23 ವರ್ಷ ವಯಸ್ಸಲ್ಲೇ ಲ್ಯಾಂಬೋರ್ಗಿನಿ ಖರೀದಿಸಿದ ಯುವಕ: ಮನಸ್ಸಿದ್ದರೆ ಎಲ್ಲವೂ ಸಾಧ್ಯ!

ಒಂದು ಲ್ಯಾಂಬೋರ್ಗಿನಿ ಕಾರನ್ನು ಸ್ವಂತವಾಗಿ ಖರೀದಿಸಬೇಕು ಎನ್ನುವುದು ಬಹುತೇಕ ಭಾರತೀಯ ಯುವಕರಿಗಿರುವ ಕನಸು. ಆದರೆ ಆ ಕನಸು ನನಸಾಗಲು ಸಾಕಷ್ಟು ಕಷ್ಟ, ತ್ಯಾಗ ಮತ್ತು ಸತತ ಪರಿಶ್ರಮ ಇರಬೇಕಾಗುತ್ತದೆ. ಇಂತಹ ದುಬಾರಿ ಕನಸುಗಳು ನನಸಾಗಲು ಕೆಲವರಿಗೆ ಬಹಳಷ್ಟು ಸಮಯ ಹಿಡಿದರೆ ಇನ್ನು ಕೆಲವರು ಆದಷ್ಟು ಬೇಗ ನನಸು ಮಾಡಿಕೊಳ್ಳುತ್ತಾರೆ.

ಇಲ್ಲೊಂದು ಕಡೆ ಯುವಕನೊಬ್ಬ ತಾನು 23 ವರ್ಷವಿರುವಾಗಲೇ ಕಷ್ಟ ಪಟ್ಟು ಲ್ಯಾಂಬೋರ್ಗಿನಿ ಹುರಾಕಾನ್‌ (Lamborghini Huracan) ಅನ್ನು ಖರೀದಿ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ. ಹೌದು, ತನ್ನ ಚಿಕ್ಕ ವಯಸ್ಸಿನಲ್ಲೇ ಈ ದುಬಾರಿ ಕಾರನ್ನು ಖರೀದಿ ಮಾಡಿರುವ ವ್ಯಕ್ತಿಯ ಹೆಸರು ಮೃದುಲ್‌ ಎಂದು ತಿಳಿದು ಬಂದಿದೆ. ಈ ಕುರಿತಾದ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್‌ ಆಗುತ್ತಿದೆ.

23 Years Old Man Brought Lamorghini Huracan In India Video Viral

ಮಾಹಿತಿಗಳ ಪ್ರಕಾರ ಭಾರತದಲ್ಲಿ ಲ್ಯಾಂಬೋರ್ಗಿನಿ ಹುರಾಕಾನ್ ಅನ್ನು ಖರೀದಿಸಿದ ಅತೀ ಕಡಿಮೆ ವಯಸ್ಸಿನ ಮಾಲೀಕರು ಎಂದೆನಿಸುತ್ತದೆ. ವಿಡಿಯೋದಲ್ಲಿ ಮೃದುಲ್, ಹೇಗೆ ಈ ಕಾರನ್ನು ಖರೀದಿಸಿದ್ದಾನೆ ಮತ್ತು ಆತನ ಕುಟುಂಬ ಈತ ಇಷ್ಟು ದುಬಾರಿ ಕಾರನ್ನು ಕೊಳ್ಳುವಾಗ ಏನು ಹೇಳಿದ್ದರು, ಯಾವ ರೀತಿಯಾಗಿ ಕಾರು ಕೊಳ್ಳಲು ಬೆಂಬಲ ನೀಡಿದರು ಎಂಬುದನ್ನು ವಿಡಿಯೋದಲ್ಲಿ ವಿವರವಾಗಿ ತಿಳಿಸಿದ್ದಾನೆ.

ಈತ ವಿಡಿಯೋದಲ್ಲಿ ಹೇಳುತ್ತಿರುವಂತೆ ಲ್ಯಾಂಬೋರ್ಗಿನಿ ಕಾರುಕೊಳ್ಳುವ ಯಾವುದೇ ಪ್ಲಾನ್‌ ಸಹ ಇವರಿಗೆ ಇರಲಿಲ್ಲವಂತೆ. ಆದರೆ ಒಂದು ದಿನ ಇದ್ದಕ್ಕಿದ್ದಂತೆ ಲ್ಯಾಂಬೋರ್ಗಿನಿ ಕಾರು ಬೇಕೆಂದು ಅನಿಸಿದಾಗ ಅದಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಕೂಡಲೇ ಅವರಿರುವ ಸ್ಥಳಕ್ಕೆ ಸಮೀಪವಾಗಿ ಒಂದು ಲ್ಯಾಂಬೋರ್ಗಿನಿ ಹುರಾಕಾನ್‌ ಮಾರಾಟಕ್ಕಿತ್ತು. ಮುಂದಿನ ದಿನವೇ ಅದನ್ನು ಖರೀದಿ ಮಾಡಿದೆವು ಎಂದು ಹೇಳಿದ್ದಾರೆ.

