ಬಿಡುಗಡೆಯಾದ ದಿನವೇ ಅಪಘಾತಕ್ಕೀಡಾದ ಹೊಸ ಹ್ಯುಂಡೈ ವೆರ್ನಾ: ಕಾರಿನ ಸುರಕ್ಷತೆಗೆ ನೆಟ್ಟಿಗರ ಮೆಚ್ಚುಗೆ
ಜನಪ್ರಿಯ ಮತ್ತು ದೇಶದ ಎರಡನೇ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಮೋಟಾರ್ ಇಂಡಿಯಾ ತನ್ನ ಬಹುನಿರೀಕ್ಶಿತ 2023ರ ವೆರ್ನಾ ಸೆಡಾನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಹ್ಯುಂಡೈ ವೆರ್ನಾ ಕಾರು ಈಗಾಗಲೇ ದೇಶಾದ್ಯಂತ ಹಲವು ಶೋರೂಮ್‌ಗಳಿಗೆ ತಲುಪಿದೆ.
ಈ ಹೊಸ ಹ್ಯುಂಡೈ ವೆರ್ನಾ ಕಾರಿನ ಟೆಸ್ಟ್ ಡ್ರೈವ್ ಪ್ರಾರಂಭವಾಗಿದೆ. ಈ ಸೆಡಾನ್ ಕಾರು ಬಿಡುಗಡೆಯಾದ ದಿನವೇ ಅಪಘಾತಕ್ಕೀಡಾಗಿದೆ. ಈ ಅಪಘಾತಕ್ಕೆ ರಾಯಲ್ ಎನ್‌ಫೀಲ್ಡ್ ಬುಲೆಟ್‌ನಲ್ಲಿದ್ದ ಇಬ್ಬರು ಅಪ್ರಾಪ್ತ ಬಾಲಕರು ಕಾರಣರಾಗಿದ್ದಾರೆ. ಹೊಸ ಹೊಸ ಹ್ಯುಂಡೈ ವೆರ್ನಾ ಕಾರು ರಸ್ತೆಯಲ್ಲಿ ಯು-ಟರ್ನ್ ತೆಗೆದುಕೊಳ್ಳುತ್ತಿದ್ದಾಗ ಬುಲೆಟ್ ಬೈಕ್ ನೇರವಾಗಿ ಬಂದು ಕಾರಿನ ಮುಂಬಾಗಕ್ಕೆ ಡಿಕ್ಕಿ ಹೊಡಿದಿದೆ.

ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್ ಸುಮಾರು 80 ಕಿ.ಮೀ ವೇಗದಲ್ಲಿ ಬರುತ್ತಿತ್ತು. ಮುಂದೆ ಕಾರು ನೋಡಿದರೂ ಸ್ಲೋ ಮಾಡದೇ ಹೋಗಿ ಡಿಕ್ಕಿ ಹೊಡೆದಿದ್ದಾರೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ಅಪಘಾತದ ವೇಳೆ ಹ್ಯುಂಡೈ ಕಾರು ನಿಂತಿತ್ತು. 80 ಕಿ.ಮೀ ವೇಗದಲ್ಲಿ ಬಂದು ಡಿಕ್ಕಿ ಹೊಡೆದರೂ, ಕಾರಿಗೆ ಹೆಚ್ಚಿನ ಡ್ಯಾಮೇಜ್ ಆಗಿಲ್ಲ. ಕೇವಲ ಡೆಂಟ್ ಹೊಂದಿದ್ದ ಪರಿಣಾಮದಿಂದಾಗಿ ಬಂಪರ್ ಹೊರಬಂದಿದೆ.
ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕಿನ ಚಾಸಿಸ್ ಸೇರಿದಂತೆ ಇತರ ಭಾಗಗಳಿಗೆ ಭಾರಿ ಹಾನಿಯಾಗಿದೆ. ದುರದೃಷ್ಟವಶಾತ್ ಬೈಕ್ ಚಲಾಯಿಸುತ್ತಿದ್ದ ಅಪ್ರಾಪ್ತ ಯುವಕರು ಬೈಕ್‌ನಿಂದ ಕೆಳಗೆ ಬಿದ್ದು ತೀವ್ರ ಗಾಯಗೊಂಡಿದ್ದಾರೆ. ಇಬ್ಬರೂ ಹೆಲ್ಮೆಟ್ ಧರಿಸಿರಲಿಲ್ಲ. ಸ್ಥಳೀಯರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ. 2023ರ ಹ್ಯುಂಡೈ ವೆರ್ನಾ ಒಳಗಿರುವ ಪ್ರಯಾಣಿಕರು ಸೇಫ್ ಆಗಿದ್ದಾರೆ. ಈ ಕಾರು ಉತ್ತಮ ಗುಣಮಟ್ಟವನ್ನು ಹೊಂದಿರುವುದರಿಂದ ಪ್ರಯಾಣಿಕರಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ.

