ಬಜಾಜ್ ಚೇತಕ್ ಸ್ಕೂಟರ್ ಮುಂಭಾಗದಿಂದ ಮಾಡಿಫೈಗೊಂಡ ವಿಶಿಷ್ಟವಾದ ಸೈಕಲ್

80ರ ದಶಕದಲ್ಲಿ ಬಜಾಜ್ ಚೇತಕ್ ಭಾರತೀಯರ ಮೆಚ್ಚಿನ ಸಾರಥಿಯಾಗಿತ್ತು. ದಶಕಗಳ ಕಾಲ ಮಿಂಚಿ ಮರೆಯಾದ ಬಜಾಜ್ ಚೇತಕ್ ಇಂದಿಗೂ ಅದರ ಜನಪ್ರಿಯತೆ ಕಡಿಮೆಯಾಗಿಲ್ಲ. ಇಂದಿಗೂ ಚೇತಕ್ ಸ್ಕೂಟರ್‌ಗೆ ದೇಶಾದ್ಯಂತ ದೊಡ್ಡ ಅಭಿಮಾನಿ ವರ್ಗವಿದೆ.

ಇದು ಬಜಾಜ್ ಚೇತಕ್ ಸ್ಕೂಟರ್ ಅಲ್ಲ ಚೆಸೈ ಸೈಕಲ್

ಅದೇ ರೀತಿ ಕೇರಳ ಮೂಲದ 15 ವರ್ಷದ ಬಾಲಕ ಚೇತಕ್ ಸ್ಕೂಟರ್ ದೊಡ್ಡ ಅಭಿಮಾನಿಯಾಗಿದ್ದಾನೆ. ಇದೇ ಕಾರಣದಿಂದ ಬಾಲಕ ಚೇತಕ್ ಸ್ಕೂಟರ್ ಅನ್ನು ಸೈಕಲ್ ಮಾದರಿಯಲ್ಲಿ ಮಾಡಿಫೈಗೊಳಿಸಿದ್ದಾನೆ, ಈ ಅನನ್ಯವಾಗಿ ಕಾಣುವ ಸೈಕಲ್ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ಯೂಟ್ಯೂಬರ್ ಮಾತನಾಡುವಾಗ ಹಳದಿ ಬಣ್ಣದ ಚೇತಕ್ ಸ್ಕೂಟರ್ ಅವನ ಹತ್ತಿರ ಬರುತ್ತದೆ. ಈ ಚೇತಕ್ ಸ್ಕೂಟರ್ ಅನ್ನು 15 ವರ್ಷದ ಬಾಲಕ ಅದಿತ್ ಓಡಿಸುತ್ತಿದ್ದ.

ಇದು ಬಜಾಜ್ ಚೇತಕ್ ಸ್ಕೂಟರ್ ಅಲ್ಲ ಚೆಸೈ ಸೈಕಲ್

ಅವನು ಹತ್ತಿರ ಬಂದಾಗ ಏಕೆ ಹೆಲ್ಮೆಟ್ ಧರಿಸುವುದಿಲ್ಲ ಯೂಟ್ಯೂಬರ್ ಕೇಳುತ್ತಾನೆ. ಆಗ ಆ ಬಾಲಕ ಇದಕ್ಕೆ ಹೆಲ್ಮೆಟ್ ಅಗತ್ಯವಿಲ್ಲ ಎಂದು ಹೇಳುತ್ತಾನೆ. ಅವನಿಗೆ ಹೆಲ್ಮೆಟ್ ಅಗತ್ಯವಿಲ್ಲದಿರುವ ಕಾರಣವನ್ನು ವಿವರಿಸುತ್ತಾನೆ.

