ಮುಂದಿನ ವರ್ಷ ಜಾರಿಗೆ ಬರುತ್ತಿರುವ ಹೊಸ ಕಾರು ನಿಯಮಗಳ ಬಗ್ಗೆ ತಿಳ್ಕೊಳಿ

ಮುಂದಿನ ವರ್ಷದ ಏಪ್ರಿಲ್ ನಂತರ ಎಲ್ಲಾ ಕಾರುಗಳಲ್ಲಿ ಕೆಲವು ಮೂಲಭೂತ ಸೌಕರ್ಯಗಳನ್ನು ವಾಹನ ತಯಾರಕ ಸಂಸ್ಥೆಗಳು ಅಳವಡಿಸಬೇಕು ಎಂದು ಭಾರತೀಯ ಸರ್ಕಾರವು ಆದೇಶ ಹೊರಡಿಸಿದೆ.

By Girish

ಮುಂದಿನ ವರ್ಷದ ಏಪ್ರಿಲ್ ನಂತರ ಎಲ್ಲಾ ಕಾರುಗಳಲ್ಲಿ ಕೆಲವು ಮೂಲಭೂತ ಸೌಕರ್ಯಗಳನ್ನು ವಾಹನ ತಯಾರಕ ಸಂಸ್ಥೆಗಳು ಅಳವಡಿಸಬೇಕು ಎಂದು ಭಾರತೀಯ ಸರ್ಕಾರವು ಆದೇಶ ಹೊರಡಿಸಿದೆ.

ಮುಂದಿನ ವರ್ಷ ಜಾರಿಗೆ ಬರುತ್ತಿರುವ ಈ ಹೊಸ ಕಾರು ನಿಯಮಗಳ ಬಗ್ಗೆ ತಿಳ್ಕೊಳಿ

ಈ ನಿಯಮದ ಪ್ರಕಾರ ಏಪ್ರಿಲ್ ನಂತರ ನೋಂದಣಿಯಾಗುವ ಎಲ್ಲಾ ಕಾರುಗಳಲ್ಲಿ ಸೀಟ್ ಬೆಲ್ಟ್ ಎಚ್ಚರಿಕೆ ಸೂಚಕ, ವೇಗ ಎಚ್ಚರಿಕೆ ಸೂಚಕ, ಚಾಲಕನಿಗೆ ಕಡ್ಡಾಯ ಏರ್‌ಬ್ಯಾಗ್ ಮತ್ತು ರಿವರ್ಸ್ ಪಾರ್ಕಿಂಗ್ ಸಹಾಯ ವ್ಯವಸ್ಥೆಗಳನ್ನು ಅಳವಡಿಸಬೇಕೆಂದು ಭಾರತೀಯ ಸರ್ಕಾರ ಆದೇಶ ನೀಡಿದ್ದು, ಈಗಾಗಲೇ ಈ ನಿಯಮ ಪಾಲನೆಗೆ ಅಗತ್ಯ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ.

ಮುಂದಿನ ವರ್ಷ ಜಾರಿಗೆ ಬರುತ್ತಿರುವ ಈ ಹೊಸ ಕಾರು ನಿಯಮಗಳ ಬಗ್ಗೆ ತಿಳ್ಕೊಳಿ

ರಸ್ತೆ ಮತ್ತು ಸಾರಿಗೆ ಸಚಿವರಿಂದ ಹೊರಡಿಸಲಾದ ಕರಡು ನಿಯಮಗಳ ಪ್ರಕಾರ, ಮೇಲೆ ಸೂಚಿಸಲಾದ ಚಾಲಕ ಸ್ನೇಹಿ ಸೌಲಭ್ಯಗಳು ಆಟೊಮೋಟಿವ್ ಇಂಡಸ್ಟ್ರಿ ಸ್ಟ್ಯಾಂಡರ್ಡ್ (ಎಐಎಸ್) 145ರ ಪ್ರಕಾರ ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ.

