ಟ್ರಾಫಿಕ್‌ನಿಂದ ಬೆಂಗಳೂರಿಗೆ ಇದೆಂತ ಅಪಖ್ಯಾತಿ: ಲಂಡನ್ ನಂತರ ಬೆಂಗಳೂರೇ!

ಬೆಂಗಳೂರು ನಗರ ಐಟಿ ಸಿಟಿ, ಸಿಲಿಕಾನ್ ಸಿಟಿ ಹೇಗೆ ಹಲವಾರು ಹೆಸರುಗಳಿಂದ ಕರೆಯುತ್ತಾರೆ. ಆದರೆ ರಾಜ್ಯದ ಹೆಮ್ಮೆಯ ರಾಜಧಾನಿ ಟ್ರಾಫಿಕ್ ನಿಂದ ವಿಶ್ವದಲ್ಲೇ ಮತ್ತೊಮ್ಮೆ ಕುಖ್ಯಾತಿಗೆ ಪಾತ್ರವಾಗಿದೆ. ಬೆಂಗಳೂರು 2022ರಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಜನದಟ್ಟಣೆಯ ಎರಡನೇ ನಗರ ಎಂಬ ಕುಖ್ಯಾತಿಗೆ ಒಳಗಾಗಿದೆ.

2022ರಲ್ಲಿ ಜಗತ್ತಿನ ಅತ್ಯಂತ ಜನದಟ್ಟಣೆಯ ನಗರಗಳ ಪಟ್ಟಿ ಬಿಡುಗಡೆಯಾಗಿದೆ. ಈ ಪಟ್ಟಿಯಲ್ಲಿ ಲಂಡನ್‌ ಮೊದಲ ಸ್ಥಾನದಲ್ಲಿದ್ದರೆ, ನಮ್ಮ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಇಂಗ್ಲೆಂಡ್‌ನ ಲಂಡನ್‌ನ ನಗರ ಅಗ್ರಸ್ಥಾನದಲ್ಲಿದ್ದರೆ, ಬೆಂಗಳೂರಿನ ಬಿಬಿಎಂಪಿ ವಲಯದಲ್ಲಿ ಇರುವ ಟ್ರಾಫಿಕ್‌ನ ಆಧಾರದಲ್ಲಿ ಟ್ರಾಫಿಕ್‌ ಇಂಡೆಕ್ಸ್‌ ಅನ್ನು ಟಾಮ್‌ ಟಾಮ್ ಕಂಪನಿಯು ಇತ್ತೀಚೆಗೆ ವರದಿಯನ್ನು ಪ್ರಕಟಿಸಿದೆ. ಈ ವರದಿಯ ಪ್ರಕಾರ, ಬೆಂಗಳೂರಿನ ಮಧ್ಯಭಾಗದಲ್ಲಿ ಪ್ರತಿ 10 ಕಿಲೋಮೀಟರ್‌ ಪ್ರಯಾಣಕ್ಕೆ ಬರೋಬ್ಬರಿ 29 ನಿಮಿಷ 10 ಸೆಕೆಂಡ್‌ಗಳು ಬೇಕಾಗುತ್ತದೆ.

ಟ್ರಾಫಿಕ್‌ನಿಂದ ಬೆಂಗಳೂರಿಗೆ ಇದೆಂತ ಅಪಖ್ಯಾತಿ: ಲಂಡನ್ ನಂತರ ಬೆಂಗಳೂರೇ!

2022ರಲ್ಲಿ ಜಗತ್ತಿನ ಅತ್ಯಂತ ಜನದಟ್ಟಣೆಯ ನಗರಗಳ ಪಟ್ಟಿಯಲ್ಲಿ ಐರ್ಲೆಂಡ್‌ ದೇಶದ ಡುಬ್ಲಿನ್‌ ನಗರ ಮೂರನೇ ಸ್ಥಾನದಲ್ಲಿದೆ. ಇನ್ನು ನಂತರದ ಸ್ಥಾನಗಳಲ್ಲಿ ಜಪಾನ್‌ದೇಶದ ಸ್ಯಾಪ್ಪರೋ ಹಾಗೂ ಇಟಲಿಯ ಮಿಲಾನ್‌ ನಗರಗಳಿವೆ. ಇನ್ನು ಭಾರತದ ಪುಣೆ ನಗರ ಆರನೇ ಸ್ಥಾನದಲ್ಲಿದೆ. ಇನ್ನು ಭಾರತದ ಇತರ ನಗರಗಳಾದ ದೆಹಲಿ 34ನೇ ಸ್ಥಾನದಲ್ಲಿದ್ದರೆ, ಮುಂಬೈ 47ನೇ ನಗರದಲ್ಲಿದೆ. ಮಿಲಾನ್‌ ನಗರದಲ್ಲಿ 27 ನಿಮಿಷ 30 ಸೆಕೆಂಡ್‌ ಬೇಕಾಗುತ್ತದೆ ಎಂದು ಹೇಳಲಾಗಿದೆ.

ಪಿಕ್ ಹವರ್ ಗಳಲ್ಲಿ ಬೆಂಗಳೂರು ನಗರದಲ್ಲಿ ಗಂಟೆಗೆ ಗರಿಷ್ಠ 18 ಕಿ.ಮೀ ವೇಗದಲ್ಲಿ ಮಾತ್ರ ಚಲಿಸಲು ಸಾಧ್ಯ. 2021ರಲ್ಲಿ ಬೆಂಗಳೂರು ನಗರದಲ್ಲಿ ಗಂಟೆಗೆ 14 ಕಿ.ಮೀ ವೇಗದಲ್ಲಿ ಮಾತ್ರ ಹೋಗಬೇಕಾದ ಪರಿಸ್ಥಿತಿ ಇತ್ತು ಎಂದು ಕೂಡ ಟಾಮ್ ಟಾಮ್ ವರದಿಯಲ್ಲಿ ತಿಳಿಸಿದೆ. ಈ ವರದಿಯ ಪ್ರಕಾರ, ಲಂಡನ್‌ ವಿಶ್ವದಲ್ಲೇ ಅತಿ ಹೆಚ್ಚು ಜನದಟ್ಟಣೆಯ ನಗರವಾಗಿದ್ದು, ಇನ್ನು ವಿಶ್ವ ಪ್ರಖ್ಯಾತ ಲಂಡನ್ ನಗರದಲ್ಲಿ 10 ಕಿ.ಮೀ ಪ್ರಯಾಣ ಮಾಡಲು 36 ನಿಮಿಷ 20 ಸೆಕೆಂಡ್‌ ಸಮಯ ಬೇಕಾಗುತ್ತದೆ ಎಂದು ವರದಿಯಲ್ಲಿ ಹೇಳಿದೆ.

ಇನ್ನು ಮೆಟ್ರೋ ಏರಿಯಾ ಟ್ರಾಫಿಕ್ ವಿಭಾಗದಲ್ಲಿ 5ನೇ ಸ್ಥಾನದಲ್ಲಿದೆ. ಇನ್ನು ಕೊಲಂಬಿಯಾದ ಬಗೋಟಾ ನಗರವು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನು ನಂತರದ ಸ್ಥಾನಗಳಲ್ಲಿ ಮನಿಲಾ, ಸ್ಯಾಪ್ಪರೋ ಹಾಗೂ ಲಿಮಾ ನಗರಗಳಿವೆ. ಭಾರತದ ವಾಣಿಜ್ಯ ನಗರ ಮುಂಬೈ 6ನೇ ಸ್ಥಾನದಲ್ಲಿದ್ದದೆ. ಇನ್ನು ನಂತರದ ಸ್ಥಾನಗಳಲ್ಲಿ ನಗೋಯಾ, ಪುಣೆ, ಟೋಕಿಯೋ ಹಾಗೂ ಬುಚಾರೆಸ್ಟ್ ನಗರಗಳು ಸ್ಥಾನವನ್ನು ಪಡೆದುಕೊಂಡಿದೆ. ಮೆಟ್ರೋಪಾಲಿಟಿನ್ ನಗರದ ಟ್ರಾಫಿಕ್‌ ನಲ್ಲಿ ಪ್ರತಿ 10 ಕಿ.ಮೀ ಪ್ರಯಾಣ ಮಾಡಲು ಬೆಂಗಳೂರು ಜನರಿಗೆ 23 ನಿಮಿಷ 40 ಸೆಕೆಂಡ್‌ ಬೇಕಾಗುತ್ತದೆ.

