ಟ್ಯಾಂಕರ್'ನಿಂದ 30,000 ಲೀಟರ್ ಇಂಧನ ಕಳುವು ಮಾಡಿದ ಖದೀಮರು

ಪ್ರಪಂಚದಲ್ಲಿ ಪೆಟ್ರೋಲ್, ಡೀಸೆಲ್‌ ದುಬಾರಿಯಾಗಿರುವ ದೇಶಗಳಲ್ಲಿ ಭಾರತವು ಸಹ ಸೇರಿದೆ. ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಮೇಲೆ ಹೆಚ್ಚಿನ ತೆರಿಗೆ ವಿಧಿಸುವುದೇ ಇದಕ್ಕೆ ಪ್ರಮುಖ ಕಾರಣ. ಮದುವೆ ಹಾಗೂ ಇನ್ನಿತರ ಶುಭ ಸಮಾರಂಭಗಳಲ್ಲಿ ಉಡುರೊಗೆಯಾಗಿ ಪೆಟ್ರೋಲ್ ಅಥವಾ ಡೀಸೆಲ್ ಉಡುಗೊರೆಯಾಗಿ ನೀಡುವ ಹಲವು ವಿಲಕ್ಷಣ ಘಟನೆಗಳು ಭಾರತದಲ್ಲಿ ನಡೆದಿವೆ, ನಡೆಯುತ್ತಿವೆ.

ಟ್ಯಾಂಕರ್'ನಿಂದ 30,000 ಲೀಟರ್ ಇಂಧನ ಕಳುವು ಮಾಡಿದ ಖದೀಮರು

ಇದರ ಜೊತೆಗೆ ಆಗಾಗ್ಗೆ ಪೆಟ್ರೋಲ್, ಡೀಸೆಲ್ ಕಳ್ಳತನಕ್ಕೆ ಸಂಬಂಧಿಸಿದ ಘಟನೆಗಳು ವರದಿಯಾಗುತ್ತವೆ. ಪೆಟ್ರೋಲ್, ಡೀಸೆಲ್ ಕಳ್ಳತನದ ಘಟನೆಗಳು ಭಾರತದಲ್ಲಿ ಮಾತ್ರವಲ್ಲದೇ ವಿಶ್ವದ ಹಲವು ದೇಶಗಳಲ್ಲಿ ನಡೆಯುತ್ತಿವೆ. ಇದೇ ರೀತಿಯ ಘಟನೆಯೊಂದು ದೂರದ ಇಂಗ್ಲೆಂಡಿನಲ್ಲಿ ನಡೆದಿದೆ. ಈಗ ಇಂಗ್ಲೆಂಡಿನಲ್ಲಿ ಇಂಧನದ ಕೊರತೆ ಎದುರಾಗಿದೆ. ಇಂಧನ ಸಾಗಿಸುವ ಟ್ಯಾಂಕರ್ ಗಳಿಗೆ ಸಾಕಷ್ಟು ಸಂಖ್ಯೆಯಲ್ಲಿ ಚಾಲಕರು ಲಭ್ಯವಾಗದಿರುವುದೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ.

ಟ್ಯಾಂಕರ್'ನಿಂದ 30,000 ಲೀಟರ್ ಇಂಧನ ಕಳುವು ಮಾಡಿದ ಖದೀಮರು

ಚಾಲಕರ ಕೊರತೆಯಿಂದಾಗಿ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಇಂಧನದ ಕೊರತೆ ಎದುರಾಗಿದೆ. ಇದರಿಂದಾಗಿ ಇಂಗ್ಲೆಂಡಿನಲ್ಲಿ ಪೆಟ್ರೋಲ್ ಬಂಕ್ ಗಳ ಮುಂದೆ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿವೆ. ಇದರ ಜೊತೆಗೆ ವಾಹನ ಸವಾರರ ನಡುವೆ ಮಾತಿನ ಚಕಮಕಿ, ಜಗಳಗಳು ಏರ್ಪಡುತ್ತಿವೆ. ಇಂತಹ ಸನ್ನಿವೇಶದಲ್ಲಿಯೇ ಇಂಗ್ಲೆಂಡಿನಲ್ಲಿ ಇಂಧನ ಇಂಧನ ಕಳ್ಳತನದ ಘಟನೆ ವರದಿಯಾಗಿದೆ.

