ರೈತರ ಬೆಳೆ ರಕ್ಷಣೆಗಾಗಿ ಉಪಗ್ರಹ ತಯಾರಿಸಲು ಮುಂದಾದ ಯುವಕರು

ಉಪಗ್ರಹಗಳ ಬಗ್ಗೆ ಯೋಚಿಸುವಾಗ ನಮ್ಮ ಮನಸ್ಸು ಮೊದಲು ಬಾಹ್ಯಾಕಾಶ ಸಂಸ್ಥೆಗಳು ನೂರಾರು ಕೋಟಿ ಖರ್ಚು ಮಾಡಿ ಉಡಾವಣೆಗೊಳಿಸುವ ಬೃಹತ್ ಉಪಗ್ರಹಗಳತ್ತ ಹೋಗುತ್ತದೆ. ಈ ಬೃಹತ್ ಗಾತ್ರದ ಉಪಗ್ರಹಗಳು ಬಾಹ್ಯಾಕಾಶದಿಂದ ಭೂಮಿಗೆ ಹೈಟೆಕ್ ಡೇಟಾವನ್ನು ತಲುಪಿಸುತ್ತವೆ.

ರೈತರ ಬೆಳೆ ರಕ್ಷಣೆಗಾಗಿ ಉಪಗ್ರಹ ತಯಾರಿಸಲು ಮುಂದಾದ ಯುವಕರು

ಇದು ಯಾರೂ ಅಲ್ಲಗಳೆಯದ ಸತ್ಯವಾಗಿದೆ. ಆದರೆ ಕೆಲವು ಸ್ವತಂತ್ರ ಬಾಹ್ಯಾಕಾಶ ಸಂಸ್ಥೆಗಳು ಚಿಕ್ಕ ಉಪಗ್ರಹಗಳನ್ನು ತಯಾರಿಸುತ್ತವೆ. ಭಾರತೀಯ ಯುವಕರಿಬ್ಬರು ಇದೇ ರೀತಿಯ ಚಿಕ್ಕ ಉಪಗ್ರಹಗಳನ್ನು ಉಡಾಯಿಸಲು ಮುಂದಾಗಿದ್ದಾರೆ.

ರೈತರ ಬೆಳೆ ರಕ್ಷಣೆಗಾಗಿ ಉಪಗ್ರಹ ತಯಾರಿಸಲು ಮುಂದಾದ ಯುವಕರು

ಈ ಉಪಗ್ರಹಗಳನ್ನು ರೈತರ ಸಹಾಯಕ್ಕಾಗಿ ಉಡಾಯಿಸಲಾಗುತ್ತಿದೆ. ಇವುಗಳ ಸಹಾಯದಿಂದ ರೈತರು ತಮ್ಮ ಬೆಳೆಗಳ ರಕ್ಷಣೆಯನ್ನು ಮಾಡಬಹುದು. 22 ವರ್ಷದ ಬಿಟ್ಸ್ ಪಿಳನಿಯ ಹಳೆಯ ವಿದ್ಯಾರ್ಥಿ ಕ್ಷಿತಿಜ್ ಕಂಡೇಲ್‍‍ವಾಲ್ ಹಾಗೂ ಅವರ ಸಹಪಾಠಿ ಅವೈಸ್ ಅಹಮದ್‍‍ರವರು ತಮ್ಮ ಚಿಕ್ಕ ಉಪಗ್ರಹಗಳನ್ನು ಉಡಾಯಿಸಲಿದ್ದಾರೆ.

