Mahindra: 21 ವರ್ಷ ಹಳೆಯ ಕಾರು: ಅಂದು ಅಪ್ಪನೊಂದಿಗೆ ಖರೀದಿ... ಇಂದು ಮಗನೊಂದಿಗೆ ಮಾಡಿಫೈ!

ಕೆಲವು ಕಾರು ಬ್ರಾಂಡ್‌ಗಳು ತಮ್ಮ ಮಾಡಲ್ ಒಂದು ಹಿಟ್ ಆಯಿತೆಂದರೆ ಅದನ್ನು ದಶಕಗಳು ಕಳೆದರು ಉಳಿಸಿಕೊಂಡು ಬರುತ್ತವೆ. ಅಂತಹ ಭರ್ಜರಿ ಹಿಟ್ ಕಂಡ ಕೆಲವೇ ಕಾರುಗಳಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಕೂಡ ಒಂದು. 2002 ರಲ್ಲಿ ಟಾಟಾ ಸಫಾರಿಗೆ ಪೈಪೋಟಿ ನೀಡಲು ಮಹೀಂದ್ರಾ ತನ್ನ ಬಹುನಿರೀಕ್ಷಿತ ಸ್ಕಾರ್ಪಿಯೋವನ್ನು ಬಿಡುಗಡೆ ಮಾಡಿತ್ತು.

ಅಂದಿನ ಕಾಲಕ್ಕೆ ಈ ಎಸ್‌ಯುವಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಅದರ ರಗಡ್ ಲುಕ್‌ನೊಂದಿಗೆ ಎಂಥವರನ್ನು ತನ್ನತ್ತ ಸೆಳೆಯುವಂಥಾ ಲುಕ್‌ನೊಂದಿಗೆ ಬಿಡುಗಡೆಯಾಗಿತ್ತು. ಹಾಗಾಗಿಯೇ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಯಶಸ್ಸನ್ನು ಕಂಡು ಪ್ರತ್ಯೇಕ ಅಭಿಮಾನಿಗಳನ್ನು ಗಳಿಸಿತು. 20 ವರ್ಷಗಳ ನಂತರವೂ, ಈ ಕಾರು ಭಾರತೀಯ ಎಸ್‌ಯುವಿ ವಿಭಾಗದಲ್ಲಿ ಇನ್ನೂ ಬಲವಾಗಿ ನಿಂತಿದೆ. ಹಳೆಯ ಸ್ಕಾರ್ಪಿಯೋಗಳನ್ನು ಇನ್ನೂ ದೇಶದ ಬೀದಿಗಳಲ್ಲಿ ಓಡುತ್ತಿರುವ ಅನೇಕ ಉದಾಹರಣೆಗಳನ್ನು ನಾವು ನೋಡಬಹುದು. ಇತ್ತೀಚೆಗೆ ಮೊದಲ ತಲೆಮಾರಿನ ಸ್ಕಾರ್ಪಿಯೋವನ್ನು (ಸುಮಾರು 21 ವರ್ಷ ಹಳೆಯ) ಇತ್ತೀಚಿನ (2024ರ)ಸ್ಕಾರ್ಪಿಯೋ ಕ್ಲಾಸಿಕ್‌ಗೆ ಪರಿವರ್ತಿಸಿರುವ ವಿಡಿಯೋ ವೈರಲ್ ಆಗಿದೆ.

21-years-old-1st-gen-mahindra-scorpio-modified-as-2024-classic-model

ತಂದೆಯೊಂದಿಗೆ ಡೆಲಿವರಿ, ಮಗನೊಂದಿಗೆ ಮಾಡಿಫೈ: ವೀಡಿಯೊದಲ್ಲಿರುವ ಕಾರು 1ನೇ ತಲೆಮಾರಿನ 2003ರ ಮಾದರಿಯಾಗಿದ್ದು, ಇದನ್ನು 2024ರ ಸ್ಕಾರ್ಪಿಯೋ ಕ್ಲಾಸಿಕ್‌ನ ಇತ್ತೀಚಿನ ಪುನರಾವರ್ತನೆಯಾಗಿ ಪರಿವರ್ತಿಸಲಾಗಿದೆ. ಕಾರಿನ ಮಾಲೀಕ 2003 ರಲ್ಲಿ ತಮ್ಮ ತಂದೆಯೊಂದಿಗೆ ಮಹೀಂದ್ರಾ ಡೀಲರ್‌ನಿಂದ ಈ ಕಾರನ್ನು ಡೆಲಿವರಿ ಪಡೆದಿದ್ದರು. ಇದೀಗ ಮಾಡಿಫೈಗೊಳಿಸಿ ಇಂದು ಅವರ ಮಗನೊಂದಿಗೆ ಅದೇ ಕಾರನ್ನು ಡೆಲಿವರಿ ತೆಗೆದುಕೊಂಡಿದ್ದಾರೆ.

21 ವರ್ಷ ಹಳೆಯ ಕಾರಿಗಾಗಿ ಹಣವನ್ನು ಖರ್ಚು ಮಾಡುವುದು ಅನೇಕರಿಗೆ ಮೂರ್ಖತನದಂತೆ ಕಾಣಬಹುದು, ಆದರೆ ಅವರ ಕಾರಿನೊಂದಿಗೆ ಅವರಿಗಿರುವ ಭಾವನೆಗಳು ಮತ್ತು ನೆನಪುಗಳು ಅಮೂಲ್ಯವಾಗಿರಬಹುದು. ಮಾಲೀಕ ತಮ್ಮ ತಂದೆಯಿಂದ ಪಡೆದ ಮೊದಲ ಕಾರು ಹಾಗೂ ಈ ಕಾರಿನೊಂದಿಗೆ ಮರೆಯಲಾಗದ ಅದೆಷ್ಟೋ ನೆನಪುಗಳು ಇರುವುದರಿಂದಲೇ ಪಟ್ಟು ಹಿಡಿದು ಕಾರನ್ನು ಮಾಡಿಫೈಗೊಳಿಸಿ ಬಳಸುತ್ತಿದ್ದಾರೆ ಎಂದು ಹೇಳಲಾಗಿದೆ.