ಟ್ಯಾಂಕರ್'ನಿಂದ 30,000 ಲೀಟರ್ ಇಂಧನ ಕಳುವು ಮಾಡಿದ ಖದೀಮರು

ಇಂಗ್ಲೆಂಡ್‌ನಲ್ಲಿ ಪೋರ್ಟ್ಸ್‌ಮೌತ್‌ ಎಂಬ ಪಾರ್ಕಿಂಗ್ ಸ್ಥಳವಿದೆ. ಈ ಪಾರ್ಕಿಂಗ್ ಸ್ಥಳದಲ್ಲಿ ಟ್ರಕ್‌ಗಳು ನಿಲ್ಲುತವೆ. ಟ್ರಕ್ ಚಾಲಕರು ಈ ಸ್ಥಳದಲ್ಲಿ ತಮ್ಮ ಟ್ರಕ್ ಗಳಿಗೆ ಇಂಧನವನ್ನು ತುಂಬಿಸುವುದರ ಜೊತೆಗೆ ಈ ಜಾಗವನ್ನು ವಿಶ್ರಾಂತಿಗಾಗಿಯೂ ಬಳಸುತ್ತಾರೆ. ಇಲ್ಲಿ ನಿಲ್ಲಿಸಿದ್ದ ಇಂಧನದ ಟ್ಯಾಂಕರ್ ಟ್ರಕ್ ನಿಂದ ಇಂಧನವನ್ನು ಕಳುವು ಮಾಡಲಾಗಿದೆ.

ಟ್ಯಾಂಕರ್'ನಿಂದ 30,000 ಲೀಟರ್ ಇಂಧನ ಕಳುವು ಮಾಡಿದ ಖದೀಮರು

ವರದಿಗಳ ಪ್ರಕಾರ ಖದೀಮರು ಟ್ಯಾಂಕರ್ ಟ್ರಕ್ ಹಿಂದೆ ಪೈಪ್ ಅಳವಡಿಸಿ ಇಂಧನವನ್ನು ಕದ್ದಿದ್ದಾರೆ. ಭಾರೀ ಪ್ರಮಾಣದ ಇಂಧನವನ್ನು ಕಳುವು ಮಾಡಲಾಗಿದೆ ಎಂದು ವರದಿಯಾಗಿದೆ. ಈ ಟ್ಯಾಂಕರ್ ಟ್ರಕ್ 43 ಸಾವಿರ ಲೀಟರ್ ಇಂಧನದೊಂದಿಗೆ ಹೊರಟಿತ್ತು ಎಂದು ಹೇಳಲಾಗಿದೆ. ಆದರೆ ಈ ಟ್ಯಾಂಕರ್ ಟ್ರಕ್ ಅಂತಿಮವಾಗಿ ತಾನು ತಲುಪ ಬೇಕಿದ್ದ ಸ್ಥಳವನ್ನು ತಲುಪಿದಾಗ ಕೇವಲ 13,000 ಲೀಟರ್ ಇಂಧನ ಉಳಿದಿತ್ತು ಎಂದು ವರದಿಯಾಗಿದೆ.

ಟ್ಯಾಂಕರ್'ನಿಂದ 30,000 ಲೀಟರ್ ಇಂಧನ ಕಳುವು ಮಾಡಿದ ಖದೀಮರು

ಈ ಮೂಲಕ ಖದೀಮರು ಸುಮಾರು 30,000 ಲೀಟರ್ ಇಂಧನವನ್ನು ಕದ್ದಿದ್ದಾರೆ. ಇಂಗ್ಲೆಂಡಿನಲ್ಲಿ ಕಳುವು ಮಾಡಲಾದ ಇಂಧನದ ಬೆಲೆ ಭಾರತೀಯ ರೂಪಾಯಿ ಮೌಲ್ಯದಲ್ಲಿ ಸುಮಾರು ರೂ. 45 ಲಕ್ಷಗಳಾಗುತ್ತದೆ ಎಂದು ತಿಳಿದು ಬಂದಿದೆ. ಬೆಲೆ ಬಾಳುವ ಇಂಧನವನ್ನು ಲೂಟಿ ಮಾಡಿರುವುದರಿಂದ ಈ ಘಟನೆ ಇಂಗ್ಲೆಂಡಿನಲ್ಲಿ ಭಾರೀ ಸಂಚಲನವನ್ನು ಸೃಷ್ಟಿಸಿದೆ.

