ಮರು ಹುಟ್ಟಿ ಬರಲಿರುವ 'ಟೈಟಾನಿಕ್' ಹಡಗು

Written By:

ಒಂದು ಶತಮಾನದ ಹಿಂದೆ ನಡೆದ ಮನುಕುಲದ ಅತಿ ದೊಡ್ಡ ಹಡಗು ದುರಂತ 'ಟೈಟಾನಿಕ್' ಮುಳುಗಿ ಹೋದ ಘಟನೆ ಇಂದಿಗೂ ಮಾಸದೇ ಹೋಗಿದೆ. 1912ನೇ ಇಸವಿಯಲ್ಲಿ ತನ್ನ ಮೊದಲ ಯಾನದಲ್ಲೇ ಮುಳುಗಿದ ಟೈಟಾನಿಕ್ ಹಡಗು ದುರಂತದಲ್ಲಿ 1500ರಷ್ಟು ಪ್ರಯಾಣಿಕರು ಸಾವನ್ನಪ್ಪಿದ್ದರು.

Also Read: ಟೈಟಾನಿಕ್ ಮುಳುಗಲಾರದ ಹಡಗಿನ 20 ಸತ್ಯಗಳು

ಅಂದಿನ ಕಾಲದ ವಿಶ್ವದ ಅತಿ ದೊಡ್ಡ ವೈಭಪೋಪೂರಿತ ಹಡಗೆಂಬ ಖ್ಯಾತಿಗೆ ಪಾತ್ರವಾಗಿದ್ದ ಟೈಟಾನಿಕ್ ಸಾಗರ ನಿರ್ಗಲ್ಲಿನ ಅಂಚಿಗೆ ಬಡಿದು ನೀರಲ್ಲಿ ಮುಳುಗಿ ಹೋಗಿತ್ತು. ಈಗ ಇದೇ ನೈಜ ಹಡಗನ್ನು ಆಧಾರವಾಗಿಟ್ಟುಕೊಂಡು 'ಟೈಟಾನಿಕ್ II' ಪುನರ್ಜನ್ಮ ಪಡೆಯಲು ಸಜ್ಜಾಗುತ್ತಿದೆ. ಈ ಸಂಬಂಧ ಆಸಕ್ತಿದಾಯಕ ಮಾಹಿತಿಗಳನ್ನು ಓದುಗರ ಮುಂದಿಡಲಿದ್ದೇವೆ.

ಮರು ಹುಟ್ಟಿ ಬರಲಿರುವ 'ಟೈಟಾನಿಕ್' ಹಡಗು

ಇಲ್ಲಿನ ಚಿತ್ರಗಳೇ ಸಾರುವಂತೆಯೇ 'ಟೈಟಾನಿಕ್ 2' ಅಕ್ಷರಶ: ನೈಜ ಟೈಟಾನಿಕ್ ಹಡಗಿನ ತದ್ರೂಪವೆನಿಸಲಿದೆ. ಈ ನಿಟ್ಟಿನಲ್ಲಿ ನಿರ್ಮಾಣದಲ್ಲಿ ಪ್ರತಿಯೊಂದು ಅಂಶವನ್ನು ಬಹಳ ಸೂಕ್ಷ್ಮವಾಗಿ ಗಮನದಲ್ಲಿಟ್ಟುಕೊಂಡು ನಿರ್ಮಿಸಲಾಗಿದೆ.

ಮರು ಹುಟ್ಟಿ ಬರಲಿರುವ 'ಟೈಟಾನಿಕ್' ಹಡಗು

ನೈಜ ಟೈಟಾನಿಕ್ ಹಡಗಿನ ಜೊತೆಗೆ ಉನ್ನತ್ತ ದರ್ಜೆಯ ಆಧುನಿಕ ಭದ್ರತಾ ವ್ಯವಸ್ಥೆಗಳನ್ನು ಹೊಂದಿರಲಿದೆ. ಅಂದರೆ ಆಧುನಿಕ ಸಂವಹನ ಹಾಗೂ ರಾಡಾರ್ ವ್ಯವಸ್ಥೆಗಳನ್ನು ಪಡೆಯಲಿದೆ.

