ಜೀವಮಾನದಲ್ಲಿ ಸಂಚರಿಸಲೇಬೇಕಾದ ಭಾರತದ 11 ಅದ್ಭುತ ರಸ್ತೆಗಳು

By Nagaraja

ನೀವು ದೀರ್ಘ ಪಯಣವನ್ನು ಇಷ್ಟಪಡುವೀರಾ? ನೀವು ಕೈಗೊಂಡಿರುವ ಅತಿ ದೂರದ ಪ್ರಯಾಣ ಯಾವುದು? ಕೊನೆಯದಾಗಿ ನೀವು ನಿಮ್ಮ ಬದುಕಿನಲ್ಲಿ ಏನು ಸಾಧಿಸಿದ್ದೀರಿ ಎಂಬುದಕ್ಕಿಂತಲೂ ಆನಂದದಾಯಕ ಜೀವನ ಅತಿ ಮುಖ್ಯವೆನಿಸುತ್ತದೆ.

ಇವನ್ನೂ ಓದಿ: ಜಗತ್ತಿನ ಅದ್ಭತ ಸುರಂಗ ಮಾರ್ಗಗಳು

ಇಂದಿನ ಒತ್ತಡದ ಜೀವನದಲ್ಲಿ ಪ್ರತಿಯೊಬ್ಬರು ಏಕಾಂತನವನ್ನು ಬಯಸುತ್ತಾರೆ. ಕೆಲವರು ತಮ್ಮ ರಜಾ ದಿನಗಳನ್ನು ಕುಟುಂಬ ಜೊತೆ ಕಳೆಯಲು ಇಷ್ಟಪಡುವುದಾದರೆ ಇನ್ನು ಕೆಲವರು ಒಂಟಿತನ ಇಷ್ಟಪಡುತ್ತಾರೆ. ಹಾಗೆ ಏಳು ಬೀಳುಗಳಿಂದ ಕೂಡಿದ ಜೀವನವನ್ನು ಒಮ್ಮೆ ತಿರುಗಿ ನೋಡಿದಾಗ ನೀವು ಕಳೆದುಕೊಳ್ಳಲೇಬಾರದ ಕೆಲವೊಂದು ಅಂಶಗಳಿವೆ. ಅವುಗಳಲ್ಲಿ ರಸ್ತೆ ಪ್ರಯಾಣವು ಒಂದಾಗಿದೆ.

ಜೀವಮಾನದಲ್ಲಿ ಒಮ್ಮೆಯಾದರೂ ಸಂಚರಿಸಲೇಬೇಕಾದ ಭಾರತದ 11 ಅದ್ಭುತ ರಸ್ತೆಗಳು

ಇಂದಿನ ಈ ಲೇಖನದ ಮೂಲಕ ವಿಸ್ತಾರವಾಗಿ ಹರಡಿರುವ ಭಾರತ ದೇಶದಲ್ಲಿ ನೀವು ಮಿಸ್ ಮಾಡಿಕೊಳ್ಳಲೇಬಾರದ ಅಥವಾ ಪಯಣಿಸಲೇಬೇಕಾದ 11 ಸಂಚಾರ ರಸ್ತೆ ಮಾರ್ಗಗಳನ್ನು ಪರಿಚಯಿಸಲಿದ್ದೇವೆ. ನೀವಿದನ್ನು ಖಂಡಿತ ಇಷ್ಟಪಡುವೀರಿ ಎಂಬುದು ನಮ್ಮ ನಂಬಿಕೆಯಾಗಿದೆ.

11. ಪುರಿ-ಕೋನಾರ್ಕ್ ಮಾರ್ಗ

11. ಪುರಿ-ಕೋನಾರ್ಕ್ ಮಾರ್ಗ

ಇದನ್ನೊಂದು ರಸ್ತೆ ಮಾರ್ಗವಾಗಿ ಮಾತ್ರ ಪರಿಗಣಿಸದಿರಿ. ಯಾಕೆಂದರೆ ಇಲ್ಲಿ ಪ್ರತಿಯೊಬ್ಬ ವಾಹನ ಪ್ರೇಮಿಗಳ ಕನಸು ನನಸಾಗುವ ಕ್ಷಣ. ಈ ರಸ್ತೆ ಮಾರ್ಗದಲ್ಲಿ ಪ್ರಕೃತಿದತ್ತವಾದ ಸುಂದರ ದೃಶ್ಯಾವಶಿಗಳನ್ನು ಅನುಭವಿಸಬಹುದಾಗಿದೆ.

10. ಓಲ್ಡ್ ಸಿಲ್ಕ್ ರೂಟ್

10. ಓಲ್ಡ್ ಸಿಲ್ಕ್ ರೂಟ್

ಪ್ರಾಚೀನ ವಾಣಿಜ್ಯ ಮಾರ್ಗವಾಗಿರುವ ಓಲ್ಡ್ ಸಿಲ್ಕ್ ರೂಟ್ ಟಿಬೆಟ್‌ನ ಲಾಸಾದಿಂದ ಭಾರತದ ಸಿಕ್ಕಿಂನ ಜೆಲೆಪ್ ಲಾ ಪಾಸ್ ಪ್ರದೇಶವನ್ನು ಸಂಪರ್ಕ ಸಾಧಿಸುತ್ತದೆ. ನೈಸರ್ಗಿಕ ಸೌಂದರ್ಯ ಜೊತೆಗೆ ಇಲ್ಲಿನ ಐತಿಹಾಸಿಕ ನಾಗರಿಕ ಇತಿಹಾಸವು ನಿಮ್ಮನ್ನು ಮತ್ತೆ ಮತ್ತೆ ಇಲ್ಲಿಗೆ ಬರುವಂತೆ ಸ್ಪೂರ್ತಿ ನೀಡುತ್ತದೆ.

9. ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ

9. ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ

ದೇಶದ ಅತ್ಯಂತ ಪ್ರಸಿದ್ಧ ರಸ್ತೆ ಮಾರ್ಗಗಳಲ್ಲಿ ಒಂದಾಗಿರುವ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಭಾರತದ ಮೊದಲ ಹೈ ಸ್ಪೀಡ್, ಆರು ಹಾದಿಯ ಕಾಂಕ್ರೀಟ್ ಹೈ ಸ್ಪೀಡ್ ರಸ್ತೆಯಾಗಿದ್ದು, ವೇಗವನ್ನು ಇಷ್ಟಪಡುವ ಕಾರು ಚಾಲಕರನ್ನು ಕೈಬೀಸಿ ಕರೆಯುತ್ತಿದೆ. 93 ಕೀ.ಮೀ. ಉದ್ದದ ಈ ಹೈ ಸ್ಪೀಡ್ ರಸ್ತೆಯು ವಾಣಿಜ್ಯ ನಗರಿ ಮುಂಬೈ ಹಾಗೂ ಕೈಗಾರಿಕಾ ನಗರಿ ಪುಣೆಯನ್ನು ಸಂಪರ್ಕಿಸುತ್ತದೆ.

8. ರೋಹತಂಗ್ ಪಾಸ್

8. ರೋಹತಂಗ್ ಪಾಸ್

ಹಿಮಾಲಯದ ಪೂರ್ವದಲ್ಲಿರುವ ಪಿರ್ ಪಂಜರ್ ರೇಂಜ್ ಅತ್ಯುನ್ನತ ಪರ್ವತ ಶ್ರೇಣಿಯಲ್ಲಿ ಹಾದು ಹೋಗುತ್ತಿರುವ ರೋಹತಂಗ್ ಪಾಸ್ ಮನಾಲಿಯಿಂದ ಸರಿ ಸುಮಾರು 51 ಕೀ.ಮೀ. ದೂರದಲ್ಲಿದೆ. ಇಲ್ಲಿನ ವಿಹಾಂಗನ ಹಾಗೂ ಅದ್ಭುತ ಪರ್ವತ ಶ್ರೇಣಿಗಳು ನಿಮ್ಮ ಉಸಿರು ಬಿಗಿ ಕಟ್ಟಿಸಲಿದೆ.

