ಶೀಘ್ರದಲ್ಲೇ ಈ ನಗರದಲ್ಲಿ ರಸ್ತೆಗಿಳಿಯಲಿವೆ 50 ಸಿ‌ಎನ್‌ಜಿ ಬಸ್‌ಗಳು

ಮಧ್ಯಪ್ರದೇಶದ ಇಂದೋರ್‌ನಲ್ಲಿ ಶೀಘ್ರವೇ 50 ಸಿಎನ್‌ಜಿ ಬಸ್‌ಗಳನ್ನು ರಸ್ತೆಗಿಳಿಸಲಾಗುವುದು. ಈ ಸಿಎನ್‌ಜಿ ಬಸ್‌ಗಳನ್ನು ಈ ಸೆಪ್ಟೆಂಬರ್ ಅಂತ್ಯದ ವೇಳೆಗೆ ಆರಂಭಿಸಲಾಗುವುದು ಎಂದು ವರದಿಯಾಗಿದೆ. ಇಂದೋರ್‌ನಲ್ಲಿ ಒಟ್ಟು 400 ಸಿಎನ್‌ಜಿ ಬಸ್‌ಗಳನ್ನು ಪರಿಚಯಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಶೀಘ್ರದಲ್ಲೇ ಈ ನಗರದಲ್ಲಿ ರಸ್ತೆಗಿಳಿಯಲಿವೆ 50 ಸಿ‌ಎನ್‌ಜಿ ಬಸ್‌ಗಳು

ಇದರಲ್ಲಿ 50 ಬಸ್‌ಗಳನ್ನು ಮೊದಲ ಹಂತದಲ್ಲಿ ಪರಿಚಯಿಸಲಾಗುತ್ತದೆ. ಮುಂಬರುವ ವರ್ಷಗಳಲ್ಲಿ ಸಿಎನ್‌ಜಿ ಬಸ್‌ಗಳ ಸಂಖ್ಯೆಯನ್ನು ಹಂತ ಹಂತವಾಗಿ ಹೆಚ್ಚಿಸಲಾಗುವುದು. ಉಳಿದ 350 ಬಸ್ಸುಗಳು 2021 ರ ಅಂತ್ಯದ ವೇಳೆಗೆ ಕಾರ್ಯಾಚರಣೆ ಆರಂಭಿಸುವ ನಿರೀಕ್ಷೆಗಳಿವೆ. ಸಿಎನ್‌ಜಿ ಮೂಲಕ ಕಾರ್ಯಾಚರಣೆ ಮಾಡುವುದರಿಂದ ಈ ಬಸ್ಸುಗಳು ಮಧ್ಯಪ್ರದೇಶದ ಸಾರಿಗೆ ಸಂಸ್ಥೆಗೆ ಲಾಭ ತರುವ ನಿರೀಕ್ಷೆಗಳಿವೆ.

ಶೀಘ್ರದಲ್ಲೇ ಈ ನಗರದಲ್ಲಿ ರಸ್ತೆಗಿಳಿಯಲಿವೆ 50 ಸಿ‌ಎನ್‌ಜಿ ಬಸ್‌ಗಳು

400 ಸಿಎನ್‌ಜಿ ಬಸ್‌ಗಳನ್ನು ರಸ್ತೆಗಿಳಿಸಲು 2 ವರ್ಷಗಳ ಹಿಂದೆಯೇ ಯೋಜನೆ ರೂಪಿಸಲಾಗಿತ್ತು. 2020 ರ ಏಪ್ರಿಲ್ ತಿಂಗಳಿನಲ್ಲಿ ಸಿಎನ್‌ಜಿ ಬಸ್‌ಗಳ ಸೇವೆಯನ್ನು ಆರಂಭಿಸಲು ನಿರ್ಧರಿಸಲಾಗಿತ್ತು. ಆದರೆ ಕೋವಿಡ್ 19 ವೈರಸ್ ಹರಡುವಿಕೆಯಿಂದಾಗಿ ಈ ಯೋಜನೆಯನ್ನು ಮುಂದೂಡಲಾಗಿತ್ತು. ಈ ಸಿಎನ್‌ಜಿ ಬಸ್‌ಗಳನ್ನು ಹಾಲಿ ಇರುವ ಮಾರ್ಗಗಳಲ್ಲಿ ಪರಿಚಯಿಸಲಾಗುತ್ತದೆ.

