ಕರೋನಾ ಸಾಂಕ್ರಾಮಿಕದ ನಡುವೆಯೇ ಆರಂಭಗೊಂಡ 13ನೇ ಆವೃತ್ತಿಯ ಏರೋ ಇಂಡಿಯಾ

ದೇಶದ ಪ್ರಮುಖ ಏರೋಸ್ಪೇಸ್ ಹಾಗೂ ರಕ್ಷಣಾ ಪ್ರದರ್ಶನವಾದ ಏರೋ ಇಂಡಿಯಾ 2021 ಇಂದಿನಿಂದ ಬೆಂಗಳೂರಿನಲ್ಲಿ ಆರಂಭವಾಗಿದೆ. ಕರೋನಾ ಸಾಂಕ್ರಾಮಿಕ ನಡುವೆ ಈ ಪ್ರದರ್ಶನಕ್ಕೆ ಚಾಲನೆ ನೀಡಲಾಗಿದೆ.

ಕರೋನಾ ಸಾಂಕ್ರಾಮಿಕದ ನಡುವೆಯೇ ಆರಂಭಗೊಂಡ 13ನೇ ಆವೃತ್ತಿಯ ಏರೋ ಇಂಡಿಯಾ

ಈ ಪ್ರದರ್ಶನವು ಸ್ವಾವಲಂಬಿ ಭಾರತ ಅಭಿಯಾನ ಹಾಗೂ ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಮಹತ್ವವನ್ನು ನೀಡುತ್ತದೆ. ಈ ಏರ್ ಶೋ ಬಗ್ಗೆ ಮಾತನಾಡಿರುವ ಅಧಿಕಾರಿಗಳು ಯಲಹಂಕದಲ್ಲಿರುವ ವಾಯುಪಡೆಯ ನಿಲ್ದಾಣದಲ್ಲಿ ನಡೆಯುವ ದ್ವೈವಾರ್ಷಿಕ ಅಂತರರಾಷ್ಟ್ರೀಯ ಕಾರ್ಯಕ್ರಮದ 13ನೇ ಆವೃತ್ತಿಯು ವಿಶ್ವದ ಮೊದಲ ಹೈಬ್ರಿಡ್ ಏರೋಸ್ಪೇಸ್ ಪ್ರದರ್ಶನವಾಗಲಿದೆ.

ಕರೋನಾ ಸಾಂಕ್ರಾಮಿಕದ ನಡುವೆಯೇ ಆರಂಭಗೊಂಡ 13ನೇ ಆವೃತ್ತಿಯ ಏರೋ ಇಂಡಿಯಾ

ಇದರಲ್ಲಿ ಫಿಸಿಕಲ್ ಹಾಗೂ ವರ್ಚುಯಲ್ ಪ್ರದರ್ಶನಗಳಿರಲಿವೆ. ಈ ಪ್ರದರ್ಶನಕ್ಕೆ ಭೇಟಿ ನೀಡುವವರು ಕೋವಿಡ್ -19 ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಿರಬೇಕು. ಈ ಪರೀಕ್ಷಾ ವರದಿ ನೆಗೆಟಿವ್ ಆಗಿದ್ದರೆ ಮಾತ್ರ ಪ್ರವೇಶ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಕರೋನಾ ಸಾಂಕ್ರಾಮಿಕದ ನಡುವೆಯೇ ಆರಂಭಗೊಂಡ 13ನೇ ಆವೃತ್ತಿಯ ಏರೋ ಇಂಡಿಯಾ

ಈ ವರದಿಯನ್ನು ಜನವರಿ 31ರ ಬೆಳಿಗ್ಗೆ 9 ಗಂಟೆಗೆ ಮುಂಚೆ ಅಥವಾ ಅದರ ನಂತರ ಪಡೆದಿರಬೇಕು ಎಂದು ಹೇಳಿದ್ದಾರೆ. ಕರೋನಾ ವೈರಸ್ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ನಡೆಯುವ ಈ ಪ್ರದರ್ಶನದಲ್ಲಿ ಪ್ರತಿದಿನ ಕೇವಲ 3,000 ಜನರಿಗೆ ಪ್ರವೇಶ ನೀಡಲಾಗುವುದು.

