ಬೆಳಂಬೆಳಗ್ಗೆ ಕುಡಿದು ವಾಹನ ಚಲಾಯಿಸಿ ಸಿಕ್ಕಿಬಿದ್ದ 26 ಬಸ್ ಚಾಲಕರು: ಸಾವಿರ ಬಾರಿ ಬರೆದ ಬಳಿಕ ಸಿಕ್ತು ಜಾಮೀನು
ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿ 26 ಬಸ್ ಚಾಲಕರು ಸಿಕ್ಕಿಬಿದ್ದ ಆಘಾತಕಾರಿ ಘಟನೆ ನಡೆದಿದೆ. ಕೇರಳದ ಕೊಚ್ಚಿಯಲ್ಲಿ 26 ಬಸ್ ಚಾಲಕರು ಕುಡಿದು ವಾಹನ ಚಲಾಯಿಸಿ ಹಿಲ್ ಪ್ಯಾಲೇಸ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಇವರು ಸಾರ್ವಜನಿಕ ಸಾರಿಗೆ ಮತ್ತು ಶಾಲಾ ಬಸ್‌ಗಳ ಚಾಲಕರು ಎಂಬುವುದೇ ಅಘಾತಕರ ವಿಷಯವಾಗಿದೆ.
ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳ ಜೀವದ ಜೊತೆ ಈ ಚಾಲಕರು ಚೆಲ್ಲಾಟವಾಡಿದ್ದಾರೆ. ಪೊಲೀಸರು ಈ ಚಾಲಕರಿಗೆ ಶಿಕ್ಷೆ ರೂಪದಲ್ಲಿಮದ್ಯಪಾನ ಮಾಡಿ ವಾಹನ ಚಲಾಯಿಸುವುದಿಲ್ಲ ಎಂದು 1,000 ಬಾರಿ ಬರೆಸಿದ್ದಾರೆ. ಇನ್ನು ಟ್ರಾಫಿಕ್ ಮತ್ತು ಇತರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಒಟ್ಟು 32 ಬಸ್‌ಗಳನ್ನು ಸೀಜ್ ಮಾಡಲಾಗಿದೆ. ಸೋಮವಾರ ಮುಂಜಾನೆ ತ್ರಿಪ್ಪುಣಿತ್ರ ಹಿಲ್ ಪ್ಯಾಲೇಸ್ ಇನ್ಸ್‌ಪೆಕ್ಟರ್ ವಿ.ಗೋಪಕುಮಾರ್ ಅವರು ಹಠಾತ್ ಶೋಧ ನಡೆಸಿ, 2 ಕೆಎಸ್‌ಆರ್‌ಟಿಸಿ ಬಸ್ ಚಾಲಕರು, 10 ಖಾಸಗಿ ಬಸ್ ಚಾಲಕರು ಮತ್ತು 4 ಶಾಲಾ ಬಸ್ ಚಾಲಕರು ಕುಡಿದು ವಾಹನ ಚಲಾಯಿಸಿರುವುದಕ್ಕೆ ಬಂಧಿಸಿದ್ದರು.

ಜಾಮೀನು ನೀಡುವ ಮುನ್ನ ಈ ಚಾಲಕರ ಬಳಿ 1,000 ಬಾರಿ "ನಾನು ಕುಡಿದು ವಾಹನ ಚಲಾಯಿಸುವುದಿಲ್ಲ" ಎಂದು ಬರೆಯಲು ಹೇಳಿದ್ದರು. ಅಲ್ಲದೇ ಈ ಎಲ್ಲಾ ತಪ್ಪಿತಸ್ಥ ಚಲಾಕರು ತಮ್ಮ ಚಾಲನಾ ಪರವಾನಗಿಯನ್ನು ಕಳೆದುಕೊಳ್ಳುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹೈಕೋರ್ಟ್ ಸೂಚನೆ ಮೇರೆಗೆ ಪಾನಮತ್ತ ಚಾಲಕರಿಗೆ ಬಸ್‌ಗಳ ಹುಡುಕಾಟ ನಡೆಸಲಾಗಿದ್ದು, ಅದರಂತೆ ಪೊಲೀಸರು ಕಾನೂನು ಕ್ರಮಕೈಗೊಳ್ಳುತ್ತಾರೆ. . ಚಾಲಕರು ಮದ್ಯಪಾನ ಮಾಡಿ ಬೆಳಗ್ಗೆ ಬಸ್ ಓಡಿಸುತ್ತಿರುವ ಸುದ್ದಿ ಕೇಳಿ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ.
ವಿಶೇಷವಾಗಿ ಸಾರ್ವಜನಿಕ ಸಾರಿಗೆ ಮತ್ತು ಶಾಲಾ ಬಸ್‌ಗಳನ್ನು ನಿರ್ವಹಿಸುವವರಿಗೆ ಕುಡಿದು ವಾಹನ ಚಲಾಯಿಸುವುದರಿಂದ ಉಂಟಾಗುವ ಅಪಾಯಗಳನ್ನು ಒತ್ತಿಹೇಳಲು ಇದು ಪೊಲೀಸರಿಂದ ಬಲವಾದ ಸಂದೇಶವಾಗಿದೆ. ಕುಡಿದು ವಾಹನ ಚಲಾಯಿಸುವುದರಿಂದ ಚಾಲಕನ ಪ್ರಾಣಕ್ಕೆ ಅಪಾಯವಾಗುವುದಲ್ಲದೆ, ರಸ್ತೆಯಲ್ಲಿ ಸಂಚರಿಸುವ ಪ್ರತಿಯೊಬ್ಬರ ಪ್ರಾಣಕ್ಕೂ ಅಪಾಯವಿದೆ. ಕೆಎಸ್‌ಆರ್‌ಟಿಸಿ ಚಾಲಕರ ವಿರುದ್ಧ ಪಾಲಿಕೆಗೆ ವರದಿ ಕಳುಹಿಸುವ ಮೂಲಕ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳ ಸುರಕ್ಷತೆಗೆ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.

ವಿಶೇಷವಾಗಿ ಸಾರ್ವಜನಿಕ ಸಾರಿಗೆ ಮತ್ತು ಶಾಲಾ ಬಸ್‌ಗಳ ಚಾಲಕರು ಕುಡಿದು ವಾಹನ ಚಲಾಯಿಸುವುದರಿಂದ ಉಂಟಾಗುವ ಅಪಾಯಗಳನ್ನು ಒತ್ತಿಹೇಳುವ ಅಗತ್ಯವಿಲ್ಲ. ಬಸ್ ನಲ್ಲಿರುವ ಪ್ರಯಾಣಿಕರ ಜೊತೆ ಚೆಲ್ಲಾಟವಾಡಿದ್ದಾರೆ. ಈ ರೀತಿ ಕುಡಿದು ವಾಹನ ಚಲಾಯಿಸಿ ಅಪಘಾತವಾಗಿ ಹಲವು ಜನರ ಸಾವಿಗೆ ಕಾರಣವಾದ ಹಲವಾರು ಉದಾಹಾರಣೆಗಳಿವೆ. ಕಡಿದು ವಾಹನ ಚಲಾಯಿಸುವುದರಿಂದ ರಸ್ತೆಯಲ್ಲಿರುವ ಸಂಚಾರಿಸುವ ಪಾದಚಾರಿಗಳು ಮತ್ತು ಇತರ ವಾಹನ ಸವಾರರಿಗೂ ಅಪಾಯವಿದೆ. ಕುಡಿದ ಮತ್ತಿನಲ್ಲಿ ಹೋಗಿ ಅವರಿಗೂ ಡಿಕ್ಕಿ ಹೊಡೆಯುವ ಸಾಧ್ಯತೆಗಳಿದೆ.
ನ್ಯಾಶನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ಪ್ರಕಾರ, ಕೇರಳವು 2018 ರಲ್ಲಿ ದೇಶದಲ್ಲಿ ಅತಿ ಹೆಚ್ಚು ರಸ್ತೆ ಅಪಘಾತಗಳನ್ನು ದಾಖಲಿಸಿದೆ. ಅದೇ ವರ್ಷದಲ್ಲಿ, ಭಾರತದ ಇತರೆ ರಾಜ್ಯಗಳಲ್ಲಿ ಅತಿ ಹೆಚ್ಚು ರಸ್ತೆ ಅಪಘಾತ ಸಾವುಗಳನ್ನು ಸಂಭವಿಸಿದೆ. ಕೇರಳದಲ್ಲಿ ರಸ್ತೆ ಅಪಘಾತಗಳು ಸಂಭವಿಸಲು ಪ್ರಮುಖ ಕಾರಣವಾಗುವ ಅಂಶಗಳೆಂದರೆ ಅಜಾಗರೂಕ ಚಾಲನೆ, ವಾಹನಗಳ ಓವರ್‌ಲೋಡ್, ಕಳಪೆ ರಸ್ತೆ ಮೂಲಸೌಕರ್ಯ ಮತ್ತು ಸಂಚಾರ ನಿಯಮಗಳ ಜಾರಿ ಕೊರತೆ. ಕೊಚ್ಚಿಯಲ್ಲಿ ಇತ್ತೀಚೆಗೆ ನಡೆದಂತೆ, ಕುಡಿದು ವಾಹನ ಚಾಲನೆ ಮಾಡುವುದು ಕೂಡ ಒಂದು ಪ್ರಮುಖ ಕಾರಣ.
