Just In
Don't Miss!
- Lifestyle
'ಮಂಗಳವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ '
- News
ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್ ಮತ್ತು ಚೆನ್ನೈಯಿನ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Movies
ಶಿವಲಿಂಗಕ್ಕೆ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಜ್ಜಿಯ ಜೀವ ರಕ್ಷಣೆಗೆ ಮರ್ಸಿಡಿಸ್ ಬೆಂಝ್ ಕಾರು ಚಾಲನೆ ಮಾಡಿದ 11 ವರ್ಷದ ಬಾಲಕ
11 ವರ್ಷದ ಬಾಲಕನೊಬ್ಬ ತನ್ನ ಅಜ್ಜಿಯ ಜೀವ ಉಳಿಸಲು ಕಾರು ಚಾಲನೆ ಮಾಡಿ, ಈಗ ಹೀರೋ ಆಗಿದ್ದಾನೆ. ಪಿಜೆ ಬ್ರೂವರ್-ಲೇ ಎಂಬ ಬಾಲಕ ತನ್ನ ಅಜ್ಜಿ ನಡೆಯಲು ಸಾಧ್ಯವಾಗದೆ ಕುಸಿದು ಬಿದ್ದಿದ್ದಾಗ ಕಾರು ಚಾಲನೆ ಮಾಡಿ ಅವರನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಜೀವ ರಕ್ಷಿಸಿದ್ದಾನೆ.

ಈ ಘಟನೆ ನಡೆದಿರುವುದು ಅಮೆರಿಕಾದ ಇಂಡಿಯಾನಾ ಪೊಲೀಸ್ ನಲ್ಲಿ. ಈ ವಾರ ತನ್ನ ಹನ್ನೆರಡನೇ ಹುಟ್ಟು ಹಬ್ಬ ಅಚ್ಚರಿಸಿಕೊಳ್ಳುತ್ತಿರುವ ಪಿಜೆ ಬ್ರೂವರ್-ಲೇ ತನ್ನ ಅಜ್ಜಿ ವಾಕ್ ಮಾಡಲು ಹೊರಟಿದ್ದಾಗ ಗೋ-ಕಾರ್ಟಿಂಗ್ ನಲ್ಲಿ ನಿರತನಾಗಿದ್ದ. ಆತನ ಅಜ್ಜಿ ಏಂಜೆಲಿಯಾ ರಸ್ತೆಯ ಮೇಲಿದ್ದ ಕಂಬಕ್ಕೆ ಒರಗಿ ಕೊಂಡಿರುವುದು ಆತನ ಕಣ್ಣಿಗೆ ಬಿದ್ದಿದೆ.

ಹತ್ತಿರ ಹೋಗಿ ನೋಡಿದಾಗ ಆತನ ಅಜ್ಜಿ ಏಂಜೆಲಿಯಾರವರ ಗ್ಲೂಕೋಸ್ ಮಟ್ಟ 40 ಎಂಜಿಗಿಂತ ಕಡಿಮೆಯಾಗಿರುವುದು ಕಂಡು ಬಂದಿದೆ. ಪಿಜೆ ತಕ್ಷಣವೇ ಮನೆಗೆ ಹೋಗಿ ಮರ್ಸಿಡಿಸ್ ಬೆಂಝ್ ಕಾರನ್ನು ತಂದಿದ್ದಾನೆ.
MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಈ ಬಗ್ಗೆ ಮಾತನಾಡಿರುವ ಏಂಜಲಿಯಾ ನಾನು ಸ್ಟಾಪ್ ಸಿಗ್ನಲ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದೆ. ಇದ್ದಕ್ಕಿದ್ದಂತೆ ನನ್ನ ಕಾರು ಬರುತ್ತಿರುವುದನ್ನು ನೋಡಿದೆ, ನನ್ನ ಮರ್ಸಿಡಿಸ್ ಬೆಂಝ್ ನನ್ನ ಕಡೆಗೆ ಬರುತ್ತಿತ್ತು. ಕಾರನ್ನು ಪಿಜೆ ಚಾಲನೆ ಮಾಡುತ್ತಿದ್ದ ಎಂದು ಹೇಳಿದ್ದಾರೆ. ಪಿಜೆ ಯಾವುದೇ ಡ್ರೈವಿಂಗ್ ಲೈಸೆನ್ಸ್ ಹೊಂದಿಲ್ಲ.

ಪಿಜೆ ತನ್ನ ಮನೆಯ ಬಳಿಯೇ ಹಲವು ಬಾರಿ ಕಾರನ್ನು ಚಾಲನೆ ಮಾಡಿದ್ದ. ತನ್ನ ಮೊಮ್ಮಗ ಶಾಂತವಾಗಿ ಡ್ರೈವ್ ಮಾಡಿ ತನ್ನನ್ನು ಸುರಕ್ಷಿತವಾಗಿ ಮನೆ ತಲುಪಿಸಿದ ಎಂದು ಏಂಜಲಿಯಾ ಹೇಳಿದ್ದಾರೆ.
MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಪಿಜೆ ತನ್ನ ಅಜ್ಜಿಯನ್ನು ಮನೆಯೊಳಗೆ ಕರೆದುಕೊಂಡು ಹೋಗಿ ಗ್ಲೂಕೋಸ್ ಟ್ಯಾಬ್ಲೆಟ್ ನೀಡಿದ್ದಾನೆ. ಈ ಘಟನೆಯ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಏಂಜೆಲಿಯಾ 11 ವರ್ಷದ ನನ್ನ ಮೊಮ್ಮಗ ತನ್ನ ತಾಯಿಗಿಂತ ಚೆನ್ನಾಗಿ ಕಾರನ್ನು ಡ್ರೈವ್ ಮಾಡುತ್ತಾನೆ ಎಂದು ಹೇಳಿದ್ದಾರೆ.

ಎಸ್‌ಯುವಿ, ಕ್ಯಾಮ್ರಿ, ಟ್ರಕ್ ಅಥವಾ ಕ್ಯಾಮರೊ ಕಾರುಗಳನ್ನು ಏಕೆ ಚಾಲನೆ ಮಾಡಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿರುವ ಪಿಜೆ, ಮರ್ಸಿಡಿಸ್ ಬೆಂಝ್ ಕಾರಿನ ಕೀ ಮೊದಲು ಕಣ್ಣಿಗೆ ಬಿದ್ದ ಕಾರಣ ಆ ಕಾರನ್ನು ಡ್ರೈವ್ ಮಾಡಿದೆ ಎಂದು ಹೇಳಿದ್ದಾನೆ.
MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಡ್ರೈವಿಂಗ್ ನ ಯಾವುದೇ ಅನುಭವವನ್ನು ಹೊಂದದೇ ಇದ್ದರೂ ಕಡಿಮೆ ತರಬೇತಿಯಿಂದಲೇ ಪಿಜೆ ತನ್ನ ಅಜ್ಜಿಯ ಜೀವ ರಕ್ಷಿಸಿದ್ದಾನೆ. ಭಾರತದಲ್ಲಿ ಕಾರ್ ಡ್ರೈವಿಂಗ್ ಲೈಸೆನ್ಸ್ ಪಡೆಯಲು 18 ವರ್ಷ ವಯಸ್ಸಾಗಿರಬೇಕು. ಆದರೂ ಕಡಿಮೆ ವಯಸ್ಸಿನ ಮಕ್ಕಳು ಬೈಕ್ ಹಾಗೂ ಕಾರು ಚಾಲನೆ ಮಾಡುವುದನ್ನು ಕಾಣಬಹುದು.
ಚಿತ್ರಕೃಪೆ: 11 ಅಲೈವ್