ರೂ.9 ಕೋಟಿಗೆ ಹರಾಜು ಮೂಲಕ ಮಾರಾಟವಾಯ್ತು 1935ರ ಮಾದರಿಯ ಡಸೆನ್‌ಬರ್ಗ್ ಕಾರು

ಹಳೆಯ ವಿಂಟೇಜ್ ವಾಹನಗಳು ಯಾವಾಗಲೂ ಕಾರು ಪ್ರಿಯರಲ್ಲಿ ಹೆಚ್ಚು ಜನಪ್ರಿಯವಾಗಿವೆ. ಅದರಲ್ಲೂ ಐಷಾರಾಮಿ ವಿಂಟೇಜ್ ಕಾರುಗಳು ಸದಾ ಕಾಲ ಆಟೋ ಉತ್ಸಾಹಿಗಳ ಗಮನ ಸೆಳೆಯುತ್ತವೆ.

ರೂ.9 ಕೋಟಿಗೆ ಹರಾಜು ಮೂಲಕ ಮಾರಾಟವಾಯ್ತು 1935ರ ಮಾದರಿಯ ಡಸೆನ್‌ಬರ್ಗ್ ಕಾರು

ಇದಕ್ಕೆ ಪುಷ್ಟಿ ನೀಡುವಂತಹ ಘಟನೆಯೊಂದು ಅಮೆರಿಕಾದಲ್ಲಿ ನಡೆದಿದೆ. 1935ರ ಮಾದರಿಯ ಡಸೆನ್‌ಬರ್ಗ್ ಜೆಎನ್ ಕನ್ವರ್ಟಿಬಲ್ ಸೆಡಾನ್ ಕಾರ್ ಅನ್ನು 1.34 ಮಿಲಿಯನ್ ಅಮೆರಿಕನ್ ಡಾಲರ್'ಗಳಿಗೆ ಹರಾಜು ಹಾಕಲಾಗಿದೆ. ಅಂದರೆ ಭಾರತದ ರೂಪಾಯಿ ಮೌಲ್ಯದಲ್ಲಿ ರೂ.9.9 ಕೋಟಿಗಳಿಗೆ ಹರಾಜು ಹಾಕಲಾಗಿದೆ.

ರೂ.9 ಕೋಟಿಗೆ ಹರಾಜು ಮೂಲಕ ಮಾರಾಟವಾಯ್ತು 1935ರ ಮಾದರಿಯ ಡಸೆನ್‌ಬರ್ಗ್ ಕಾರು

ಈ ಆನ್‌ಲೈನ್ ಹರಾಜಿನ ಮೂಲಕ ಅಮೆರಿಕಾದ ಹರಾಜು ಕಂಪನಿಯು ಹೆಚ್ಚು ಲಾಭ ಗಳಿಸಿದೆ ಎಂದು ವರದಿಯಾಗಿದೆ. ಇಷ್ಟು ಭಾರೀ ಮೊತ್ತವನ್ನು ಪಡೆಯುವ ಮೂಲಕ ಈ ಕಾರು ಹಿಂದಿನ ಎಲ್ಲಾ ಹರಾಜು ದಾಖಲೆಗಳನ್ನು ಹಿಂದಿಕ್ಕಿದೆ ಎಂದು ವರದಿಯಾಗಿದೆ.

ರೂ.9 ಕೋಟಿಗೆ ಹರಾಜು ಮೂಲಕ ಮಾರಾಟವಾಯ್ತು 1935ರ ಮಾದರಿಯ ಡಸೆನ್‌ಬರ್ಗ್ ಕಾರು

ಈ ಹಿಂದೆ 1956ರ ಮಾದರಿಯ ಮರ್ಸಿಡಿಸ್ ಬೆಂಝ್ 300 ಎಸ್ಎಲ್ ಕಾರ್ ಅನ್ನು 1.23 ಮಿಲಿಯನ್ ಅಮೆರಿಕನ್ ಡಾಲರ್'ಗಳಿಗೆ ಹರಾಜು ಹಾಕಲಾಗಿತ್ತು. ಅಂದರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ ರೂ.9.1 ಕೋಟಿಗಳಿಗೆ ಹರಾಜು ಹಾಕಲಾಗಿತ್ತು.

ರೂ.9 ಕೋಟಿಗೆ ಹರಾಜು ಮೂಲಕ ಮಾರಾಟವಾಯ್ತು 1935ರ ಮಾದರಿಯ ಡಸೆನ್‌ಬರ್ಗ್ ಕಾರು

ಈ ಹರಾಜು ಪ್ರಕ್ರಿಯೆ 2019ರ ಜೂನ್‌ನಲ್ಲಿ ನಡೆದಿತ್ತು. ಈಗ ಹರಾಜು ಹಾಕಲಾದ ಡಸೆನ್‌ಬರ್ಗ್ ಕಾರು ಮೊದಲ ಬಾರಿ 1913ರಲ್ಲಿ ಮಾರಾಟವಾಗಿತ್ತು. ಆಗ ಈ ಕಾರಿನ ಕೇವಲ 10 ಯುನಿಟ್'ಗಳನ್ನು ಮಾರಾಟ ಮಾಡಲಾಗಿತ್ತು.

