ಚೊಚ್ಚಲ ಯಾನಕ್ಕೆ ಸಿದ್ದವಾದ 'ಟೈಟಾನಿಕ್ II' ಹಡಗಿನಲ್ಲಿ ಏನುಂಟು ಏನಿಲ್ಲಾ?

ಅಂದಿನ ಕಾಲದ ವಿಶ್ವದ ಅತಿ ದೊಡ್ಡ ವೈಭವೋಪೂರಿತ ಹಡಗೆಂಬ ಖ್ಯಾತಿಗೆ ಪಾತ್ರವಾಗಿದ್ದ ಟೈಟಾನಿಕ್ ಸಾಗರ ನಿರ್ಗಲ್ಲಿನ ಅಂಚಿಗೆ ಬಡಿದು ನೀರಲ್ಲಿ ಮುಳುಗಿ ಹೋಗಿತ್ತು. ಈಗ ಇದೇ ನೈಜ ಹಡಗನ್ನು ಆಧಾರವಾಗಿಟ್ಟುಕೊಂಡು ಟೈಟಾನಿಕ್ II ಎಂಬ ಮತ್ತೊಂದು ಅತ್ಯಾಧುನಿಕ ತಂತ್ರಜ್ಞಾನ ಪ್ರೇರಿತ ಹಡಗನ್ನು ನಿರ್ಮಾಣ ಮಾಡಲಾಗಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಸೇವೆಗೆ ಸಿದ್ದವಾಗುತ್ತಿದೆ.

ಚೊಚ್ಚಲ ಯಾನಕ್ಕೆ ಸಿದ್ದವಾದ 'ಟೈಟಾನಿಕ್ II' ಹಡುಗಿನಲ್ಲಿ ಏನುಂಟು ಏನಿಲ್ಲಾ?

ಮುಳುಗಲಾರದ ಹಡಗು ಎಂದೇ ಖ್ಯಾತಿ ಪಡೆದಿದ್ದ ಟೈಟಾನಿಕ್, 1912ನೇ ಇಸವಿಯಲ್ಲಿ ತನ್ನ ಮೊದಲ ಯಾನದಲ್ಲೇ ಮುಳುಗಿಹೋದ ಬೃಹತ್ ಹಡಗು ದುರಂತದಲ್ಲಿ 1500ರಷ್ಟು ಪ್ರಯಾಣಿಕರು ಸಾವನ್ನಪ್ಪಿದ್ದರು. ಜಗತ್ತಿನ ಅತ್ಯಂತ ದೊಡ್ಡ ಹಾಗೂ ವೈಭವೋಪೂರಿತ ಹಡಗುಗಳಲ್ಲಿ ಅಗ್ರಸ್ಥಾನ ಪಡೆದಿದ್ದ ಟೈಟಾನಿಕ್ ಮಗದೊಮ್ಮೆ ಸಾಗರ ನಿರ್ಗಲ್ಲಿನ ಅಂಚಿಗೆ ತೇಲಾಡಲಿದೆ ಅಂದರೆ ನಿಮ್ಮಿಂದ ನಂಬಲು ಸಾಧ್ಯವೇ? ಹೌದು, ಈಗಾಗಲೇ ಸಾಗರದಡಿಯನ್ನು ತಲುಪಿರುವ ಟೈಟಾನಿಕ್ ಪುರ್ನಜ್ಮನ ಪಡೆಯುತ್ತಿದೆ ಅಂದರೆ ತಪ್ಪಾಗಲಾರದು.

ಚೊಚ್ಚಲ ಯಾನಕ್ಕೆ ಸಿದ್ದವಾದ 'ಟೈಟಾನಿಕ್ II' ಹಡುಗಿನಲ್ಲಿ ಏನುಂಟು ಏನಿಲ್ಲಾ?