21-years-old-1st-gen-mahindra-scorpio-modified-as-2024-classic-model

ಮೊದಲು ಸಿಲ್ವರ್ ಬಣ್ಣದಲ್ಲಿದ್ದ ಮೊದಲ ತಲೆಮಾರಿನ ಸ್ಕಾರ್ಪಿಯೋ ಎಸ್‌ಯುವಿಗೆ ವಯಸ್ಸಾದ ಚಿಹ್ನೆಗಳನ್ನು ಹೊಂದಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ಎಸ್‌ಯುವಿಯಲ್ಲಿ ಏನೆಲ್ಲಾ ಬದಲಾವಣೆ ಮಾಡಬೇಕಿದೆ ಎಂದು ಅರಿತ ಮಾಲೀಕ, ಎಸ್‌ಯುವಿಯ ಎಲ್ಲಾ ಅಂಶಗಳನ್ನು ಬದಲಾಯಿಸಬೇಕಾಗುತ್ತದೆ ಎಂದು ಹೇಳಿದಾಗ ತುಸು ಗಾಬರಿ ಬಿದ್ದರಾದರೂ, ಇಷ್ಟು ವರ್ಷಗಳ ನಂತರವೂ ಕಾರು ಉತ್ತಮ ಕಂಡಿಷನ್‌ನಲ್ಲಿದೆ ಎಂದು ಹೇಳಿದಾಗ ಅಷ್ಟೇ ಖುಷಿ ಪಟ್ಟರಂತೆ. ವೀಡಿಯೊದಲ್ಲಿ ಸಂಪೂರ್ಣ ಮಾಡಿಫೈ ಪ್ರಕ್ರಿಯೆಯನ್ನು ತೋರಿಸಿದ್ದು, ಆಟೋ ರೌಂಡರ್ಸ್ (Autorounders) ತಂಡವು ಕಾರುಗಳನ್ನು ಎಷ್ಟು ಎಚ್ಚರಿಕೆಯಿಂದ ನಿರ್ವಹಿಸುತ್ತದೆ ಎಂಬುದನ್ನು ಈ ವಿಡಿಯೋ ಎತ್ತಿ ತೋರಿಸುತ್ತದೆ.

ಕಾರಿನ ಪ್ರಮುಖ ಭಾಗಗಳಾದ ಬಾನೆಟ್, ಬಂಪರ್, ಫೆಂಡರ್, ಲ್ಯಾಂಪ್‌ಗಳು, ವಿಂಡ್ ಶೀಲ್ಡ್ ಮತ್ತು ಬೂಟ್ ಡೋರ್‌ಗಳನ್ನು ಬದಲಾಯಿಸಲಾಗಿದೆ. ಮುಂಭಾಗದ ಎಲ್ಲಾ ಭಾಗಗಳು ಬೋಲ್ಟ್-ಆನ್ ಆಗಿದ್ದರೆ, ಹಿಂಭಾಗದಲ್ಲಿ ಕೆಲವು ಫ್ಯಾಬ್ರಿಕೇಶನ್ ಅಗತ್ಯವಿದ್ದ ಕಾರಣ, ವಿಶೇಷವಾಗಿ ಟೈಲ್ ಲ್ಯಾಂಪ್‌ಗಳಿಗೆ ಮಾಡಲಾಗಿದೆ. ಕಾರಿನ ಪೇಂಟಿಂಗ್ ಪ್ರಕ್ರಿಯೆಯನ್ನು ಸಹ ತೋರಿಸಲಾಗಿದ್ದು, ಬಣ್ಣವನ್ನು ಸಿಲ್ವರ್ ನಿಂದ ಪರ್ಲ್ ವೈಟ್‌ಗೆ ಬದಲಾಯಿಸಲಾಗಿದೆ.

21-years-old-1st-gen-mahindra-scorpio-modified-as-2024-classic-model

ಕಾರು ಸರಳವಾಗಿ ಎಲ್ಲಾ ನಾಲ್ಕು ಬದಿಗಳಿಂದ ಹೊಚ್ಚ ಹೊಸ ಸ್ಕಾರ್ಪಿಯೋ ಕ್ಲಾಸಿಕ್ ನಂತೆ ಕಾಣುತ್ತದೆ. ಪರ್ಲ್ ವೈಟ್ ಬಣ್ಣವನ್ನು ವೋಲ್ವೋ ಎಕ್ಸ್ ಸಿ 90 ನಿಂದ ಎರವಲು ಪಡೆಯಲಾಗಿದೆ. ಇಂಟೀರಿಯರ್ ಕೂಡ ಉತ್ತಮವಾಗಿರಲಿಲ್ಲ, ಹಾಗಾಗಿ ತಂಡವು ಅದನ್ನು ಪುನಃಸ್ಥಾಪಿಸಿದೆ. ಆಂಡ್ರಾಯ್ಡ್ ಇನ್ಫೋಟೈನ್ ಮೆಂಟ್ ಸಿಸ್ಟಮ್ ನಂತಹ ಕೆಲವು ಅಗತ್ಯ ವೈಶಿಷ್ಟ್ಯಗಳನ್ನು ಬೀಜ್ ಮತ್ತು ಕಪ್ಪು ಥೀಮ್‌ನಲ್ಲಿ ನೀಡಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, April 10, 2024, 13:23 [IST]
English summary
21 years old 1st gen mahindra scorpio modified as 2024 classic model
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+