ಒಂದು ಕಾಲು ಕೋಟಿಗೆ ಹರಾಜಾಯ್ತು 118 ವರ್ಷ ಹಳೆಯ ನಂಬರ್ ಪ್ಲೇಟ್

ಐಷಾರಾಮಿ ಕಾರುಗಳು ಮಾತ್ರ ದುಬಾರಿ ಬೆಲೆಯನ್ನು ಹೊಂದಿರುವುದಿಲ್ಲ. ಅವುಗಳ ಮೇಲಿರುವ ನಂಬರ್ ಪ್ಲೇಟ್ ಗಳ ಬೆಲೆಯು ದುಬಾರಿಯಾಗಿರುತ್ತದೆ. ಇನ್ನೂ ಕೆಲವೊಮ್ಮೆ ಕಾರುಗಳಿಗಿಂತ ಕಾರುಗಳ ನಂಬರ್‌ ಪ್ಲೇಟ್‌ಗಳ ಬೆಲೆಯೇ ಹೆಚ್ಚಾಗಿರುತ್ತದೆ.

ಒಂದು ಕಾಲು ಕೋಟಿಗೆ ಹರಾಜಾಯ್ತು 118 ವರ್ಷ ಹಳೆಯ ನಂಬರ್ ಪ್ಲೇಟ್

ಇತ್ತೀಚಿನ ದಿನಗಳಲ್ಲಿ ನಂಬರ್ ಪ್ಲೇಟ್ ಗಳಿಗೆ ಕ್ರೇಜ್ ಹೆಚ್ಚುತ್ತಿದ್ದು, ಐಷಾರಾಮಿ ಕಾರುಗಳನ್ನು ಖರೀದಿಸಬಹುದಾದಷ್ಟು ಬೆಲೆಗೆ ಅನೇಕ ನಂಬರ್ ಪ್ಲೇಟ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ಇತ್ತೀಚೆಗೆ ಇಂಗ್ಲೆಂಡ್ ನಲ್ಲಿ ನಂಬರ್ ಪ್ಲೇಟ್ ಒಂದನ್ನು ಹರಾಜು ಪ್ರಕ್ರಿಯೆಯ ಮೂಲಕ 1,28,800 ಪೌಂಡ್ ಅಂದರೆ ರೂ.1.26 ಕೋಟಿಗಳಿಗೆ ಮಾರಾಟ ಮಾಡಲಾಗಿದೆ.

ಒಂದು ಕಾಲು ಕೋಟಿಗೆ ಹರಾಜಾಯ್ತು 118 ವರ್ಷ ಹಳೆಯ ನಂಬರ್ ಪ್ಲೇಟ್

ಈ ನಂಬರ್ ಪ್ಲೇಟ್ 1902ಕ್ಕೆ ಸೇರಿದ್ದು ಎಂಬುದೇ ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟವಾಗಲು ಪ್ರಮುಖ ಕಾರಣ. 118 ವರ್ಷ ಹಳೆಯದಾದ ಈ ನಂಬರ್ ಪ್ಲೇಟ್ ಅನ್ನು 1902ರಲ್ಲಿ ಬರ್ಮಿಂಗ್ ಹ್ಯಾಮ್‌ನ ಚಾರ್ಲ್ಸ್ ಟಾಮ್ಸನ್‌ರವರಿಗೆ ನೀಡಲಾಗಿತ್ತು.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಒಂದು ಕಾಲು ಕೋಟಿಗೆ ಹರಾಜಾಯ್ತು 118 ವರ್ಷ ಹಳೆಯ ನಂಬರ್ ಪ್ಲೇಟ್

ಆ ಸಮಯದಲ್ಲಿ ಬ್ರಿಟನ್‌ನಲ್ಲಿ ಕೆಲವೇ ಕೆಲವು ಜನರು ಕಾರುಗಳನ್ನು ಹೊಂದಿದ್ದರು. 1955ರಲ್ಲಿ ಚಾರ್ಲ್ಸ್ ರವರು ನಿಧನರಾದ ಬಳಿಕ ಈ ಸಂಖ್ಯೆಯನ್ನು ಬ್ಯಾರಿ ಟಾಮ್ಸನ್‌ರವರಿಗೆ ನೀಡಲಾಯಿತು. ಬ್ಯಾರಿ ಈ ಸಂಖ್ಯೆಯನ್ನು ಜಾಗ್ವಾರ್, ಆಸ್ಟಿನ್ ಮಾರ್ಟಿನ್, ಮಿನಿ ಹಾಗೂ ಫೋರ್ಡ್ ಕಾರುಗಳಲ್ಲಿ ಬಳಸಿದ್ದರು.