ಹಾಗಂತ ಇದು ನೈಜ ಟೈಟಾನಿಕ್ ಹಡಗಲ್ಲ. ಬದಲಾಗಿ ಎಲ್ಲ ಅರ್ಥದಲ್ಲೂ ಟೈಟಾನಿಕ್ ಸಾದೃಶವನ್ನು ಪಡೆದುಕೊಳ್ಳಲಿರುವ ನೂತನ ಹಡಗಾಗಿರಲಿದೆ. ಅಂದರೆ ಇದು 'ಟೈಟಾನಿಕ್ II' ಎಂದು ಹೆಸರಿಸಿಕೊಳ್ಳಲಿದೆ.

ಚೊಚ್ಚಲ ಯಾನಕ್ಕೆ ಸಿದ್ದವಾದ 'ಟೈಟಾನಿಕ್ II' ಹಡುಗಿನಲ್ಲಿ ಏನುಂಟು ಏನಿಲ್ಲಾ?

ಪ್ರಸ್ತುತ ಟೈಟಾನಿಕ್ ಹಡಗು ಅಟ್ಲಾಂಟಿಕ್ ಮಹಾಸಾಗರದಲ್ಲಿ ಮುಳುಗಿ ಹೋಗಿ ನೂರು ವರುಷಗಳೇ ಸಂದಿವೆ. ಆದರೆ ಹಾಲಿವುಡ್‌ನ ಪ್ರಸಿದ್ಧ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಅವರ ಟೈಟಾನಿಕ್ ಚಿತ್ರದ ಮೂಲಕ ಈ ದುರಂತ ಚಿತ್ರಗಳು ನಮ್ಮ ಹೃದಯದಲ್ಲಿ ಮಾಸದೇ ಹಾಗೆಯೇ ಉಳಿದಿದೆ.

ಚೊಚ್ಚಲ ಯಾನಕ್ಕೆ ಸಿದ್ದವಾದ 'ಟೈಟಾನಿಕ್ II' ಹಡುಗಿನಲ್ಲಿ ಏನುಂಟು ಏನಿಲ್ಲಾ?

ಇತಿಹಾಸದೊಂದಿಗೆ ಮರಳಿ ಬಂದ 'ಟೈಟಾನಿಕ್ II'

ಇಲ್ಲಿನ ಚಿತ್ರಗಳೇ ಸಾರುವಂತೆಯೇ 'ಟೈಟಾನಿಕ್ 2' ಅಕ್ಷರಶ: ನೈಜ ಟೈಟಾನಿಕ್ ಹಡಗಿನ ತದ್ರೂಪವೆನಿಸಲಿದೆ. ಈ ನಿಟ್ಟಿನಲ್ಲಿ ನಿರ್ಮಾಣದಲ್ಲಿ ಪ್ರತಿಯೊಂದು ಅಂಶವನ್ನು ಬಹಳ ಸೂಕ್ಷ್ಮವಾಗಿ ಗಮನದಲ್ಲಿಟ್ಟುಕೊಂಡು ನಿರ್ಮಿಸಲಾಗಿದೆ.

ಚೊಚ್ಚಲ ಯಾನಕ್ಕೆ ಸಿದ್ದವಾದ 'ಟೈಟಾನಿಕ್ II' ಹಡುಗಿನಲ್ಲಿ ಏನುಂಟು ಏನಿಲ್ಲಾ?

ನೈಜ ಟೈಟಾನಿಕ್ ಹಡಗಿನ ಜೊತೆಗೆ ಉನ್ನತ್ತ ದರ್ಜೆಯ ಆಧುನಿಕ ಭದ್ರತಾ ವ್ಯವಸ್ಥೆಗಳನ್ನು ಹೊಂದಿರಲಿದ್ದು, ಅಪಾಯದ ಮುನ್ಸೂಚನೆಯನ್ನು ಅರಿಯಬಲ್ಲ ಆಧುನಿಕ ಸಂವಹನ ಹಾಗೂ ರಾಡಾರ್ ವ್ಯವಸ್ಥೆಗಳನ್ನು ಪಡೆಯಲಿದೆ.

ಚೊಚ್ಚಲ ಯಾನಕ್ಕೆ ಸಿದ್ದವಾದ 'ಟೈಟಾನಿಕ್ II' ಹಡುಗಿನಲ್ಲಿ ಏನುಂಟು ಏನಿಲ್ಲಾ?

ಒಟ್ಟಾರೆ 840 ಕ್ಯಾಬಿನ್ ಗಳು ಇದರಲ್ಲಿದ್ದು, ಏಕಕಾಲಕ್ಕೆ 2,435 ಮಂದಿ ಪ್ರಯಾಣಿಕರಿಗೆ ವಿಹಾರ ಯಾನ ಕೈಗೊಳ್ಳಬಹುದಾಗಿದೆ. ಇವೆಲ್ಲರ ಸೇವೆಗಾಗಿ 900ಕ್ಕೂ ಮಂದಿ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆಯೆಂತೆ.

ಚೊಚ್ಚಲ ಯಾನಕ್ಕೆ ಸಿದ್ದವಾದ 'ಟೈಟಾನಿಕ್ II' ಹಡುಗಿನಲ್ಲಿ ಏನುಂಟು ಏನಿಲ್ಲಾ?

ಭದ್ರತೆಗೆ ಗರಿಷ್ಠ ಆದ್ಯತೆ

ಈ ಹಿಂದೆ 1912ರ ಟೈಟಾನಿಕ್ ಹಡಗು ದುರಂತದ ಬಳಿಕ ಕಂಡುಬಂದ ದೊಡ್ಡ ಭದ್ರತಾ ವೈಫಲ್ಯ ಯಾನದಲ್ಲಿ ಪಯಣಿಸುವ ಎಲ್ಲ ಪ್ರಯಾಣಿಕರಿಗೆ ಜೀವ ರಕ್ಷಕ ಬೋಟ್ ಗಳ ಕೊರತೆಯಿತ್ತು. ಟೈಟಾನಿಕ್ 2 ಈ ಸಮಸ್ಯೆ ನಿವಾರಣೆಯಾಗಲಿದ್ದು, ಪ್ರತಿಯೊಬ್ಬರಿಗೂ ಜೀವರಕ್ಷಕ ಬೋಟ್ ಸೇವೆ ಖಾತ್ರಿಪಡಿಸಲಿದೆ.

ಚೊಚ್ಚಲ ಯಾನಕ್ಕೆ ಸಿದ್ದವಾದ 'ಟೈಟಾನಿಕ್ II' ಹಡುಗಿನಲ್ಲಿ ಏನುಂಟು ಏನಿಲ್ಲಾ?

ನೈಜ ಹಡಗಿಗೆ ಹೋಲಿಸಿದಾಗ ಟೈಟಾನಿಕ್ 2 ಮಾದರಿಯು 13 ಅಡಿಯಷ್ಟು ಹೆಚ್ಚು ಅಗಲವಾಗಿದೆ ಎಂದು ಹೇಳಲಾಗಿದ್ದು, ಇನ್ನುಳಿದಂತೆ ಹಡುಗಿನ ಉದ್ದ ಮತ್ತು ಎತ್ತರ ಎಲ್ಲವೂ ಹಳೆಯ ಟೈಟಾನಿಕ್‌ಗೆ ಸಮಾನವಾಗಿರುವುದರೊಂದಿಗೆ ಬರೋಬ್ಬರಿ ಒಂಬತ್ತು ಡೆಕ್ ಪಡೆಯಲಿದೆ.

ಚೊಚ್ಚಲ ಯಾನಕ್ಕೆ ಸಿದ್ದವಾದ 'ಟೈಟಾನಿಕ್ II' ಹಡುಗಿನಲ್ಲಿ ಏನುಂಟು ಏನಿಲ್ಲಾ?

4 ಸಾವಿರ ಕೋಟಿ ವೆಚ್ಚದಲ್ಲಿ ಟೈಟಾನಿಕ್ II

ಆಸ್ಟ್ರೇಲಿಯಾದ ಬಿಲಿಯನೇರ್ ಉದ್ಯಮಿ ಹಾಗೂ ರಾಜಕಾರಣಿ ಕ್ಲೈವ್ ಪಾಲ್ಮರ್ ಎಂಬವರಿಗೆ ಸೇರಿದ ಹಡಗು ಇದಾಗಿದ್ದು, ಬರೋಬ್ಬರಿ 4 ಸಾವಿರ ಕೋಟಿ ರುಪಾಯಿಗಳಷ್ಟು ದುಬಾರಿ ಎನಿಸಿಕೊಳ್ಳಲಿದೆ.

ಚೊಚ್ಚಲ ಯಾನಕ್ಕೆ ಸಿದ್ದವಾದ 'ಟೈಟಾನಿಕ್ II' ಹಡುಗಿನಲ್ಲಿ ಏನುಂಟು ಏನಿಲ್ಲಾ?

ಪ್ರಥಮ, ದ್ವಿತೀಯ ಹಾಗೂ ತೃತೀಯ ದರ್ಜೆಯ ಟಿಕೆಟ್ ವ್ಯವಸ್ಥೆಗಳನ್ನು ಹೊಂದಿರುವ ಟೈಟಾನಿಕ್ ಹಡಗಿನಲ್ಲಿ ವಿಶೇಷ ಟರ್ಕಿಶ್ ಸ್ನಾನಗೃಹ, ಎಡ್ವರ್ಡಿಯನ್ ಜಿಮ್, ಧೂಮಪಾನ ಕೊಠಡಿ, ಗ್ರ್ಯಾಂಡ್ ಸ್ಟೇರ್ ಕೇಸ್, ಬೋಟ್ ಡೆಕ್ ಇತ್ಯಾದಿ ಸೌಲಭ್ಯಗಳಿರಲಿದೆ.

ಚೊಚ್ಚಲ ಯಾನಕ್ಕೆ ಸಿದ್ದವಾದ 'ಟೈಟಾನಿಕ್ II' ಹಡುಗಿನಲ್ಲಿ ಏನುಂಟು ಏನಿಲ್ಲಾ?

ಬ್ಲೂ ಸ್ಟಾರ್ ಲೈನ್ ಸಂಸ್ಥೆ ಕೈಗೆತ್ತಿಕೊಂಡಿರುವ ಈ ಮಹತ್ತರ ಯೋಜನೆಯು 2020ಕ್ಕೆ ತನ್ನ ಚೊಚ್ಚಲ ಯಾನ ಹಮ್ಮಿಕೊಳ್ಳುವ ನಿರೀಕ್ಷೆಯಿದ್ದು, ಟೈಟಾನಿಕ್ ಇತಿಹಾಸವನ್ನು ಮೆಲುಕು ಹಾಕುತ್ತಾ ತನ್ನ ಪಯಣ ವಿಶ್ವದ್ಯಾಂತ ಮುಂದುವರಿಸಲಿದೆ.

MOST READ: ವಿಮಾನವನ್ನೇ ನಿರ್ಮಿಸಲು ಮುಂದಾಗಿದ್ದ ರೈತನೊಬ್ಬ ಕೊನೆಗೆ ಮಾಡಿದ್ದೇನು ಗೊತ್ತಾ?

ಚೊಚ್ಚಲ ಯಾನಕ್ಕೆ ಸಿದ್ದವಾದ 'ಟೈಟಾನಿಕ್ II' ಹಡುಗಿನಲ್ಲಿ ಏನುಂಟು ಏನಿಲ್ಲಾ?

ಮೊದಲ ಯಾನಕ್ಕಾಗಿ ಭಾರೀ ಬೇಡಿಕೆ..!

