23ರ ಯುವಕ 50 ಕೋಟಿ ಆಫರ್ ತಿರಸ್ಕಾರ: ವಿಶ್ವವೇ ತಿರುಗಿನೋಡುವ ಟೆಕ್ನಾಲಜಿಗಾಗಿ ಬೆಂಬಿದ್ದ ದೈತ್ಯ ಬ್ರಾಂಡ್‌ಗಳು!

ಹರಿಯಾಣದ 23 ವರ್ಷದ ಮೋಹಿತ್ ಯಾದವ್ ಎಂಬ ಯುವಕ ಹೊಸದಾಗಿ ರಚಿಸಲಾದ ಸಾಫ್ಟ್‌ವೇರ್‌ನೊಂದಿಗೆ ತಂತ್ರಜ್ಞಾನ ಪ್ರಪಂಚವನ್ನು ವಿಸ್ಮಯಗೊಳಿಸಿದ್ದಾರೆ. ಈತನ ಹೊಸ ತಂತ್ರಜ್ಞಾನಕ್ಕಾಗಿ ಪ್ರಮುಖ ಆಟೋ ದೈತ್ಯ ಕಂಪನಿಯೊಂದು 50 ಕೋಟಿ ಆಫರ್ ನೀಡಿದ್ದು, ಮೋಹಿತ್ ಯಾದವ್ ನಯವಾಗಿ ತಿರಸ್ಕರಿಸಿ ಸುದ್ದಿಯಾಗಿದ್ದಾರೆ.

ವರದಿಗಳ ಪ್ರಕಾರ, ಈತ ಹೊಸದಾಗಿ ರಚಿಸಲಾದ ಸಾಫ್ಟ್‌ವೇರ್‌ ರಸ್ತೆ ಅಪಘಾತಗಳನ್ನು ತಡೆಗಟ್ಟುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಜೊತೆಗೆ ಶೇ 50ರಷ್ಟು ಇಂಧನ ಉಳಿತಾಯಕ್ಕೂ ಈ ತಂತ್ರಾಂಶ ನೆರವಾಗಲಿದೆ. ಎರಡೂ ಕೊಡುಗೆಗಳನ್ನು ಒಟ್ಟುಗೂಡಿಸಿ, ಇದು ಜಗತ್ತಿನ ಆಟೋ ವಲಯವನ್ನು ಕ್ರಾಂತಿಗೊಳಿಸಲಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿಯೇ ಅನೇಕ ಆಟೋ ದೈತ್ಯಗಳು ಈತನ ಬೆಂಬಿದ್ದಿರುವುದಾಗಿ ವರದಿಯಾಗಿದೆ.

23-year-old-rejects-50-crore-offer-for-his-new-tech

ಈ ಟೆಕ್ನಾಲಜಿಯನ್ನು ಹೊರತಂದರೆ ಲಕ್ಷಾಂತರ ಜೀವಗಳನ್ನು ಉಳಿಸುವುದರ ಜೊತೆಗೆ ಮಾಲಿನ್ಯವನ್ನು ನಿಯಂತ್ರಿಸುತ್ತದೆ. ಸದ್ಯ ಇದಕ್ಕಾಗಿಯೇ ಆಟೋ ಉದ್ಯಮ ಪರ್ಯಾಯವಾಗಿ ಎಲೆಕ್ಟ್ರಿಕ್ ವಾಹನಗಳ ಮೇಲೆ ಹೆಚ್ಚಾಗಿ ಅವಲಂಭಿತವಾಗಿದೆ. ಆದ್ರೆ ಎಲ್ಲರಿಗೂ ತಿಳಿದಿರುವಂತೆ ಮಾರುಕಟ್ಟೆಯಲ್ಲಿ ಇಂಧನ ಚಾಲಿತ ವಾಹನಗಳಿಗೆ ಹೆಚ್ಚಿನ ಬೇಡಿಕೆಯಿರುವುದರಿಂದ ಇವಿ ವಾಹನಗಳು ಸಂಪೂರ್ಣವಾಗಿ ಆಟೋ ವಲಯವನ್ನು ಆಕ್ರಮಿಸಲು ಇನ್ನೂ 40 ವರ್ಷಗಳು ಬೇಕಾಗಬಹುದು.

ಹೇಗೂ ಈತನ ಟೆಕ್ನಾಲಜಿ ಎಲ್ಲಾ ರೀತಿಯಲ್ಲೂ ಇಂಧನ ಚಾಲಿತ ವಾಹನಗಳೊಂದಿಗೆ ಎಲೆಕ್ಟ್ರಿಕ್ ವಾಹನಗಳಷ್ಟೇ ಪರಿಣಾಮಕಾರಿಯಾಗಿದ್ದು, ಆಟೋ ವಲಯದಲ್ಲಿ ಕ್ರಾಂತಿ ಸೃಷ್ಟಿಸಲಿದೆ. ಈ ಟೆಕ್ನಾಲಜಿಯನ್ನು ಬಳಿಸಿಕೊಳ್ಳುವ ವಾಹನ ಕಂಪನಿಗಳೇ ಮಾರುಕಟ್ಟೆಯಲ್ಲಿ ನಂ.1 ಸ್ಥಾನದಲ್ಲಿರಲಿವೆ. ಇದನ್ನು ಮನಗಂಡಿರುವ ಕಾರು ಕಂಪನಿಗಳು ಯುವಕನಿಗೆ ದೊಡ್ಡ ಮೊತ್ತದ ಆಫರ್‌ಗಳನ್ನು ನೀಡುತ್ತಿರುವುದಾಗಿ ತಿಳಿದುಬಂದಿದೆ.

