ವಿಭಿನ್ನ ರೀತಿಯ ಪ್ರತಿಭಟನೆಗೆ ಮುಂದಾದ ಲಾರಿ ಚಾಲಕರು

ಕರೋನಾ ವೈರಸ್ ಹರಡುವುದನ್ನು ತಡೆಯಲು ಮಾರ್ಚ್ 24ರಿಂದ ಭಾರತದಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಯಿತು. ಈ ಅವಧಿಯಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಯಿತು.

ವಿಭಿನ್ನ ರೀತಿಯ ಪ್ರತಿಭಟನೆಗೆ ಮುಂದಾದ ಲಾರಿ ಚಾಲಕರು

ಬಸ್, ರೈಲು, ವಿಮಾನ, ಆಟೋ ಹಾಗೂ ಟ್ಯಾಕ್ಸಿ ಸೇರಿದಂತೆ ಸಾರ್ವಜನಿಕ ಸಾರಿಗೆ ಸೇವೆಗಳನ್ನು ಸ್ಥಗಿತಗೊಳಿಸಲಾಯಿತು. ಇವುಗಳ ಜೊತೆಗೆ ಖಾಸಗಿ ಕಾರು ಹಾಗೂ ದ್ವಿಚಕ್ರ ವಾಹನಗಳ ಸಂಚಾರವನ್ನು ಸಹ ನಿರ್ಬಂಧಿಸಲಾಯಿತು. ನಿಯಮ ಉಲ್ಲಂಘಿಸಿ ಹೊರ ಬಂದ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು. ಈಗ ಲಾಕ್ಡೌನ್ ನಿಯಮಗಳನ್ನು ಸಡಿಲಿಸಲಾಗಿದ್ದು, ವಾಹನಗಳ ಸಂಚಾರಕ್ಕೆ ಹಂತ ಹಂತವಾಗಿ ಅನುಮತಿ ನೀಡಲಾಗಿದೆ.

ವಿಭಿನ್ನ ರೀತಿಯ ಪ್ರತಿಭಟನೆಗೆ ಮುಂದಾದ ಲಾರಿ ಚಾಲಕರು

ಆದರೆ ಇನ್ನೂ ಹಲವು ನಗರಗಳಲ್ಲಿ ಖಾಸಗಿ ಕಾರು ಮತ್ತು ದ್ವಿಚಕ್ರ ವಾಹನಗಳನ್ನು ಚಲಾಯಿಸಲು ನಿರ್ಬಂಧಗಳಿವೆ. ಕರೋನಾ ವೈರಸ್‌ನಿಂದ ಹೆಚ್ಚು ತತ್ತರಿಸಿರುವ ಮುಂಬೈ ಹಾಗೂ ಚೆನ್ನೈನಂತಹ ನಗರಗಳಲ್ಲಿ ಈಗಲೂ ಸಹ ಪ್ರತಿದಿನವೂ ಬಸ್‌ಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ.

MOST READ: ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ವಿಭಿನ್ನ ರೀತಿಯ ಪ್ರತಿಭಟನೆಗೆ ಮುಂದಾದ ಲಾರಿ ಚಾಲಕರು

ಈ ಸಂಕಷ್ಟದ ಪರಿಸ್ಥಿತಿಯಲ್ಲೂ ಟ್ರಕ್ ಚಾಲಕರು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಕರೋನಾ ವೈರಸ್ ಸೋಂಕಿನ ಅಟ್ಟಹಾಸದ ನಡುವೆಯೂ ಹಾಲು, ತರಕಾರಿ ಹಾಗೂ ದಿನಸಿ ಸೇರಿದಂತೆ ಅಗತ್ಯ ವಸ್ತುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುತ್ತಿದ್ದಾರೆ.

ವಿಭಿನ್ನ ರೀತಿಯ ಪ್ರತಿಭಟನೆಗೆ ಮುಂದಾದ ಲಾರಿ ಚಾಲಕರು

ಟ್ರಕ್ ಚಾಲಕರಿಗೆ ಆರೋಗ್ಯ ವಿಮೆ ನೀಡುವಂತೆ ಒತ್ತಾಯಿಸಿ ಇಂದು ಜುಲೈ 1 ಟ್ರಕ್ ಚಾಲಕರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಪ್ರತಿಭಟನೆಯ ಅಂಗವಾಗಿ ಎಲ್ಲಾ ಟ್ರಕ್ ಚಾಲಕರು ಇಂದು ಮಧ್ಯಾಹ್ನದಿಂದ 1 ವಾರಗಳ ಕಾಲ 1 ನಿಮಿಷ ಏಕಕಾಲದಲ್ಲಿ ಹಾರ್ನ್ ಮಾಡಲಿದ್ದಾರೆ.