ಇನ್ನು ಗಮನಾರ್ಹ ಸಂಗತಿಯೆಂದರೆ ಆಸಕ್ತ ಶ್ರೀಮಂತ ವ್ಯಕ್ತಿಗಳು, ಟೈಟಾನಿಕ್ 2 ಹಡಗು ನಿರ್ಮಾಣ ಕಾರ್ಯದ ಸುದ್ದಿ ತಿಳಿಯುತ್ತಿದ್ದಂತೆಯೇ ಮೊದಲ ಯಾನಕ್ಕಾಗಿ 1 ಕೋಟಿ ರುಪಾಯಿಗಳನ್ನು ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಚೊಚ್ಚಲ ಯಾನಕ್ಕೆ ಸಿದ್ದವಾದ 'ಟೈಟಾನಿಕ್ II' ಹಡುಗಿನಲ್ಲಿ ಏನುಂಟು ಏನಿಲ್ಲಾ?

ದುರಂತದ ಹಿನ್ನೆಲೆ...

ಮುಳುಗಲಾರದ ಹಡಗು ಎಂದೇ ಖ್ಯಾತಿ ಪಡೆದಿದ್ದ ಟೈಟಾನಿಕ್ 1912ನೇ ಇಸವಿಯಲ್ಲಿ ಇಂಗ್ಲೆಂಡಿನಿಂದ ಅಮೆರಿಕಗೆ ಹೊರಟು ತನ್ನ ಮೊದಲ ಯಾನದಲ್ಲೇ ಸಮುದ್ರ ಮಧ್ಯೆ ನೀರ್ಗಲ್ಲಿನ ಬಂಡೆಗೆ ಬಡಿದು ಮುಳುಗಿ ಹೋಗಿತ್ತು.

MOST READ: ದೀಪಾವಳಿ ಹಬ್ಬಕ್ಕಾಗಿ ಉದ್ಯೋಗಿಗಳಿಗೆ 1600 ಕಾರುಗಳನ್ನು ಗಿಫ್ಟ್ ನೀಡಿದ ಉದ್ಯಮಿ..!

ಚೊಚ್ಚಲ ಯಾನಕ್ಕೆ ಸಿದ್ದವಾದ 'ಟೈಟಾನಿಕ್ II' ಹಡುಗಿನಲ್ಲಿ ಏನುಂಟು ಏನಿಲ್ಲಾ?

ಟೈಟಾನಿಕ್ ಅಂದಿನ ಕಾಲದ ಅತಿದೊಡ್ಡ ಹಾಗೂ ವೈಭಪೋಪೂರಿತ ಹಡಗಾಗಿತ್ತು. ಇದರ ಗಾತ್ರ ಸಾಮಾನ್ಯ ಫುಟ್ಬಾಲ್ ಮೈದಾನಕ್ಕಿಂತ ಮೂರು ಪಟ್ಟು ದೊಡ್ಡದಾಗಿತ್ತು. ಅದಲ್ಲದೆ ವಿಶ್ವದಲ್ಲೇ ವಿದ್ಯುತ್ ಚಾಲಿತ ಲೈಟ್ (ಎಲೆಕ್ಟ್ರಿಕ್) ಹಾಗೂ ಟೆಲಿಫೋನ್ ವ್ಯವಸ್ಥೆ ಹೊಂದಿದ್ದ ಅಂದಿನ ಅತ್ಯಾಧುನಿಕ ಹಡಗುಗಳಲ್ಲಿ ಒಂದಾಗಿತ್ತು.

ಚೊಚ್ಚಲ ಯಾನಕ್ಕೆ ಸಿದ್ದವಾದ 'ಟೈಟಾನಿಕ್ II' ಹಡುಗಿನಲ್ಲಿ ಏನುಂಟು ಏನಿಲ್ಲಾ?