ಟಾಟಾದಿಂದ 50 ಕೋಟಿ ಆಫರ್: ಈ ಸಾಫ್ಟ್‌ವೇರ್ ಖರೀದಿಸಲು ಟಾಟಾ ಮೋಟಾರ್ಸ್ ಮೋಹಿತ್‌ಗೆ 50 ಕೋಟಿ ರೂ. ನೀಡಿದ್ದು, ಅದನ್ನು ತಿರಸ್ಕರಿಸಿರುವುದಾಗಿ ಯುವಕ ಹೇಳಿದ್ದಾನೆ. ನನ್ನ ಈ ಟೆಕ್ನಾಲಜಿಯನ್ನು ಸಾರ್ವಜನಿಕರಿಗೆ ಉಪಯೋಗವಾಗಲು ಸರ್ಕಾರಕ್ಕೆ ಉಚಿತವಾಗಿ ನೀಡುವುದಾಗಿ ಹೇಳಿದ್ದಾರಂತೆ. ಈ ಕುರಿತು ನ್ಯೂಸ್ 18 ಮರಾಠಿಗೆ ಯುವಕ ತಿಳಿಸಿರುವುದಾಗಿ ವರದಿಯಾಗಿದೆ.

ನ್ಯೂಸ್ 18 ವರದಿಯ ಪ್ರಕಾರ, ಮೋಹಿತ್ ಇಂತಹ ಬುದ್ಧಿವಂತ ನಡೆಯ ಹಿಂದೆ ಕೆಲ ವರ್ಷಗಳ ಹಿಂದೆ ನಡೆದ ಅಹಿತಕರ ಘಟನೆ ಇದೆಯಂತೆ. ಟ್ರಕ್-ಕಾರ್ ಡಿಕ್ಕಿ ಹೊಡೆದು ನಾಲ್ಕು ಜನರು ಸಾವನ್ನಪ್ಪಿದ್ದನ್ನು ಕಂಡು ವಿಚಲಿತರಾಗಿ ಅಪಘಾತಗಳನ್ನು ತಡೆಯಲು ಸಾಫ್ಟ್‌ವೇರ್ ಮಾಡಲು ಕಾರಣವಾಯಿತು ಎಂದು ಹೇಳಿಕೊಂಡಿದ್ದಾರೆ.

ಚಂಡೀಗಢ ವಿಶ್ವವಿದ್ಯಾನಿಲಯದಲ್ಲಿ ಬಿಟೆಕ್‌ನ ಅಂತಿಮ ವರ್ಷದಲ್ಲಿ ಸಾಫ್ಟ್‌ವೇರ್ ಅನ್ನು ಅಭಿವೃದ್ಧಿಪಡಿಸಿದ್ದೇನೆ. ಈ ಸಾಫ್ಟ್‌ವೇರ್ ಹೊಂದುವ ಯಾವುದೇ ವಾಹನ ಅಪಘಾತಕ್ಕೀಡಾಗುವುದಿಲ್ಲ. ಅಲ್ಲದೆ, ಚಾಲಕ ಕುಡಿದು ಬಂದರೆ ವಾಹನವನ್ನು ಸ್ಟಾರ್ಟ್ ಮಾಡಲು ಸಾಫ್ಟ್‌ವೇರ್ ಅನುಮತಿಸುವುದಿಲ್ಲ. ಶೇಕಡಾ 50 ರಷ್ಟು ಇಂಧನವನ್ನು ಉಳಿಸುವಲ್ಲಿ ಸಾಫ್ಟ್‌ವೇರ್ ದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದು ತಿಳಿಸಿದ್ದಾರೆ.

ಭಾರತದಲ್ಲಿ ಪ್ರತಿಭೆಗೆ ಕೊರತೆ ಇಲ್ಲ. ತಂತ್ರಜ್ಞಾನ, ಕ್ರೀಡೆ, ಶಿಕ್ಷಣ ಮತ್ತು ಇತರ ಉದ್ಯಮಗಳು ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ದೇಶದ ಯುವಜನರ ಕೊಡುಗೆ ಅಪಾರ. ದೇಶವನ್ನು ವಿಶ್ವದ ಇತಿಹಾಸದಲ್ಲಿ ಅಚ್ಚಳಿಯದಂತೆ ಮುನ್ನಡೆಸಿ, ಅಪಾರ ಗೌರವವನ್ನು ಗಳಿಸುತ್ತಿದ್ದಾರೆ. ಅಂತಹ ಭಾರತೀಯರಲ್ಲಿ ದೇಶವೇ ಹೆಮ್ಮೆ ಪಡುವಂತವರಲ್ಲಿ ಮೋಹಿತ್ ಯಾದವ್ ಕೂಡ ಒಬ್ಬರಾಗಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Source: News 18
Link: https://www.news18.com/india/haryana-man-rejects-tata-motors-rs-50-crore-offer-to-buy-his-software-for-this-reason-8532922.html

Article Published On: Saturday, August 12, 2023, 17:54 [IST]
English summary
23 year old rejects 50 crore offer for his new tech
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+