ಕುಟುಂಬ ನಿರ್ವಹಣೆಗಾಗಿ ಆಟೋ ಚಾಲಕಳಾದ 21 ವರ್ಷದ ಯುವತಿ

ಜನರು ಜೀವನ ಸಾಗಿಸಲು ನಾನಾ ಕೆಲಸಗಳನ್ನು ಮಾಡಬೇಕಾಗುತ್ತದೆ. ಅವರು ಮಾಡುವ ಕೆಲಸದಿಂದ ಸಮಾಜದಲ್ಲಿ ಅವರಿಗೆ ಅವರದೇ ಆದ ಗುರುತು ಸಿಗುತ್ತದೆ. ಜಮ್ಮು ಕಾಶ್ಮೀರದ 21 ವರ್ಷದ ಯುವತಿಗೂ ಈ ಮಾತು ಅನ್ವಯಿಸುತ್ತದೆ.

ಕುಟುಂಬ ನಿರ್ವಹಣೆಗಾಗಿ ಆಟೋ ಚಾಲಕಳಾದ 21 ವರ್ಷದ ಯುವತಿ

ಈ ಯುವತಿ ಆಟೋ ಡ್ರೈವರ್ ಆಗುವ ಮೂಲಕ ತನ್ನ ತಂದೆಗೆ ಸಹಾಯ ಮಾಡಲು ನಿರ್ಧರಿಸಿದ್ದಾಳೆ. ಮಾಹಿತಿಗಳ ಪ್ರಕಾರ ಈ ಯುವತಿ ಜಮ್ಮು ಕಾಶ್ಮೀರದ ಉಧಂಪುರ್ ಜಿಲ್ಲೆಗೆ ಸೇರಿದವಳು. ಆಕೆಯ ಹೆಸರು ಬಂಜೀತ್ ಕೌರ್ ಎಂದು ತಿಳಿದು ಬಂದಿದೆ. ಆಕೆಯ ತಂದೆ ಶಾಲಾ ವಾಹನ ಚಾಲಕರಾಗಿದ್ದರು.

ಕುಟುಂಬ ನಿರ್ವಹಣೆಗಾಗಿ ಆಟೋ ಚಾಲಕಳಾದ 21 ವರ್ಷದ ಯುವತಿ

ಆದರೆ ಕರೋನಾ ವೈರಸ್ ಸಾಂಕ್ರಾಮಿಕದಿಂದಾಗಿ ಆಕೆಯ ತಂದೆ ಕೆಲಸ ಕಳೆದುಕೊಂಡರು. ಇದರಿಂದಾಗಿ ಅವರ ಜೀವನ ನಿರ್ವಹಣೆ ಕಷ್ಟವಾಯಿತು. ಈ ಹಿನ್ನೆಲೆಯಲ್ಲಿ ಬಂಜೀತ್ ಕೌರ್ ತನ್ನ ತಂದೆಗೆ ಸಹಾಯ ಮಾಡುವ ಉದ್ದೇಶದಿಂದ ಆಟೋ ಓಡಿಸಲು ನಿರ್ಧರಿಸಿದಳು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಕುಟುಂಬ ನಿರ್ವಹಣೆಗಾಗಿ ಆಟೋ ಚಾಲಕಳಾದ 21 ವರ್ಷದ ಯುವತಿ

ಈ ಬಗ್ಗೆ ಎಎನ್‌ಐ ಸುದ್ದಿ ಸಂಸ್ಥೆಯ ಜೊತೆಗೆ ಮಾತನಾಡಿರುವ ಬಂಜೀತ್, ನನ್ನ ತಂದೆ ಶಾಲೆಯಲ್ಲಿ ಬಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಆದರೆ ಕರೋನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಶಾಲೆಗಳು ಮುಚ್ಚಲ್ಪಟ್ಟವು. ಇದರಿಂದಾಗಿ ಅವರು ಕೆಲಸ ಕಳೆದುಕೊಂಡರು.

