ಎರಡೂ ಟೊಯೊಟಾ ಇನ್ನೋವಾ ಕಾರುಗಳ ನಡುವೆ ಅಪಘಾತ: ಈ ಜನಪ್ರಿಯ ಕಾರು ಎಷ್ಟು ಸೇಫ್?
ಭಾರತದಲ್ಲಿ ರಸ್ತೆ ಅಪಘಾತದ ಪ್ರಮಾಣ ಹೆಚ್ಚಾಗುತ್ತಿದೆ. ರಸ್ತೆ ಅಪಘಾತ ಪ್ರಮುಖ ಕಾರಣ ಅತಿ ವೇಗದ ವಾಹನ ಸಂಚಾರ. ಇತ್ತೀಚೆಗೆ ಎರಡು ಟೊಯೊಟಾ ಇನ್ನೋವಾ (Toyota Innova) ಎಂಪಿವಿಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ. ಕೇರಳದ ಅಪಘಾತವು ಅತಿವೇಗವು ಏಕೆ ಅಪಾಯಕಾರಿ ಮತ್ತು ಅಪಘಾತಗಳನ್ನು ತಪ್ಪಿಸಲು ಲೇನ್ ನಿಯಮ ಎಷ್ಟು ಮುಖ್ಯ ಎಂಬುದನ್ನು ತೋರಿಸುತ್ತದೆ.
ಸಿಸಿಟಿವಿ ಫೂಟೇಜ್ ದೃಶ್ಯದಲ್ಲಿ ಡಬಲ್ ಲೇನ್ ರಸ್ತೆಯನ್ನು ತೋರಿಸುತ್ತದೆ. ಎರಡು ಇನ್ನೋವಾಗಳು ಎದುರಿನಿಂದ ಬರುತ್ತಿದ್ದು, ಅದರಲ್ಲಿ ಒಂದು ಇನ್ನೋವಾ ಕಾರು ಮತ್ತೊಂದು ಕಾರನ್ನು ಹಿಂಬಾಲಿಸುತ್ತಿರುವುದನ್ನು ನೀವು ನೋಡಬಹುದು. ಎಡಬದಿಯಲ್ಲಿದ್ದ ಇನ್ನೋವಾ ತಪ್ಪಾದ ಮಾರ್ಗವನ್ನು ಪ್ರವೇಶಿಸಿ ಎದುರಿನ ವಾಹನವನ್ನು ಓವರ ಟೇಕ್ ಮಾಡುತ್ತಾರೆ.ಆದರೆ ಇನ್ನೋವಾ ಚಾಲಕನಿಗೆ ಕೊನೆಯ ಕ್ಷಣದವರೆಗೂ ಎದುರಿನಿಂದ ಬಂದ ಇನ್ನೊಂದು ಇನ್ನೋವಾ ಕಾರನ್ನು ಕಾಣಿಸಲಿಲ್ಲ.

ಡ್ರೈವರ್ ಕೊನೆಯ ಕ್ಷಣದಲ್ಲಿ ಮುಂದೆ ಬರುತ್ತಿರುವ ಮತ್ತೊಂದು ಇನ್ನೋವಾವನ್ನು ಕಂಡಾಗ, ವಾಹನವನ್ನು ತಿರುಗಿಸಲು ಪ್ರಯತ್ನಿಸಿದರು. ಆದರೆ ಬಹಳ ಹತ್ತಿರದಲ್ಲಿದ್ದ ಕಾರಣ ಸಂಪೂರ್ಣವಾಗಿ ತಿರುಗಿಸಲು ಸಾಧ್ಯವಾಗುವುದಿಲ್ಲ. ಎರಡು ಇನ್ನೋವಾಗಳು ಅತಿವೇಗದಲ್ಲಿ ನಿಯಂತ್ರಣ ತಪ್ಪಿ ಪರಸ್ಪರ ಡಿಕ್ಕಿ ಹೊಡೆದಿವೆ. ಟಾಪ್-ಹೆವಿ ವೆಹಿಕಲ್ ಆಗಿರುವುದರಿಂದ ಇನ್ನೋವಾಗಳು ಬೇಗನೆ ನಿಯಂತ್ರಣ ಕಳೆದುಕೊಂಡಿವೆ.
ಒಂದು ವಾಹನವು ರಸ್ತೆಯಲ್ಲಿ ಪಲ್ಟಿ ಹೊಡೆದರೆ, ಇನ್ನೊಂದು ಹ್ಯುಂಡೈ ಕ್ರೆಟಾವನ್ನು ಹೊಡೆಯುವುದನ್ನು ತಪ್ಪಿಸಿತು ಮತ್ತು ನಂತರ ನಿಂತಿದ್ದ ಮಾರುತಿ ಡಿಜೈರ್‌ಗೆ ಡಿಕ್ಕಿ ಹೊಡೆದಿದೆ. ಎರಡೂ ವಾಹನಗಳಿಗೆ ಭಾರಿ ಹಾನಿಯಾಗಿದೆ. ಆದರೆ, ಅಪಘಾತದಲ್ಲಿ ಯಾರಿಗೂ ಗಾಯಗಳಾಗಿಲ್ಲ, ಎಲ್ಲರೂ ಸುರಕ್ಷಿತವಾಗಿ ಹೊರ ಬಂದಿದ್ದಾರೆ. ವಾಹನಗಳನ್ನು ನಿಯಮಿತ ಮಿತಿಯಲ್ಲಿ ಚಾಲಿಸುವುದನ್ನು ಮರೆಯಬಾರದು.

ಅಜಾಗರೂಕತೆಯಿಂದ ಯಾವುದೇ ಸಮಯದಲ್ಲೂ ಬೇಕಾದಾರರೂ ಅಪಘಾತ ಸಂಭವಿಸಬಹುದು. ಹೆದ್ದಾರಿಯಲ್ಲಿ ಚಾಲನೆ ಮಾಡುವಾಗ ಈ ಅಂಶವನ್ನು ಪ್ರತಿಯೊಬ್ಬ ಚಾಲಕರು ಮುಖ್ಯವಾಗಿ ಗಮನಿಸಬೇಕು. ಅದರಲ್ಲೂ ಮಂಜು ಬಿದ್ದಿರುವ ರಸ್ತೆಗಳು ಬಹುತೇಕ ಅಸಷ್ಟವಾಗಿ ಗೋಚರಿಸುತ್ತವೆ. ಅಂತಹ ಸಂದರ್ಭದಲ್ಲಿ ಅತಿ ವೇಗ ಅಥವಾ ಓವರ್ ಟೇಕ್ ಮಾಡುವಂತಹ ಕೆಲಸಗಳಿಗೆ ಎಂದಿಗೂ ಕೈ-ಹಾಕಬೇಡಿ.
ಮಂಜಿನಲ್ಲಿ ವಾಹನಗಳನ್ನು ಓಡಿಸಲು ಉತ್ತಮ ಮಾರ್ಗವೆಂದರೆ ಅದು ತಾಳ್ಮೆಯ ಚಾಲನೆ. ತಾಳ್ಮೆಯಿಂದಿರಿ. ಜೊತೆಗೆ ಸುರಕ್ಷಿತಯಿಂದ ನಿಮ್ಮ ಮನೆಗೆ ಹೋಗಲು ನಿಧಾನವಾಗಿ ಚಾಲನೆ ಮಾಡಿ. ಇನ್ನು ನಿರ್ದಿಷ್ಟ ಟ್ರ್ಯಾಕ್‍ನಲ್ಲಿಯೇ ವಾಹನ ಚಲಾಯಿಸಿ: ಮಂಜು ಬಿದ್ದ ರಸ್ತೆ ಅಪಘಾತಗಳ ಹಿಂದಿನ ಪ್ರಮುಖ ಕಾರಣವೆಂದರೆ ಅದು, ಗೋಚರತೆ ಕಡಿಮೆ ಇರುವುದು. ನಿಮ್ಮ ಸುರಕ್ಷತೆ ಖಚಿತಪಡಿಸಿಕೊಳ್ಳಲು, ಇತರೇ ವಾಹನಗಳಿಂದ ಸಾಕಷ್ಟು ಅಂತರ ಕಾಯ್ದುಕೊಳ್ಳುವುದು ಮುಖ್ಯ.

ಮಂಜು ಬಿದ್ದ ಹೆದ್ದಾರಿಯಲ್ಲಿ ಚಾಲನೆ ಮಾಡುವಾಗ ನಿಮ್ಮ ಟ್ರ್ಯಾಕ್‍ನಲ್ಲಿ ಉಳಿಯುವುದು ಸಹ ಅತ್ಯಗತ್ಯ. ಹಠಾತ್ ಟ್ರ್ಯಾಕ್ ಬದಲಾವಣೆಯು ಅಪಘಾತಕ್ಕೆ ಕಾರಣವಾಗಬಹುದು. ಗೋಚರತೆ ಕಳಪೆಯಾಗಿದ್ದರೆ, ವಾಹನವು ಟ್ರ್ಯಾಕ್‍ನಲ್ಲಿಯೇ ಇದೆ ಎಂಬುದನ್ನು ತಿಳಿದುಕೊಳ್ಳಲು ವೈಟ್ ಲೇನ್ ಗಮನಿಸಿ. ಇನ್ನು ಮಂಜು ಬಿದ್ದಾಗ ರಸ್ತೆಗಳು ಕಣ್ಣಿಗೆ ಗೋಚರಿಸುದಿಲ್ಲ. ಇಂತಹ ಸಂದರ್ಭದಲ್ಲಿ ನಿಮ್ಮ ಕಿವಿಗಳನ್ನು ಅಲರ್ಟ್ ಇಟ್ಟುಕೊಳ್ಳಿ.
ಇದಕ್ಕಾಗಿ ನಿಮ್ಮ ವಾಹನದಲ್ಲಿ ಮ್ಯೂಸಿಕ್ ವಾಲ್ಯೂಮ್ ಕಡಿಮೆ ಮಾಡಿರಿ. ಜೊತೆಗೆ ಫೋನ್ ಕರೆಗಳನ್ನು ಅಟೆಂಡ್ ಮಾಡುವುದನ್ನು ತಪ್ಪಿಸಿ. ಮಂಜು ಬಿದ್ದ ರಸ್ತೆಯಲ್ಲಿ ಚಾಲನೆ ಕಡೆಗೆ ಹೆಚ್ಚಿನ ಗಮನವಿರಲಿ. ಇದು ಎಚ್ಚರದಿಂದಿರಲೂ, ಎದುರಿನಿಂದ ಬರುವ ವಾಹನಗಳ ಬಗ್ಗೆ ಗಮನಹರಿಸಲು ಸಹಾಯ ಮಾಡುತ್ತದೆ. ಲೈಟ್, ವಿಂಡ್‌ಶೀಲ್ಡ್ & ವಿಂಡೋಗಳನ್ನು ಸ್ವಚ್ಛಗೊಳಿಸಿ: ವಿಂಡೋ, ಲೈಟ್ ಮತ್ತು ವಿಂಡ್‌ಶೀಲ್ಡ್ ಅನ್ನು ಸ್ವಚ್ಛವಾಗಿಡಬೇಕು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.


Click it and Unblock the Notifications