ಮನ ಸೊರೆಗೊಳ್ಳುವ ಪ್ರಪಂಚದ 15 ಗ್ಯಾರೇಜುಗಳು

By Nagaraja

ದೇಶದ ಸಾಮಾನ್ಯ ಪರಿಸ್ಥಿತಿಯನ್ನು ತೆರೆದು ನೋಡಿದಾಗ ಯಾರು ಗ್ಯಾರೇಜ್ ನಲ್ಲಿ ಕೆಲಸ ಮಾಡಲು ಇಷ್ಟಪಡುವುದಿಲ್ಲ. ದೇಶದ ಗ್ಯಾರೇಜುಗಳಲ್ಲಿನ ಕೆಲಸ ಪರಿಸ್ಥಿತಿ ಅತ್ಯಂತ ಕೆಟ್ಟಾದಾಗಿದ್ದು, ಗ್ರೀಸ್, ಆಯಿಲ್ ಗಳಿಂದ ಕೂಡಿದ ಬದುಕು ನರಕಯಾತನಕ್ಕೆ ಸಮವಾಗಿದೆ.

ಬಹುಶ: ಇದೇ ಕಾರಣಕ್ಕಾಗಿ ಆಗಿರಬಹುದು. "ಮಗ ಫೇಲಾದರೆ 10ನೇ ಕ್ಲಾಸಲ್ಲಿ ಗ್ಯಾರೇಜ್ ಗೆ ಮಗಳು ಫೇಲಾದರೆ ಮದುವೆಗೆ" ಎಂಬ ಹಳ್ಳಿ ಗಾದೆ ಹುಟ್ಟಿರುವುದು. ಆದರೆ ವಿದೇಶದ ಪರಿಸ್ಥಿತಿ ತೀರಾ ಭಿನ್ನವಾಗಿದೆ. ಈಗ ನಿಮ್ಮ ಮನಸೊರೆಗೊಳ್ಳುವ ಪ್ರಪಂಚದ 15 ಅತಿ ಮನೋಹರ ಗ್ಯಾರೇಜುಗಳ ಬಗ್ಗೆ ಚರ್ಚಿಸಲಿದ್ದೇವೆ.

15. ಆಟೋಮೋಟಾರ್ ಪ್ಲೆಕ್ಸ್

15. ಆಟೋಮೋಟಾರ್ ಪ್ಲೆಕ್ಸ್

ಅಮೆರಿಕದ ಮಿನ್ನೆಸೋಟಾ ಪ್ರಾಂತ್ಯದ ಮಿನ್ನಿಯಾಪೊಲಿಸ್ ನಗರವು ಅತ್ಯಾಕರ್ಷಕ ಐಷಾರಾಮಿ ಕಾರುಗಳ ಗ್ಯಾರೇಜನ್ನು ಹೊಂದಿದೆ. ಆಟೋಮೊಟಾರ್ ಪ್ಲೆಕ್ಸ್ ಎಂಬ ಹೆಸರಿನ ಇಲ್ಲಿನ ಗ್ಯಾರೇಜ್ ನಲ್ಲಿ ಕಾರು ಸಂಗ್ರಹಾಗಾರರಿಗೆ ತಮ್ಮ ಅತ್ಯಮೂಲ್ಯ ಕಾರು ಕಲೆಕ್ಷನ್ ಗಳನ್ನು ಬಾಡಿಗೆಗೆ ಇಡಬಹುದಾಗಿದೆ.

14. ಟಿ-ಬೋನ್ ಹೌಸ್

14. ಟಿ-ಬೋನ್ ಹೌಸ್

ಜರ್ಮನಿಯ ಸುಟ್ ಗಾರ್ಟ್ ನಲ್ಲಿರುವ ಈ ಕಾರು ಗ್ಯಾರೇಜ್ 'ಟಿ' ಆಕಾರದ ವಿನ್ಯಾಸದಿಂದಾಗಿಯೇ ಇಂತಹದೊಂದು ಹೆಸರನ್ನು ಗಿಟ್ಟಿಸಿಕೊಂಡಿದೆ. ಇದನ್ನು ಗಾಜುಗಳಿಂದ ಅತ್ಯಾಕರ್ಷಕವಾಗಿ ಆಲಂಕರಿಸಲಾಗಿದೆ.

13. ಸ್ಕುಬರ್ಟ್ ಹೌಸ್, ಲಾಸ್ ಏಂಜಲೀಸ್, ಕ್ಯಾಲಿಫೋರ್ನಿಯಾ

13. ಸ್ಕುಬರ್ಟ್ ಹೌಸ್, ಲಾಸ್ ಏಂಜಲೀಸ್, ಕ್ಯಾಲಿಫೋರ್ನಿಯಾ

ಲಿವಿಂಗ್ ಕೋಣೆಯನ್ನೇ ಗ್ಯಾರೇಜ್ ಆಗಿ ಪರಿವರ್ತಿಸಿರುವ ಹೋಲ್ಡರ್ ಶುಬರ್ಟ್ ಇಲ್ಲಿ ತಮ್ಮ ನೆಚ್ಚಿನ 1984ರ ಫೆರಾರಿ 512 ಬಿಬಿಐ ಬಾಕ್ಸರ್ ಕಾರನ್ನು ಇರಿಸಿದ್ದಾರೆ.

12. ಆಶ್ಲೇ ರೋಡ್, ಸಾಂಟಾ ಬರ್ಬರಾ, ಕ್ಯಾಲಿಫೋರ್ನಿಯಾ

12. ಆಶ್ಲೇ ರೋಡ್, ಸಾಂಟಾ ಬರ್ಬರಾ, ಕ್ಯಾಲಿಫೋರ್ನಿಯಾ

ನಿಮ್ಮ ಪ್ರಿಯತಮೆಗೆ ಸಮಾನವಾದ ಕಾರುಗಳನ್ನು ಬಿಟ್ಟಿರಲು ಸಾಧ್ಯವಿಲ್ಲದಿದ್ದರೆ ಕ್ಯಾಲಿಫೋರ್ನಿಯಾದ ಆಶ್ಲೇ ರೋಡ್ ನಲ್ಲಿರುವ ಗ್ಯಾರೇಜ್ ಇದಕ್ಕೊಂದು ಉದಾಹರಣೆಯಾಗಿರಲಿದೆ. ಇಲ್ಲಿ ಲಿವಿಂಗ್ ಕೋಣೆಯ ಐದು ಬೆಡ್ ರೂಂಗಳನ್ನು ಕಾರು ಸಂಗ್ರಹಾಲಯವಾಗಿ ಪರಿವರ್ತಿಸಲಾಗಿದೆ.

11. ವೆಸ್ಟ್ ಬೆಲ್ಲೆವ್ಯೂ, ವಾಷಿಂಗ್ಟನ್

11. ವೆಸ್ಟ್ ಬೆಲ್ಲೆವ್ಯೂ, ವಾಷಿಂಗ್ಟನ್

ಕಾರುಗಳನ್ನು ಸಂಗ್ರಹಿಸಿಡಲು ದೊಡ್ಡ ಗ್ಯಾರೇಜ್ ನ ಅಗತ್ಯವಿರುದಿಲ್ಲ. ವಾಷಿಂಗ್ಟನ್ ನ ವೆಸ್ಟ್ ಬೆಲ್ಲೆವ್ಯೂನಲ್ಲಿ ಎರಡು ಬೆಡ್ ರೂಂಗಳನ್ನು ಜೋಡಣೆ ಮಾಡಿಸಿ 16 ಕಾರುಗಳನ್ನು ನಿಲುಗಡೆಗೊಳಿಸಲಾಗಿದೆ.

10. ಕ್ರೆ ಹೌಸ್, ಟೊಕಿಯೋ ಜಪಾನ್

10. ಕ್ರೆ ಹೌಸ್, ಟೊಕಿಯೋ ಜಪಾನ್

ಜಪಾನ್ ವಾಸ್ತುಶಿಲ್ಪಿ ನಂಬರ್ ಫೈವ್ಸ್ ಎಂಬವರು ಕ್ರೆ ಹೌಸ್ ವಿನ್ಯಾಸಗೊಳಿಸಿದ್ದಾರೆ. ಇಲ್ಲಿ ಬೇಸ್ ಮೆಂಟ್ ನಲ್ಲಿ ನಿಲುಗಡೆಗೊಳಿಸಲಾದ ನಿಮ್ಮ ನೆಚ್ಚಿನ ಕಾರು ಲಿಫ್ಟ್ ಮುಖಾಂತರ ನಿಮ್ಮ ಲಿವಿಂಗ್ ಕೋಣೆಯನ್ನು ತಲುಪಲಿದೆ.

