ಎಲೆಕ್ಟ್ರಿಕ್ ವಾಹನ ಚಾಲನೆ ಮಾಡಿ ಕಸ ಸಂಗ್ರಹಿಸಿದ ಅಪ್ರಾಪ್ತ ಬಾಲಕ

ಭಾರತದಲ್ಲಿರುವ ಮಕ್ಕಳು ವಯಸ್ಕರಾಗುವ ಮುನ್ನವೇ ವಾಹನ ಚಲಾಯಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಈ ಪ್ರವೃತ್ತಿಯು ರಸ್ತೆ ಅಪಘಾತಗಳಿಗೆ ದಾರಿ ಮಾಡಿಕೊಡುತ್ತಿದೆ. ಭಾರತದಲ್ಲಿ ಚಾಲನಾ ಪರವಾನಗಿ ಪಡೆಯುವ ವಯಸ್ಸನ್ನು 18 ವರ್ಷಗಳಿಗೆ ನಿಗದಿಪಡಿಸಲಾಗಿದೆ.

ಎಲೆಕ್ಟ್ರಿಕ್ ವಾಹನ ಚಾಲನೆ ಮಾಡಿ ಕಸ ಸಂಗ್ರಹಿಸಿದ ಅಪ್ರಾಪ್ತ ಬಾಲಕ

ಡ್ರೈವಿಂಗ್ ಲೈಸೆನ್ಸ್ ಪಡೆಯದೇ ವಾಹನಗಳನ್ನು ಚಾಲನೆ ಮಾಡುವಂತಿಲ್ಲ. ಆದರೆ ಇತ್ತೀಚಿಗೆ 10 ವರ್ಷದ ಬಾಲಕರು ಸಹ ಕಾರು ಹಾಗೂ ಬೈಕುಗಳನ್ನು ಚಾಲನೆ ಮಾಡುತ್ತಿರುವ ಬಗ್ಗೆ ವರದಿಗಳಾಗುತ್ತಿವೆ. ಇದರಿಂದ ಕೆಲವು ಅಪಘಾತಗಳು ಸಂಭವಿಸಿವೆ. ಈ ಕಾರಣಕ್ಕೆ ಅಪ್ರಾಪ್ತ ವಯಸ್ಕರಿಗೆ ವಾಹನಗಳನ್ನು ನೀಡುವ ಪೋಷಕರ ವಿರುದ್ಧ ಪೊಲೀಸರು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

ಎಲೆಕ್ಟ್ರಿಕ್ ವಾಹನ ಚಾಲನೆ ಮಾಡಿ ಕಸ ಸಂಗ್ರಹಿಸಿದ ಅಪ್ರಾಪ್ತ ಬಾಲಕ

ದಂಡ ವಿಧಿಸುವುದರ ಜೊತೆಗೆ ಜೈಲು ಶಿಕ್ಷೆಯನ್ನು ಸಹ ನೀಡಲಾಗುತ್ತಿದೆ. ಆದರೆ ಪೊಲೀಸ್ ಅಧಿಕಾರಿಗಳು ಯಾವ ಕ್ರಮ ಕೈಗೊಂಡರೂ ಅಪ್ರಾಪ್ತ ವಯಸ್ಕರು ವಾಹನ ಚಲಾನೆ ಮಾಡುವ ಘಟನೆಗಳು ವರದಿಯಾಗುತ್ತಲೇ ಇವೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಎಲೆಕ್ಟ್ರಿಕ್ ವಾಹನ ಚಾಲನೆ ಮಾಡಿ ಕಸ ಸಂಗ್ರಹಿಸಿದ ಅಪ್ರಾಪ್ತ ಬಾಲಕ

ಇತ್ತೀಚಿಗೆ ತಮಿಳುನಾಡಿನ ಪುದುಕ್ಕೊಟ್ಟೈನಲ್ಲಿ ಇದೇ ರೀತಿಯ ಘಟನೆಯೊಂದು ಮರುಕಳಿಸಿದೆ. ಪುದುಕ್ಕೊಟ್ಟೈ ಪುರಸಭೆಯ ವಾರ್ಡ್‌ಗಳಲ್ಲಿ ಕಸ ಸಂಗ್ರಹಣೆಗಾಗಿ ಎಲೆಕ್ಟ್ರಿಕ್ ತ್ರಿ ಚಕ್ರ ವಾಹನಗಳನ್ನು ಬಳಸಲಾಗುತ್ತದೆ. ಪ್ರತಿದಿನ ಈ ವಾಹನಗಳೊಂದಿಗೆ ಕಸವನ್ನು ಸಂಗ್ರಹಿಸಿ ಕಸದ ಡಿಪೋಗೆ ಕೊಂಡೊಯ್ಯಲಾಗುತ್ತದೆ.