7. ಕಲ್ಯಾಣ್ ನಿರ್ಮಲ್ ಹೈವೇ

7. ಕಲ್ಯಾಣ್ ನಿರ್ಮಲ್ ಹೈವೇ

ಕಲ್ಯಾಣ್ ನಿರ್ಮಲ್ ಹೈವೇ ಎಂದೇ ಪ್ರಖ್ಯಾತಿ ಪಡೆದಿರುವ ರಾಷ್ಟ್ರೀಯ ಹೆದ್ದಾರಿ 222 ತೆಲಂಗಾಣದ ನಿರ್ಮಲ್ ಪ್ರದೇಶದಿಂದ ಮುಂಬೈನ ಕಲ್ಯಾಣ್ ನಗರವನ್ನು ಸಂಪರ್ಕಿಸುತ್ತದೆ. ಇದು ನೋಡಲು ಮನಮೋಹಕವಾಗಿದ್ದರೂ ರಾತ್ರಿ ವೇಳೆಯ ಪಯಣ ಅಷ್ಟೇ ಅಪಾಯಕಾರಿಯಾಗಿದೆ. ಹಾಗಾಗಿ ರಾತ್ರಿ ಪಯಣವನ್ನು ಸಾಧ್ಯವಾದಷ್ಟು ತಪ್ಪಿಸಿದರೆ ಒಳ್ಳೆಯದು.

6. ಮಹಾಬಲೇಶ್ವರ್

6. ಮಹಾಬಲೇಶ್ವರ್

ಮಹಾರಾಷ್ಟ್ರದ ಪಶ್ಚಿಮ ಘಟ್ಟದ ಮಹಾದೇವ ಪರ್ವತ ಶ್ರೇಣಿಯಲ್ಲಿ ಹಾದು ಹೋಗುತ್ತಿರುವ ಮಹಾಬಲೇಶ್ವರ್ ರಸ್ತೆ ಮಾರ್ಗ ಪ್ರವಾಸಿಗರಿಗೆ ಪ್ರೇಕ್ಷಣೀಯ ಗಿರಿಧಾಮವಾಗಿದೆ. ಇದು ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿದ್ದು, ಕೃಷ್ಣಾ ನದಿಯ ಉಗಮ ಸ್ಥಾನವು ಇಲ್ಲಿದೆ. ನಿತ್ಯಹರಿದ್ವರ್ಣದ ತಾಣಗಳಲ್ಲಿ ಒಂದಾಗಿರುವ ಇಲ್ಲಿ ಪ್ರಕೃತಿ ಸೌಂದರ್ಯ ಸವಿಯಬಹುದಾಗಿದೆ.

5. ಲೇಹ್-ಶ್ರೀನಗರ ಹೈವೇ (ಎನ್‌ಎಚ್ 1ಡಿ)

5. ಲೇಹ್-ಶ್ರೀನಗರ ಹೈವೇ (ಎನ್‌ಎಚ್ 1ಡಿ)

ಭಾರತದಲ್ಲಿ ಸಂಚರಿಸಬೇಕಾದ ಐದು ಪ್ರಮುಖ ಮಾರ್ಗಗಳಲ್ಲಿ ಲೇಹ್-ಶ್ರೀನಗರ ಹೈವೇ ಕೂಡಾ ಒಂದಾಗಿದೆ. ಶ್ರೀನಗರ-ಲೇಹ್ ಹೆದ್ದಾರಿ ಎಂದೇ ಪ್ರಸಿದ್ಧಿ ಪಡೆದಿರುವ ಈ ಮಾರ್ಗವು ಸಂಪೂರ್ಣವಾಗಿಯೂ ಜಮ್ಮು ಕಾಶ್ಮೀರದಲ್ಲಿ ಹಾದು ಹೋಗುತ್ತದೆ. ಪರ್ವತಗಳ ಬದಲಾಗುವ ಬಣ್ಣಗಳು ಸವಾರರಿಗೆ ಕ್ಷಣ ಕ್ಷಣಕ್ಕೂ ಅಚ್ಚರಿ ತರುತ್ತದೆ.

