ಪ್ರಯಾಣಿಕರ ಪಾಲಿಗೆ ದೇವರಾದ ಬಾಲಕ: 12 ವರ್ಷದ ಕೆಚ್ಚೆದೆಯ ಧೀರನಿಗೆ ಪುರಸ್ಕರಿಸಿದ ರೈಲ್ವೆ
ಜೀವ ಉಳಿಸಲು ಯಾರಾದರೇನು, ಮಾನವೀಯತೆ ಇರಬೇಕಷ್ಟೇ. 12 ವರ್ಷದ ಬಾಲಕನೊಬ್ಬ ತನೆಗೆ ಅಪಾಯವೆಂದು ತಿಳಿದರು ಕೂಡ ರೈಲಿನಲ್ಲಿದ್ದ ಸಾವಿರಾರು ಪ್ರಯಾಣಿಕರ ಜೀವ ಉಳಿಸಿದ್ದಾನೆ. ಹಾನಿಯಾಗಿದ್ದ ರೈಲ್ವೆ ಹಳಿಯನ್ನು ಗುರುತಿಸಿ ಅದರ ಮೇಲೆ ಹಾದುಹೋಗುವ ರೈಲನ್ನು ತನ್ನ ಸಮಯಪ್ರಜ್ಞೆಯಿಂದ ನಿಲ್ಲಿಸಿ ಈಗ ರೈಲ್ವೆಯಿಂದ ಪ್ರಶಸ್ತಿ ಪಡೆದಿದ್ದಾನೆ.
ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ 12 ವರ್ಷದ ಬಾಲಕ ಹಾನಿಗೊಳಗಾದ ಹಳಿಯನ್ನು ಗುರುತಿಸಿದ್ದ, ಅದೇ ಹಳಿಯಲ್ಲಿ ಸಾಗುತ್ತಿದ್ದ ಪ್ಯಾಸೆಂಜರ್ ರೈಲು ಅಪಾಯಕ್ಕೆ ಸಮೀಪಿಸುತ್ತಿದ್ದಂತೆ ತನ್ನ ಕೆಂಪು ಅಂಗಿಯನ್ನು ಬಿಚ್ಚಿ ಬೀಸುವ ಮೂಲಕ ರೈಲು ಅಪಘಾತವನ್ನು ತಪ್ಪಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತ ವಿವರವಾದ ಮಾಹಿತಿಯನ್ನು ಇಲ್ಲಿ ನೋಡೊಣ.

ಘಟನೆ ನಡೆದ ಸಮೀಪದ ಹಳ್ಳಿಯ ವಲಸೆ ಕಾರ್ಮಿಕರ ಮಗನಾದ ಮುರ್ಸಲಿನ್ ಸೇಖ್ ಎಂಬ ಹುಡುಗ ಸ್ಥಳೀಯ ರೈಲ್ವೆ ಸಿಬ್ಬಂದಿಯೊಂದಿಗೆ ಪಕ್ಕದ ಹೊಲದಲ್ಲಿ ಇದ್ದ. ಹಳಿಗಳ ಕೆಳಗೆ ಮಳೆಯಿಂದ ಹಾನಿಗೊಳಗಾದ ಭಾಗವನ್ನು ಗಮನಿಸಿ ಅಧಿಕಾರಿಗಳಿಗೆ ತಿಳಿಸಲು ಮುಂದಾಗಿದ್ದ. ಆದ್ರೆ ಅದೇ ವೇಳೆ ರೈಲು ಕೂಡ ಬರುತ್ತಿರುವುದನ್ನು ಕಂಡು ರಕ್ಷಣೆಗೆ ಮುಂದಾಗಿ ಸಮಯ ಪ್ರಜ್ಞೆ ಮೆರೆದಿದ್ದಾನೆ.