ಕರೋನಾ ಸಾಂಕ್ರಾಮಿಕದ ನಡುವೆಯೇ ಆರಂಭಗೊಂಡ 13ನೇ ಆವೃತ್ತಿಯ ಏರೋ ಇಂಡಿಯಾ

14 ದೇಶಗಳ 521 ಭಾರತೀಯರು, 78 ವಿದೇಶಿಯರು ಸೇರಿದಂತೆ ಒಟ್ಟು 601 ಪ್ರದರ್ಶನಕಾರರು ಈ ಪ್ರದರ್ಶನದಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿದ್ದಾರೆ ಎಂದು ಏರ್ ಶೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಕರೋನಾ ಸಾಂಕ್ರಾಮಿಕದ ನಡುವೆಯೇ ಆರಂಭಗೊಂಡ 13ನೇ ಆವೃತ್ತಿಯ ಏರೋ ಇಂಡಿಯಾ

ಈ ಪ್ರದರ್ಶನದಲ್ಲಿ ಕಂಪನಿಗಳು ತಮ್ಮ ಸಾಮರ್ಥ್ಯ, ಇತ್ತೀಚಿನ ತಂತ್ರಜ್ಞಾನ, ಉತ್ಪನ್ನಗಳು ಹಾಗೂ ಸೇವೆಗಳನ್ನು ಪ್ರದರ್ಶಿಸುತ್ತವೆ. ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಸಹ ತನ್ನ ಇತ್ತೀಚಿನ ರಕ್ಷಣಾ ತಂತ್ರಜ್ಞಾನಗಳನ್ನು ಪ್ರದರ್ಶಿಸಲಿದೆ.

ಕರೋನಾ ಸಾಂಕ್ರಾಮಿಕದ ನಡುವೆಯೇ ಆರಂಭಗೊಂಡ 13ನೇ ಆವೃತ್ತಿಯ ಏರೋ ಇಂಡಿಯಾ

ರಫೇಲ್ ಅಡ್ವಾನ್ಸ್ಡ್ ಡಿಫೆನ್ಸ್ ಸಿಸ್ಟಮ್ಸ್ ಲಿಮಿಟೆಡ್ ನ ಕಾರ್ಪೊರೇಟ್ ಪ್ರಾದೇಶಿಕ ನಿರ್ದೇಶಕ ಎಲಿ ಹೆಫೇಟ್ಸ್ ಮಾತನಾಡಿ ನಾವು ಭಾರತ ಸರ್ಕಾರದ ಮೇಕ್-ಇನ್ ಇಂಡಿಯಾ ನೀತಿ ಹಾಗೂ ಸ್ವಾವಲಂಬಿ ಭಾರತ ಅಭಿಯಾನದ ಭಾಗವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಕರೋನಾ ಸಾಂಕ್ರಾಮಿಕದ ನಡುವೆಯೇ ಆರಂಭಗೊಂಡ 13ನೇ ಆವೃತ್ತಿಯ ಏರೋ ಇಂಡಿಯಾ

ಈ ಎರಡೂ ಅಭಿಯಾನಗಳ ಅಡಿಯಲ್ಲಿ ನಾವು ಸ್ಥಳೀಯ ಉತ್ಪಾದನೆ, ಜ್ಞಾನ ವರ್ಗಾವಣೆ ಹಾಗೂ ಜಾಗತಿಕ ಕೈಗಾರಿಕಾ ಸಹಕಾರವನ್ನು ಉತ್ತೇಜಿಸುವತ್ತ ಗಮನ ಹರಿಸುತ್ತೇವೆ. ಇದರಿಂದ ರಫ್ತು ಮಾಡಲು ಉನ್ನತ ಮಟ್ಟದ ರಕ್ಷಣಾ ತಂತ್ರಜ್ಞಾನದ ಭಾರತೀಯ ತಜ್ಞರಿಗೆ ಸಹಾಯವಾಗುತ್ತದೆ ಎಂದು ಅವರು ಹೇಳಿದರು.

ಕರೋನಾ ಸಾಂಕ್ರಾಮಿಕದ ನಡುವೆಯೇ ಆರಂಭಗೊಂಡ 13ನೇ ಆವೃತ್ತಿಯ ಏರೋ ಇಂಡಿಯಾ

ಏರೋಸ್ಪೇಸ್ ಹಾಗೂ ಡಿಫೆನ್ಸ್ ಇಂಡಿಯಾ ನಿರ್ದೇಶಕರಾದ ಡಸಾಲ್ಟ್ ಸಿಸ್ಟಮ್ಸ್'ನ ರವಿ ಕಿರಣ್ ಪೊಥುಕುಚಿ ಮಾತನಾಡಿ ಏರೋಸ್ಪೇಸ್ ಹಾಗೂ ರಕ್ಷಣಾ ವಲಯವು ಮಹತ್ತರ ಸಂಗತಿಯಾಗಿದ್ದು, ಕೇಂದ್ರ ಸರ್ಕಾರವು ಈ ವಲಯವನ್ನು ಆಧುನೀಕರಣಗೊಳಿಸಲು ಹಾಗೂ ದೇಶಿಕರಣಗೊಳಿಸಲು ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಹೇಳಿದರು.

Most Read Articles

Kannada
English summary
13th edition Aero India 2021 exhibition starts in Bengaluru. Read in Kannada.
Story first published: Wednesday, February 3, 2021, 15:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X