09. ಮಾರ್ಬೆಲ್ಲಾ, ಸ್ಪೇನ್

09. ಮಾರ್ಬೆಲ್ಲಾ, ಸ್ಪೇನ್

ವಾಸ್ತುಶಿಲ್ಪಿಯ ಸಲಹೆ ಹಾಗೂ ಸ್ವಲ್ಪ ಬೆಳಕಿನ ಸಂಯೋಜನೆ ಇದ್ದರೆ ಸಾಕು ಎರಡು ಕಾರುಗಳನ್ನು ನಿಲುಗಡೆಗೊಳಿಸಲು ಇದು ಬೇಕಾದಷ್ಟಾಗಿದೆ.

08. ಅಸಹಿಕವಾ ಗ್ಯಾರೇಜ್, ಜಪಾನ್

08. ಅಸಹಿಕವಾ ಗ್ಯಾರೇಜ್, ಜಪಾನ್

ಜಪಾನ್ ನ ಹೊಕ್ಕಾಯಿಡೊದಲ್ಲಿರುವ ಅಸಹಿಕವಾ ಆಧುನಿಕ ಕಾಂಕ್ರೀಟ್ ಗ್ಯಾರೇಜ್ ಆಗಿದೆ. ಇಲ್ಲೂ ಸಹ ಲಿವಿಂಗ್ ಹಾಗೂ ಬೆಡ್ ರೂಂಗಳನ್ನು ಗ್ಯಾರೇಜ್ ಗಳಾಗಿ ಪರಿವರ್ತಿಸಲಾಗಿದೆ.

 07. ಫೇರ್ ಫೀಲ್ಡ್ ಕಂಟ್ರಿ, ಕನೆಕ್ಟಿಕಟ್

07. ಫೇರ್ ಫೀಲ್ಡ್ ಕಂಟ್ರಿ, ಕನೆಕ್ಟಿಕಟ್

ಅಲ್ಟಿಮೇಟ್ ಮಾನವ ಗುಹೆ ಎಂದೇ ಪರಿಗಣಿಸಲಾಗಿರುವ ಇಲ್ಲಿನ ಕನೆಕ್ಟಿಕಟ್ ಗ್ಯಾರೇಜು ಮನೆಯನ್ನು ಒಂದು ಮಿಲಿಯನ್ ಅಮೆರಿಕನ್ ಡಾಲರ್ ವೆಚ್ಚದಲ್ಲಿ ನಿರ್ಮಿಸಲಾಗಿದೆ.

06. ಹ್ಯಾಮಿಲ್ಟನ್ ಸ್ಕಾಟ್ಸ್ ರೈನ್ ವುಡ್, ಸಿಂಗಾಪುರ

06. ಹ್ಯಾಮಿಲ್ಟನ್ ಸ್ಕಾಟ್ಸ್ ರೈನ್ ವುಡ್, ಸಿಂಗಾಪುರ

ಅತಿ ಹೆಚ್ಚು ಜನ ಸಾಂದ್ರತೆ ಹೊಂದಿರುವ ನಗರಗಳಲ್ಲಿ ಒಂದಾಗಿರುವ ಸಿಂಗಾಪುರದಲ್ಲಿ ಬೃಹತ್ ಗ್ಯಾರೇಜು ಕಾಣಸಿಗುವುದು ಕಷ್ಟಕರ. ಆದರೆ ಗಾಜಿನಿಂದ ಆವರಿಸ್ಪಟ್ಟ ಈ ಲಿವಿಂಗ್ ರೂಂ ಕಾರು ಪಾರ್ಕಿಂಗ್ ಗೆ ಅಂದತೆಯನ್ನು ನೀಡುತ್ತದೆ.

05. ಟೊಕಿಯೋ, ಜಪಾನ್

05. ಟೊಕಿಯೋ, ಜಪಾನ್

ವಿಶಿಷ್ಟ ವಿನೂತನ ಗ್ಯಾರೇಜುಗಳಿಗೆ ಇದು ಒಂದು ಉದಾಹರಣೆಯಾಗಿದೆ. ವಾಸ್ಪುಶಿಲ್ಪಿ ಕೆಂಜಿ ಯನಗಾವಾ ಇದಕ್ಕೊಂದು ನಿರೂಪಣೆ ಬರೆದಿದ್ದಾರೆ. ಮನೆಯ ಮೇಲೆ ನಿರ್ಮಿಸಲಾದ ಈ ಚೊಕ್ಕ ಮೂರು ಅಂತಸ್ತಿನ ಕಾರು ಪಾರ್ಕಿಂಗ್ ಹೆಚ್ಚು ಆಕರ್ಷಣೆಯನ್ನುಂಟು ಮಾಡುತ್ತಿದೆ.