ಟ್ಯಾಂಕರ್'ನಿಂದ 30,000 ಲೀಟರ್ ಇಂಧನ ಕಳುವು ಮಾಡಿದ ಖದೀಮರು

ಸಕಾಲಕ್ಕೆ ಇಂಧನ ಪೂರೈಕೆಯಾಗದ ಕಾರಣಕ್ಕೆ ಇಂಗ್ಲೆಂಡಿನಲ್ಲಿರುವ ಹಲವಾರು ಪೆಟ್ರೋಲ್ ಬಂಕ್ ಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಇಂಧನದ ತೀವ್ರ ಕೊರತೆ ಎದುರಾಗಿರುವುದರಿಂದ ಕಾಳ ಸಂತೆಯಲ್ಲಿ ಮಾರಾಟ ಮಾಡುವ ಸಲುವಾಗಿ ಇಂಧನವನ್ನು ಕಳುವು ಮಾಡಿರಬಹುದು ಎಂದು ಶಂಕಿಸಲಾಗಿದೆ. ಇಂಗ್ಲೆಂಡ್ ಪೊಲೀಸರು ಈ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಟ್ಯಾಂಕರ್'ನಿಂದ 30,000 ಲೀಟರ್ ಇಂಧನ ಕಳುವು ಮಾಡಿದ ಖದೀಮರು

ಈಗ ಇಂಗ್ಲೆಂಡಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚುತ್ತಿದೆ. ಎಲೆಕ್ಟ್ರಿಕ್ ವಾಹನಗಳ ಮಾಲೀಕರು ಇಂಧನ ಕೊರತೆಯ ಸಮಸ್ಯೆಯಿಂದ ಪಾರಾಗಿದ್ದಾರೆ. ಆದರೆ ಪೆಟ್ರೋಲ್, ಡೀಸೆಲ್ ಎಂಜಿನ್ ವಾಹನಗಳನ್ನು ಹೊಂದಿರುವವರ ಪಾಡು ಹೇಳ ತೀರದಂತಾಗಿದೆ. ಭಾರತದಲ್ಲೂ ಪೆಟ್ರೋಲ್, ಡೀಸೆಲ್ ಎಂಜಿನ್ ವಾಹನಗಳನ್ನು ಹೊಂದಿರುವವರು ಪರದಾಡುತ್ತಿದ್ದಾರೆ.

ಟ್ಯಾಂಕರ್'ನಿಂದ 30,000 ಲೀಟರ್ ಇಂಧನ ಕಳುವು ಮಾಡಿದ ಖದೀಮರು

ಪೆಟ್ರೋಲ್, ಡೀಸೆಲ್ ಬೆಲೆಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದೇ ಇದಕ್ಕೆ ಕಾರಣ. ಈ ಕಾರಣಕ್ಕೆ ಭಾರತದ ವಾಹನ ಸವಾರರು ಜನರು ಈಗ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುವ ನಿರೀಕ್ಷೆಗಳಿವೆ.

