ಟೈಟಾನಿಕ್ ಹಡಗಿನ 18 ಅಚ್ಚರಿ ವಿಚಾರಗಳು ತಿಳ್ಕೊಳಿ, ಅದರಲ್ಲಿಯೂ 7ನೇ ವಿಚಾರ ಆಶ್ಚರ್ಯ ತರಿಸುತ್ತೆ !!
1912ನೇ ಇಸವಿಯಲ್ಲಿ ನಿರ್ಮಾಣಗೊಂಡ 'ಮುಳುಗಲಾರದ ಹಡಗು' ಎಂದೇ ಹೆಸರು ಪಡೆದುಕೊಂಡಿದ್ದ ಬೃಹತ್ ಹಡಗಿನ ದುರಂತ ಕತೆ ನಮಗೆಲ್ಲರಿಗೂ ಗೊತ್ತಿರುವಂತದ್ದೇ, ಈ ಹಡಗಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಇಂಗ್ಲೆಂಡಿನಿಂದ ಅಮೆರಿಕಗೆ ಹೊರಟು ತನ್ನ ಮೊದಲ ಯಾನದಲ್ಲೇ ಮುಳುಗಿಹೋದ ಈ ಬೃಹತ್ ಹಡಗು ದುರಂತದಲ್ಲಿ ವಿಶ್ವ ಪ್ರಸಿದ್ಧರು ಸೇರಿದಂತೆ ಸಾವಿರಾರು ಪ್ರಯಾಣಿಕರು ಸಾವನ್ನಪ್ಪಿದ್ದರು. ಇಂತಹ ದೈತ್ಯ ಟೈಟಾನಿಕ್ ಹಡಗಿಗೆ ಸಂಬಂಧಪಟ್ಟ 18 ರೋಚಕ ಸತ್ಯಗಳನ್ನು ತಿಳಿದುಕೊಳ್ಳಲು ಮುಂದೆ ಓದಿ.

ಇಂಗ್ಲೆಂಡಿನಿಂದ ಅಮೆರಿಕಗೆ ಹೊರಟು ತನ್ನ ಮೊದಲ ಯಾನದಲ್ಲೇ ಮುಳುಗಿಹೋದ ಈ ಬೃಹತ್ ಹಡಗು ದುರಂತದಲ್ಲಿ ವಿಶ್ವ ಪ್ರಸಿದ್ಧರು ಸೇರಿದಂತೆ ಸಾವಿರಾರು ಪ್ರಯಾಣಿಕರು ಸಾವನ್ನಪ್ಪಿದ್ದರು. ಇಂತಹ ದೈತ್ಯ ಟೈಟಾನಿಕ್ ಹಡಗಿಗೆ ಸಂಬಂಧಪಟ್ಟ 18 ರೋಚಕ ಸತ್ಯಗಳನ್ನು ತಿಳಿದುಕೊಳ್ಳಲು ಮುಂದೆ ಓದಿ.

ಪ್ರಪಂಚದ ಅತ್ಯಂತ ಭೀಕರ ದುರ್ಘಟನೆಗಳಲ್ಲಿ ಒಂದಾಗಿರುವ ಟೈಟಾನಿಕ್ 'ಮುಳುಗಲಾರದ ಹಡಗು' ಎಂದೇ ಭಾರಿ ಪ್ರಚಾರ ಪಡೆದಿತ್ತು. ಇಷ್ಟು ಭರ್ಜರಿಯಾಗಿದ್ದ ಹಡಗು ಮುಳುಗಲು ಸಾಧ್ಯವೇ ಇಲ್ಲ ಎಂಬುದು ಎಲ್ಲರ ಭಾವನೆಯಾಗಿತ್ತು.

ಆದರೆ, ಅತ್ಯಂತ ವೈಭವೋಪೂರಿತ ಹಡುಗಳಲ್ಲಿ ಟೈಟಾನಿಕ್ ಅಗ್ರಸ್ಥಾನ ಪಡೆದಿದ್ದ 'ಟೈಟಾನಿಕ್', ಸಮುದ್ರ ಹಾದಿ ಮಧ್ಯೆ ನೀರ್ಗಲ್ಲಿಗೆ ಅಪ್ಪಳಿಸಿದ ಪರಿಣಾಮ ದುರಂತ ಸಂಭವಿಸಿತ್ತು.