ಇದು ಬಜಾಜ್ ಚೇತಕ್ ಸ್ಕೂಟರ್ ಅಲ್ಲ ಚೆಸೈ ಸೈಕಲ್

ಅವನು ಸವಾರಿ ಮಾಡುತ್ತಿರುವ ಚೇತಕ್ ಸ್ಕೂಟರ್ ವಾಸ್ತವವಾಗಿ ಸ್ಕೂಟರ್ ಅಲ್ಲ. ಇದು ಚೇತಕ್ ಸ್ಕೂಟರ್ ಫ್ರಂಟ್ ಎಂಡ್ ಹೊಂದಿರುವ ಸೈಕಲ್ ಆಗಿದೆ. ದೂರದಿಂದ ನೋಡಿದರೆ ಅದು ಬಜಾಜ್ ಚೇತಕ್ ಮಾತ್ರ. ನೀವು ಸೈಡ್ ಪ್ರೊಫೈಲ್ ಅನ್ನು ನೋಡಿದಾಗ ಮಾತ್ರ ಅದು ಸೈಕಲ್ ಎಂಬುವುದು ತಿಳಿಯುತ್ತದೆ.

ಇದು ಬಜಾಜ್ ಚೇತಕ್ ಸ್ಕೂಟರ್ ಅಲ್ಲ ಚೆಸೈ ಸೈಕಲ್

ಈ ಸೈಕಲ್ ಅನ್ನು ರಸ್ತೆಯಲ್ಲಿ ಸಾಗುತ್ತಿದ್ದ ಹಲವಾರು ಕುತೂಹಲದಿಂದ ನೋಡುತ್ತಾರೆ. ಇನ್ನು ಕೆಲವರು ಆತನ ಸೈಕಲ್ ಬಳಿ ತೆರಳಿ ಸೆಲ್ಫಿ ಕ್ಲೀಕಿಸುತ್ತಿದ್ದಾರೆ. ಸಾಗುವ ದಾರಿಯಲ್ಲಿ ಜನರು ತಡೆದು ಸೆಲ್ಫಿಯನ್ನು ಕ್ಲೀಕಿಸುತ್ತಾರೆ ಎಂದು ವೀಡೀಯೋದಲ್ಲಿ ಹೇಳಿದ್ದಾನೆ.

ಇದು ಬಜಾಜ್ ಚೇತಕ್ ಸ್ಕೂಟರ್ ಅಲ್ಲ ಚೆಸೈ ಸೈಕಲ್

ಇನ್ನು ಹಲವು ಕಡೆಗಳಲ್ಲಿ ಪೊಲೀಸರು ಸ್ಕೂಟರ್ ಎಂದು ಭಾವಿಸಿ ಬಾಲಕನನ್ನು ತಡೆದಿದ್ದಾರೆ. ಅದರೆ ಹಿಂಭಾಗ ನೋಡಿ ಸೈಕಲ್ ಎಂದು ತಿಳಿದ ಮೇಲೆ ಮುಂದೆ ಸಾಗಲು ಅನುಮತಿಸಿದ್ದಾರೆ.

ಇದು ಬಜಾಜ್ ಚೇತಕ್ ಸ್ಕೂಟರ್ ಅಲ್ಲ ಚೆಸೈ ಸೈಕಲ್

ಆದಿತ್ ಎಂಬ ಬಾಲಕ ಬಜಾಜ್ ಚೇತಕ್ ದೊಡ್ಡ ಅಬಿಮಾನಿಯಾಗಿದ್ದಾನೆ. ಬಾಲಕನ ತಂದೆ ಮತ್ತು ಇತರ ಸಂಬಂಧಿಕರು ಚೇತಕನ್ನು ಹೊಂದಿದ್ದರು ಎಂದು ಹೇಳುತ್ತಾನೆ. ಅಲ್ಲದೇ ಚೇತಕ್ ಸ್ಕೂಟರ್ ಜೊತೆ ಭಾವನಾತ್ಮಕ ಬಂಧವಿದೆ ಎಂದು ಹೇಳುತ್ತಾನೆ.