ಭಾರತದಲ್ಲಿ ಮದ್ಯಪಾನದ ವಿರುದ್ಧ ಕಠಿಣ ಕಾನೂನು ಜಾರಿಯಲ್ಲಿದೆ. 1988ರ ಮೋಟಾರು ವಾಹನ ಕಾಯ್ದೆ 180ನೇ ಕಲಾಂನ ಪ್ರಕಾರ ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಗಂಭೀರ ಅಪರಾಧವಾಗಿದೆ. ಯಾವುದೇ ಚಾಲಕನ 100 ಎಂ ಎಲ್ ರಕ್ತದಲ್ಲಿ ಮದ್ಯದ ಅಂಶವು 30 ಎಂ ಜಿ ಗಿಂತಲೂ ಹೆಚ್ಚಿದ್ದು ಬ್ರೆತ್ ಅನಲೈಸರ್‌ನಲ್ಲಿ ಪತ್ತೆಯಾದರೆ ಮೊದಲ ಅಪರಾಧಕ್ಕೆ 2 ಸಾವಿರ ರೂ. ದಂಡ, ಎರಡು ವರ್ಷ ಜೈಲು ಶಿಕ್ಷೆ. ಅಥವಾ ಎರಡನ್ನೂ ಕೂಡ ನ್ಯಾಯಾಲಯ ವಿಧಿಸಬಹುದು .ಎರಡನೇ ಬಾರೀ ಇದೇ ರೀತಿ ತಪ್ಪು ಮಾಡಿದರೆ, ಎರಡು ವರ್ಷ ಜೈಲು, ಮೂರು ವರ್ಷ ಜೈಲು ಶಿಕ್ಷೆ ಜೊತೆಗೆ ಡ್ರೈವಿಂಗ್ ಲೈಸೆನ್ಸ್ ರದ್ದುಗೊಳಿಸಬಹುದು.
ನೆನಪಿರಲಿ, ನಿಮ್ಮ ಕುಡಿತದ ಅಮಲಿನಿಂದ ಜೀವ ಹೋಗುವುದು ಮುಗ್ಧರದ್ದು. ಕುಡಿದ ಮತ್ತಿನಲ್ಲಿ ಆದ ಹಿಟ್ ಅಂಡ್ ರನ್ ಕೇಸ್ ಗಳು ದೇಶದಲ್ಲಿ ಅಗಾಗ ಸಂಭವಿಸುತ್ತಿರುತ್ತದೆ. ಅತಿ ಪಾನಮತ್ತದ ಕೆಲವರು ಮನಸೋ ಇಚ್ಚೆ ಕಾರು ಚಲಾಯಿಸುತ್ತಾರೆ, ಎಷ್ಟೇ ಕಠಿಣ ಕಾನೂನು ಇದ್ದರು ಕುಡಿದು ವಾಹನ ಚಲಾಯಿಸಿ ಇನ್ನೊಬ್ಬರಿಗೆ ತೊಂದರೆ ಕೊಟ್ಟು ತಾವೂ ಅಪಾಯಕ್ಕೆ ಸಿಲುಕುವ ವರದಿಗಳು ದಿನವೂ ವರದಿಯಾಗುತ್ತಲೇ ಇವೆ. ಮದ್ಯಪಾನ ಆಗೊಮ್ಮೆ ಈಗೊಮ್ಮೆ ಅಂತ ಹೇಳಿ ಅದೊಂದು ಚಟವಾಗದ ಹಾಗೆ ನೋಡಿಕೊಳ್ಳಿ.


Click it and Unblock the Notifications