Bengaluru tunnel road: ಸುರಂಗ ರಸ್ತೆಯಿಂದ ಬೆಂಗಳೂರಿನಲ್ಲಿ ಅನಾಹುತ? ತಜ್ಞರ ಶಾಕಿಂಗ್ ವರದಿ!

ಬೆಂಗಳೂರಿನಲ್ಲಿ ಸಂಚಾರಿ ದಟ್ಟಣೆ (Traffic) ಸಮಸ್ಯೆಗೆ ಮುಕ್ತಿ ನೀಡಲು ರಾಜ್ಯ ಸರ್ಕಾರ ಮುಂದಾಗಿದ್ದು, 195 ಕಿಲೋಮೀಟರ್ ಸುರಂಗ ರಸ್ತೆ (Tunnel Road) ನಿರ್ಮಿಸಲು ಯೋಜನೆ ರೂಪಿಸುತ್ತಿದೆ. ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ತಜ್ಞರು ವರದಿ ಸಲ್ಲಿಸಿದ್ದು, ಇದು ನಗರಕ್ಕೆ ಮಾರಕವಾಗಲಿದೆ (Disaster) ಎಂದು ತಿಳಿಸಿದೆ.

ಇದರಿಂದ ಸಂಚಾರ ದಟ್ಟಣೆ ಹಾಗೂ ವಾಯುಮಾಲಿನ್ಯ ಸಮಸ್ಯೆಯನ್ನು ಕಡಿಮೆಗೊಳಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದೆ. ಬ್ರಾಂಡ್ ಬೆಂಗಳೂರು (Brand Bengaluru) ಪರಿಕಲ್ಪನೆ (concept) ಭಾಗವಾಗಿ ಸೆಪ್ಟೆಂಬರ್ 5ರಂದು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಅದರ ಹೊರತಾಗಿಯೂ ಅಕ್ಟೋಬರ್ 5 ರಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಉದ್ದೇಶಿತ ಸುರಂಗ ರಸ್ತೆ ಯೋಜನೆಗೆ 45 ದಿನಗಳಲ್ಲಿ ಟೆಂಡರ್ ಆಹ್ವಾನಿಸಲಾಗುವುದು ಎಂದು ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Bengaluru tunnel road: ಸುರಂಗ ರಸ್ತೆಯಿಂದ ಬೆಂಗಳೂರಿನಲ್ಲಿ ಅನಾಹುತ? ತಜ್ಞರ ಶಾಕಿಂಗ್ ವರದಿ!

ಈ ಸುರಂಗ ರಸ್ತೆಗೆ ದೊಡ್ಡಮಟ್ಟದ ಅನುದಾನ ಬೇಕಿರುವುದರಿಂದ ಹಂತ-ಹಂತವಾಗಿ ಅನುಷ್ಠಾನಗೊಳಿಸಲು ಸರ್ಕಾರ ಯೋಜಿಸುತ್ತಿದೆ. ಬಳ್ಳಾರಿ ರಸ್ತೆ, ಹಳೆ ಮದ್ರಾಸ್ ರಸ್ತೆ, ಚಾಲುಕ್ಯ ಸರ್ಕಲ್, ಟ್ರಿನಿಟಿ ಸರ್ಕಲ್, ಸರ್ಜಾಪುರ ರಸ್ತೆ, ಹೊಸೂರು ರಸ್ತೆ, ಮೈಸೂರು ರಸ್ತೆಯಿಂದ ಶಿರಸಿ ವೃತ್ತ, ಮಾಗಡಿ ರಸ್ತೆ, ತುಮಕೂರು ರಸ್ತೆಯಿಂದ ಯಶವಂತಪುರ ಜಂಕ್ಷನ್, ಹೊರ ವರ್ತುಲ ರಸ್ತೆ, ಗೊರಗುಂಟೆಪಾಳ್ಯ, ಕೆಆರ್ ಪುರಂ ಸೇರಿದಂತೆ ವಿವಿಧೆಡೆ ಸುರಂಗ ರಸ್ತೆ ನಿರ್ಮಾಣಕ್ಕೆ ಸ್ಥಳವನ್ನು ಗುರುತಿಸಲಾಗಿದೆ.

ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರು, 2020 ರಿಂದ 2030ರ ವಾಹನ ದಟ್ಟಣೆಯನ್ನು ವಿಶ್ಲೇಷಿಸಿ, ಸುರಂಗ ರಸ್ತೆ ನಿರ್ಮಾಣ (Tunnel road construction), ಸುರಂಗ ಹೊರತಾಗಿಯೂ ರಸ್ತೆ (without tunnel road construction), ಸುರಂಗ ರಸ್ತೆಯ ಬದಲಿಗೆ ಮೆಟ್ರೋ ನಿರ್ಮಾಣದ (Metro constructed instead of tunnel road) ಮಾರು ಮಾದರಿಗಳನ್ನು ಅಧ್ಯಯನ ಮಾಡಿದ್ದಾರೆ. ಮೆಟ್ರೋ ಉತ್ತಮ ಸಾರಿಗೆ ವಿಧಾನವಾಗಿದೆ ಎಂದು ತಿಳಿಸಿದೆ.