MOST READ: ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ವಿಭಿನ್ನ ರೀತಿಯ ಪ್ರತಿಭಟನೆಗೆ ಮುಂದಾದ ಲಾರಿ ಚಾಲಕರು

ಸರ್ಕಾರದ ಗಮನ ಸೆಳೆಯಲು ಈ ರೀತಿ ವಿಭಿನ್ನ ಪ್ರತಿಭಟನೆ ನಡೆಸಲಿದ್ದಾರೆ. ಎಲ್ಲಾ ಟ್ರಕ್ ಚಾಲಕರಿಗೆ ವಿಮೆ ನೀಡಬೇಕೆಂದು ಒತ್ತಾಯಿಸಿ ವಿವಿಧ ಟ್ರಕ್ ಮಾಲೀಕರು ಹಾಗೂ ಸಾರಿಗೆ ಸಂಘಗಳು ಜಂಟಿಯಾಗಿ ಹೋರಾಟವನ್ನು ನಡೆಸುತ್ತಿವೆ.

ವಿಭಿನ್ನ ರೀತಿಯ ಪ್ರತಿಭಟನೆಗೆ ಮುಂದಾದ ಲಾರಿ ಚಾಲಕರು

ಜುಲೈ 1ರಿಂದ ಆರಂಭವಾಗುವ ಈ ಪ್ರತಿಭಟನೆ ಒಂದು ವಾರಗಳ ಕಾಲ ನಡೆಯಲಿದೆ. ಕರೋನಾ ವೈರಸ್‌ಗೆ ತುತ್ತಾಗಬಹುದೆಂಬ ಭಯದಿಂದ ಅನೇಕ ಟ್ರಕ್ ಚಾಲಕರು ಕೆಲಸಕ್ಕೆ ಮರಳಲು ಹಿಂಜರಿಯುತ್ತಿದ್ದಾರೆ ಎಂದು ಸಾರಿಗೆ ಯೂನಿಯನ್ ಅಧಿಕಾರಿಗಳು ಹೇಳಿದ್ದಾರೆ.

MOST READ: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ವಿಭಿನ್ನ ರೀತಿಯ ಪ್ರತಿಭಟನೆಗೆ ಮುಂದಾದ ಲಾರಿ ಚಾಲಕರು

ಕುಟುಂಬ ಸದಸ್ಯರಿಗೂ ಕರೋನಾ ವೈರಸ್ ಹರಡಬಹುದೆಂಬ ಕಾರಣಕ್ಕೆ ಹಲವು ಟ್ರಕ್ ಚಾಲಕರು ಟ್ರಕ್ ಚಾಲನೆಗೆ ಮುಂದಾಗುತ್ತಿಲ್ಲ. ತಮಗೆ ಏನಾದರೂ ತೊಂದರೆಯಾದರೆ ಕುಟುಂಬದ ಗತಿ ಏನು ಎಂಬ ಭಯ ಅವರನ್ನು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಟ್ರಕ್ ಚಾಲಕರಿಗೆ ಆರೋಗ್ಯ ವಿಮೆ ನೀಡುವಂತೆ ಒತ್ತಾಯಿಸಲಾಗುತ್ತಿದೆ.

ವಿಭಿನ್ನ ರೀತಿಯ ಪ್ರತಿಭಟನೆಗೆ ಮುಂದಾದ ಲಾರಿ ಚಾಲಕರು

ಭಾರತದಲ್ಲಿ ಸದ್ಯಕ್ಕೆ 8 ಮಿಲಿಯನ್ ಟ್ರಕ್‌ಗಳಿವೆ. ಇವುಗಳಲ್ಲಿ 3 ಮಿಲಿಯನ್ ಟ್ರಕ್‌ಗಳು ಇನ್ನೂ ಸಂಚಾರವನ್ನು ಆರಂಭಿಸಿಲ್ಲ. ಟ್ರಕ್ ಉದ್ಯಮವು ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆಯನ್ನು ಆರಂಭಿಸದ ಕಾರಣಕ್ಕೆ ಈ ಟ್ರಕ್‌ಗಳು ಇನ್ನೂ ಸಂಚಾರವನ್ನು ಆರಂಭಿಸಿಲ್ಲ.

ಸೂಚನೆ: ಈ ಚಿತ್ರಗಳನ್ನು ರೆಫರೆನ್ಸ್ಗಾಗಿ ಬಳಸಲಾಗಿದೆ.

Article Published On: Wednesday, July 1, 2020, 10:53 [IST]
English summary
Lorry drivers to protest in an unique way to seek health insurance. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+