ಶೀಘ್ರದಲ್ಲೇ ಈ ನಗರದಲ್ಲಿ ರಸ್ತೆಗಿಳಿಯಲಿವೆ 50 ಸಿ‌ಎನ್‌ಜಿ ಬಸ್‌ಗಳು

ಈ ಸಿಎನ್‌ಜಿ ಬಸ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಬಸ್‌ಗಳ ನೈಜ ಸಂಚಾರ ಸಮಯವನ್ನು ಟ್ರ್ಯಾಕ್ ಮಾಡುವುದಕ್ಕಾಗಿ ಜಿಪಿಎಸ್ ಸೌಲಭ್ಯವನ್ನು ಸಹ ನೀಡಲಾಗಿದೆ. ಬೇಡಿಕೆ ಹೆಚ್ಚಿರುವ ಮಾರ್ಗಗಳಲ್ಲಿ ಈ ಸಿಎನ್‌ಜಿ ಬಸ್‌ಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಗಗನಕ್ಕೇರಿರುವುದರಿಂದ, ಸಿಎನ್‌ಜಿ ವಾಹನಗಳಿಗೆ ಈಗ ಬೇಡಿಕೆ ಹೆಚ್ಚಾಗುತ್ತಿದೆ.

ಶೀಘ್ರದಲ್ಲೇ ಈ ನಗರದಲ್ಲಿ ರಸ್ತೆಗಿಳಿಯಲಿವೆ 50 ಸಿ‌ಎನ್‌ಜಿ ಬಸ್‌ಗಳು

ವಿವಿಧ ರಾಜ್ಯ ಸರ್ಕಾರಗಳು ಸಹ ಸಿಎನ್‌ಜಿ ಬಸ್‌ಗಳ ಬಳಕೆಯನ್ನು ಹೆಚ್ಚಿಸಲು ಆದ್ಯತೆ ನೀಡುತ್ತಿವೆ. ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿಯೂ ಸಹ ಇತ್ತೀಚೆಗೆ ಸಿಎನ್‌ಜಿ ಬಸ್‌ಗಳ ಸಂಚಾರವನ್ನು ಆರಂಭಿಸಲಾಗಿದೆ. ಸಿಎನ್‌ಜಿ ಬಸ್‌ಗಳ ಕಾರ್ಯಾಚರಣೆ ಡೀಸೆಲ್ ಬಸ್‌ಗಳ ಕಾರ್ಯಾಚರಣೆಗಿಂತ ಅಗ್ಗವಾಗಿದೆ. ಜೊತೆಗೆ ಸಿ‌ಎನ್‌ಜಿ ಬಸ್‌ಗಳು ಡೀಸೆಲ್ ಬಸ್‌ಗಳ ರೀತಿಯಲ್ಲಿ ಪರಿಸರವನ್ನು ಕಲುಷಿತಗೊಳಿಸುವುದಿಲ್ಲ.

