ಕಾರ್ ಗರ್ಲ್: ಪೋಸ್ ನೀಡೋದಷ್ಟೇ ನಮ್ ಕೆಲಸ

ಭಾರತದಲ್ಲಿ ಬಿಡುಗಡೆಯಾಗುವ ಕಾರುಗಳಿಗೆ ಒಂದೆರಡು ಮಾಡೆಲ್ ಗಳು ಪೋಸ್ ಕೊಟ್ಟು ಸುಮ್ಮನಾಗುತ್ತಾರೆ. ಆದರೆ ವಿದೇಶಗಳಲ್ಲಿ ಕಾರಿಗಿಂತ ಕಾರು ಗರ್ಲ್ ಗಳ ಕಾರುಬಾರು ಜೋರು. ಇವರಿಗೆ ಲಕ್ಷ ಲಕ್ಷ ರುಪಾಯಿ ನೀಡಿ ಕಾರ್ಯಕ್ರಮಕ್ಕೆ ಕರೆಯಲಾಗುತ್ತದೆ.
ವಿದೇಶಗಳಲ್ಲಿ ಕಾರು ಬಿಡುಗಡೆ ಕಾರ್ಯಕ್ರಮಕ್ಕೆ ಇಂತಹ ಪೋಸ್ ನೀಡುವ ಸುಂದರಿಯರನ್ನು ನೀಡಲು ಕಂಪನಿಗಳಿವೆ. ಲಕ್ಷ ಕೋಟಿ ಡಾಲರ್ ಕಾರಿನ ಮುಂದೆ ಸುಂದರವಾಗಿ, ಕೆಲವೊಮ್ಮೆ ಅಶ್ಲೀಲವಾಗಿ ಪೋಸ್ ನೀಡುವುದು ಇವರ ಕೆಲಸ. ಇಂತಹ ಸಮಯದಲ್ಲಿ ಫೋಟೊಗ್ರಾಪರುಗಳು ತುಂಬಾ ಚಾಲೂ. ತಮಗೆ ಬೇಕಾದ ಆಂಗಲ್ ನಲ್ಲಿ ಫೋಟೊ ತೆಗೆಸಿಕೊಳ್ಳುತ್ತಾರೆ.
ಒಂದು ವರದಿಯ ಪ್ರಕಾರ ವಿದೇಶಗಳಲ್ಲಿ ಕಾರು ಸುತ್ತ ಪೋಸ್ ನೀಡಲು ಮಹಿಳಾ ರೂಪದರ್ಶಿಗಳಿಗೆ ಹೆಚ್ಚು ಅವಕಾಶ ದೊರಕುತ್ತದಂತೆ. ಆದರೆ ಕೆಲವೇ ಕೆಲವು ಜನಪ್ರಿಯ ಪುರುಷ ರೂಪದರ್ಶಿಗಳು ಕಾರು ಮುಂದೆ ಪೋಸ್ ನೀಡುವ ಅವಕಾಶ ಪಡೆಯುತ್ತಾರೆ.
ಒಟ್ಟಾರೆ ಹೊಸ ಕಾರು ಮಾರುಕಟ್ಟೆಗೆ ಬಂದಾಗ ಎಲ್ಲರೂ ನೋಡಬೇಕೆಂದು ಕಾರು ಕಂಪನಿಗಳು ಬಯಸುತ್ತವೆ. ಅದಕ್ಕಾಗಿ ಕಾರಿನ ಪಕ್ಕ ಯುವತಿಯರನ್ನು, ಬೆತ್ತಲೆ, ಅರೆಬೆತ್ತಲೆಯಾಗಿ ನಿಲ್ಲಿಸುವ ಟ್ರೆಂಡ್ ವಿದೇಶಿ ಮಾರುಕಟ್ಟೆಯಲ್ಲಿ ಜೋರಿದೆ. ಪುರುಷರು ಕಾರಿನತ್ತ ಬೀರಿದ ನೋಟವನ್ನು ಹಿಂತೆಗೆಯುವುದೇ ಇಲ್ಲವಂತೆ.


Click it and Unblock the Notifications