ಸಮೀಪಿಸುತ್ತಿರುವ ಪ್ಯಾಸೆಂಜರ್ ರೈಲಿನ ಲೊಕೊ ಪೈಲಟ್‌ಗೆ ತನ್ನ ಕೆಂಪು ಅಂಗಿಯನ್ನು ಬಿಚ್ಚಿ ಬೀಸುವ ಮೂಲಕ ಎಚ್ಚರಿಸಿದ್ದಾನೆ. ಲೊಕೊ ಪೈಲಟ್ ಹುಡುಗನ ಸಿಗ್ನಲ್ ಅನ್ನು ಗಮನಿಸಿ ತಕ್ಷಣವೇ ರೈಲನ್ನು ಸಮಯಕ್ಕೆ ನಿಲ್ಲಿಸಲು ತುರ್ತು ಬ್ರೇಕ್ ಹಾಕಿದ್ದಾರೆ. ರೈಲು ಹಾಗೇ ಮುಂದಕ್ಕೆ ಚಲಿಸಿದ್ದರೆ ಭಾರೀ ಅನಾಹುತವಾಗುತ್ತಿತ್ತು. ಸಮಯಕ್ಕೆ ರೈಲು ನಿಲ್ಲಿಸುವಲ್ಲಿ ಹುಡಗ ಹಾಗೂ ಲೊಕೊಪೈಲಟ್ ಇಬ್ಬರು ಯಶಸ್ವಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಳೆಯಿಂದಾಗಿ ಮಣ್ಣು ಮತ್ತು ಬೆಣಚುಕಲ್ಲುಗಳು ಕೊಚ್ಚಿಹೋಗಿರುವ ಸ್ಥಳದಲ್ಲಿ ಪೋರಿಯನ್ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಾನಿಗೊಳಗಾದ ಟ್ರ್ಯಾಕ್‌ನ ಭಾಗವನ್ನು ಸದ್ಯ ಸರಿಪಡಿಸಲಾಗಿದ್ದು ಕಾರ್ಯಾಚರಣೆಯನ್ನು ಪುನರಾರಂಭಿಸಲಾಗಿದೆ. ಸರಿಯಾದ ಸಮಯಕ್ಕೆ ಹುಡುಗನ ಜಾಣ್ಮೆಯನ್ನು ಮೆಚ್ಚಿ ಅಧಿಕಾರಿಗಳು ಕೊಂಡಾಡಿದ್ದಾರೆ. "ಎನ್ಎಫ್ ರೈಲ್ವೇ ಅಧಿಕಾರಿಗಳು ಈ ಧೈರ್ಯಶಾಲಿ ಹುಡುಗನಿಗೆ ಪ್ರಮಾಣಪತ್ರ ಮತ್ತು ನಗದು ಪುರಸ್ಕಾರವನ್ನು ನೀಡಿ ಗೌರವಿಸಿದ್ದಾರೆ.
ಮಾಲ್ಡಾ ಉತ್ತರ ಸಂಸದ ಖಗೆನ್ ಮುರ್ಮು ಕತಿಹಾರ್ನ ಅವರು, ವಿಭಾಗೀಯ ರೈಲ್ವೆ ಮ್ಯಾನೇಜರ್ ಸುರೇಂದ್ರ ಕುಮಾರ್ ಅವರೊಂದಿಗೆ ಬಾಲಕನ ಮನೆಗೆ ತಲುಪಿ ಆತನ ಪ್ರಯತ್ನವನ್ನು ಪುರಸ್ಕರಿಸಿ ಶ್ಲಾಘಿಸಿದರು. ಏಕೆಂದರೆ ಇಂತಹ ಪರಿಸ್ಥಿತಿಗಳಲ್ಲಿ ದೊಡ್ಡವರಿಗೇ ಆಗಲಿ ತಲೆ ಓಡುವುದಿಲ್ಲ. ಆದ್ರೆ ಬಾಲಕ ತನ್ನ ಸಮಯ ಪ್ರಜ್ಞೆ ಹಾಗೂ ಅಪಘಾತವನ್ನು ತಪ್ಪಿಸುವ ಪ್ರಯತ್ನವು ಹಲವರಿಗೆ ಮಾದರಿಯಾಗಿದೆ.
ಅಲ್ಲದೇ ಅಧಿಕಾರಿಗಳಿಗೆ ತಿಳಿಸುವ ಬದಲು ತಾನೇ ಮುಂದಾಗಿ ರೈಲನ್ನು ನಿಲ್ಲಿಸಿದ್ದಾನೆ. ಏಕೆಂದರೆ ಆ ಸಮಯದಲ್ಲಿ ಅಧಿಕಾರಿಗಳಿಗೆ ತಿಳಿಸುವಷ್ಟು ಸಮಯಾವಕಾಶ ಆ ಬಾಲಕನಿಗೆ ಇಲ್ಲದ ಕಾರಣ ಆ ಕ್ಷಣಕ್ಕೆ ಆತನ ಆಲೋಚನೆಯು ಶ್ಲಾಘನೀಯ. ಇಂತಹ ಬಾಲಕರು ಸಮಾಜದಲ್ಲಿ ಹಲವರಿಗೆ ಮಾದರಿಯಾಗಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯವನ್ನು ಕಮೆಂಟ್ ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications