ಅತಿ ವೇಗದ ವಾಹನಗಳ ಸ್ಪರ್ಧೆಯಲ್ಲಿ ಹೊಸ ವಿಶ್ವ ದಾಖಲೆ ಬರೆದ 16 ವರ್ಷದ ಬಾಲಕಿ

ಉತ್ತರ ಅಮೆರಿಕಾದ 16 ವರ್ಷದ ಬಾಲಕಿ ಕ್ಲೋಯ್ ಚೇಂಬರ್ಸ್, ಅತಿ ವೇಗದ ವಾಹನಗಳ ರೇಸ್​ನಲ್ಲಿ ಹೊಸ ದಾಖಲೆ ಬರೆಯುವ ಮೂಲಕ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಗೆ ಸೇರ್ಪಡೆಯಾಗಿದ್ದಾರೆ. ಕ್ಲೋಯ್ ಚೇಂಬರ್ಸ್, ಪೋರ್ಷೆ 718 ಸ್ಪೈಡರ್‌ ಕಾರಿನಲ್ಲಿ ಕೇವಲ 47.45 ಸೆಕೆಂಡುಗಳಲ್ಲಿ 51 ಕೋನ್‌ಗಳನ್ನು ದಾಟಿದ್ದಾರೆ.

ಅತಿ ವೇಗದ ವಾಹನಗಳ ಸ್ಪರ್ಧೆಯಲ್ಲಿ ಹೊಸ ವಿಶ್ವ ದಾಖಲೆ ಬರೆದ 16 ವರ್ಷದ ಬಾಲಕಿ

ಈ ಸ್ಪರ್ಧೆಯನ್ನು ವಿಮಾನ ನಿಲ್ದಾಣದ ರನ್ ವೇಯಲ್ಲಿ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ 50 ಅಡಿಗೆ ಒಂದರಂತೆ ಕೋನ್ ಗಳನ್ನು ಇರಿಸಲಾಗಿತ್ತು. ಕ್ಲೋಯ್ಈ 51 ಕೋನ್ ಗಳನ್ನು ಕಡಿಮೆ ಸಮಯದಲ್ಲಿ ದಾಟಿದ್ದಾರೆ. ವೃತ್ತಿಪರ ರೇಸರ್ ಆಗಿರುವ ಕ್ಲೋಯ್, ಕಾರು ರೇಸಿಂಗ್ ಚಾಂಪಿಯನ್‌ಶಿಪ್‌ಗಳಲ್ಲಿ 7 ವರ್ಷಗಳ ಅನುಭವ ಹೊಂದಿದ್ದಾರೆ. ಕ್ಲೋಯ್ ಹಲವಾರು ಕಾರ್ಟಿಂಗ್ ರೇಸ್ ಗಳನ್ನು ಸಹ ಗೆದ್ದಿದ್ದಾರೆ

ಅತಿ ವೇಗದ ವಾಹನಗಳ ಸ್ಪರ್ಧೆಯಲ್ಲಿ ಹೊಸ ವಿಶ್ವ ದಾಖಲೆ ಬರೆದ 16 ವರ್ಷದ ಬಾಲಕಿ

ಈ ಸ್ಪರ್ಧೆಯನ್ನು ಜಯಿಸುವುದು ಸುಲಭವಾಗಿರಲಿಲ್ಲವೆಂದು ಕ್ಲೋಯ್ ಹೇಳಿದ್ದಾರೆ. ಟ್ರ್ಯಾಕ್ ನಲ್ಲಿಟ್ಟಿದ್ದ 51 ಕೋನ್ ಗಳು 51 ನಿರ್ಬಂಧಗಳಾಗಿದ್ದವು ಎಂದು ಹೇಳಿದ ಅವರು ಸ್ಪರ್ಧೆಯನ್ನು ಆರಂಭಿಸಿದಾಗ ತಾನು ತೀವ್ರ ಒತ್ತಡದಲ್ಲಿದ್ದೆ ಎಂದು ಹೇಳಿದ್ದಾರೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಅತಿ ವೇಗದ ವಾಹನಗಳ ಸ್ಪರ್ಧೆಯಲ್ಲಿ ಹೊಸ ವಿಶ್ವ ದಾಖಲೆ ಬರೆದ 16 ವರ್ಷದ ಬಾಲಕಿ

ಈ ಸಾಧನೆ ಮಾಡಲು ತಮಗೆ ಪೋರ್ಷೆ 718 ಸ್ಪೈಡರ್ ಕಾರು ನೆರವಾಯಿತು ಎಂದು ಅವರು ಹೇಳಿದರು. ಈ ಸ್ಪರ್ಧೆಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ ಎಂದು ತಮಗೆ ಅನಿಸಿರಲಿಲ್ಲವೆಂದು ಕ್ಲೋಯ್ ತಿಳಿಸಿದ್ದಾರೆ.

