ಮಾರ್ಚ್ 12ರೊಳಗೆ ಹಳೆಯ ಡ್ರೈವಿಂಗ್ ಲೈಸನ್ಸ್ ನವೀಕರಣಕ್ಕೆ ಕೇಂದ್ರ ಸಾರಿಗೆ ಇಲಾಖೆ ಆದೇಶ
20 ವರ್ಷಗಳಿಗಿಂತ ಹಳೆಯ ಚಾಲನಾ ಪರವಾನಗಿ ಹೊಂದಿರುವವರು (2002ಕ್ಕಿಂತ ಹಳೆಯ ಡ್ರೈವಿಂಗ್ ಲೈಸನ್ಸ್) ಮಾರ್ಚ್ 12ರೊಳಗೆ ಆನ್‌ಲೈನ್ ನೋಂದಣಿ ಮಾಡಿಸಿ ನವೀಕರಣಗೊಳಿಸುವಂತೆ ಕೇಂದ್ರ ಸಾರಿಗೆ ಸಚಿವಾಲಯ ಸೂಚಿಸಿದೆ. ಗಡುವು ನೀಡಿದ ದಿನಾಂಕದ ಒಳಗೆ ನೋಂದಣಿ ಮಾಡಿಸದಿದ್ದಲ್ಲಿ ಪರವಾನಗಿ ರದ್ದು ಮಾಡುವುದಾಗಿ ಎಚ್ಚರಿಸಿದ್ದು, ಒಂದೊಮ್ಮೆ ರದ್ದುಗೊಂಡರೆ ಹೊಸ ಚಾಲನಾ ಪರವಾನಗಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ತಿಳಿಸಿದೆ.

ಆನ್‌ಲೈನ್ ಪರವಾನಗಿ ನೋಂದಣಿ
ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ(ಆರ್‌ಟಿಒ) ಭ್ರಷ್ಟಾಚಾರ ನಿಯಂತ್ರಣ ಮತ್ತು ಸಾರ್ವಜನಿಕರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಎಲ್‌ಎಲ್ ಹಾಗೂ ಡಿಎಲ್ ನವೀಕರಣ ಸೇರಿ ಹಲವು ಸೇವೆಗಳನ್ನು ಆನ್‌ಲೈನ್ ಮೂಲಕವೇ ಪಡೆಯಬಹುದು.ವಾಹನಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಾರಿಗೆ ಸಚಿವಾಲಯದ ವಾಹನ ಪೋರ್ಟಲ್‌ನಲ್ಲಿ ದೇಶಾದ್ಯಂತ ಆನ್‌ಲೈನ್ ನಲ್ಲಿ ಮಾಡಲಾಗಿದೆ. ಇದು ಚಾಲನಾ ಪರವಾನಗಿ ಮಾಹಿತಿಯನ್ನು ಸಹ ಒಳಗೊಂಡಿದೆ. ಆಫ್‌ಲೈನ್ ಪ್ರಕ್ರಿಯೆಯ ಮೂಲಕ ರಚಿಸಲಾದ ಚಾಲನಾ ಪರವಾನಗಿಗಳು ಮತ್ತು ಇತರ ಪ್ರಮುಖ ವಾಹನ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ನೋಂದಾಯಿಸಲು ಸಚಿವಾಲಯವು ಈ ಹಿಂದೆಯೇ ಆದೇಶ ನೀಡಿತ್ತು. 2002ರ ಮೊದಲು, ಎಲ್ಲಾ ಚಾಲನಾ ಪರವಾನಗಿಗಳನ್ನು ಆಫ್‌ಲೈನ್‌ನಲ್ಲಿ ಮಾಡಲಾಗಿದೆ.

ಸ್ಥಳೀಯ ಆರ್‌ಟಿಒ ಈ ಪ್ರಕ್ರಿಯೆಯಿಂದ ಮಾಡಿದ ಪರವಾನಗಿಗಳ ದಾಖಲೆಗಳನ್ನು ತಮ್ಮ ನೋಂದಾಯಿಸಲು ಆಫ್‌ಲೈನ್ ದಾಖಲೆಗಳಾದ ಪುಸ್ತಕಗಳನ್ನು ಬಳಸುತ್ತಿದ್ದರು. ಇದೀಗ ದೇಶದ ಎಲ್ಲಾ ಆರ್‌ಟಿಒಗಳಲ್ಲಿ ಆನ್‌ಲೈನ್ ಸೇವೆ ಆರಂಭವಾಗಿದೆ. ವಾಹನಗಳ ದಾಖಲೆಗಳನ್ನು ಡಿಜಿಟಲ್ ಆಗಿ ಇಡಲಾಗಿದೆ. ಹಾಗಾಗಿ ಆಫ್‌ಲೈನ್ ಪ್ರಕ್ರಿಯೆಯಿಂದ ಮಾಡಲಾದ ಹಳೆಯ ಚಾಲನಾ ಪರವಾನಗಿಯನ್ನು ನವೀಕರಿಸುದು ಕಡ್ಡಾಯವಾಗಿದ್ದು, ಒಂದು ವೇಳೆ ಮಾಡಿಸದಿದ್ದಲ್ಲಿ ನೀವು ತೊಂದರೆಯನ್ನು ಎದುರಿಸಬೇಕಾಗುತ್ತದೆ.