ಶೀಘ್ರದಲ್ಲೇ ಈ ನಗರದಲ್ಲಿ ರಸ್ತೆಗಿಳಿಯಲಿವೆ 50 ಸಿ‌ಎನ್‌ಜಿ ಬಸ್‌ಗಳು

ಈ ಹಿನ್ನೆಲೆಯಲ್ಲಿ ಹಲವು ರಾಜ್ಯ ಸರ್ಕಾರಗಳು ಸಿಎನ್‌ಜಿ ಬಸ್‌ಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ಸಿಎನ್‌ಜಿ ಜೊತೆಗೆ, ಎಲೆಕ್ಟ್ರಿಕ್ ಬಸ್ಸುಗಳ ಬಳಕೆಯನ್ನು ಹೆಚ್ಚಿಸಲು ಸಹ ಗಂಭೀರ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ರಾಜ್ಯ ಸರ್ಕಾರಗಳು ವಾಯು ಮಾಲಿನ್ಯದ ಸಮಸ್ಯೆಯನ್ನು ಕಡಿಮೆ ಮಾಡಲು ಮುಂದಾಗಿವೆ. ಕೇಂದ್ರ ಸರ್ಕಾರವು ಸಹ ಎಲೆಕ್ಟ್ರಿಕ್ ವಾಹನ ಸೇರಿದಂತೆ ಪರ್ಯಾಯ ಇಂಧನಗಳ ಬಳಕೆಯನ್ನು ಉತ್ತೇಜಿಸುತ್ತಿದೆ.

ಶೀಘ್ರದಲ್ಲೇ ಈ ನಗರದಲ್ಲಿ ರಸ್ತೆಗಿಳಿಯಲಿವೆ 50 ಸಿ‌ಎನ್‌ಜಿ ಬಸ್‌ಗಳು

ಇದರಿಂದ ಕಚ್ಚಾ ತೈಲ ಆಮದು ಪ್ರಮಾಣವು ಕಡಿಮೆಯಾಗುತ್ತದೆ. ಕಚ್ಚಾ ತೈಲ ಆಮದು ಪ್ರಮಾಣವು ಕಡಿಮೆಯಾಗುವುದರಿಂದ ಭಾರತದ ಆರ್ಥಿಕತೆ ಸುಧಾರಿಸುತ್ತದೆ. ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ತನ್ನ ಫೇಮ್ ಇಂಡಿಯಾ ಯೋಜನೆಯಡಿಯಲ್ಲಿ ವಿವಿಧ ಪ್ರೋತ್ಸಾಹಗಳನ್ನು ನೀಡುತ್ತಿದೆ.

ಶೀಘ್ರದಲ್ಲೇ ಈ ನಗರದಲ್ಲಿ ರಸ್ತೆಗಿಳಿಯಲಿವೆ 50 ಸಿ‌ಎನ್‌ಜಿ ಬಸ್‌ಗಳು

ಈ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನ ಸವಾರರಿಗೆ ಸಬ್ಸಿಡಿ ನೀಡುತ್ತದೆ. ಈಗ ಫೇಮ್ ಯೋಜನೆಯ ಎರಡನೇ ಹಂತ ಜಾರಿಯಲ್ಲಿದೆ ಎಂಬುದು ಗಮನಾರ್ಹ. ಕೇಂದ್ರ ಸರ್ಕಾರವು ಮಾತ್ರವಲ್ಲದೇ ವಿವಿಧ ರಾಜ್ಯ ಸರ್ಕಾರಗಳು ಸಹ ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಿಡಿ ನೀಡುತ್ತಿವೆ. ಗುಜರಾತ್ ಹಾಗೂ ದೆಹಲಿಯಂತಹ ರಾಜ್ಯಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಹೆಚ್ಚಿನ ಪ್ರಮಾಣದಲ್ಲಿ ಸಬ್ಸಿಡಿ ನೀಡಲಾಗುತ್ತದೆ.

ಶೀಘ್ರದಲ್ಲೇ ಈ ನಗರದಲ್ಲಿ ರಸ್ತೆಗಿಳಿಯಲಿವೆ 50 ಸಿ‌ಎನ್‌ಜಿ ಬಸ್‌ಗಳು

ಈಗ ಉತ್ತರಾಖಂಡ ಹಾಗೂ ಅಸ್ಸಾಂನಂತಹ ರಾಜ್ಯಗಳು ಸಹ ಎಲೆಕ್ಟ್ರಿಕ್ ವಾಹನಗಳ ಖರೀದಿದಾರರಿಗೆ ಸಬ್ಸಿಡಿ ನೀಡಲು ಮುಂದಾಗಿವೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ನೀಡುವ ಸಬ್ಸಿಡಿಯಿಂದಾಗಿ ಎಲೆಕ್ಟ್ರಿಕ್ ವಾಹನಗಳ ಬೆಲೆ ಕಡಿಮೆಯಾಗುತ್ತದೆ. ಇದರಿಂದ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಜನರು ಮುಂದೆ ಬರುತ್ತಾರೆ.

