ಹಳೆಯ ಕಾರುಗಳಿಂದ ತಯಾರಿಸಿದ 15 ಪೀಠೋಪಕರಣಗಳು

By Nagaraja

ಸಾಮಾನ್ಯವಾಗಿ ಹಳೆಯ ಕಾರುಗಳನ್ನು ಸಂಗ್ರಹಾಲಯಗಳಲ್ಲಿ ಭದ್ರವಾಗಿ ಇಡಲಾಗುತ್ತದೆ. ಹಳೆಯ ಜನಾಂಗದ ವಾಹನಗಳ ಬಗ್ಗೆ ತಿಳಿದುಕೊಳ್ಳಲು ಕುತೂಹಲವಿರುವ ವಿದ್ಯಾರ್ಥಿ ಹಾಗೂ ಉತ್ಸುಕರಿಗೆ ಇದು ಸ್ಮರಣೀಯ ಅನುಭವ ನೀಡುತ್ತದೆ.

ಪ್ರಸ್ತುತ ಲೇಖನದಲ್ಲಿ ಗೃಹ ಆಲಂಕಾರಕ್ಕೆ ಮೆರಗು ತುಂಬಿರುವ ಇಂತಹ ಹಳೆಯ ವಾಹನ ಅವುಗಳ ಬಿಡಿಭಾಗಗಳಿಂದ ನಿರ್ಮಿಸಿರುವ 15 ಅತ್ಯಂತ ಮನೋಹರ ಪೀಠೋಪಕರಣಗಳ ಬಗ್ಗೆ ಮಾಹಿತಿಯನ್ನು ಕೊಡಲಿದ್ದೇವೆ.

01. ಸ್ನೂಕರ್ ಟೇಬಲ್

01. ಸ್ನೂಕರ್ ಟೇಬಲ್

ಶ್ರೀಮಂತರು ತಮ್ಮ ಬಿಡುವಿನ ಸಮಯದಲ್ಲಿ ಸ್ನೂಕರ್ ಬಿಲಿಯರ್ಡ್ಸ್ ಮುಂತಾದ ಆಟಗಳಲ್ಲಿ ಮಗ್ನವಾಗಿರುತ್ತಾರೆ. ಇಂತಹದೊಂದು ಆಕರ್ಷಕ ಸ್ನೂಕರ್ ಟೇಬಲ್ ಹಳೆಯ ಫೋರ್ಡ್ ಮಸ್ಟಾಂಗ್ ನಿಂದ ನಿರ್ಮಿಸಿದರೆ ಹೇಗಿರಬಹುದು?

02. ಸೋಫಾ

02. ಸೋಫಾ

ಜಗಲಿಯಲ್ಲಿ ಆರಾಮವಾಗಿ ಕುಳಿತುಕೊಳ್ಳುವುದಕ್ಕೆ ಸೋಫಾ ಸೆಟ್ ಗಳನ್ನು ಅತ್ಯಂತ ಫಲಪ್ರದವಾಗಿ ಬಳಕೆ ಮಾಡಲಾಗಿದೆ. ಇಲ್ಲಿ ಹಳೆಯ ಷೆವರ್ಲೆ ಕಾರಿನ ಹಿಂಭಾಗವನ್ನು ವಿನೂತನ ರೀತಿಯಲ್ಲಿ ವಿಂಟೇಜ್ ಸೋಫಾ ಸೆಟ್ ರೂಪದಲ್ಲಿ ಮಾರ್ಪಾಡುಗೊಳಿಸಲಾಗಿದೆ.

03. ಕಾಫಿ ಟೇಬಲ್

03. ಕಾಫಿ ಟೇಬಲ್

ಇಂದೆಂಥ ಕಾರು ಪ್ರೇಮ ಎಂಬುದು ನಮಗೂ ಅರ್ಥವಾಗುತ್ತಿಲ್ಲ. ಅಪಘಾತವೊಂದರಲ್ಲಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿರುವ ಫೆರಾರಿ ಕಾರಿನ ಭಾಗಗಳನ್ನು ಕಾಫಿ ಟೇಬಲ್ ನಲ್ಲಿ ಭದ್ರವಾಗಿರಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

