ಅದೃಷ್ಟವೆಂದರೆ ಈ ಹುಡುಗಿಯದ್ದು! ರೂ.50 ಲಕ್ಷದ ಬೆಂಝ್ ಕಾರು, ಕೇವಲ ರೂ.100ಕ್ಕೆ ಸಿಕ್ಕಿತು!

ಕೆಲವರು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಶ್ರಮವನ್ನು ನಂಬದರೆ, ಇನ್ನೂ ಕೆಲವರು ಅದೃಷ್ಟವನ್ನು ನಂಬುತ್ತಾರೆ. ಹಲವರಿಗೆ ಅದೃಷ್ಟದ ಮೇಲೆ ನಂಬಿಕೆ ಇರುವುದಿಲ್ಲ, ಅದೃಷ್ಟದ ಜೊತೆಗೆ ನಮ್ಮ ಶ್ರಮ ಕೂಡ ಮುಖ್ಯ ಎನ್ನುತ್ತಾರೆ. ಆದ್ರೆ ಇಲ್ಲಿ ಯುವತಿಯೊಬ್ಬರಿಗೆ ಕೇವಲ ಅದೃಷ್ಟವೇ ಕೆಲಸಮಾಡಿದೆ. ಬರೋಬ್ಬರಿ 50 ಲಕ್ಷ ರೂ. ಕಾರನ್ನು ತಂದುಕೊಟ್ಟಿದೆ.

ಅಸ್ಸಾಂನಲ್ಲಿ ವಿದ್ಯಾರ್ಥಿನಿಯೊಬ್ಬರು ಕೇವಲ 100 ರೂ.ಗೆ ಐಷಾರಾಮಿ ಮರ್ಸಿಡಿಸ್ ಕಾರನ್ನು ಖರೀದಿಸಿದ್ದಾರೆ. ಆಶ್ಚರ್ಯಗೊಳ್ಳಬೇಡಿ ಆ ಕಾರಿನ ಬೆಲೆ 50 ಲಕ್ಷ ರೂ. ಆದ್ರೆ ಇದನ್ನು ಖರೀದಿಸಿಲ್ಲ, ಬದಲಾಗಿ ಕೂಪನ್ ಒಂದರ ಲಕ್ಕಿ ಡ್ರಾನಲ್ಲಿ ಯುವತಿಗೆ ಒಲಿದ ಅದೃಷ್ಟ. ಶ್ರೀಮಂತರು ಹೆಮ್ಮೆಪಡುವ ಮರ್ಸಿಡಿಸ್ ಕಾರನ್ನು ಕೆಳ ಮಧ್ಯಮ ವರ್ಗದ ಯುವತಿ ಧಕ್ಕಿಸಿಕೊಂಡಿದ್ದಾರೆ.

17-year-old-girl-got-mercedes-benz-in-lucky-draw-worth-50-lakhs

ಅಸ್ಸಾಂನ ಬಾರ್ಪೇಟ್ ನಲ್ಲಿ ವಾಸವಿರುವ 17 ವರ್ಷದ ವಿದ್ಯಾರ್ಥಿನಿ ದಿಶಾ ದಾಸ್, ಪ್ರಸ್ತುತ 12 ನೇ ತರಗತಿಯಲ್ಲಿ ಓದುತ್ತಿದ್ದು ರಾತ್ರೋರಾತ್ರಿ ದುಬಾರಿ ಕಾರಿನ ಮಾಲೀಕರಾಗಿಬಿಟ್ಟಿದ್ದಾರೆ. ಕೇವಲ 100 ರೂ. ಕೊಟ್ಟು ಖರೀದಿಸಿದ ಕೂಪನ್‌ನಿಂದ 50 ಲಕ್ಷ ಮೌಲ್ಯದ ಐಷಾರಾಮಿ ಕಾರನ್ನು ಗೆದ್ದಿದ್ದಾರೆ. ಸದ್ಯ 100 ರೂ.ಗೆ ಮರ್ಸಿಡಿಸ್ ಬೆಂಝ್ ಕಾರನ್ನು ಗೆದ್ದು ದೇಶಾದ್ಯಂತ ವೈರಲ್ ಆಗಿದ್ದಾರೆ.