ಅತಿ ವೇಗದ ವಾಹನಗಳ ಸ್ಪರ್ಧೆಯಲ್ಲಿ ಹೊಸ ವಿಶ್ವ ದಾಖಲೆ ಬರೆದ 16 ವರ್ಷದ ಬಾಲಕಿ

ಪೋರ್ಷೆ 718 ಸ್ಪೈಡರ್ ಕಾರನ್ನು ಈ ವರ್ಷದ ಆಗಸ್ಟ್‌ ತಿಂಗಳಿನಲ್ಲಿ ಬಿಡುಗಡೆಗೊಳಿಸಲಾಯಿತು. ಈ ಕಾರಿನಲ್ಲಿ ಅಳವಡಿಸಿರುವ 4.0-ಲೀಟರಿನ ಆರು ಸಿಲಿಂಡರ್ ಪೆಟ್ರೋಲ್ ಎಂಜಿನ್ 414 ಬಿಹೆಚ್‌ಪಿ ಪವರ್ ಹಾಗೂ 420 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಪೋರ್ಷೆ 718 ಸ್ಪೈಡರ್ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 301 ಕಿ.ಮೀಗಳಾಗಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಈ ಕಾರು ಕೇವಲ 4.4 ಸೆಕೆಂಡುಗಳಲ್ಲಿ ಗಂಟೆಗೆ 0-100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. ಪೋರ್ಷೆ 718 ಸ್ಪೈಡರ್ ಕಾರು ಸ್ಥಿರತೆ ನಿರ್ವಹಣೆ, ಟಾರ್ಕ್ ನಿರ್ವಹಣೆ ಹಾಗೂ ಉತ್ತಮ ಬ್ರೇಕಿಂಗ್‌ಗಾಗಿ ಆಧುನಿಕ ಟೆಕ್ನಾಲಜಿಯನ್ನು ಬಳಸುತ್ತದೆ. ಈ ಕಾರಿನಲ್ಲಿ ಅತ್ಯುತ್ತಮವಾದ ಬ್ರೇಕಿಂಗ್ ಗಳಿಗಾಗಿ ಅಲ್ಯೂಮಿನಿಯಂ ಕ್ಯಾಲಿಪರ್ ಡಿಸ್ಕ್ ಬ್ರೇಕ್‌ಗಳನ್ನು ಅಳವಡಿಸಲಾಗಿದೆ.

ಅತಿ ವೇಗದ ವಾಹನಗಳ ಸ್ಪರ್ಧೆಯಲ್ಲಿ ಹೊಸ ವಿಶ್ವ ದಾಖಲೆ ಬರೆದ 16 ವರ್ಷದ ಬಾಲಕಿ

ಪೋರ್ಷೆ ಕಂಪನಿಯು ಭಾರತದಲ್ಲಿ 718 ಸ್ಪೈಡರ್ ಕಾರಿನ ಜೊತೆಗೆ ಪೋರ್ಷೆ ಕೇಮನ್ ಜಿಟಿ 4 ಕಾರನ್ನು ಸಹ ಬಿಡುಗಡೆಗೊಳಿಸಿದೆ. ಪೋರ್ಷೆ 718 ಸ್ಪೈಡರ್ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.1.59 ಕೋಟಿಗಳಾದರೆ, ಕೇಮನ್ ಜಿಟಿ 4 ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.1.63 ಕೋಟಿಗಳಾಗಿದೆ. ಲಘು ತೂಕವನ್ನು ಹೊಂದಿರುವ ಪೋರ್ಷೆ 718 ಸ್ಪೈಡರ್ ಕನ್ವರ್ಟಿಬಲ್ ಕಾರಿನ ರೂಫ್ ಅನ್ನು ಬಟನ್ ಒತ್ತುವ ಮೂಲಕ ಮುಚ್ಚಬಹುದು.

Most Read Articles

Kannada
English summary
16 year old girl creates world record in fastest vehicle race. Read in Kannada.
Story first published: Tuesday, September 8, 2020, 20:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X