04. ಪಾಯಿಂಟ್ ಡ್ಯೂಮ್, ಮಲಿಬು, ಕ್ಯಾಲಿಫೋರ್ನಿಯಾ

04. ಪಾಯಿಂಟ್ ಡ್ಯೂಮ್, ಮಲಿಬು, ಕ್ಯಾಲಿಫೋರ್ನಿಯಾ

ಇದು ಕ್ಯಾಲಿಫೋರ್ನಿಯಾದಲ್ಲಿ ಕಂಡುಬಂದಿರುವ ಮಗದೊಂದು ಆಖರ್ಷಕ ಗ್ಯಾರೇಜ್ ಆಗಿದೆ. 7002 ಚದರ ಅಡಿ ಪ್ರದೇಶದಲ್ಲಿ ಈ ಆಟೋ ಮ್ಯೂಸಿಯಂ ರಚಿಸಲಾಗಿದೆ.

03. ಜೆರ್ರಿ ಸೀನ್ ಫೆಲ್ಡ್ ಗ್ಯಾರೇಜು, ನ್ಯೂಯಾರ್ಕ್

03. ಜೆರ್ರಿ ಸೀನ್ ಫೆಲ್ಡ್ ಗ್ಯಾರೇಜು, ನ್ಯೂಯಾರ್ಕ್

ಜೆರ್ರಿ ಸೀನ್ ಫೆಲ್ಡ್ ನಿರ್ಮಿಸಿರುವ ಈ 47 ಕಾರುಗಳ ಗ್ಯಾರೇಜು ಜಗತ್ತಿನ ಅತಿ ದೊಡ್ಡ ಕಾರು ಹಾಗೂ ದುಬಾರಿ ಗ್ಯಾರೇಜುಗಳಲ್ಲಿ ಒಂದಾಗಿದೆ.

02. ಹಿಲ್ ಕ್ರೆಸ್ಟ್ ರೋಡ್, ಬೆವರ್ಲಿ ಹಿಲ್ಸ್, ಕ್ಯಾಲಿಫೋರ್ನಿಯಾ

02. ಹಿಲ್ ಕ್ರೆಸ್ಟ್ ರೋಡ್, ಬೆವರ್ಲಿ ಹಿಲ್ಸ್, ಕ್ಯಾಲಿಫೋರ್ನಿಯಾ

ಬೆವರ್ಲಿ ಬೆಟ್ಟದ ತುದಿಯಲ್ಲಿರುವ ಈ ಗ್ಯಾರೇಜಿನ ಒಂದು ಬದಿಯಲ್ಲಿ ಈಜುಕೊಳದ ವ್ಯವಸ್ಥೆಯಿರುತ್ತದೆ. ಇದು ಜಗತ್ತಿನ ಅತಿ ಐಷಾರಾಮಿ ಕಾರು ಗ್ಯಾರೇಜುಗಳಲ್ಲಿ ಒಂದಾಗಿದೆ.

01. ಗ್ಯಾರೇಜ್ ನಟೆಲಿಯರ್, ಹೆರ್ನ್ ಡೆರ್ನ್, ಸ್ವಿಜರ್ಲೆಂಡ್

01. ಗ್ಯಾರೇಜ್ ನಟೆಲಿಯರ್, ಹೆರ್ನ್ ಡೆರ್ನ್, ಸ್ವಿಜರ್ಲೆಂಡ್

ಪೀಟರ್ ಕುನ್ಜ್ ಎಂಬವರಿಂದ ವಿನ್ಯಾಸಗೊಳಿಸಲ್ಪಟ್ಟ ಈ ಸುಂದರ ಗ್ಯಾರೇಜ್ ವಿಶಿಷ್ಟ ವಿನ್ಯಾಸವನ್ನು ಪಡೆದುಕೊಂಡಿದೆ. ಬೆಟ್ಟವನ್ನು ಆವರಿಸಿದ ಹುಲ್ಲು, ಮರಗಳು ಹಾಗೂ ಹೂಗಳ ತಂಪಾದ ಸ್ಪರ್ಶದ ನಡುವೆ ಇದನ್ನು ಹುಟ್ಟುಹಾಕಿರುವುದರಿಂದ ಅತಿ ಹೆಚ್ಚು ಮೆಚ್ಚುಗೆಗೆ ಪಾತ್ರವಾಗಿದೆ.

More from DriveSpark

Article Published On: Wednesday, April 1, 2015, 14:18 [IST]
English summary
Here are 15 garages from all corners of the world that will blow your mind.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+