ಜೀವ ರಕ್ಷಕ ಲೈಫ್ ಬೋಟ್‌ಗಳ ಸರಿಯಾಗಿ ಉಪಯೋಗಿಸಿಕೊಳ್ಳಲಾಗದಿರುವುದು ಸಾವಿರಾರು ಜನರು ಪ್ರಾಣ ಕಳೆದುಕೊಳ್ಳಬೇಕಾಯಿತು. ಈ ದುರಂತದಲ್ಲಿ ಬದುಕುಳಿದವರು ಅದೃಷ್ಟಶಾಲಿಗಳೇ ಎನ್ನಬಹುದು.

ಈ ನೈಜ ಘಟನೆಯನ್ನೇ ಆಧಾರವಾಗಿಟ್ಟುಕೊಂಡು ಹಾಲಿವುಡ್‌ನ ಪ್ರಸಿದ್ಧ ನಿರ್ದೇಶಕ ಜೇಮ್ಸ್ ಕ್ಯಾಮರೂನ್, 1997ರಲ್ಲಿ ಟೈಟಾನಿಕ್ ಎಂಬ ಚಲನಚಿತ್ರವನ್ನು ರಚಿಸಿದ್ದರು. ಚಿತ್ರದಲ್ಲಿ ಲಿಯಾನಾರ್ಡೊ ಡಿ ಕಾಪ್ರಿಯೊ ಹಾಗೂ ಕೇಟ್ ವಿನ್ಸ್ಲೆಟ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಒ೦ದು ಕಾಲದ ಜಗತ್ತಿನ ಅತ್ಯ೦ತ ದೊಡ್ಡ ಹಡಗು ಮುಳುಗಿದ ಕಥೆಯನ್ನೇ ಹ್ರದಯಸ್ಪರ್ಶಿಯಾಗಿ ಚಿತ್ರಿಸಿದ ರೀತಿ ಅವಿಸ್ಮರಣೀಯ.

1. ನಾವು ಈ ಮೊದಲೇ ತಿಳಿಸಿರುವಂತೆಯೇ ಟೈಟಾನಿಕ್ ಅಂದಿನ ಕಾಲದ ಅತಿದೊಡ್ಡ ಹಡಗಾಗಿತ್ತು. ಅಂದರೆ ಇದರ ಗಾತ್ರ ಸಾಮಾನ್ಯ ಫುಟ್ಬಾಲ್ ಮೈದಾನಕ್ಕಿಂತ ಮೂರು ಪಟ್ಟು ಹೆಚ್ಚಾಗಿತ್ತು.

ಬೃಹತ್ ಗಾತ್ರದ ಈ ಟೈಟಾನಿಕ್ ಹಡಗು ಕೇವಲ ಗಾತ್ರದ ವಿಚಾರದಲ್ಲಿ ಮಾತ್ರವಲ್ಲ, ಎತ್ತರ ಕೂಡಾ ಆಶ್ಚರ್ಯಚಕಿತಗೊಳಿಸುವಂತಿತ್ತು.

ನಿಮಗೆ ಗೊತ್ತೇ ? ಟೈಟಾನಿಕ್ ಹಡಗಿನ ಎಲ್ಲ ನಾಲ್ಕು ಭಾಗಗಳನ್ನು ಜೋಡಿಸಿದರೆ ಇಂದಿನ 17 ಅಂತಸ್ತಿನ ಕಟ್ಟಡಕ್ಕೆ ಸಮಾನವಾಗಿರಲಿದೆ.

2. ಟೈಟಾನಿಕ್ ಎಂಜಿನ್‌ಗಾಗಿ ದಿನಂಪ್ರತಿ 800 ಟನ್ ಕಲ್ಲಿದ್ದಲು ಬಳಕೆ ಮಾಡಲಾಗುತ್ತಿತ್ತು. ಹಾಗೆಯೇ ಪ್ರತಿಗಂಟೆಗೆ 43.50 ಕೀ.ಮೀ. (27 ಮೈಲ್) ವೇಗತೆಯಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿತ್ತು.

3. ಟೈಟಾನಿಕ್, ವಿಶ್ವದಲ್ಲಿ ವಿದ್ಯುತ್ ಚಾಲಿತ ಲೈಟ್ (ಎಲೆಕ್ಟ್ರಿಕ್) ಹಾಗೂ ಟೆಲಿಫೋನ್ ವ್ಯವಸ್ಥೆ ಹೊಂದಿದ್ದ ಅಂದಿನ ಅತ್ಯಾಧುನಿಕ ಹಡಗುಗಳಲ್ಲಿ ಒಂದಾಗಿತ್ತು.