ಒಂದು ಕಾಲು ಕೋಟಿಗೆ ಹರಾಜಾಯ್ತು 118 ವರ್ಷ ಹಳೆಯ ನಂಬರ್ ಪ್ಲೇಟ್

2017ರಲ್ಲಿ ಬ್ಯಾರಿಯ ಮರಣದ ನಂತರ ಈ ಸಂಖ್ಯೆ ತಪ್ಪಿಹೋಗಿತ್ತು. ಕೆಲವು ವರ್ಷಗಳ ನಂತರ ಬ್ರಿಟನ್ ನ ಬಿಡ್ಡಿಂಗ್ ಕಂಪನಿಯಾದ ಸಿಲ್ವರ್‌ಸ್ಟೋನ್ ಆಕ್ಷನ್ಸ್, ಈ ಸಂಖ್ಯೆಯನ್ನು ಹರಾಜು ಮಾಡುವ ಹಕ್ಕನ್ನು ಖರೀದಿಸಿತು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಒಂದು ಕಾಲು ಕೋಟಿಗೆ ಹರಾಜಾಯ್ತು 118 ವರ್ಷ ಹಳೆಯ ನಂಬರ್ ಪ್ಲೇಟ್

ಇತ್ತೀಚೆಗೆ ನಡೆದ ಹರಾಜಿನಲ್ಲಿ ಈ ನಂಬರ್‌ ಪ್ಲೇಟ್‌ಗಾಗಿ ರೂ.1.26 ಕೋಟಿ ಬಿಡ್ ಸಲ್ಲಿಸಿ ಖರೀದಿಸಲಾಗಿದೆ. ಈ ಸಂಖ್ಯೆಯನ್ನು ಖರೀದಿಸುವವರ ಮಾಹಿತಿಯನ್ನು ಕಂಪನಿಯು ರಹಸ್ಯವಾಗಿಟ್ಟಿದೆ.

ಕ್ಲಾಸಿಕ್ ಬೈಕ್ ಪ್ರಿಯರಿಗಾಗಿ ಬಿಡುಗಡೆಯಾದ ರಾಯಲ್ ಎನ್‌ಫೀಲ್ಡ್ ಹೊಸ ಮಿಟಿಯೊರ್ 350 ಹೇಗಿದೆ? ಈ ವಿಡಿಯೋ ನೋಡಿ..

ಈ ಸಂಖ್ಯೆ ಕೋಟ್ಯಾಂತರ ರೂಪಾಯಿಗೆ ಹರಾಜಾಗಿರುವ ಸುದ್ದಿ ಇಂಟರ್ ನೆಟ್ ನಲ್ಲಿ ಹರಿದಾಡುತ್ತಿದೆ. ಇಷ್ಟು ದುಬಾರಿ ಬೆಲೆ ನೀಡಿ ನಂಬರ್ ಪ್ಲೇಟ್ ಖರೀದಿಸುವುದು ಹುಚ್ಚುತನ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

ಒಂದು ಕಾಲು ಕೋಟಿಗೆ ಹರಾಜಾಯ್ತು 118 ವರ್ಷ ಹಳೆಯ ನಂಬರ್ ಪ್ಲೇಟ್

ಇನ್ನೂ ಕೆಲವರು ಹಣವನ್ನು ವ್ಯರ್ಥ ಮಾಡಲಾಗಿದೆ ಎಂದು ಹೇಳಿದ್ದಾರೆ. ಈ ನಂಬರ್ ಪ್ಲೇಟ್‌ಗೆ ನೀಡಿದ ಬೆಲೆಗೆ ಅನೇಕ ಐಷಾರಾಮಿ ಕಾರುಗಳನ್ನು ಖರೀದಿಸಬಹುದು ಎಂದು ಸಾಕಷ್ಟು ಜನರು ಪ್ರತಿಕ್ರಿಯೆ ನೀಡಿದ್ದಾರೆ.

ಒಂದು ಕಾಲು ಕೋಟಿಗೆ ಹರಾಜಾಯ್ತು 118 ವರ್ಷ ಹಳೆಯ ನಂಬರ್ ಪ್ಲೇಟ್

ಈ ನಂಬರ್ ಪ್ಲೇಟ್ ಹೊಂದುವ ಕಾರು ವಿಶಿಷ್ಟ ಗುರುತನ್ನು ಹೊಂದಲಿದೆ ಎಂಬುದು ಹಲವರ ಅಭಿಪ್ರಾಯ. ಈ ನಂಬರ್ ಅನ್ನು ಮತ್ತೆ ಹೆಚ್ಚಿನ ಬೆಲೆಗೆ ಹರಾಜು ಮಾಡುವ ಸಾಧ್ಯತೆಗಳಿವೆ.

ಸೂಚನೆ: ಕೆಲವು ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.

Most Read Articles

Kannada
English summary
118 year old number plate auctioned for Rs.1.26 crore in Britain. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X