ಹೊಸ ಹುಂಡೈ ವೆರ್ನಾ ಕಾರಿನ ಸುರಕ್ಷಯ ಬಗ್ಗೆ ಹೇಳುವುದಾದರೆ, ಇದರಲ್ಲಿ 30 ಗುಣಮಟ್ಟದ ಸುರಕ್ಷತಾ ಫೀಚರ್ಸ್ ಗಳನ್ನು ಪಡೆದುಕೊಂಡಿದೆ. ಈ ಕಾರಿನ ಟಾಪ್ ರೂಪಾಂತರಗಳಲ್ಲಿ ADAS ಅನ್ನು ಸಹ ಪಡೆಯುತ್ತದೆ. ಸ್ಟ್ಯಾಂಡರ್ಡ್ ಸುರಕ್ಷತಾ ವೈಶಿಷ್ಟ್ಯಗಳು ಆರು ಏರ್‌ಬ್ಯಾಗ್‌ಗಳು, ಎಲ್ಲಾ ಪ್ರಯಾಣಿಕರಿಗೆ ಮೂರು-ಪಾಯಿಂಟ್ ಸೀಟ್ ಬೆಲ್ಟ್‌ಗಳು ಮತ್ತು ಎಲ್ಲಾ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ರಿಮೈಂಡರ್ ಅನ್ನು ಹೊಂದಿದೆ.
ಇದರೊಂದಿಗೆ ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್, ಇಂಪ್ಯಾಕ್ಟ್ ಸೆನ್ಸಿಂಗ್ ಆಟೋ ಡೋರ್ ಅನ್‌ಲಾಕ್, ಎಬಿಎಸ್, ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್, ಹೆಡ್‌ಲ್ಯಾಂಪ್ ಎಸ್ಕಾರ್ಟ್ ಫಂಕ್ಷನ್, ಸ್ವಯಂಚಾಲಿತ ಹೆಡ್‌ಲ್ಯಾಂಪ್‌ಗಳು, ISOFIX ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್ ಗಳನ್ನು ಹೊಂದಿದೆ, ಈ ಹೊಸ ಹುಂಡೈ ವೆರ್ನಾ ಕಾರಿನ ಟಾಪ್ ರೂಪಾಂತರಗಳು ಹೆಚ್ಚಿನ ಫೀಚರ್ಸ್ ಗಳೊಂದಿಗೆ ಸುಸಜ್ಜಿತವಾಗಿವೆ.
ಇದರಲ್ಲಿ ESC, ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್, ಡಿಸ್ಕ್ ಬ್ರೇಕ್‌ಗಳು, ಮುಂಭಾಗದ ಪಾರ್ಕಿಂಗ್ ಸೆನ್ಸರ್ ಗಳು, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಕಾರ್ನರಿಂಗ್ ಲ್ಯಾಂಪ್‌ಗಳು ಮತ್ತು ಹ್ಯುಂಡೈ ಸ್ಮಾರ್ಟ್‌ಸೆನ್ಸ್‌ನಂತಹ ಫೀಚರ್ಸ್ ಗಳನ್ನು ನೀಡುತ್ತವೆ, ಹೊಸ ಹ್ಯುಂಡೈ ವೆರ್ನಾ ಕಾರಿನ ADAS ಸಹ ಹೆಚ್ಚಿನ ಫಿಚರ್ಸ್ ಗಳನ್ನು ನೀಡುತ್ತದೆ.
ಈ ಕಾರಿನಲ್ಲಿ ಜಂಕ್ಷನ್ ಟರ್ನಿಂಗ್‌ಗಾಗಿ ಫಾರ್ವರ್ಡ್ ಕೊಲಿಷನ್ ವಾರ್ನಿಂಗ್, ಲೇನ್ ಕೀಪಿಂಗ್ ಅಸಿಸ್ಟ್ ಮತ್ತು ಡ್ರೈವರ್ ಅಟೆಕ್ಷನ್ ವಾರ್ನಿಂಗ್ ಫೀಚರ್ಸ್ ಹೊಂದಿದೆ. ಇದರೊಂದಿಗೆ ಲೇನ್ ಫಾಲೋಯಿಂಗ್ ಅಸಿಸ್ಟ್, ಸ್ಮಾರ್ಟ್ ಕ್ರೂಸ್ ಕಂಟ್ರೋಲ್, ಹೈ ಬೀಮ್ ಅಸಿಸ್ಟ್, ಲೀಡಿಂಗ್ ವೆಹಿಕಲ್ ಡಿಪಾರ್ಚರ್ ಅಲರ್ಟ್, ರಿಯರ್ ಕ್ರಾಸ್ ಟ್ರಾಫಿಕ್ ಮತ್ತು ರಿಯರ್ ಕ್ರಾಸ್ ಟ್ರಾಫಿಕ್ ಎವೆಯನ್ಸ್ ಅಸಿಸ್ಟ್ ಸೇರಿದಂತೆ ಹೆಚ್ಚಿನ ಫಿಚರ್ಸ್ ಗಳನ್ನು ಒಳಗೊಂಡಿವೆ.


Click it and Unblock the Notifications