ಟೈಟಾನಿಕ್‌ ಹಡಗಿನಲ್ಲಿ ಪಯಣಿಸಿದ್ದ 2220 ಪ್ರಯಾಣಿಕರಲ್ಲಿ 1700 ಜನರಿಗೆ ಬೇಕಾಗುವಷ್ಟು ಜೀವ ರಕ್ಷಕ ಬೋಟುಗಳಿದ್ದವು. ಅಲ್ಲದೆ ಲಭ್ಯವಿದ್ದ ಲೈಫ್ ಬೋಟುಗಳನ್ನೂ ಸರಿಯಾಗಿ ಬಳಸಿಕೊಳ್ಳಲಾಗಲಿಲ್ಲ. ಅನೇಕ ಲೈಫ್ ಬೋಟುಗಳು ತಮ್ಮ ಪೂರ್ಣ ಸಾಮರ್ಥ್ಯಕ್ಕಿಂತ ಕಡಿಮೆ ಜನರನ್ನು ಕೊಂಡೊಯ್ದವು. ಕಡೆಗೆ ಈ ದುರಂತದಲ್ಲಿ ಬದುಕುಳಿದವರ ಸಂಖ್ಯೆ ಕೇವಲ 705.

ಚೊಚ್ಚಲ ಯಾನಕ್ಕೆ ಸಿದ್ದವಾದ 'ಟೈಟಾನಿಕ್ II' ಹಡುಗಿನಲ್ಲಿ ಏನುಂಟು ಏನಿಲ್ಲಾ?

ಈ ನೈಜ ಘಟನೆಯನ್ನೇ ಆಧಾರವಾಗಿಟ್ಟುಕೊಂಡು ಹಾಲಿವುಡ್‌ನ ಪ್ರಸಿದ್ಧ ನಿರ್ದೇಶಕ ಜೇಮ್ಸ್ ಕ್ಯಾಮರೂನ್, 1997ರಲ್ಲಿ ಟೈಟಾನಿಕ್ ಎಂಬ ಚಲನಚಿತ್ರವನ್ನು ರಚಿಸಿದ್ದರು. ಚಿತ್ರದಲ್ಲಿ ಲಿಯಾನಾರ್ಡೊ ಡಿ ಕಾಪ್ರಿಯೊ ಹಾಗೂ ಕೇಟ್ ವಿನ್ಸ್ಲೆಟ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

MOST READ: ವಾಹನ ಚಾಲನೆ ವೇಳೆ ಈ ತಪ್ಪುಗಳನ್ನು ಮಾಡಿದ್ರೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ರದ್ದಾಗುತ್ತೆ..!

ಚೊಚ್ಚಲ ಯಾನಕ್ಕೆ ಸಿದ್ದವಾದ 'ಟೈಟಾನಿಕ್ II' ಹಡುಗಿನಲ್ಲಿ ಏನುಂಟು ಏನಿಲ್ಲಾ?

ಇದೀಗ ಅದೇ ಹೆಸರಿನೊಂದಿಗೆ ಟೈಟಾನಿಕ್ II ಕೂಡಾ ಸೇವೆಗೆ ಸಿದ್ದವಾಗುತ್ತಿದ್ದು, ಮಾಹಿತಿಗಳ ಪ್ರಕಾರ, 2021 ಕೊನೆಯಲ್ಲಿ ಇಲ್ಲವೇ 2022ರ ಆರಂಭದಲ್ಲಿ ಪೂರ್ಣಪ್ರಮಾಣದ ಸೇವೆಗಳನ್ನು ನೀಡಲಿದ್ದು, ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಪ್ರಯಾಣ ಮಾಡುವುದೇ ಒಂದು ರೋಚಕ ಅನುಭವ ಎನ್ನಬಹುದು.

Most Read Articles

ಭಾತರದಲ್ಲಿ ಹ್ಯುಂಡೈ ಸ್ಯಾಂಟ್ರೋ ಹವಾ ಮತ್ತೆ ಜೋರು..!

Kannada
English summary
All New Titanic II Ship To Set Sail in 2022.

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more