ರೈತರ ಬೆಳೆ ರಕ್ಷಣೆಗಾಗಿ ಉಪಗ್ರಹ ತಯಾರಿಸಲು ಮುಂದಾದ ಯುವಕರು

ಇವರಿಬ್ಬರೂ ಶೂ ಬಾಕ್ಸ್ ನಷ್ಟು ಚಿಕ್ಕದಾಗಿರುವ ಉಪಗ್ರಹವನ್ನು ಉಡಾಯಿಸಲಿದ್ದಾರೆ. ಇವರಿಬ್ಬರೂ ಜೊತೆಗೂಡಿ 18 ತಿಂಗಳ ಹಿಂದಷ್ಟೇ ಪಿಕ್ಸೆಲ್ ಎಂಬ ಕಂಪನಿಯನ್ನು ಆರಂಭಿಸಿದ್ದರು. ಈ ಕಂಪನಿಯು ಹೆಚ್ಚಿನ ಗುಣಮಟ್ಟದ ಸ್ಯಾಟೆಲೈಟ್‍ ಫೋಟೊ‍ಗಳನ್ನು ಅಭಿವೃದ್ಧಿಪಡಿಸುತ್ತದೆ. ಇದರಲ್ಲಿ ಕೃಷಿ, ಹವಾಮಾನ, ವಾಯು ಗುಣಮಟ್ಟ ಇತ್ಯಾದಿಗಳು ಸೇರಿರಲಿವೆ.

ರೈತರ ಬೆಳೆ ರಕ್ಷಣೆಗಾಗಿ ಉಪಗ್ರಹ ತಯಾರಿಸಲು ಮುಂದಾದ ಯುವಕರು

ಇವರೊಂದಿಗೆ ಭಾರತದ ಇಸ್ರೋ ಸಂಸ್ಥೆಯ ಮಾಜಿ ಉದ್ಯೋಗಿಗಳು ಕೈಜೋಡಿಸಿದ್ದಾರೆ. ಇವರ ಅನುಭವದ ಸಹಾಯದಿಂದ ಕ್ಷಿತಿಜ್ ಹಾಗೂ ಅವೈಸ್ ಅಹಮದ್‍‍ರವರು ತಮ್ಮ ಯೋಜನೆಯನ್ನು ಯಶಸ್ವಿಯಾಗಿಸಲು ಪ್ರಯತ್ನಿಸುತ್ತಿದ್ದಾರೆ.

ರೈತರ ಬೆಳೆ ರಕ್ಷಣೆಗಾಗಿ ಉಪಗ್ರಹ ತಯಾರಿಸಲು ಮುಂದಾದ ಯುವಕರು

ಇವರು ಅಭಿವೃದ್ಧಿಪಡಿಸುತ್ತಿರುವ ಮೊದಲ ಉಪಗ್ರಹವನ್ನು ರಷ್ಯಾದ ಸೊಯುಜ್ ರಾಕೆಟ್‍‍ನಿಂದ 2020ರ ಜೂನ್‍‍ನಲ್ಲಿ ಉಡಾಯಿಸಲಾಗುವುದು. ಉಪಗ್ರಹಗಳನ್ನು ಹೇಗೆ ತಯಾರಿಸಲಾಗುತ್ತದೆ. ಹೇಗೆ ಉಡಾಯಿಸಲಾಗುತ್ತದೆ, ಇದರಲ್ಲಿರುವ ಸವಾಲುಗಳೇನು ಎಂಬುದರ ಬಗ್ಗೆ ಕ್ಷಿತಿಜ್ ಕಂಡೇಲ್‍‍ವಾಲ್‍‍ರವರು ಮಾಹಿತಿ ನೀಡಿದ್ದಾರೆ.

ರೈತರ ಬೆಳೆ ರಕ್ಷಣೆಗಾಗಿ ಉಪಗ್ರಹ ತಯಾರಿಸಲು ಮುಂದಾದ ಯುವಕರು

ಕ್ಷಿತಿಜ್ ಕಂಡೇಲ್‍‍ವಾಲ್‍‍ರವರು ಈ ಪ್ರಶ್ನೆಗೆ ಸರಳವಾಗಿ ಉತ್ತರಿಸಿದ್ದಾರೆ. ನಾವು ಬಸ್ಸಿನಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವಾಗ ಟಿಕೆಟ್ ಪಡೆಯಬೇಕು. ಇದೇ ರೀತಿ ಉಪಗ್ರಹ ಉಡಾವಣೆಯು ಸಹ ನಡೆಯುತ್ತದೆ. ಇವುಗಳನ್ನು ರೈಡ್ ಶೇರ್ ಉಡಾವಣೆ ಎಂದು ಕರೆಯುತ್ತಾರೆ.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ರೈತರ ಬೆಳೆ ರಕ್ಷಣೆಗಾಗಿ ಉಪಗ್ರಹ ತಯಾರಿಸಲು ಮುಂದಾದ ಯುವಕರು

ಚಿಕ್ಕ ಉಪಗ್ರಹಗಳನ್ನು ತಯಾರಿಸುವುದು ದುಬಾರಿಯಲ್ಲ. ಇವುಗಳ ಉಡಾವಣೆಗಾಗಿ ಸೊಯುಜ್‍‍ನಂತಹ ಲಾಂಚರ್‍‍ಗಳ ಮೂಲಕ ಉಡಾವಣೆ ಮಾಡಲಾಗುತ್ತದೆ. ನಾವು ಯಾವ ಕಕ್ಷೆಗೆ ಉಡಾವಣೆ ಮಾಡಲು ಬಯಸಿದ್ದೇವೋ ಆ ಕಕ್ಷೆಗೆ ಹಣ ಪಾವತಿಸಬೇಕಾಗುತ್ತದೆ.

MOST READ: ಕಾರು ಖರೀದಿಸಿದ ಮಾಲೀಕನ ಮೇಲೆ ಕೇಸ್ ಜಡಿದ ಎಂಜಿ ಮೋಟಾರ್..!

ರೈತರ ಬೆಳೆ ರಕ್ಷಣೆಗಾಗಿ ಉಪಗ್ರಹ ತಯಾರಿಸಲು ಮುಂದಾದ ಯುವಕರು

ಪಿಕ್ಸೆಲ್ ಏಕೆ ಚಿಕ್ಕ ಉಪಗ್ರಹಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂಬುದರ ಬಗ್ಗೆ ಮಾತನಾಡಿದ ಕ್ಷಿತಿಜ್‍‍ರವರು, ಚಿಕ್ಕ ಉಪಗ್ರಹಗಳನ್ನು ಅಭಿವೃದ್ಧಿಪಡಿಸಲು ಕಡಿಮೆ ಖರ್ಚಾಗುತ್ತದೆ. ದೊಡ್ಡ ಉಪಗ್ರಹಗಳು ಹೆಚ್ಚು ದುಬಾರಿಯಾಗಿವೆ. ಈ ಕಾರಣಕ್ಕಾಗಿ ನಾವು ಚಿಕ್ಕ ಉಪಗ್ರಹಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ ಎಂದು ಹೇಳಿದರು.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ರೈತರ ಬೆಳೆ ರಕ್ಷಣೆಗಾಗಿ ಉಪಗ್ರಹ ತಯಾರಿಸಲು ಮುಂದಾದ ಯುವಕರು

ಉಪಗ್ರಹಗಳನ್ನು ಯಾರು ಉಡಾಯಿಸಬಹುದು? ಉಪಗ್ರಹಗಳನ್ನು ಉಡಾಯಿಸಬೇಕಾದರೆ ಪಾಲಿಸಬೇಕಾದ ನಿಯಮಗಳೇನು? ಎಂಬ ಪ್ರಶ್ನೆಗಳಿಗೆ ಉತ್ತರಿಸಿದ ಕ್ಷಿತಿಜ್‍‍ರವರು, ಯಾವ ದೇಶದಿಂದ ಉಡಾವಣೆ ಮಾಡಲಾಗುತ್ತಿದೆ ಆ ದೇಶದ ಮೇಲೆ ಅವಲಂಬಿತವಾಗಿರುತ್ತದೆ.

ರೈತರ ಬೆಳೆ ರಕ್ಷಣೆಗಾಗಿ ಉಪಗ್ರಹ ತಯಾರಿಸಲು ಮುಂದಾದ ಯುವಕರು

ರಾಕೆಟ್‍‍ಗಳನ್ನು ಅಭಿವೃದ್ಧಿಪಡಿಸಲು ಸರಿಯಾದ ಲೈಸೆನ್ಸ್ ಪಡೆಯಬೇಕಾಗುತ್ತದೆ. ಇದರ ಜೊತೆಗೆ ಅಂಗೀಕಾರವನ್ನೂ ಸಹ ಪಡೆಯಬೇಕು. ಇದಾದ ನಂತರ ಉಪಗ್ರಹಗಳನ್ನು ಉಡಾಯಿಸಲಾಗುತ್ತದೆ ಎಂದು ಹೇಳಿದರು.

Most Read Articles

Kannada
English summary
Indians to launch tiny Satellites to help farmers - Read in Kannada
Story first published: Saturday, December 14, 2019, 15:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X