ಇದು ಬಜಾಜ್ ಚೇತಕ್ ಸ್ಕೂಟರ್ ಅಲ್ಲ ಚೆಸೈ ಸೈಕಲ್

ಅದಿತ್ ಕೇವಲ 15 ವರ್ಷ ವಯಸ್ಸಾಗಿರುವುದರಿಂದ ಕನೂನಿನ ಪ್ರಕಾರ ದ್ವಿಚಕ್ರ ವಾಹನವನ್ನು ಚಲಾಯಿಸಲು ಸಾಧ್ಯವಿಲ್ಲ. ಆದ್ದರಿಂದ ಅದಿತ್ ಚೇತಕ್‌ನ ಮುಂಭಾಗದ ತುದಿಯನ್ನು ತಮ್ಮ ಸೈಕಲ್‌ಗೆ ಜೋಡಿಸುವ ಈ ಆಲೋಚನೆ ಮಾಡಿದ್ದಾನೆ.

ಇದು ಬಜಾಜ್ ಚೇತಕ್ ಸ್ಕೂಟರ್ ಅಲ್ಲ ಚೆಸೈ ಸೈಕಲ್

ನಂತರ ಇದಕ್ಕೆ 'ಚೆಸೈ' ಎಂಬ ಹೆಸರನ್ನು ನೀಡಿದ್ದಾನೆ. ಚೆಸೈ ಅಂದರೆ ಚೇತಕ್ + ಸೈಕಲ್ ಎಂದರ್ಥ. ಈ ಚೆಸೈ ಮುಂಭಾಗ ಹಳದಿ ಬಣ್ಣದಿಂದ ಕೂಡಿದೆ. ಅಲ್ಲದೇ ಅದಿತ್ ಆಲ್-ಇಂಡಿಯಾ ಪ್ರವಾಸ ತೆರಳಲು ಪ್ಲಾನ್ ಮಾಡಿದ್ದಾನೆ.

ಇದು ಬಜಾಜ್ ಚೇತಕ್ ಸ್ಕೂಟರ್ ಅಲ್ಲ ಚೆಸೈ ಸೈಕಲ್

ಅದಕ್ಕೆ ಚೈಸೈ ಸೈಕಲ್ ನಲ್ಲಿ ಎಲೆಕ್ಟ್ರಿಕ್ ಮೋಟರ್ ಅನ್ನು ಅಳವಡಿಸಿ ಪ್ರವಾಸ ತೆರಳಲು ಪ್ಲಾನ್ ಮಾಡಿದ್ದಾನೆ. ಅದರೆ ಆತನ ಬಳಿ ಎಲೆಕ್ಟ್ರಿಕ್ ಮೋಟರ್ ಅನ್ನು ಅಳವಡಿಸುವಷ್ಟು ಹಣವಿಲ್ಲ. ದಾನಿಗಳ ನೆರವಿನಿಂದ ಎಲೆಕ್ಟ್ರಿಕ್ ಮೋಟಾರ್ ಅನ್ನು ಅಳವಡಿಸಬೇಕಾಗಿದೆ.

ಇದು ಬಜಾಜ್ ಚೇತಕ್ ಸ್ಕೂಟರ್ ಅಲ್ಲ ಚೆಸೈ ಸೈಕಲ್

ಈ ಸೈಕಲ್ ನಲ್ಲಿ ಎಲೆಕ್ಟ್ರಿಕ್ ಮೋಟರ್ ಅನ್ನು ಅಳವಡಿಸಿದ ಬಳಿಕ ಆಲ್-ಇಂಡಿಯಾ ಪ್ರವಾಸ ತೆರಳುದಾಗಿ ಆದಿತ್ ಈ ವೀಡಿಯೋದಲ್ಲಿ ಹೇಳಿದ್ದಾನೆ. ಹಲವರು ಈ ಬಾಲಕನಿಗೆ ಶುಭಾಶಯವನ್ನು ಕೋರಿದ್ದಾರೆ, ಇನ್ನು ಕೆಲವರು ಇತನಿಗೆ ಚೇತಕ್ ಸ್ಕೂಟರ್ ಮೇಲೆ ಇರುವ ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದು ಬಜಾಜ್ ಚೇತಕ್ ಸ್ಕೂಟರ್ ಅಲ್ಲ ಚೆಸೈ ಸೈಕಲ್