4. ಟೈಟಾನಿಕ್ ಹಡಗಲ್ಲಿ ನಾಲ್ಕು ಎಲಿವೇಟರು (ಲಿಫ್ಟ್), ಒಂದು ಬಿಸಿ ಈಜುಕೊಳ, ಜಿಮ್, ಎರಡು ಗ್ರಂಥಾಲಯ (ಲೈಬ್ರರಿ) ಹಾಗೂ ಎರಡು ಕ್ಷೌರಿಕ ಅಂಗಡಿಗಳಿದ್ದವು.

5. ಟೈಟಾನಿಕ್ ಹಡಗಿನಲ್ಲಿ ಹಡಗಿನ ಸಿಬ್ಬಂದಿಯೂ ಸೇರಿ ಒಮ್ಮೆಗೆ ಸರಿ ಸುಮಾರು 2,200ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸಬಹುದಾಗಿತ್ತು.

6. ದಿನಂಪ್ರತಿ ಪ್ರಯಾಣಿಕರು ಹಾಗೂ ಹಡಗು ಸಿಬ್ಬಂದಿಗಳು ಸೇರಿ 14,000 ಗ್ಯಾಲನ್ (52995 ಲೀಟರ್) ಕುಡಿಯುವ ನೀರನ್ನು ಉಪಯೋಗಿಸುತ್ತಿದ್ದರು.

7. ಹೊಗೆ ಹಾಗೂ ಹಬೆ ಹೊರಹೋಗಲು ನಾಲ್ಕು ಬಣವೆ ನಿರ್ಮಿಸಲಾಗಿತ್ತು. ಆದರೆ ನಿಮ್ಮ ಮಾಹಿತಿಗಾಗಿ, ಈ ಪೈಕಿ ಮೂರರಲ್ಲಿ ಮಾತ್ರ ಹೊಗೆ ಹೊರ ಹೋಗುತ್ತಿತ್ತು. ನಾಲ್ಕನೆಯದನ್ನು ಹಡಗಿನ ಸೌಂದರ್ಯ ಹೆಚ್ಚಿಸಲು ನಿರ್ಮಿಸಲಾಗಿತ್ತು.

8. ಅಂದ ಹಾಗೆ ಟೈಟಾನಿಕ್ 3,547 ಪ್ರಯಾಣಿಕರು ಹಾಗೂ ಸಿಬ್ಬಂದಿಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಆದರೆ ತನ್ನ ಮೊದಲ ಪಯಣದಲ್ಲಿ 2,200 ಪ್ರಯಾಣಿಕರು ಸಂಚರಿಸಿದ್ದರು.

9. ಅಷ್ಟಕ್ಕೂ ಟೈಟಾನಿಕ್‌ನಲ್ಲಿ ಸಂಚರಿಸಲು ಅತ್ಯಂತ ಹೆಚ್ಚು ವೆಚ್ಚ ಭರಿಸಬೇಕಾಗಿತ್ತು. ಇದು ಇಂದಿನ 99,000 ಅಮೆರಿಕನ್ ಡಾಲರ್‌ಗೆ ಸಮಾನವಾಗಿದೆ. ಅಂದರೆ ಭಾರತೀಯ ರುಪಾಯಿ ಪ್ರಕಾರ ಬರೋಬ್ಬರಿ 59 ಲಕ್ಷ.

10. ಪ್ರಯಾಣಿಕರು ಹಾಗೂ ಸಿಬ್ಬಂದಿಗಳಿಗೆ ಆಹಾರ ಪೂರೈಸಲು, 86.000 ಪೌಂಡ್ ಮಾಂಸ, 40,000 ಮೊಟ್ಟೆಗಳು, 40 ಟನ್ ಆಲೂಗಡ್ಡೆ, 7,000 ಲೆಟ್ಯೂಸ್ (ಹಸಿಯಾಗಿ ತಿನ್ನಬಹುದಾದ ದೊಡ್ಡ ಹಸಿರೆಲೆಗಳುಳ್ಳ ಗಿಡ), 3,500 ಪೌಂಡ್ ಈರುಳ್ಳಿ, 36,000 ಸೇಬುಗಳು ಹಾಗೂ 1000 ಬ್ರೆಂಡ್ ತುಂಡುಗಳನ್ನು ಸಾಗಿಸಲಾಗಿತ್ತು.