04. ಎಂಜಿನ್ ಅಲ್ಲ ಕಾಫಿ ಟೇಬಲ್

04. ಎಂಜಿನ್ ಅಲ್ಲ ಕಾಫಿ ಟೇಬಲ್

ಹಿಂದಿನ ಚಿತ್ರಪುಟದಲ್ಲಿ ನೋಡಿದ ಢಿಕ್ಕಿಯಾದ ಫೆರಾರಿ ಕಾರಿನ ಕಾಫಿ ಟೇಬಲ್ ಉತ್ತಮವೇ? ಅಥವಾ ಇದಕ್ಕಿಂತಲೂ ಅತ್ಯುತ್ತಮವಾದ ಮಗದೊಂದು ಕಾಫಿ ಟೇಬಲನ್ನು ನಿಮ್ಮ ಮುಂದಿಡಲಿದ್ದೇವೆ. ಇದನ್ನು ಹಳೆಯ ಜಾಗ್ವಾರ್ ಕಾರಿನ ವಿ12 ಎಂಜಿನ್ ಭಾಗಗಳಿಂದ ನಿರ್ಮಿಸಲಾಗಿದೆ.

05. ಸಸ್ಪೆನ್ಷನ್ ಸ್ಪ್ರಿಂಗ್ ನಿಂದಲೂ ಕಾಫಿ ಟೇಬಲ್

05. ಸಸ್ಪೆನ್ಷನ್ ಸ್ಪ್ರಿಂಗ್ ನಿಂದಲೂ ಕಾಫಿ ಟೇಬಲ್

ಇಲ್ಲಿಗೆ ಕಾಫಿ ಟೇಬಲ್ ಪ್ರೇಮ ಕಥೆ ಮುಗಿಯುವುದಿಲ್ಲ. ಕಾರಿನ ಸಸ್ಪೆನ್ಷನ್ ಸ್ಪ್ರಿಂಗ್ ನಿಂದ ಮಗದೊಂದು ಆಕರ್ಷಕ ಕಾಫಿ ಟೇಬಲ್ ತಯಾರಿಸಲಾಗಿದೆ.

06. ರೇಡಿಯೇಟರ್ ಗೂ ಕಾಫಿ ಟೇಬಲ್ ಸ್ಪರ್ಶ

06. ರೇಡಿಯೇಟರ್ ಗೂ ಕಾಫಿ ಟೇಬಲ್ ಸ್ಪರ್ಶ

ನಿಮಗೆಲ್ಲರಿಗೂ ಹಳೆಯ ರೋಲ್ಸ್ ರಾಯ್ಸ್ ಕಾರಿನ ಬಗ್ಗೆ ತಿಳಿದೇ ಇದೆ. ಇದೇ ಕಾರಿನ ರೇಡಿಯೇಟರ್ ನಿಂದ (ಶಾಖಪ್ರಸಾರಕ) ಮಗದೊಂದು ಕಾಫಿ ಟೇಬಲ್ ತಯಾರಿಸಲಾಗಿದೆ.

07. ಹ್ಯಾಂಡ್ ವಾಶ್ ಬೇಸಿನ್

07. ಹ್ಯಾಂಡ್ ವಾಶ್ ಬೇಸಿನ್

ಬಹುಶ: ಜಗತ್ತಿನ ಅತಿ ಅಂದವಾದ ಹ್ಯಾಂಡ್ ವಾಶ್ ಬೇಸಿನ್ ಇದೇ ಆಗಿರಬಹುದೇನೋ? ಇದನ್ನು ವೋಲ್ವೋದ ಹಳೆಯ ಕಾರಿನಿಂದ ನಿರ್ಮಿಸಲಾಗಿದೆ.

08. ಹಾಸಿಗೆ

08. ಹಾಸಿಗೆ

ಇದಕ್ಕಿಂತಲೂ ಸುಂದರವಾದ ಹಾಸಿಗೆ ನಿಮ್ಮಿಂದ ಹುಡುಕಲು ಸಾಧ್ಯವೇ? ವಿಶ್ವ ಪ್ರಖ್ಯಾತ ಕ್ಯಾಡಿಲಿಕ್ ಕಾರುಗಳಿಂದ ಇದನ್ನು ನಿರ್ಮಿಸಲಾಗಿದೆ.

09. ಹಾಸಿಗೆ

09. ಹಾಸಿಗೆ

ಹಳೆಯ ಮಿಟ್ಸುಬಿಸಿ ಕಾರಿನ ಮುಂಭಾಗವನ್ನು ಬಳಸಿಕೊಂಡು ಮಗದೊಂದು ಹಾಸಿಗೆಯು ಮಲಗುವ ಕೋಣೆಗೆ ಮತ್ತಷ್ಟು ಮೆರಗನ್ನು ತುಂಬಿದೆ.