ಶೀಘ್ರದಲ್ಲೇ ಈ ನಗರದಲ್ಲಿ ರಸ್ತೆಗಿಳಿಯಲಿವೆ 50 ಸಿ‌ಎನ್‌ಜಿ ಬಸ್‌ಗಳು

ಈ ಕಾರಣಕ್ಕಾಗಿಯೇ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಸಬ್ಸಿಡಿ ಸೇರಿದಂತೆ ವಿವಿಧ ಕೊಡುಗೆಗಳನ್ನು ನೀಡುತ್ತಿವೆ. ಈ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗುವ ನಿರೀಕ್ಷೆಗಳಿವೆ. ಈಗ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಲಾಗುತ್ತಿದೆ.

ಶೀಘ್ರದಲ್ಲೇ ಈ ನಗರದಲ್ಲಿ ರಸ್ತೆಗಿಳಿಯಲಿವೆ 50 ಸಿ‌ಎನ್‌ಜಿ ಬಸ್‌ಗಳು

ಅದರಲ್ಲೂ ಎಲೆಕ್ಟ್ರಿಕ್ ಸ್ಕೂಟರ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ಕಾರು ಹಾಗೂ ಎಲೆಕ್ಟ್ರಿಕ್ ಬೈಕ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ನಿರೀಕ್ಷೆಗಳಿವೆ. ಹಲವು ಸ್ಟಾರ್ಟ್ ಅಪ್ ಕಂಪನಿಗಳು ಭಾರತದಲ್ಲಿ ತಮ್ಮ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುತ್ತಿವೆ. ಇವುಗಳ ಜೊತೆಗೆ Hyundai, MG Motor, Tata Motors ನಂತಹ ಖ್ಯಾತ ನಾಮ ಕಂಪನಿಗಳು ಸಹ ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುತ್ತಿವೆ.

ಶೀಘ್ರದಲ್ಲೇ ಈ ನಗರದಲ್ಲಿ ರಸ್ತೆಗಿಳಿಯಲಿವೆ 50 ಸಿ‌ಎನ್‌ಜಿ ಬಸ್‌ಗಳು

ಕಳೆದ ತಿಂಗಳಷ್ಟೇ ಕ್ಯಾಬ್ ಸೇವೆ ನಿಡುವಲ್ಲಿ ಜನಪ್ರಿಯತೆಯನ್ನು ಹೊಂದಿರುವ Ola ಕಂಪನಿಯು ತನ್ನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. Ola ಕಂಪನಿಯು ಭಾರತದಲ್ಲಿ S 1 ಹಾಗೂ S 1 Pro ಎಂಬ ಎರಡು ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಭಾರತದಲ್ಲಿ ಮಾರಾಟ ಮಾಡಲಿದೆ. ಕಂಪನಿಯು ಶೋರೂಂಗಳ ಬದಲು ಆನ್ ಲೈನ್ ಮೂಲಕ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಮಾರಾಟ ಮಾಡಲಿದೆ. ಗ್ರಾಹಕರು Ola ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಆನ್ ಲೈನ್ ಮೂಲಕ ರೂ. 499 ಪಾವತಿಸಿ ಬುಕ್ಕಿಂಗ್ ಮಾಡಬಹುದು. ಬುಕ್ಕಿಂಗ್ ಮಾಡುವ ಗ್ರಾಹಕರ ಮನೆ ಬಾಗಿಲಿಗೇ ಕಂಪನಿಯು ತನ್ನ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ವಿತರಣೆ ಮಾಡಲಿದೆ.

Most Read Articles

Kannada
English summary
400 cng buses to operate soon in indore details
Story first published: Monday, September 13, 2021, 10:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X