3.5 ಮೀಟರ್ (ಅಗಲ) ಅಳತೆಯಲ್ಲಿ ನಿರ್ಮಾಣಗೊಳ್ಳುವ 1 ಕಿಲೋಮೀಟರ್ ಸುರಂಗ ರಸ್ತೆಯ ಏಕಮುಖ ಸಂಚಾರದಲ್ಲಿ (per direction) ವಿವಿಧ ವಾಹನಗಳಲ್ಲಿ 1,200 ಪ್ರಯಾಣಿಕರು ಸಾಗಬಹುದು. ಇದೇ ಅಗಲದಲ್ಲಿ ಮೆಟ್ರೋ ಟ್ರ್ಯಾಕ್ ನಿರ್ಮಾಣ ಮಾಡಿ, 9 ಕೋಚ್‌ ರೈಲನ್ನು ಓಡಿಸಿದರೆ 69,000 ಮಂದಿ ಪ್ರಯಾಣಿಸಬಹುದು. ಹೀಗಾಗಿ, ಆ ನಿರ್ಮಾಣ ವೆಚ್ಚಕ್ಕೆ ಹೋಲಿಸಿದರೆ, ಮೆಟ್ರೋ ರೈಲು ಶೇಕಡ 40% ಹೆಚ್ಚು ಲಾಭದಾಯಕವಾಗಿದೆ.

ಮೆಟ್ರೋ ರೈಲು ಟ್ರ್ಯಾಕ್ ನಿರ್ಮಾಣಕ್ಕೆ ಉಪಯೋಗಿಸುವ ಸುರಂಗ ಕೊರೆಯುವ ಯಂತ್ರವನ್ನು ಟನೆಲ್ ರೋಡ್ ಯೋಜನೆಗೂ ಬಳಕೆ ಮಾಡಲಾಗುತ್ತಿದೆ. ಆ ಕಾರಣಕ್ಕೆ ಅದೇ ವೆಚ್ಚದಲ್ಲಿ ಸುರಂಗ ರಸ್ತೆ ಕಾಮಗಾರಿ ಮಾಡುವ ಬದಲು ಮೆಟ್ರೋ ಲೈನ್ ಹಾಕಿದರೆ, ಹೆಚ್ಚಿನ ಪ್ರಯಾಣಿಕರು ಒಂದು ಬಡಾವಣೆಯಿಂದ ಮತ್ತೊಂದು ಬಡಾವಣೆಗೆ ಸುಲಭವಾಗಿ ಸಂಚರಿಬಹುದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಧ್ಯಯನದ ವರದಿ ಪ್ರಕಾರ, ಉದ್ದೇಶಿತ ಸುರಂಗ ರಸ್ತೆಯಲ್ಲಿ ಬಸ್‌ಗಳಿಗೆ ಹೋಲಿಸಿದರೆ ಕಾರು ಹಾಗೂ ದ್ವಿಚಕ್ರ ವಾಹನಗಳ ದಟ್ಟಣೆಯೇ ಹೆಚ್ಚಿನ ಪ್ರಮಾಣದಲ್ಲಿರಲಿದೆ. ಸುರಂಗ ರಸ್ತೆ ನಿರ್ಮಿಸಿದರೆ (2023) ವಾಹನಗಳ ಸಂಖ್ಯೆಯಲ್ಲಿ ಶೇಕಡ 2.7% ಹೆಚ್ಚಳವಾಗಲಿದೆ. ಅದೇ ಮೆಟ್ರೋದಿಂದ ವಾಹನಗಳ ಸಂಖ್ಯೆ ಶೇಕಡ 5.3% ಕಡಿಮೆಯಾಗಲಿದೆ ಎಂದು ವರದಿ ಹೇಳಿದೆ.

2031ರ ವೇಳೆಗೆ ಸುರಂಗ ರಸ್ತೆ ಬದಲಿಗೆ ಮೆಟ್ರೋ ನಿರ್ಮಾಣ ಮಾಡಿದರೆ, ಬೆಂಗಳೂರು ನಗರದಲ್ಲಿ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ಪ್ರಮಾಣ ಶೇಕಡ 18.6% ರಿಂದ 14.8%ಗೆ ತಗ್ಗಲಿದೆ. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಸುರಂಗ ರಸ್ತೆ ನಿರ್ಮಾಣಗೊಂಡರೆ (2031) ಪ್ರತಿವರ್ಷ ಅಪಘಾತದಲ್ಲಿ ಸಾವನ್ನಪ್ಪುವವರ ಸಂಖ್ಯೆ 1,069ಕ್ಕೆ ಹೆಚ್ಚಾಗುವ ನಿರೀಕ್ಷೆಯಿದೆ. ಅದೇ ಮೆಟ್ರೋ ಮಾರ್ಗ ನಿರ್ಮಾಣಗೊಂಡರೆ, 830ಕ್ಕೆ ಇಳಿಕೆಯಾಗಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, October 14, 2023, 14:01 [IST]
English summary
195 km tunnel roads disaster for bengaluru iisc study
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+