4. ಚಂಡೀಗಡ-ಮನಾಲಿ ಹೈವೇ (ಎನ್‌ಎಚ್ 21)

4. ಚಂಡೀಗಡ-ಮನಾಲಿ ಹೈವೇ (ಎನ್‌ಎಚ್ 21)

ಭೋಜನ ಪ್ರಿಯರು ಹಾಗೂ ತಮ್ಮ ಕ್ಯಾಮೆರಾಗಳಲ್ಲಿ ಫೋಟೊ ಕ್ಲಿಕ್ಕಿಸಲು ಇಷ್ಟಪಡುವವರು ಖಂಡಿತವಾಗಿಯೂ ಈ ಹೆದ್ದಾರಿಯನ್ನು ಮುದ್ದಿಸಲಿದ್ದಾರೆ. ಉತ್ತರ ಭಾರತದಲ್ಲಿ ಹಾದು ಹೋಗುತ್ತಿರುವ ಈ ರಾಷ್ಟ್ರೀಯ ಹೆದ್ದಾರಿಯು ಚಂಡೀಗಡದಿಂದ ಹಿಮಾಚಲ ಪ್ರದೇಶದ ಮನಾಲಿಯನ್ನು ಸಂಪರ್ಕಿಸುತ್ತದೆ. ಇದು ಒಟ್ಟು 323 ಕೀ.ಮೀ. ದೂರದ ವರೆಗೂ ಹರಡಿದೆ.

3. ಎನ್‌ಎಚ್ 212

3. ಎನ್‌ಎಚ್ 212

ಕೇರಳದ ಕಲ್ಲಿಕೋಟೆಯಿಂದ ಆರಂಭವಾಗುವ 272 ಕೀ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ 212, ಕರ್ನಾಟಕದ ಮೈಸೂರು ಹಾದಿಯಾಗಿ ಕೋಲ್ಲೇಗಾಲವನ್ನು ಸಂಪರ್ಕಿಸುತ್ತದೆ. ಇದು 117 ಕೀ.ಮೀ. ಕೇರಳ ಹಾಗೂ 155 ಕೀ.ಮೀ. ಕರ್ನಾಟಕದಲ್ಲಿ ಹಾದು ಹೋಗುತ್ತದೆ. ಕೊಲ್ಲೇಗಾಲದಲ್ಲಿ ರಾಷ್ಟ್ರೀಯ ಹೆದ್ದಾರಿ 209 ಸಂಪರ್ಕಿಸುವ ಈ ಹೆದ್ದಾರಿಯು ಬಳಿಕ ಬೆಂಗಳೂರು ಮತ್ತು ದಿಂಡಿಗಲ್ ಸಂಪರ್ಕಿಸುತ್ತದೆ. ಪ್ರಕೃತಿಯೊಂದಿಗೆ ಬೆರೆತ ಬಂಡೀಪುರದ ಅಭಯಾರಣ್ಯದಲ್ಲಿ ಸಂಚರಿಸುವುದರಿಂದಲೇ ಈ ಹೆದ್ದಾರಿಯನ್ನು ವಾಹನ ಪ್ರೇಮಿಗಳು ಇಷ್ಟೊಂದು ಇಷ್ಟಪಡುತ್ತಾರೆ.