ವಾಹನ ಪೋರ್ಟಲ್‌ನಿಂದ, ನೀವು ಕಲಿಕೆಯ ಪರವಾನಗಿ, ನವೀಕರಣ, ನಕಲು ಅಥವಾ ತಿದ್ದುಪಡಿಗೆ ಸಂಬಂಧಿಸಿದ ಎಲ್ಲಾ ಕಾರ್ಯಗಳಿಗಾಗಿ ಮನೆಯಲ್ಲೇ ಕುಳಿತು ಅರ್ಜಿ ಸಲ್ಲಿಸಬಹುದು. ವಾಹನಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ವಾಹನ ಪೋರ್ಟಲ್‌ನಲ್ಲಿ ಡಿಜಿಟಲ್ ಸ್ವರೂಪದಲ್ಲಿ ಇಡಲಾಗಿದೆ. ಇದರಿಂದ ವಾಹನದ ದಾಖಲೆಯನ್ನು ಪತ್ತೆ ಹಚ್ಚುವುದು ಮತ್ತು ಅದಕ್ಕೆ ಸಂಬಂಧಿಸಿದ ಚಲನ್ ಅಥವಾ ಫೈನ್ ಬಗ್ಗೆ ಮಾಹಿತಿಯನ್ನು ಹೊರತೆಗೆಯುವುದು ಸುಲಭವಾಗುತ್ತದೆ. ಮಾಹಿತಿಯ ಪ್ರಕಾರ, ವಾಹನ ಪೋರ್ಟಲ್‌ನಲ್ಲಿ ಬ್ಯಾಕ್‌ಲಾಗ್ ಪ್ರವೇಶದ ಲಿಂಕ್ ಮಾರ್ಚ್ 12 ರವರೆಗೆ ತೆರೆದಿರುತ್ತದೆ. ಅದಾದ ಬಳಿಕ ಈ ಸೌಲಭ್ಯ ಮುಚ್ಚಲಾಗುವುದು.

ವಾಹನ ಪೋರ್ಟಲ್‌ನಲ್ಲಿ 18 ಸೇವೆಗಳು
ವಾಹನ ಪೋರ್ಟಲ್‌ನಲ್ಲಿ ಒಟ್ಟು 18 ಸೇವೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಇವುಗಳಲ್ಲಿ ಕಲಿಯುವವರ ಪರವಾನಗಿ, ಚಾಲನಾ ಪರವಾನಗಿ ನವೀಕರಣ, ವಾಹನ ನೋಂದಣಿ, ನಕಲು ಚಾಲನಾ ಪರವಾನಗಿ, ಪರವಾನಗಿ ನವೀಕರಣ, ಅಂತರರಾಷ್ಟ್ರೀಯ ಚಾಲನಾ ಪರವಾನಗಿ ಸೇರಿದಂತೆ 18 ಸೇವೆಗಳು ಇವೆ. ವಾಹನ ಪೋರ್ಟಲ್‌ನಲ್ಲಿ ಈ ಸೇವೆಗಳನ್ನು ಪಡೆಯಲು ಆಧಾರ್ ದೃಢೀಕರಣ ಕಡ್ಡಾಯವಾಗಿದೆ.

ಪೋರ್ಟಲ್‌ನಲ್ಲಿ, ಅರ್ಜಿದಾರರು ಗುರುತಿನ ಪುರಾವೆಯನ್ನು ಒದಗಿಸಲು 12 ಅಂಕಿಗಳ ವಿಶಿಷ್ಟ ಗುರುತಿನ ಸಂಖ್ಯೆಯನ್ನು ನೀಡಬೇಕಾಗುತ್ತದೆ. ಆಧಾರ್ ಸಂಖ್ಯೆ ಇಲ್ಲದ ಸಂದರ್ಭದಲ್ಲಿ, ಆಧಾರ್ ದಾಖಲಾತಿ ಸಂಖ್ಯೆಯಿಂದ ಆನ್‌ಲೈನ್ ಸಂಪರ್ಕ ರಹಿತ ಸೇವೆಯನ್ನು ಪಡೆಯಬಹುದು. ಕಳೆದ ವರ್ಷ ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ, ಸ್ಥಳೀಯ ಸಾರಿಗೆ ಕೇಂದ್ರಗಳಲ್ಲಿ (ಆರ್‌ಟಿಒಗಳು) ಆನ್‌ಲೈನ್‌ನಲ್ಲಿ ಸೇವೆ ಒದಗಿಸಲು ದೊಡ್ಡ ಪ್ರಮಾಣದ ಕೆಲಸ ಮಾಡಲಾಗಿದೆ. ಆನ್‌ಲೈನ್ ಆರ್‌ಟಿಒಗಳನ್ನು ಕೇಂದ್ರ ಸರ್ಕಾರದ ವಾಹನ ಪೋರ್ಟಲ್‌ಗೆ ಸಂಪರ್ಕಿಸಲಾಗಿದ್ದು, ಎಲ್ಲಾ ರೀತಿಯ ಅಪ್ಲಿಕೇಶನ್‌ಗಳ ಡಿಜಿಟಲ್ ದಾಖಲೆಯನ್ನು ನಿರ್ವಹಿಸುವ ಆಯ್ಕೆ ಸಹ ನೀಡಲಾಗಿದೆ.