ಎಲೆಕ್ಟ್ರಿಕ್ ವಾಹನ ಚಾಲನೆ ಮಾಡಿ ಕಸ ಸಂಗ್ರಹಿಸಿದ ಅಪ್ರಾಪ್ತ ಬಾಲಕ

ಪೀಟರ್ ಎಂಬಾತನಿಗೆ ಪುದುಕ್ಕೊಟ್ಟೈ ಪುರಸಭೆಯ ವಾರ್ಡ್ ಗಳಲ್ಲಿ ಕಸ ಸಂಗ್ರಹಿಸಲು ಎಲೆಕ್ಟ್ರಿಕ್ ತ್ರಿಚಕ್ರ ಬ್ಯಾಟರಿ ವಾಹನವನ್ನು ಒದಗಿಸಲಾಗಿದೆ. ಈ ವಾಹನವನ್ನು ಚಾಲನೆ ಮಾಡಲು ಪೀಟರ್ 13 ವರ್ಷದ ಬಾಲಕನಿಗೆ ಅನುಮತಿ ನೀಡಿದ್ದಾನೆ ಎಂದು ವರದಿಯಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಎಲೆಕ್ಟ್ರಿಕ್ ವಾಹನ ಚಾಲನೆ ಮಾಡಿ ಕಸ ಸಂಗ್ರಹಿಸಿದ ಅಪ್ರಾಪ್ತ ಬಾಲಕ

ಈ ಬಾಲಕನು ಪೀಟರ್ ನ ಸೋದರಸಂಬಂಧಿಯಾಗಿದ್ದು, ತನ್ನ ಇಬ್ಬರು ಸ್ನೇಹಿತರೊಂದಿಗೆ ಸೇರಿ ಈ ತ್ರಿಚಕ್ರ ವಾಹನವನ್ನು ಚಾಲನೆ ಮಾಡುತ್ತಿದ್ದಾನೆ. ಅವನು ವಾಹನವನ್ನು ಅಡ್ಡಾದಿಡ್ಡಿಯಾಗಿ ಚಾಲನೆ ಮಾಡುತ್ತಿದ್ದಾನೆ ಎಂದು ಹೇಳಲಾಗಿದೆ.

ಎಲೆಕ್ಟ್ರಿಕ್ ವಾಹನ ಚಾಲನೆ ಮಾಡಿ ಕಸ ಸಂಗ್ರಹಿಸಿದ ಅಪ್ರಾಪ್ತ ಬಾಲಕ

ಈ ಕಾರಣಕ್ಕೆ ಅಲ್ಲಿನ ಪುರಸಭೆ ಅಧಿಕಾರಿಗಳು ಕ್ಲೀನರ್‌ಗಳನ್ನು ಹೊರತುಪಡಿಸಿ ಬೇರೆಯವರು ಈ ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳನ್ನು ಚಾಲನೆ ಮಾಡದಂತೆ ಆದೇಶ ಹೊರಡಿಸಿದ್ದಾರೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಎಲೆಕ್ಟ್ರಿಕ್ ವಾಹನ ಚಾಲನೆ ಮಾಡಿ ಕಸ ಸಂಗ್ರಹಿಸಿದ ಅಪ್ರಾಪ್ತ ಬಾಲಕ

ಪೀಟರ್ ಈ ಬಾಲಕನನ್ನು ಕಸ ಸಂಗ್ರಹಿಸಲು ಕಳುಹಿಸಿದ್ದಾನೆ ಎನ್ನಲಾಗಿದೆ. ಇದರಿಂದ ಅಲ್ಲಿನ ಜನರಿಗೆ ಕಸ ಸಂಗ್ರಹಣೆಗೆ ಬಾಲಕರನ್ನು ಬಳಸಲಾಗುತ್ತಿದೆಯೇ ಎಂಬ ಸಂದೇಹ ಮೂಡಿದೆ. ಈ ಬಗ್ಗೆ ಪುಥಿಯಾತಲೈಮುರೈ ವರದಿ ಮಾಡಿದೆ.

ಎಲೆಕ್ಟ್ರಿಕ್ ವಾಹನ ಚಾಲನೆ ಮಾಡಿ ಕಸ ಸಂಗ್ರಹಿಸಿದ ಅಪ್ರಾಪ್ತ ಬಾಲಕ

ಅಪ್ರಾಪ್ತ ವಯಸ್ಕರು ವಾಹನ ಚಾಲನೆ ಮಾಡದಂತೆ ತಡೆಯಲು ಪೊಲೀಸರು ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದರ ಮಧ್ಯೆಯೇ ಪುದುಕ್ಕೋಟೈನಲ್ಲಿ ನಡೆದ ಈ ಘಟನೆ ಆತಂಕವನ್ನುಂಟು ಮಾಡಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಎಲೆಕ್ಟ್ರಿಕ್ ವಾಹನ ಚಾಲನೆ ಮಾಡಿ ಕಸ ಸಂಗ್ರಹಿಸಿದ ಅಪ್ರಾಪ್ತ ಬಾಲಕ

ಅಪ್ರಾಪ್ತ ವಯಸ್ಕರಿಗೆ ವಾಹನಗಳನ್ನು ಚಾಲನೆ ಮಾಡಲು ಸಾಕಷ್ಟು ಅನುಭವವಿರುವುದಿಲ್ಲ. ಜೊತೆಗೆ ಸಂಚಾರ ನಿಯಮಗಳ ಬಗ್ಗೆ ಅರಿವಿರುವುದಿಲ್ಲ. ಇವುಗಳು ಅಪಘಾತಗಳಿಗೆ ಕಾರಣವಾಗುತ್ತವೆ.

ಸೂಚನೆ: ಈ ಲೇಖನದಲ್ಲಿ ಕೆಲವು ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.

Most Read Articles

Kannada
English summary
13 year old boy driving electric three wheeler to collect garbage. Read in Kannada.
Story first published: Saturday, October 24, 2020, 18:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X