2. ಮನಾಲಿ-ಲೇಹ್ ಹೈವೇ (ಎನ್‌ಎಚ್ 21)

2. ಮನಾಲಿ-ಲೇಹ್ ಹೈವೇ (ಎನ್‌ಎಚ್ 21)

ಸಾಹಸಿಗರನ್ನು ಕೈಬೀಸಿ ಕರೆಯುತ್ತಿರುವ ಮನಾಲಿ ಲೇಹ್ ಹೆದ್ದಾರಿಯು ಉತ್ತರ ಭಾರತದಲ್ಲಿ ಸ್ಥಿತಗೊಂಡಿದೆ. ಇದು ಹಿಮಾಚಲ ಪ್ರದೇಶದ ಮನಾಲಿಯಿಂದ ಜಮ್ಮು ಕಾಶ್ಮೀರದ ಲಡಾಕ್ ವರೆಗೂ ಪ್ರಮುಖ ಸಂಪರ್ಕ ಮಾರ್ಗವಾಗಿದೆ. ವರ್ಷದಲ್ಲಿ ನಾಲ್ಕು ತಿಂಗಳ ವರೆಗೆ ಮಾತ್ರ ಇದು ತೆರೆದಿರುತ್ತದೆ. ಉಳಿದ ಕಾಲವಷ್ಟು ಹಿಮದಿಂದ ಆವೃತ್ತವಾಗಿರುತ್ತದೆ.

1. ಪಂಬನ್ ಸೇತುವೆ

1. ಪಂಬನ್ ಸೇತುವೆ

ಪಾಲ್ಕ್ ಜಲಸಂಧಿ ಮೇಲೆ ನಿರ್ಮಿಸಲ್ಪಟ್ಟಿರುವ ಕ್ಯಾಂಟಿಲಿವರ್ ಬ್ರಿಡ್ಜ್ ರಾಮೇಶ್ವರಂ ಹಾಗೂ ಪಂಬನ್ ದ್ವೀಪದ ನಡುವೆ ಸಂಪರ್ಕ ಸಾಧಿಸುತ್ತದೆ. ಎರಡು ಬದಿಗಳಿಂದಲೂ ನೀಲಿ ಬಣ್ಣದಿದ ಜಲಾವೃತವಾಗಿರುವ ವಿಶಾಲವಾದ ಸಾಗರವು ದ್ವಿಚಕ್ರ ಸವಾರರಿಗೆ ಅದ್ಭುತ ಚಾಲನಾ ಅನುಭವ ನೀಡುತ್ತದೆ. 1914ನೇ ಇಸವಿಯಲ್ಲಿ ನಿರ್ಮಾಣವಾಗಿರುವ ಪಂಬನ್ ಸೇತುವೆ ದೇಶದ ಅತಿ ಪುರಾತನ ಹಾಗೂ ಪ್ರಪ್ರಥಮ ಸಾಗರ ಸೇತುವೆಯಾಗಿದೆ.

ಜೀವಮಾನದಲ್ಲಿ ಒಮ್ಮೆಯಾದರೂ ಸಂಚರಿಸಲೇಬೇಕಾದ ಭಾರತದ 11 ಅದ್ಭುತ ರಸ್ತೆಗಳು

ಈ ಲೇಖನ ನಿಮಗೂ ಇಷ್ಟವಾದ್ದಲ್ಲಿ ನಿಮ್ಮ ಸ್ನೇಹಿತರ ಜೊತೆಗೂ ಹಂಚಿಕೊಳ್ಳಲು ಮರೆಯದಿರಿ. ಅಂತೆಯೇ ನಿಮ್ಮ ಅಮೂಲ್ಯವಾದ ಕಾಮೆಂಟ್‌ಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ...

More from DriveSpark

Article Published On: Monday, September 1, 2014, 10:48 [IST]
English summary
Here is a list of some of the India's most craziest roads and bridges which we think everyone should experience once in their lifetime. Some of the roads are beautiful and others are outright scary. Sit back and start clicking through the slides.
Read more on ಭಾರತ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+