11. ಟೈಟಾನಿಕ್ ಹಡಗಿನಲ್ಲಿ ಪ್ರಥಮ-ದರ್ಜೆ ಪ್ರಯಾಣಿಕರ ಬಳಕೆಗಾಗಿ 20,000 ಮಧ್ಯ ಬಾಟಲಿಗಳು, 1,500 ವೈನ್ ಬಾಟಲಿಗಳು ಮತ್ತು 8,000 ಸಿಗಾರ್ ಕೊಂಡೊಯ್ಯಲಾಗಿತ್ತು.

12. ದಿನವೂ ಟೈಟಾನಿಕ್ ಹಡಗಿನಲ್ಲಿ ನ್ಯೂಸ್ ಪೇಪರ್ ಸಹ ಮುದ್ರಣ ಮಾಡಲಾಗುತ್ತಿತ್ತು ಎಂದರೆ ನೀವೇ ಊಹಿಸಿಕೊಳ್ಳಿ, ಎಷ್ಟರಮಟ್ಟಿಗೆ ಸೌಲಭ್ಯಗಳನ್ನು ಈ ಹಡಗು ಪಡೆದುಕೊಂಡಿತ್ತು ಎಂಬುದನ್ನು.

13. ಈ ಹಡಗು ಜಿಮ್, ಪೂಲ್, ಟರ್ಕಿ ರಾಜ್ಯದ ರೀತಿಯಲ್ಲಿ ಸ್ನಾನ ಕೋಣೆ, ಪ್ರಥಮ ದರ್ಜೆ ನಾಯಿಗಳಿಗೆ ಕೆನಾಲ್, ಮತ್ತು ಸ್ಕ್ವ್ಯಾಷ್ ಆಟದ ಮೈದಾನ ಒಳಗೊಂಡಿತ್ತು.

14. ಕೇವಲ 16 ಮರದ ದೋಣಿಮನೆಗಳು ಮತ್ತು ನಾಲ್ಕು ತೆಪ್ಪದ ರೀತಿಯ ದೋಣಿಗಳನ್ನು ಮಾತ್ರ ಹೊಂದಿದ್ದ ಈ ಹಡಗು, ತುರ್ತು ಸಂದರ್ಭದಲ್ಲಿ 1,178 ಜನರನ್ನು ಮಾತ್ರ ಸಾಗಿಸುವಷ್ಟು ಅವಕಾಶ ಮಾಡಿಕೊಡಲಾಗಿತ್ತು.

15. ಈ ಬೃಹತ್ ಹಡಗಿನ ನಿರ್ಮಾಣದ ಸಂದರ್ಭದಲ್ಲಿ 246 ಮಂದಿಗೆ ಗಾಯಗಳಾಗಿದ್ದರೆ, ಎರಡು ಸಾವುಗಳು ಸಂಭವಿಸಿವೆ.

16. ಪ್ರಥಮ ದರ್ಜೆಯ ಪ್ರಯಾಣಿಕರಿಗೆ 352 ಹಾಡುಗಳನ್ನು ಹೊಂದಿರುವ ಸಂಗೀತ ಪುಸ್ತಕ ನೀಡಲಾಯಿತು. ಪ್ರಥಮ ದರ್ಜೆ ಪ್ರಯಾಣಿಕರು ವಿನಂತಿ ಮಾಡಿದ ಹಾಡನ್ನು ಸಂಗೀತಗಾರರು ನುಡಿಸಬೇಕಾಗಿತ್ತು.

17. ಹಡಗಿನಲ್ಲಿ ಪ್ರಯಾಣ ಮಾಡುತ್ತಿದ್ದ ಒಂಬತ್ತು ನಾಯಿಗಳ ಪೈಕಿ, 'ಪೊಮೆರಿಯನ್' ಮತ್ತು 'ಪೆಕೆನೀಸ್' ಎಂಬ ಎರಡು ನಾಯಿಗಳನ್ನು ಕಾಪಾಡಲಾಗಿತ್ತು.

18. ಮತ್ತೊಂದು ಬೇಸರದ ಸಂಗತಿ ಏನೆಂದರೆ ಆಗ ತಾನೇ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದ ಇಪ್ಪತ್ತಾರು ಜೋಡಿಗಳು ತಮ್ಮ ಮೊದಲ ಪ್ರವಾಸದಲ್ಲಿಯೇ ಜೀವ ಕಳೆದುಕೊಂಡಿದ್ದರು.


Click it and Unblock the Notifications