10. ಕುರ್ಚಿ

10. ಕುರ್ಚಿ

ಕಾರಿನೊಳಗೆ ದೊರಕುವ ಅದೇ ಅನುಭವ ಪಡೆಯುವ ನಿಟ್ಟಿನಲ್ಲಿ ಸೀಟುಗಳನ್ನು ಹೊರತೆಗೆದು ಕುರ್ಚಿಗಳಿಗೆ ಜೋಡಣೆ ಮಾಡಲಾಗಿದೆ. ಇಲ್ಲಿ ಹಿಂಭಾಗದಲ್ಲಿ ಕಾರೊಂದನ್ನೇ ನೇತಾಡಿಸಿರುವುದನ್ನು ಗಮನಿಸಬಹುದಾಗಿದೆ.

11. ಗಡಿಯಾರ

11. ಗಡಿಯಾರ

ಇದೊಂದು ಹಳೆಯ ಕಾರಿನ ದಾಖಲಾತಿ ಪ್ಲೇಟ್ ಆಗಿದ್ದು, ಇಲ್ಲಿ ಇದನ್ನು ನಂಬರ್ ಪ್ಲೇಟ್ ರೂಪದಲ್ಲಿ ಬಳಕೆ ಮಾಡಲಾಗಿದೆ.

12. ಗ್ರಿಲ್

12. ಗ್ರಿಲ್

ಮೊದಲ ನೋಟದಲ್ಲಿ ಬೆರಗುಗೊಳಿಸುವುದಾದರೂ ಇದರ ಹಿಂದಿನ ಸೃಷ್ಟಿಯನ್ನು ಮೆಚ್ಚಲೇ ಬೇಕು. ಕಾರಿನ ಎಂಜಿನ್ ಭಾಗದಲ್ಲಿ ಬೆಂಕಿ ಉರಿಯುತ್ತಿದ್ದು, ಜ್ವಾಲೆಗಳು ಚಿಮ್ಮುವ ನೋಟ ಪ್ರಭಾವಶಾಲಿ ಎನಿಸಿಕೊಂಡಿದೆ.

13. ಕಪಾಟು

13. ಕಪಾಟು

ಮನೆಗಳಲ್ಲಿ ಮರದ ಕಪಾಟು ಸಾಮಾನ್ಯ ದೃಶ್ಯವಾಗಿದೆ. ಇಲ್ಲಿ ಹಳೆಯ ಜಾಗ್ವಾರ್ ಕಾರಿನ್ನೇ ಕಪಾಟು ರೂಪದಲ್ಲಿ ಬಳಕೆ ಮಾಡಲಾಗಿದ್ದು, ಪುಸಕ್ತಗಳನ್ನು ಸುಂದರವಾಗಿ ಮಡಚಿಡಲಾಗಿದೆ.

14. ಮೇಜು

14. ಮೇಜು

ಪ್ರತಿಯೊಬ್ಬರು ತಮ್ಮ ಅಭಿರುಚಿಗೆ ಅನುಸಾರವಾಗಿ ಮೇಜುಗಳನ್ನು ತಯಾರಿಸಲು ಬಯಸುತ್ತಾರೆ. ಹಾಗೆ ನಿಮ್ಮ ಕಚೇರಿ ಮೇಜು ನೀರಸಗೊಳಿಸುವುದಾದ್ದಲ್ಲಿ ಇಂತಹದೊಂದು ಹಳೆಯ ಮಿನಿ ಕಾರಿನ ಮೇಜನ್ನು ಬಳಕೆ ಮಾಡಬಹುದಾಗಿದೆ.

15. ಕ್ಯಾಬಿನ್

15. ಕ್ಯಾಬಿನ್

ಸಂಚರಿಸುವ ಬಸ್ಸಿನ ಅನುಭವ ನಿಮ್ಮ ಮನೆಯೊಳಗೂ ಭಾಸವಾಗಬೇಕಾದ್ದಲ್ಲಿ ಈ ಚಿತ್ರದಲ್ಲಿ ನೋಡುತ್ತಿರುವಂತೆಯೇ ಬಸ್ಸಿನ ಕ್ಯಾಬಿನ್ ರಚಿಸದರಾಯಿತು. ಇದು ನಿಮಗೂ ರಮ್ಯ ಅನುಭವ ನೀಡಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ.

More from DriveSpark

Article Published On: Saturday, March 5, 2016, 15:05 [IST]
English summary
15 Cool Furniture Made From Old Car Parts
Read more on ಕಾರು cars
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+