ಟ್ಯಾಂಕರ್'ನಿಂದ 30,000 ಲೀಟರ್ ಇಂಧನ ಕಳುವು ಮಾಡಿದ ಖದೀಮರು

ಇತ್ತೀಚಿಗೆ ಇಂಗ್ಲೆಂಡ್ ಸರ್ಕಾರವು ಹೊಸ ಕಾನೂನನ್ನು ಜಾರಿಗೆ ತರಲು ಮುಂದಾಗಿದೆ. ಇಂಗ್ಲೆಂಡ್ ಸರ್ಕಾರವು ಫ್ಯೂಯಲ್ ಟ್ಯಾಂಕ್ ನಲ್ಲಿ ಕಡಿಮೆ ಇಂಧನವಿದ್ದರೆ ಕಾರ್ ಅನ್ನು ಚಲಾಯಿಸದಂತೆ ಆದೇಶಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಹೊಸ ಕಾನೂನನ್ನು ಜಾರಿಗೆ ತರಲಾಗುವುದು. ಈ ಕಾನೂನನ್ನು ಉಲ್ಲಂಘಿಸಿದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.

ಟ್ಯಾಂಕರ್'ನಿಂದ 30,000 ಲೀಟರ್ ಇಂಧನ ಕಳುವು ಮಾಡಿದ ಖದೀಮರು

ಫ್ಯೂಯಲ್ ಟ್ಯಾಂಕ್ ನಲ್ಲಿ ಕಡಿಮೆ ಇಂಧನವಿದ್ದಾಗ ಚಲಿಸಿದರೆ ಇದ್ದಕ್ಕಿದ್ದಂತೆ ಇಂಧನ ಖಾಲಿಯಾಗಿ ಅಪಘಾತವಾಗುವ ಸಾಧ್ಯತೆಗಳೂ ಇರುತ್ತವೆ. ಈ ಅಪಘಾತಗಳಿಂದ ಗಂಭೀರವಾದ ಗಾಯಗಳು ಉಂಟಾಗಬಹುದು ಅಥವಾ ಪ್ರಾಣ ಹಾನಿಯೂ ಸಂಭವಿಸ ಬಹುದು. ಇವುಗಳನ್ನು ಗಮನದಲ್ಲಿಟ್ಟುಕೊಂಡು ಇಂಗ್ಲೆಂಡ್ ಸರ್ಕಾರವು ಹೊಸ ಕಾನೂನನ್ನು ಜಾರಿಗೊಳಿಸಲು ಮುಂದಾಗಿದೆ.

ಟ್ಯಾಂಕರ್'ನಿಂದ 30,000 ಲೀಟರ್ ಇಂಧನ ಕಳುವು ಮಾಡಿದ ಖದೀಮರು

ವರದಿಗಳ ಪ್ರಕಾರ, ಈ ಹೊಸ ಕಾನೂನು ಶೀಘ್ರದಲ್ಲಿಯೇ ಜಾರಿಗೆ ಬರಲಿದೆ. ಈ ಕಾನೂನು ಜಾರಿಗೆ ಬಂದ ನಂತರ ನಿಯಮಗಳನ್ನು ಉಲ್ಲಂಘಿಸುವವರಿಗೆ ಭಾರೀ ಪ್ರಮಾಣದ ದಂಡ ವಿಧಿಸಲಾಗುವುದು. ವರದಿಗಳ ಪ್ರಕಾರ, ಭಾರತೀಯ ಕರೆನ್ಸಿ ಮೌಲ್ಯದಲ್ಲಿ ಸುಮಾರು 10 ಸಾವಿರ ರೂಪಾಯಿಗಳವರೆಗೆ ದಂಡ ವಿಧಿಸುವ ಸಾಧ್ಯತೆಗಳಿವೆ. ಜೊತೆಗೆ ನಿಯಮಗಳನ್ನು ಉಲ್ಲಂಘಿಸುವ ವ್ಯಕ್ತಿಯ ಚಾಲನಾ ಪರವಾನಗಿಯಲ್ಲಿ ಅನರ್ಹತೆ ಅಂಕಗಳನ್ನು ಸೇರಿಸಲಾಗುವುದು. ಕಾರಿನ ಇಂಧನ ಖಾಲಿಯಾದ ಕಾರಣಕ್ಕೆ ರಸ್ತೆ ಅಪಘಾತ ಸಂಭವಿಸಿದಲ್ಲಿ ದಂಡದ ಪ್ರಮಾಣವು ಮತ್ತಷ್ಟು ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
30000 liters fuel stolen from fuel tanker details
Story first published: Friday, October 1, 2021, 20:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X