ರೂ.9 ಕೋಟಿಗೆ ಹರಾಜು ಮೂಲಕ ಮಾರಾಟವಾಯ್ತು 1935ರ ಮಾದರಿಯ ಡಸೆನ್‌ಬರ್ಗ್ ಕಾರು

ಇವುಗಳಲ್ಲಿ ಒಂದು ಕಾರನ್ನು ಈಗ ವಿಶ್ವವೇ ಬೆರಗುಗೊಳ್ಳುವ ರೀತಿಯಲ್ಲಿ ಹರಾಜು ಹಾಕಲಾಗಿದೆ. ಈ ಡಸೆನ್‌ಬರ್ಗ್ ಕಾರಿನಲ್ಲಿ 6.9 ಲೀಟರ್ ಲಿಗೇಮ್ ಇನ್ ಲೈನ್ ​​8 ಎಂಜಿನ್ ಅಳವಡಿಸಲಾಗಿದೆ.

ರೂ.9 ಕೋಟಿಗೆ ಹರಾಜು ಮೂಲಕ ಮಾರಾಟವಾಯ್ತು 1935ರ ಮಾದರಿಯ ಡಸೆನ್‌ಬರ್ಗ್ ಕಾರು

ಈ ಎಂಜಿನ್ 198 ಕಿ.ವ್ಯಾ ಅಂದರೆ 265 ಬಿ‌ಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಈ ಎಂಜಿನ್ 3 ಸ್ಪೀಡ್ ಮ್ಯಾನ್ಯುಯಲ್ ಟ್ರಾನ್ಸ್'ಮಿಷನ್ ನಲ್ಲಿ ಚಲಿಸುತ್ತದೆ. ಈ ಕಾರಿನಲ್ಲಿ ಆರಾಮದಾಯಕ ಸೀಟ್ ಸೇರಿದಂತೆ ಹಲವು ಪ್ರೀಮಿಯಂ ಫೀಚರ್'ಗಳನ್ನು ನೀಡಲಾಗಿದೆ.

ರೂ.9 ಕೋಟಿಗೆ ಹರಾಜು ಮೂಲಕ ಮಾರಾಟವಾಯ್ತು 1935ರ ಮಾದರಿಯ ಡಸೆನ್‌ಬರ್ಗ್ ಕಾರು

ಇದರ ಜೊತೆಗೆ ಈ ಕಾರಿನಲ್ಲಿ 17 ಇಂಚಿನ ವೈರ್ ವ್ಹೀಲ್, ಬಲ ಹಾಗೂ ಎಡ ಬದಿಗಳಲ್ಲಿ ಎರಡು ಸ್ಪೇರ್ ವ್ಹೀಲ್'ಗಳನ್ನು ನೀಡಲಾಗಿದೆ. ಡುಸೆನ್‌ಬರ್ಗ್ ಕಾರು 1935ರ ಮಾದರಿಯಾಗಿದ್ದರೂ ನೋಡಲು ಹೊಸದರಂತೆ ಕಾಣುತ್ತದೆ.

ರೂ.9 ಕೋಟಿಗೆ ಹರಾಜು ಮೂಲಕ ಮಾರಾಟವಾಯ್ತು 1935ರ ಮಾದರಿಯ ಡಸೆನ್‌ಬರ್ಗ್ ಕಾರು

ಈ ಕಾರ್ ಅನ್ನು ಹರಾಜು ಹಾಕಿದ ಕಂಪನಿಯು ಈ ಕಾರ್ ಅನ್ನು ಹರಾಜು ಮೂಲಕ ಖರೀದಿಸಿದವರಿಗೆ ಕಾರಿನ ದಾಖಲೆಗಳನ್ನು ಮಾತ್ರವಲ್ಲದೆ ಕಾರಿನ ಕೆಲವು ಹಳೆಯ ಫೋಟೋಗಳನ್ನು ಸಹ ನೀಡಿದೆ.

ಚಿತ್ರ ಕೃಪೆ: ಬ್ರಿಂಗ್ ಎ ಟ್ರೈಲರ್

Most Read Articles

Kannada
English summary
1935 model Duesenberg JN convertible sedan car sold for Rs.9.9 crore through auction. Read in Kannada.
Story first published: Tuesday, June 29, 2021, 19:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X