ಮರು ಹುಟ್ಟಿ ಬರಲಿರುವ 'ಟೈಟಾನಿಕ್' ಹಡಗು

ಒಟ್ಟಾರೆ 840 ಕ್ಯಾಬಿನ್ ಗಳು ಇದರಲ್ಲಿದ್ದು, ಏಕಕಾಲಕ್ಕೆ 2435 ಮಂದಿ ಪ್ರಯಾಣಿಕರಿಗೆ ವಿಹಾರ ಯಾನ ಕೈಗೊಳ್ಳಬಹುದಾಗಿದೆ. ಇವೆಲ್ಲರ ಸೇವೆಗಾಗಿ 900 ಮಂದಿ ಸಿಬ್ಬಂದಿಗಳನ್ನು ನೇಮಕ ಮಾಡಲಾಗುವುದು.

ಮರು ಹುಟ್ಟಿ ಬರಲಿರುವ 'ಟೈಟಾನಿಕ್' ಹಡಗು

1912ರ ಟೈಟಾನಿಕ್ ಹಡಗು ದುರಂತದ ಬಳಿಕ ಕಂಡುಬಂದ ದೊಡ್ಡ ಭದ್ರತಾ ವೈಫಲ್ಯ ಯಾನದಲ್ಲಿ ಪಯಣಿಸುವ ಎಲ್ಲ ಪ್ರಯಾಣಿಕರಿಗೆ ಜೀವ ರಕ್ಷಕ ಬೋಟ್ ಗಳ ಕೊರತೆಯಿತ್ತು. ಟೈಟಾನಿಕ್ 2 ಈ ಸಮಸ್ಯೆ ನಿವಾರಣೆಯಾಗಲಿದ್ದು, ಪ್ರತಿಯೊಬ್ಬರಿಗೂ ಜೀವರಕ್ಷಕ ಬೋಟ್ ಸೇವೆ ಖಾತ್ರಿಪಡಿಸಲಿದೆ.

ಮರು ಹುಟ್ಟಿ ಬರಲಿರುವ 'ಟೈಟಾನಿಕ್' ಹಡಗು

ನೈಜ ಹಡಗಿಗೆ ಹೋಲಿಸಿದಾಗ ಟೈಟಾನಿಕ್ 2, 13 ಅಡಿಯಷ್ಟು ಹೆಚ್ಚು ಅಗಲವಾಗಿರಲಿದೆ. ಆದರೆ ಉದ್ದ, ಎತ್ತರ ಎಲ್ಲವೂ ಸಮಾನವಾಗಿರಲಿದ್ದು, ಒಂಬತ್ತು ಡೆಕ್ ಪಡೆಯಲಿದೆ.

ಮರು ಹುಟ್ಟಿ ಬರಲಿರುವ 'ಟೈಟಾನಿಕ್' ಹಡಗು

ಅಷ್ಟಕ್ಕೂ ಆಸ್ಟ್ರೇಲಿಯಾದ ಬಿಲಿಯನೇರ್ ಉದ್ಯಮಿ ಹಾಗೂ ರಾಜಕಾರಣಿ ಕ್ಲೈವ್ ಪಾಲ್ಮರ್ ಎಂಬವರಿಗೆ ಸೇರಿದ ಹಡಗು ಇದಾಗಿದ್ದು, ಬರೋಬ್ಬರಿ 3000 ಕೋಟಿ ರುಪಾಯಿಗಳಷ್ಟು ದುಬಾರಿ ಎನಿಸಿಕೊಳ್ಳಲಿದೆ.