ಮುಂದಿನ ವರ್ಷ ಜಾರಿಗೆ ಬರುತ್ತಿರುವ ಈ ಹೊಸ ಕಾರು ನಿಯಮಗಳ ಬಗ್ಗೆ ತಿಳ್ಕೊಳಿ

ಎಐಎಸ್ 145 ನಿಯಮವು, ಭಾರತದ ರಸ್ತೆಗಳಲ್ಲಿ ಅಪಘಾತಗಳ ಸಂಖ್ಯೆಯನ್ನು ತಗ್ಗಿಸುವ ಕಡೆ ಗಮನಹರಿಸಲು ಮುಂದಾಗಿದ್ದು, ದೇಶದಲ್ಲಿ ರಸ್ತೆ ಸುರಕ್ಷತೆ ಸುಧಾರಣೆ ಮತ್ತು ರಿವರ್ಸ್ ಪಾರ್ಕಿಂಗ್ ಸಂದರ್ಭದಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಅರಿವು ಮೂಡಿಸಲು ಈ ಕ್ರಮಕ್ಕೆ ಮುಂದಾಗಿದೆ.

ಮುಂದಿನ ವರ್ಷ ಜಾರಿಗೆ ಬರುತ್ತಿರುವ ಈ ಹೊಸ ಕಾರು ನಿಯಮಗಳ ಬಗ್ಗೆ ತಿಳ್ಕೊಳಿ

ಭಾರತದ ಅಪಘಾತ ಅಂಕಿಅಂಶಗಳನ್ನು ಬೆಗ್ಗೆ ಹೇಳುವುದಾದರೆ, ಪ್ರತಿ ವರ್ಷ ಸುಮಾರು 1.5 ಲಕ್ಷ ಮಂದಿ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದು, ಸುರಕ್ಷತಾ ಮಾನದಂಡಗಳು ಕಟ್ಟುನಿಟ್ಟಾಗಿ ಪಾಲಿಸಬೇಕಾದ ಅಗತ್ಯವಿದೆ.

ಮುಂದಿನ ವರ್ಷ ಜಾರಿಗೆ ಬರುತ್ತಿರುವ ಈ ಹೊಸ ಕಾರು ನಿಯಮಗಳ ಬಗ್ಗೆ ತಿಳ್ಕೊಳಿ

ಮುಂದಿನ ಮೂರು ವರ್ಷಗಳಲ್ಲಿ ಭಾರತದಲ್ಲಿ ರಸ್ತೆ ಅಪಘಾತಗಳನ್ನು ಶೇಕಡಾ 50% ರಷ್ಟು ಕಡಿಮೆ ಮಾಡುವ ಗುರಿ ಹೊಂದಿದ್ದು, ಜಾಗತಿಕ ಮಟ್ಟದ ಸುರಕ್ಷತಾ ಮಾನದಂಡಗಳಿಗೆ ಸಮಾನವಾಗಿ ಭಾರತೀಯ ಕಾರು ಸುರಕ್ಷತಾ ಮಾನದಂಡಗಳನ್ನು ತರಲು ಸರ್ಕಾರ ಪ್ರಯತ್ನಿಸುತ್ತಿದೆ.

ಮುಂದಿನ ವರ್ಷ ಜಾರಿಗೆ ಬರುತ್ತಿರುವ ಈ ಹೊಸ ಕಾರು ನಿಯಮಗಳ ಬಗ್ಗೆ ತಿಳ್ಕೊಳಿ

ಹೊಸ ನಿಯಮ ಜಾರಿಗೊಳಿಸುವ ಮೂಲಕ ಸರಕಾರವು ಅಪಘಾತಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ಸಾಕಷ್ಟು ಪ್ರಯತ್ನ ನೆಡೆಸುತಿದ್ದು, ಸಾರ್ವಜನಿಕರೂ ಸಹ ದೇಶದ ರಸ್ತೆ ನಿಯಮಗಳನ್ನು ಪಾಲಿಸುವ ಮೂಲಕ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡುವ ಕಡೆ ಹೆಚ್ಚು ಗಮನಹರಿಸಬೇಕಾಗಿದೆ.

Most Read Articles

Kannada
English summary
The Indian government has proposed that all cars, from April 2019 onwards will have to be equipped with seat belt warning, speed alerting system, driver airbags, and reverse parking assist systems.
Story first published: Thursday, August 31, 2017, 11:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X