ಇನ್ನು ಬಜಾಜ್ ಚೇತಕ್ ಸ್ಕೂಟರ್ ಬಗ್ಗೆ ಹೇಳುವುದಾದರೆ, ಬಜಾಜ್ ಆಟೋ ಕಂಪನಿಯು 1972 ರಲ್ಲಿ ಚೇತಕ್ ಸ್ಕೂಟರ್‍ ಅನ್ನು ಮೊದಲ ಬಾರಿಗೆ ಬಿಡುಗಡೆಗೊಳಿಸಿತ್ತು ಮತ್ತು ಇದು ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿತು.

ಇದು ಬಜಾಜ್ ಚೇತಕ್ ಸ್ಕೂಟರ್ ಅಲ್ಲ ಚೆಸೈ ಸೈಕಲ್

ಈ ಜನಪ್ರಿಯ ಸ್ಕೂಟರ್‍‍ಗೆ ಚೇತಕ್ ಎಂಬ ಹೆಸರಿನ ಹಿಂದೆ ರೋಚಕ ಇತಿಹಾಸವಿದೆ. ಅದು ರಾಜಸ್ಥಾನದ ಮೇವಾರದ 13ನೇ ರಾಜ ಮಹಾರಾಣಾ ಪ್ರತಾಪ್ ಹಲ್ದಿಘಾಟ್ ಯುದ್ದದಲ್ಲಿ ಚೇತಕ್ ಅನ್ನೋ ಹೆಸರಿನ ಕುದುರೆಯನ್ನು ಬಳಸಿದ್ದರು. ಈ ಯುದ್ದದಲ್ಲಿ ಮಹಾರಾಣಾ ನೆಚ್ಚಿನ ಕುದುರೆ ಚೇತಕ್ ಸಾವನ್ನಪ್ಪಿತ್ತು. ರಾಜಸ್ಥಾನ ಬಲಿಚಾ ಗ್ರಾಮದಲ್ಲಿ ಈ ಕುದುರೆಯ ಸ್ಮಾರಕವನ್ನು ನಿರ್ಮಿಸಿದ್ದಾರೆ. ಇದೇ ಐತಿಹಾಸಿಕ ಕುದುರೆಯ ಹೆಸರನ್ನು ಬಜಾಜ್‍ನ ಸ್ಕೂಟರ್‍‍ಗೆ ಇಡಲಾಗಿದೆ.

ಇದು ಬಜಾಜ್ ಚೇತಕ್ ಸ್ಕೂಟರ್ ಅಲ್ಲ ಚೆಸೈ ಸೈಕಲ್

80ರ ದಶಕದಲ್ಲಿ ಭಾರತೀಯರ ನೆಚ್ಚಿನ ಸ್ಕೂಟರ್ ಆಗಿದ್ದ ಈ ಚೇತಕ್ ಅನ್ನು ಎಲೆಕ್ಟ್ರಿಕ್ ಅವತಾರದಲ್ಲಿ ಕಳೆದ ವರ್ಷದಲ್ಲಿ ಬಜಾಜ್ ಕಂಪನಿಯು ಬಿಡುಗಡೆಗೊಳಿಸಿದ್ದರು. ಈ ಐಕಾನಿಕ್ ಚೇತಕ್ ಸ್ಕೂಟರ್ ಅನ್ನು ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಗೊಳಿಸುವ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸಂಚಲವನ್ನು ಮೂಡಿಸುವ ಪ್ರಯತ್ನವನ್ನು ಬಜಾಜ್ ಕಂಪನಿಯು ಮಾಡಿತು. ಆದರೆ ಅದರಲ್ಲಿ ದೊಡ್ಡ ಯಶಸ್ವಿಯನ್ನು ಕಂಡಿಲ್ಲ.

Image Courtesy: Madhurification Hangout

Most Read Articles

Kannada
English summary
Bajaj Chetak In Front, Cycle In The Back. Read In Kananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X