ಮರು ಹುಟ್ಟಿ ಬರಲಿರುವ 'ಟೈಟಾನಿಕ್' ಹಡಗು

ಪ್ರಥಮ, ದ್ವಿತೀಯ ಹಾಗೂ ತೃತೀಯ ದರ್ಜೆಯ ಟಿಕೆಟ್ ವ್ಯವಸ್ಥೆಗಳನ್ನು ಹೊಂದಿರುವ ಟೈಟಾನಿಕ್ ಹಡಗಿನಲ್ಲಿ ವಿಶೇಷ ಟರ್ಕಿಶ್ ಸ್ನಾನಗೃಹ, ಎಡ್ವರ್ಡಿಯನ್ ಜಿಮ್, ಧೂಮಪಾನ ಕೊಠಡಿ, ಗ್ರ್ಯಾಂಡ್ ಸ್ಟೇರ್ ಕೇಸ್, ಬೋಟ್ ಡೆಕ್ ಇತ್ಯಾದಿ ಸೌಲಭ್ಯಗಳಿರಲಿದೆ.

ಮರು ಹುಟ್ಟಿ ಬರಲಿರುವ 'ಟೈಟಾನಿಕ್' ಹಡಗು

ಬ್ಲೂ ಸ್ಟಾರ್ ಲೈನ್ ಸಂಸ್ಥೆ ಕೈಗೆತ್ತಿಕೊಂಡಿರುವ ಈ ಮಹತ್ತರ ಯೋಜನೆಯು 2018ನೇ ಸಾಲಿನಲ್ಲಿ ಚೊಚ್ಚಲ ಯಾನ ಹಮ್ಮಿಕೊಳ್ಳುವ ನಿರೀಕ್ಷೆಯಿದ್ದು, ಟೈಟಾನಿಕ್ ಇತಿಹಾಸವನ್ನು ಮೆಲುಕು ಹಾಕುತ್ತಾ ತನ್ನ ಪಯಣ ವಿಶ್ವದ್ಯಾಂತ ಮುಂದುವರಿಸಲಿದೆ.

ಮರು ಹುಟ್ಟಿ ಬರಲಿರುವ 'ಟೈಟಾನಿಕ್' ಹಡಗು

ಇನ್ನು ಗಮನಾರ್ಹ ಸಂಗತಿಯೆಂದರೆ ಆಸಕ್ತ ಶ್ರೀಮಂತ ವ್ಯಕ್ತಿಗಳು, ಟೈಟಾನಿಕ್ 2 ಹಡಗು ನಿರ್ಮಾಣ ಕಾರ್ಯದ ಸುದ್ದಿ ತಿಳಿಯುತ್ತಿದ್ದಂತೆಯೇ ಮೊದಲ ಯಾನಕ್ಕಾಗಿ ಕೋಟಿ ರುಪಾಯಿಗಳನ್ನು ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳುತ್ತಿದ್ದಾರೆ.

 ಹಿನ್ನೆಲೆ...

ಹಿನ್ನೆಲೆ...

ಮುಳುಗಲಾರದ ಹಡಗು ಎಂದೇ ಖ್ಯಾತಿ ಪಡೆದಿದ್ದ ಟೈಟಾನಿಕ್ 1912ನೇ ಇಸವಿಯಲ್ಲಿ ಇಂಗ್ಲೆಂಡಿನಿಂದ ಅಮೆರಿಕಗೆ ಹೊರಟು ತನ್ನ ಮೊದಲ ಯಾನದಲ್ಲೇ ಸಮುದ್ರ ಮಧ್ಯೆ ನೀರ್ಗಲ್ಲಿನ ಬಂಡೆಗೆ ಬಡಿದು ಮುಳುಗಿ ಹೋಗಿತ್ತು.

ಹಿನ್ನೆಲೆ...

ಹಿನ್ನೆಲೆ...