ಲಕ್ಕಿಡ್ರಾನಲ್ಲಿ ಲಕ್ಕಿ ಗರ್ಲ್: ಬಾರ್ಪೆಟ್ ಪುಸ್ತಕ ಮತ್ತು ವಿಜ್ಞಾನ ಮೇಳವು ಫೆಬ್ರವರಿ 2024 ರಲ್ಲಿ ನಡೆಯಲಿದೆ. ಇದನ್ನು ಉತ್ತೇಜಿಸಲು ಮತ್ತು ಬೆಂಬಲಿಸಲು ಇತ್ತೀಚೆಗೆ ಲಕ್ಕಿ ಡ್ರಾವನ್ನು ನಡೆಸಲಾಯಿತು. ಅದೇ 100 ರೂ. ಲಕ್ಕಿ ಡ್ರಾ ಕೂಪನ್ ಆಟ, ಇದರಲ್ಲಿ ದಿಶಾ ದಾಸ್ ಕೂಡ ಕೌಂಟರ್‌ನಿಂದ ಗಿಫ್ಟ್ ಕೂಪನ್ ಖರೀದಿಸಿದ್ದರು. ಮೂಲಗಳ ಪ್ರಕಾರ ದಿಶಾ ಎರಡು ಕೂಪನ್‌ಗಳನ್ನು ಖರೀದಿಸಿದ್ದರು.

17-year-old-girl-got-mercedes-benz-in-lucky-draw-worth-50-lakhs

ಈ ಲಕ್ಕಿಡ್ರಾನಲ್ಲಿ ಮೊದಲ ಬಹುಮಾನ ಮರ್ಸಿಡಿಸ್ ಬೆಂಝ್ ಕಾರು. ಇದರಲ್ಲಿ ಭಾಗವಹಿಸಿ ಕೂಪನ್ ಖರೀದಿಸಿದ್ದವರೆಲ್ಲಾ ಅದೃಷ್ಟ ಯಾರಿಗೆ ಒಲಿಯಲಿದೆ, ಆ ಕಾರು ಯಾರಿಗೆ ಸಿಗುತ್ತದೆ ಎಂದು ಕಾಯುತ್ತಿದ್ದರು. ಇತ್ತೀಚೆಗಷ್ಟೇ ಫಲಿತಾಂಶವನ್ನು ಪ್ರಕಟಿಸಲಾಯಿತು. ಆದ್ರೆ ದಿಶಾ ಖರೀದಿಸಿದ್ದ ಎರಡು ಕೂಪನ್‌ಗಳಲ್ಲಿ ಒಂದು ಆಕೆಗೆ ಅದೃಷ್ಟವನ್ನು ತಂದುಕೊಟ್ಟಿದೆ.

ಒಬ್ಬರ ಜೀವನ ಉತ್ತಮವಾಗಿದೆ ಅಂದ್ರೆ ನಾಲ್ವರ ಕಣ್ಣು ಇದ್ದೇ ಇರುತ್ತೆ, ಹಾಗೆಯೇ ಬಹುಮಾನ ಕೆಳ ಮಧ್ಯಮ ವರ್ಗದ ಯುವತಿಗೆ ಧಕ್ಕಿರುವುದು ಎಲ್ಲರನ್ನು ಅಚ್ಚರಿಗೊಳಿಸಿದೆ. ಈಗ ದಿಶಾರನ್ನು ಸ್ಥಳೀಯರು ಅದೃಷ್ಟದ ಹುಡುಗಿ ಎಂದು ಕರೆಯುತ್ತಿದ್ದಾರೆ. ಬಹುಮಾನವಾಗಿ ಸ್ವೀಕರಿಸಿರುವ ಮರ್ಸಿಡಿಸ್ ಯಾವ ವೇರಿಯೆಂಟ್ ಎಂಬುದರ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.

ಉಳಿದಂತೆ ಈ ಲಕ್ಕಿ ಡ್ರಾನಲ್ಲಿ ಯುವತಿಯು ಮರ್ಸಿಡಿಸ್ ಕಾರನ್ನು ಗೆದ್ದಿರುವ ಸುದ್ದಿಯು ದೇಶಾದ್ಯಂತ ವೈರಲ್ ಆಗಿದೆ. ಹಲವೆಡೆ ಈ ಯುವತಿಗೆ ಶುಭ ಹಾರೈಸಿದ್ದಾರೆ, ಹಾಗೆಯೇ ವಿದ್ಯಾಭ್ಯಾಸವನ್ನು ಕೂಡ ತಾನಂದುಕೊಂಡ ಹಂತವನ್ನು ತಲುಪುವಂತೆ ಕೋರಿದ್ದಾರೆ. ಈ ಲಕ್ಕಿ ಡ್ರಾನಲ್ಲಿ ಯುವತಿ ದುಬಾರಿ ಬೆಲೆಯ ಕಾರನ್ನು ಪಡೆದಿರುವ ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Source: Hindi News18
Link: https://hindi.news18.com/photogallery/assam/a-student-from-barpeta-owns-a-luxury-mercedes-car-worth-rs-50-lakh-for-just-rs-100-7819105-page-2.html

Article Published On: Thursday, November 16, 2023, 15:47 [IST]
English summary
17 year old girl got mercedes benz in lucky draw worth 50 lakhs
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+