಾನಿಗೆ ಒಳಗಾದ ಸೈಡ್‌ವಾಲನ್ನು ಎಷ್ಟೇ ರಿಪೇರಿ ಮಾಡಿದರೂ ಅದು ಪರಿಹಾರವಾಗಲಾರದು. ಪದೇ ಪದೇ ಅದು ಮತ್ತೆ ರಿಪೇರಿಗೆ ಬರುತ್ತದೆ. ಅದಿನ್ನೂ ಹೊಸ ಟೈರ್‌ನಲ್ಲೂ ಸೈಡ್‌ವಾಲ್‌ ಏನಾದರೂ ಹಾನಿಗೊಳಗಾದರು ಅದು ಮತ್ತೆ ಮೊದಲಿನಂತೆ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಹಾಗಾಗಿ ಅಂತಹ ಟೈರ್‌ಗಳನ್ನು ಬದಲಾಯಿಸುವುದು ಉತ್ತಮ.

 ನಿಮ್ಮ ಟೈರ್‌ನಲ್ಲಿ ಈ ಸಮಸ್ಯೆಗಳು ಇದ್ದರೆ ಕೂಡಲೇ ಬದಲಾಯಿಸಿ... ಜೊತೆಗೆ ಈ ವಿಷಯಗಳೂ ನೆನಪಿರಲಿ.

7. ಟೈರ್‌ ಮೇಲಿನ ಬಲ್ಜ್‌ಗಳು/ಉಬ್ಬುಗಳು

ನೀವು ಟೈರ್‌ನಲ್ಲಿ ಉಬ್ಬುಗಳನ್ನು ಗಮನಿಸಿರಬಹುದು. ಇದು ತೀರಾ ಅಪಾಯಕಾರಿಯಾದದ್ದು, ಉಬ್ಬುಗಳು ಬಂದಿರುವ ಟೈರ್‌ಗಳನ್ನು ಬಳಸುವುದರಿಂದ ಚಲಿಸುತ್ತಿರುವ ಬೈಕ್‌ ಯಾವ ಕ್ಷಣದಲ್ಲಿ ಬೇಕಾದರೂ ಅಪಘಾತಕ್ಕೆ ಒಳಗಾಗಬಹುದು. ಹಾಗಾಗಿ ಉಬ್ಬುಗಳು ಬಂದಿರುವ ಟೈರ್‌ಗಳನ್ನು ಬಳಸದೇ, ಕೂಡಲೇ ಅದನ್ನು ಬದಲಾಯಿಸಿ ಅದರ ಜಾಗಕ್ಕೆ ಹೊಸ ಟೈರ್‌ಗಳನ್ನು ಬಳಸುವುದು ಉತ್ತಮ.

 ನಿಮ್ಮ ಟೈರ್‌ನಲ್ಲಿ ಈ ಸಮಸ್ಯೆಗಳು ಇದ್ದರೆ ಕೂಡಲೇ ಬದಲಾಯಿಸಿ... ಜೊತೆಗೆ ಈ ವಿಷಯಗಳೂ ನೆನಪಿರಲಿ.

ಡ್ರೈವ್‌ಸ್ಪಾರ್ಕ್‌ ಅಭಿಪ್ರಾಯ

ಟೈರ್‌ಗಳನ್ನು ಸರಿಯಾದ ಸಮಯದಲ್ಲಿ ಬದಲಾಯಿಸುವುದರಿಂದ ಆತ್ಮವಿಶ್ವಾಸದಿಂದ ಪ್ರಯಾಣ ಮಾಡಬಹುದು ಮಾತ್ರವಲ್ಲದೇ, ಬೈಕ್‌ನ ಪರ್ಫಾಮೆನ್ಸ್‌ ಸಹ ಹೆಚ್ಚಾಗುತ್ತದೆ. ಇನ್ನು ಟೈರ್‌ ಖರೀದಿ ಮಾಡುವಾಗ, ಆಯಾ ಕಂಪೆನಿಯ ವಿಶ್ವಾಸಾರ್ಹ ಡೀಲರ್‌ಗಳಿಂದ ಕೊಳ್ಳುವುದು ಉತ್ತಮ.

More from DriveSpark

Article Published On: Tuesday, November 8, 2022, 18:35 [IST]
English summary
When to change bike tyres
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+