23 Years Old Man Brought Lamorghini Huracan In India Video Viral

ಲ್ಯಾಂಬೋರ್ಗಿನಿ ಹುರಾಕಾನ್‌ ಬಗ್ಗೆ ನೋಡುವುದಾದರೆ, ಸುಮಾರು 4.99 ಕೋಟಿ ಬೆಲೆ ಬಾಳುವ ಈ ಕಾರು, 5.2 ಲೀಟರ್‌ V10 ಎಂಜಿನ್‌ ಜೊತೆ ಬರುತ್ತದೆ. ಈ ಎಂಜಿನ್‌ ಸಹಾಯದಿಂದ ಸುಮಾರು 640 ಪಿಎಸ್‌ ಪವರ್ ಮತ್ತು 565 ಎನ್‌ಎಮ್‌ ಟಾರ್ಕ್‌ ಅನ್ನು ಈ ಕಾರು ಉತ್ಪಾದಿಸುತ್ತದೆ. ನಮ್ಮಲ್ಲಿ ಹಲವು ಸೆಲೆಬ್ರಿಟಿಗಳು ಲ್ಯಾಂಬೋರ್ಗಿನಿ ಹುರಾಕಾನ್‌ನ ವಿವಿಧ ಮಾದರಿಯ ಕಾರುಗಳನ್ನು ಖರೀದಿ ಮಾಡಿದ್ದಾರೆ.

ಇತ್ತೀಚೆಗೆ ಬಾಲಿವುಡ್ ಖ್ಯಾತ ನಟಿ ಶ್ರದ್ಧಾ ಕಪೂರ್ (Shraddha Kapoor) ಭಾರತದಲ್ಲಿ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಹೊಚ್ಚಹೊಸ ಲ್ಯಾಂಬೋರ್ಗಿನಿ ಹುರಾಕನ್ ಖರೀದಿಸಿದ್ದಾರೆ. ಶ್ರದ್ಧಾ ಕಪೂರ್ ಅವರು 4.5 ಕೋಟಿ ಮೌಲ್ಯದ ಲ್ಯಾಂಬೋರ್ಗಿನಿ ಹುರಾಕನ್ ಟೆಕ್ನಿಕಾ ಮಾದರಿಯನ್ನು ಖರೀದಿಸಿದ್ದಾರೆ. ಈ ಐಷಾರಾಮಿ ಕಾರು ಕೆಂಪು ಬಣ್ಣ ಮಾದರಿಯಾಗಿದೆ.

23 Years Old Man Brought Lamorghini Huracan In India Video Viral

ಟ್ರ್ಯಾಕ್-ಫೋಕಸ್ಡ್ STO ರೂಪಾಂತರವು ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವುದರಿಂದ ಇದು ಮಾರಾಟದಲ್ಲಿರುವ ಅತ್ಯಂತ ಶಕ್ತಿಶಾಲಿ ಹುರಾಕನ್ ಅಲ್ಲ.ಈ ಲ್ಯಾಂಬೋರ್ಗಿನಿಯ ಹುರಾಕನ್ ಟೆಕ್ನಿಕಾ ಕಾರು (Lamborghini Huracan) ಕಾರು ಅನಾವರಣಗೊಳಿಸಿತು. ಸಿಯಾನ್ ಹೈಬ್ರಿಡ್ ಹೈಪರ್‌ಕಾರ್‌ನಿಂದ ಪ್ರೇರಿತವಾದ ವಿನ್ಯಾಸ ಅಂಶಗಳನ್ನು ಒಳಗೊಂಡಿದೆ. ಗಮನಾರ್ಹವಾಗಿ, ಮುಂಭಾಗ ಮತ್ತು ಹಿಂಭಾಗದ ಫಾಸಿಕದಲ್ಲಿ ಬ್ಲ್ಯಾಕ್ ಫಿನಿಶಿಂಗ್ ಅನ್ನು ಹೊಂದಿದೆ.

ಈ ಲ್ಯಾಂಬೋರ್ಗಿನಿ ಹುರಾಕನ್ ಟೆಕ್ನಿಕಾ ಸೂಪರ್ ಕಾರು 325 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇನ್ನು ಈ ಸೂಪರ್ ಕಾರಿನಲ್ಲಿ 3.2 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಸೂಪರ್ ಕಾರು 9.1 ಸೆಕೆಂಡುಗಳಲ್ಲಿ 200 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಬಾಲಿವುಡ್ ನಟಿ ಶ್ರದ್ಧಾ ಕಪೂರ್ಅವರು ಟೊಯೊಟಾ ಫಾರ್ಚೂನರ್ ಎಸ್‍ಯುವಿಯಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, April 11, 2024, 16:43 [IST]
English summary
23 years old man brought lamborghini huracan in india video viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+