ಪೂರ್ಣಮಟ್ಟದಲ್ಲಿ ಆನ್‌ಲೈನ್ ಸೇವೆ ಜಾರಿಯಾದಲ್ಲಿ ವಾಹನ ಕಲಿಕಾ ಪರವಾನಗಿ, ಚಾಲನಾ ಪರವಾನಗಿ ನವೀಕರಣಕ್ಕೆ ಆರ್‌ಟಿಓ ಕಚೇರಿಗೆ ಅಲೆದಾಟ ತಪ್ಪಲಿದೆ. ಏಕೆಂದರೆ, ರಾಜ್ಯದ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ(ಆರ್‌ಟಿಒ) ಭ್ರಷ್ಟಾಚಾರ ನಿಯಂತ್ರಣ ಮತ್ತು ಸಾರ್ವಜನಿಕರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಎಲ್‌ಎಲ್ ಹಾಗೂ ಡಿಎಲ್ ನವೀಕರಣ ಸೇರಿ ಹಲವು ಸೇವೆಗಳನ್ನು ಆನ್‌ಲೈನ್‌ನಲ್ಲೇ ಪಡೆಯಬಹುದು. ಈ ಹಿಂದೆಯೇ ಕೇಂದ್ರ ಹೆದ್ದಾರಿ ಪ್ರಾಧಿಕಾರ 2021ರ ಏಪ್ರಿಲ್ ತಿಂಗಳಲ್ಲಿ ಈ ಸಂಬಂಧ ಅಧಿಸೂಚನೆ ಹೊರಡಿಸಿತ್ತು, ಆರ್‌ಟಿಒ ಕಚೇರಿಗಳಲ್ಲಿ ಲಭ್ಯವಾಗುತ್ತಿರುವ ಸೇವೆಗಳನ್ನು ಆಧಾರ್ ಲಿಂಕ್‌ನ ಇ-ಕೆವೈಸಿ ಪ್ರಕ್ರಿಯೆಯೊಂದಿಗೆ ಆನ್‌ಲೈನ್ ಮೂಲಕ ಒದಗಿಸಬೇಕು ಎಂದು ಸೂಚನೆ ನೀಡಿತ್ತು.

ಈ ಹಿನ್ನೆಲೆಯಲ್ಲಿ ಸಾರಿಗೆ ಸೇವೆಗಳನ್ನು ಆನ್‌ಲೈನ್ ಮೂಲಕ ಒದಗಿಸುವ ಸಂಬಂಧ ಸರ್ಕಾರ ಕಳೆದ ವರ್ಷ ಜ. 24ರಂದು ಅಧಿಸೂಚನೆ ಪ್ರಕಟಿಸಿದೆ. ಕರ್ನಾಟಕದಲ್ಲಿ 2019-20ನೇ ಸಾಲಿನಲ್ಲಿ 23.5 ಲಕ್ಷ ಚಾಲನಾ ಪರವಾನಗಿ, 6.2 ಲಕ್ಷ ಚಾಲನಾ ಪರವಾನಗಿ ನವೀಕರಣ, 2020-21ನೇ ಸಾಲಿನಲ್ಲಿ 17.7 ಲಕ್ಷ ಚಾಲನಾ ಪರವಾನಗಿ, 6.2 ಲಕ್ಷ ನವೀಕರಣಕ್ಕಾಗಿ ಅರ್ಜಿಗಳು ಬಂದಿದ್ದವು. ಇಷ್ಟುಮಂದಿ ಕಚೇರಿಗೆ ಅಲೆದಾಡಿದ್ದರು. ಆದರೆ ಇದಕ್ಕೆ ಕೊನೆ ಹಾಡಲು ಮುಂಬರುವ ದಿನಗಳಲ್ಲಿ ಮನೆಯಲ್ಲೇ ಕುಳಿತು ಈ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ.


Click it and Unblock the Notifications