ಟೈಟಾನಿಕ್ ಅಂದಿನ ಕಾಲದ ಅತಿದೊಡ್ಡ ಹಾಗೂ ವೈಭಪೋಪೂರಿತ ಹಡಗಾಗಿತ್ತು. ಇದರ ಗಾತ್ರ ಸಾಮಾನ್ಯ ಫುಟ್ಬಾಲ್ ಮೈದಾನಕ್ಕಿಂತ ಮೂರು ಪಟ್ಟು ದೊಡ್ಡದಾಗಿತ್ತು.

ಹಿನ್ನೆಲೆ...

ಹಿನ್ನೆಲೆ...

ಟೈಟಾನಿಕ್, ವಿಶ್ವದಲ್ಲೇ ವಿದ್ಯುತ್ ಚಾಲಿತ ಲೈಟ್ (ಎಲೆಕ್ಟ್ರಿಕ್) ಹಾಗೂ ಟೆಲಿಫೋನ್ ವ್ಯವಸ್ಥೆ ಹೊಂದಿದ್ದ ಅಂದಿನ ಅತ್ಯಾಧುನಿಕ ಹಡಗುಗಳಲ್ಲಿ ಒಂದಾಗಿತ್ತು.

ಹಿನ್ನೆಲೆ...

ಹಿನ್ನೆಲೆ...

ಟೈಟಾನಿಕ್‌ ಹಡಗಿನಲ್ಲಿ ಪಯಣಿಸಿದ್ದ 2220 ಪ್ರಯಾಣಿಕರಲ್ಲಿ 1700 ಜನರಿಗೆ ಬೇಕಾಗುವಷ್ಟು ಜೀವ ರಕ್ಷಕ ಬೋಟುಗಳಿದ್ದವು. ಅಲ್ಲದೆ ಲಭ್ಯವಿದ್ದ ಲೈಫ್ ಬೋಟುಗಳನ್ನೂ ಸರಿಯಾಗಿ ಬಳಸಿಕೊಳ್ಳಲಾಗಲಿಲ್ಲ. ಅನೇಕ ಲೈಫ್ ಬೋಟುಗಳು ತಮ್ಮ ಪೂರ್ಣ ಸಾಮರ್ಥ್ಯಕ್ಕಿಂತ ಕಡಿಮೆ ಜನರನ್ನು ಕೊಂಡೊಯ್ದವು. ಕಡೆಗೆ ಈ ದುರಂತದಲ್ಲಿ ಬದುಕುಳಿದವರ ಸಂಖ್ಯೆ ಕೇವಲ 705.

ಹಿನ್ನೆಲೆ...

ಹಿನ್ನೆಲೆ...

ಈ ನೈಜ ಘಟನೆಯನ್ನೇ ಆಧಾರವಾಗಿಟ್ಟುಕೊಂಡು ಹಾಲಿವುಡ್‌ನ ಪ್ರಸಿದ್ಧ ನಿರ್ದೇಶಕ ಜೇಮ್ಸ್ ಕ್ಯಾಮರೂನ್, 1997ರಲ್ಲಿ ಟೈಟಾನಿಕ್ ಎಂಬ ಚಲನಚಿತ್ರವನ್ನು ರಚಿಸಿದ್ದರು. ಚಿತ್ರದಲ್ಲಿ ಲಿಯಾನಾರ್ಡೊ ಡಿ ಕಾಪ್ರಿಯೊ ಹಾಗೂ ಕೇಟ್ ವಿನ್ಸ್ಲೆಟ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಇವನ್ನೂ ಓದಿ...

01. ಪುನರ್ಜನ್ಮ ಪಡೆಯಲಿರುವ ಟೈಟಾನಿಕ್ ಹಡಗು

02. ಟೈಟಾನಿಕ್ ಹಡಗಿಗೆ ಸಂಬಂಧಪಟ್ಟ 10 ರೋಚಕ ಸತ್ಯಗಳು

English summary
Titanic II: An exact replica of the original ship, will set sail in 2018
Story first published: Monday, February 22, 2016, 12:15 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark