ಒಂದು ಕಾರಲ್ಲಿ 20 ಮಕ್ಕಳ ಸವಾರಿ; ಎಷ್ಟು ಸುರಕ್ಷಿತ?
ಸಾಮಾನ್ಯ ಕಾರೊಂದರಲ್ಲಿ ಅಬ್ಬಬ್ಬಾ ಅಂದರೆ ಎಷ್ಟು ಮಂದಿಗೆ ಪಯಣಿಸಬಹುದು ? ಆದರೆ ನಾವಿಂದು ಪರಿಚಯಿಸುವ ಕಾರಿನಲ್ಲಿ ಬರೋಬ್ಬರಿ 20 ಮಕ್ಕಳು ಸಂಚರಿಸುವ ಮೂಲಕ ದಾಖಲೆಗೆ ಪಾತ್ರವಾಗಿದ್ದಾರೆ.
ಇದು ಯಾವುದೇ ಅಧಿಕೃತ ದಾಖಲೆ ಪುಟದಲ್ಲಿ ದಾಖಲಾಗಿಲ್ಲ ಅಥವಾ ಯಾವುದೇ ದಾಖಲೆ ಬರೆಯುವ ಉದ್ದೇಶ ಇವರದ್ದಾಗಿರಲಿಲ್ಲ. ಆದರೂ ವಿಶಿಷ್ಟವಾಗಿ ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಆ ಕಾರು ಬೇರೆ ಯಾವುದು ಅಲ್ಲ. ಟಾಟಾ ಇಂಡಿಕಾ. ದೇಶದ ಟ್ಯಾಕ್ಸಿ ಕಾರು ವಿಭಾಗದಲ್ಲಿ ಹೆಚ್ಚು ಕಾಣಿಸಿಕೊಂಡಿರುವ ಟಾಟಾ ಇಂಡಿಕಾ ಈ ದಾಖಲೆಗೆ ಪಾತ್ರವಾಗಿದೆ.

ಈ ದಾಖಲೆ ಸ್ಥಾಪನೆಯಾಗಿರುವುದು ತೆಲಂಗಾಣ ಜಿಲ್ಲೆಯ ಗೋಲ್ಕೊಂಡ ಕೋಟೆಯಲ್ಲಿ. ನೆರೆದಿದ್ದ ಪ್ರೇಕ್ಷಕರಲ್ಲಿ ಅಚ್ಚರಿ ಮೂಡಿಸಿರುವುದು ಸಹಜ.

ಗೋಲ್ಕೊಂಡ ಕೋಟೆಗೆ ಪ್ರವಾಸಕ್ಕೆ ತೆರಳಿದ್ದ ಮಕ್ಕಳ ಫೋಟೊವನ್ನು ಇಲ್ಲಿಗೆ ಆಗಮಿಸಿದ್ದ ಅಮೆರಿಕದ ಪ್ರವಾಸಿಗ ಆಂಡ್ರ್ಯೂ ಝಿಮ್ಮರ್ನ್ ಅವರು ಕ್ಲಿಕ್ಕಿಸಿದ್ದಾರೆ.

ಇವೆಲ್ಲ ಕಥೆ ಒಂದೆಡೆಯಾದರೆ ಯಾವುದೇ ಸುರಕ್ಷತೆಯಿಲ್ಲದೆ ಮಕ್ಕಳನ್ನು ಹೇಗೆ ಕಾರಿನಲ್ಲಿ ಸಾಗಿಸಿದರು ಎಂಬುದನ್ನು ಹೇಳುವವರು ಕೇಳುವವರು ಯಾರು ಇಲ್ಲದಂತಾಗಿದೆ.

ಈ ನಿಟ್ಟಿನಲ್ಲಿ ಸರಕಾರ ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದ್ದು, ಇಂತಹ ಅಪಾಯಕಾರಿ ಪ್ರಯಾಣವನ್ನು ತಡೆಯಬೇಕಾಗಿದೆ.


Click it and Unblock the Notifications