ಈ ವರದಿಯಲ್ಲಿ ಸಿಟಿ ಸೆಂಟರ್ ನಗರ ಪ್ರದೇಶವಾಗಿದ್ದು, ನಗರದ ಅತ್ಯಂತ ಜನನಿಬಿಡ ಭಾಗಗಳನ್ನು ಒಳಗೊಂಡ 5 ಕಿ.ಮೀ ಪ್ರದೇಶದ ದಟ್ಟಣೆಯನ್ನು ಹೊಂದಿರುತ್ತದೆ. ಮೆಟ್ರೋ ಪ್ರದೇಶದಲ್ಲಿ ಇಡೀ ಪ್ರದೇಶದ ದಟ್ಟಣೆಯನ್ನು ಒಳಪಡಿಸುತ್ತದೆ. ಇದು ನಗರ ಮತ್ತು ಗ್ರಾಮೀಣ ಪ್ರದೇಶಗಳನ್ನೂ ಕೂಡ ಸೇರಿಸಿಕೊಳ್ಳುತ್ತದೆ. 2021ರಲ್ಲಿ ಬೆಂಗಳೂರು 10ನೇ ಅತಿ ಹೆಚ್ಚು ಜನದಟ್ಟಣೆಯ ನಗರವಾಗಿತ್ತು. 2020 ರಲ್ಲಿ ಬೆಂಗಳೂರು ನಗರದಲ್ಲಿ ಆರನೇ ಸ್ಥಾನದಲ್ಲಿತ್ತು. ಆದರೆ ಆ ವರ್ಷಗಳಲ್ಲಿ, ನಗರವನ್ನು ಸಿಟಿ ಸೆಂಟರ್ ಮತ್ತು ಮೆಟ್ರೋ ಪ್ರದೇಶಗಳಾಗಿ ವಿಭಜನೆ ಮಾಡಿರಲಿಲ್ಲ ಎಂಬುವುದು ಕೂಡ ಗಮನದಲ್ಲಿರಲಿ.

2022ರ ಅಕ್ಟೋಬರ್‌ 15 ಎಂಬುವುದು ಸಿಲಿಕಾನ್ ಸಿಟಿ ಬೆಂಗಳೂರಿಗೆ ಅತ್ಯಂತ ಕೆಟ್ಟ ದಿನಗವಾಗಿತ್ತು. ಅಂದು ಅತ್ಯಂತ ಕೆಟ್ಟ ಟ್ರಾಫಿಕ್‌ ದಿನ ಎಂದು ಈ ವರದಿಯಲ್ಲಿ ಹೇಳಲಾಗಿದೆ. ಅಂದು ಪ್ರತಿ 10 ಕಿಲೋಮೀಟರ್‌ ಪ್ರಯಾಣಕ್ಕಾಗಿ ಬೆಂಗಳೂರಿಗರು 33 ನಿಮಿಷ 50 ಸೆಕೆಂಡ್‌ ಸಮಯ ಬೇಕಾಗಿತ್ತು. ಆದರೆ, ಕಳೆದ ವರ್ಷ ಬೆಂಗಳೂರಿನಲ್ಲಿ ಸರಾಸರಿ ಪ್ರಯಾಣದ ಸಮಯ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಪ್ರತಿ 10 ಕಿಲೋಮೀಟರ್‌ ಪ್ರಯಾಣಕ್ಕೆ ಸರಾಸರಿ ಸಮಯ 40 ಸೆಕೆಂಡ್‌ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.

ಬೆಂಗಳೂರು ಮಹಾನಗರದಲ್ಲಿ ಸಂಚಾರ ದಟ್ಟಣೆ ಕಾರಣ ಅನೇಕ ರೀತಿಯ ಪಾರಿಣಮಗಳು ಬೀರುತ್ತದೆ. ಟ್ರಾಫಿಕ್ ಜಾಮ್‌ ನಿಂದ ಹೆಚ್ಚಿನ ಸಮಯ ವ್ಯಯ ಮಾಡುತ್ತಿದ್ದಾರೆ. ಅಲ್ಲದೇ ವಾಹನ ಚಾಲನೆಯ ವೆಚ್ಚ ಕೂಡ ಹೆಚ್ಚಾಗುತ್ತದೆ. ಹೆಚ್ಚು ಸಮಯ ವಾಹನ ಚಾಲನೆ ಸ್ಥಿತಿಯಲ್ಲಿ ಇಂಗಾಲ ಹೊರಸೂಸುವಿಕೆಯಲ್ಲಿ ಹೆಚ್ಚಾಗುತ್ತದೆ. ಬೆಂಗಳೂರು ನಿವಾಸಿಗಳೇ, ನಗರದ ಟ್ರಾಫಿಕ್ ಸಮಸ್ಯೆಯನ್ನು ಪರಿಹರಿಸಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಳ್ಳುತ್ತಿವೆ. ಹೊಸ ಟ್ರಾಫಿಕ್ ಪೊಲೀಸ್ ಠಾಣೆಗಳನ್ನು ಕೂಡ ಸ್ಥಾಪಿಸಲಾಗುತ್ತಿವೆ.

Article Published On: Thursday, February 16, 2023, 18:00 [IST]
English summary
30 minutes to cover 10 kms in bengaluru research second slowest city details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+