ಕುಟುಂಬ ನಿರ್ವಹಣೆಗಾಗಿ ಆಟೋ ಚಾಲಕಳಾದ 21 ವರ್ಷದ ಯುವತಿ

ಕೆಲಸ ಕಳೆದುಕೊಂಡ ನಂತರ ಅವರು ಆಟೋರಿಕ್ಷಾ ಓಡಿಸಲು ಶುರು ಮಾಡಿದರು. ಆದರೆ ಇದರಿಂದ ಸಾಕಷ್ಟು ಆದಾಯ ಬರುತ್ತಿರಲಿಲ್ಲ. ಈ ಕಾರಣಕ್ಕೆ ನಾನು ನನ್ನ ತಂದೆಯ ಜೊತೆ ಸೇರಿ ಆಟೋರಿಕ್ಷಾ ಓಡಿಸಲು ನಿರ್ಧರಿಸಿದೆ ಎಂದು ತಿಳಿಸಿದ್ದಾಳೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಕುಟುಂಬ ನಿರ್ವಹಣೆಗಾಗಿ ಆಟೋ ಚಾಲಕಳಾದ 21 ವರ್ಷದ ಯುವತಿ

ತಾನು ಆಟೋ ಓಡಿಸುತ್ತಿದ್ದರೂ ಸಹ ನಾನು ಸೇನೆಗೆ ಸೇರಲು ಬಯಸಿರುವುದರಿಂದ ನನ್ನ ಓದನ್ನು ಮುಂದುವರಿಸುತ್ತಿದ್ದೇನೆ. ನಾನು ಎರಡನೇ ವರ್ಷದ ಪದವಿ ವಿದ್ಯಾರ್ಥಿಯಾಗಿದ್ದೇನೆ. ಆಟೋರಿಕ್ಷಾ ಚಾಲನೆ ಮಾಡುವುದು ಅರೆಕಾಲಿಕ ಉದ್ಯೋಗವಾಗಿದೆ ಎಂದು ಆಕೆ ಹೇಳಿದ್ದಾಳೆ.

ಕುಟುಂಬ ನಿರ್ವಹಣೆಗಾಗಿ ಆಟೋ ಚಾಲಕಳಾದ 21 ವರ್ಷದ ಯುವತಿ

ನಾವು ಹುಡುಗಿಯರು ಪ್ರತಿ ಸನ್ನಿವೇಶಕ್ಕೂ ಸಿದ್ಧರಾಗಿರಬೇಕು ಎಂದು ಬಂಜೀತ್ ಕೌರ್ ಹೇಳಿದ್ದಾಳೆ. ಆಕೆಯ ಈ ನಿರ್ಧಾರವು ಹಲವಾರು ಜನರ ಮೇಲೆ ಪರಿಣಾಮ ಬೀರಿದೆ ಎಂದು ಅವರ ಕುಟುಂಬವು ಸಂತಸಗೊಂಡಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಕುಟುಂಬ ನಿರ್ವಹಣೆಗಾಗಿ ಆಟೋ ಚಾಲಕಳಾದ 21 ವರ್ಷದ ಯುವತಿ

ಈ ಹೆಮ್ಮೆಯ ಕ್ಷಣದ ಬಗ್ಗೆ ಮಾತನಾಡಿರುವ ಆಕೆಯ ತಂದೆ ಸರ್ದಾರ್ ಗೋರಖ್ ಸಿಂಗ್, ಹುಡುಗಿಯರು ಪ್ರತಿಯೊಂದು ಕ್ಷೇತ್ರದಲ್ಲೂ ಉತ್ತಮ ಸಾಧನೆ ಮಾಡಬಹುದು. ಅವರು ಬಯಸುವ ಯಾವುದೇ ವೃತ್ತಿಯನ್ನು ಆರಿಸಿಕೊಳ್ಳಬಹುದು. ಅದರಲ್ಲಿ 100% ಯಶಸ್ಸನ್ನು ಸಹ ಕಾಣಬಹುದು ಎಂದು ಹೇಳಿದ್ದಾರೆ.

ಕುಟುಂಬ ನಿರ್ವಹಣೆಗಾಗಿ ಆಟೋ ಚಾಲಕಳಾದ 21 ವರ್ಷದ ಯುವತಿ

ಕರೋನಾ ಸಾಂಕ್ರಾಮಿಕದ ಕಾರಣ ಜಾರಿಯಾದ ಲಾಕ್‌ಡೌನ್ ಕಾರಣಕ್ಕೆ ನಾನು ನನ್ನ ಕೆಲಸವನ್ನು ಕಳೆದುಕೊಂಡಾಗ, ನನ್ನ ಮಗಳು ಆಟೋ ರಿಕ್ಷಾ ಚಾಲನೆ ಕಲಿಸುವಂತೆ ನನ್ನನ್ನು ಕೇಳಿದಳು. ನಾನು ಆಕೆಗೆ ನೆರವಾದೆ ಎಂದು ಅವರು ಹೇಳಿದರು.

Most Read Articles

Kannada
English summary
21 year old girl became auto rickshaw driver for her family. Read in Kannada.
Story first published: Tuesday, January 19, 2021, 18:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X