Just In
- 30 min ago Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- 12 hrs ago ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- 13 hrs ago ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- 15 hrs ago ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
Don't Miss!
- Sports ಟಿ20 ವಿಶ್ವಕಪ್ಗೆ ಭಾರತ ತಂಡದಲ್ಲಿ ಕೆಎಲ್ ರಾಹುಲ್ಗೆ ಸ್ಥಾನ?; ರಾಬಿನ್ ಉತ್ತಪ್ಪ ಹೇಳಿದ್ದೇನು?
- News karnataka Rain: ಬೆಂಗಳೂರಿನಲ್ಲಿ ಏ.23ರವರೆಗೆ ಮಳೆ- ಬೆಳಗಾವಿ ಮಂದಿಗೆ ಕುಂದಾ ಕೊಟ್ಟ ವರುಣ ಧಾರವಾಡ ಮಂದಿಗಿಂದು ಪೇಡಾ ಕೊಡ್ತಾನಾ?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Movies Neha Murder Case: ನೇಹಾ ಹತ್ಯೆ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡಬೇಕು ಎಂದು ಸಿನಿಮಾ ತಾರೆಯರ ಆಗ್ರಹ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆನ್ಲೈನ್ ಮೂಲಕ ಹರಾಜಾಗುತ್ತಿದೆ 12 ಲಕ್ಷ ಕಿ.ಮೀ ಚಲಿಸಿರುವ 42 ವರ್ಷ ಹಳೆಯ ಮರ್ಸಿಡಿಸ್ ಬೆಂಝ್ ಕಾರು
ಮರ್ಸಿಡಿಸ್ ಬೆಂಝ್ ಕಾರುಗಳು ತಂತ್ರಜ್ಞಾನ ಹಾಗೂ ವಿಶ್ವ ದರ್ಜೆಯ ಗುಣಮಟ್ಟದಿಂದಾಗಿ ವಿಶ್ವದಾದ್ಯಂತ ಹೆಸರುವಾಸಿಯಾಗಿವೆ. ಇತ್ತೀಚೆಗೆ ಹಳೆಯ ಮರ್ಸಿಡಿಸ್ ಬೆಂಝ್ ಡಬ್ಲ್ಯು 123 300 ಟಿಡಿ ಕಾರಿನ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಈ ಮರ್ಸಿಡಿಸ್ ಬೆಂಝ್ ಕಾರು 42 ವರ್ಷ ಹಳೆಯದಾಗಿದ್ದು, ಇದುವರೆಗೂ 7,82,000 ಮೈಲುಗಳಷ್ಟು ಅಂದರೆ ಸುಮಾರು 12.6 ಲಕ್ಷ ಕಿ.ಮೀಗಳಷ್ಟು ಚಲಿಸಿದೆ. ಇತ್ತೀಚೆಗೆ ಈ ಕಾರ್ ಅನ್ನು ಎಕ್ಸಿಬಿಷನ್ ಒಂದರಲ್ಲಿ ಪ್ರದರ್ಶಿಸಲಾಗಿತ್ತು. ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿರುವ ಈ ಕಾರಿನ ಮಾಲೀಕರು ಕಾರ್ ಅನ್ನು ಆನ್ಲೈನ್ ಮೂಲಕ ಹರಾಜಿಗಿಟ್ಟಿದ್ದಾರೆ.
ಪ್ರೀಮಿಯಂ ರೆಡ್ ಬಣ್ಣದಲ್ಲಿರುವ ಈ ಕಾರು ಇನ್ನೂ ಒಳ್ಳೆಯ ಕಂಡಿಷನ್'ನಲ್ಲಿದ್ದು, ಉತ್ತಮವಾಗಿ ಚಲಿಸುತ್ತಿದೆ. ಈ ಕಾರಿನ ಇಂಟಿರಿಯರ್ ಕೇಸರಿ ಬಣ್ಣವನ್ನು ಹೊಂದಿದೆ. ಈ ಕಾರಿನ ಮೂಲ ಮಾಲೀಕರು ಈ ಕಾರ್ ಅನ್ನು ಈಗ ಕಾರ್ ಅನ್ನು ಹರಾಜಿಗಿಟ್ಟಿರುವವರಿಗೆ 2006ರಲ್ಲಿ ಮಾರಾಟ ಮಾಡಿದ್ದಾರೆ ಎಂದು ಹೇಳಲಾಗಿದೆ.
MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್ಟಿಒ ಫಾರಂಗಳಿವು!
ಮಾರಾಟವಾದ ನಂತರ ಈ ಕಾರು 2 ಲಕ್ಷ ಕಿ.ಮೀ ಸಂಚರಿಸಿದೆ. ಈ ಕಾರನ್ನು ಮೆಂಟೆನ್ ಮಾಡಿರುವ ಕ್ರೆಡಿಟ್ ಇಬ್ಬರೂ ಮಾಲೀಕರಿಗೂ ಸಲ್ಲಬೇಕು. ಇಷ್ಟು ವರ್ಷಗಳ ಬಳಕೆಯ ನಂತರವೂ ಈ ಕಾರಿನಲ್ಲಿ ಸಣ್ಣ ಸ್ಕ್ರಾಚ್ ಹಾಗೂ ಸಣ್ಣ ಪ್ರಮಾಣದ ತುಕ್ಕುಗಳಾಗಿವೆ.
ಈ ಕಾರಿನ ಇಂಟಿರಿಯರ್ ಅನ್ನು ಸಹ ಉತ್ತಮವಾಗಿ ಮೆಂಟೆನ್ ಮಾಡಲಾಗಿದೆ. ಕಾರಿನ ಇಂಟಿರಿಯರ್ ಕ್ಲಾಸಿಕ್ ಲುಕ್ ಹೊಂದಿದೆ. ಆಗಿನ ಕಾಲದಲ್ಲಿದ್ದ ಫೀಚರ್'ಗಳನ್ನು ಈ ಕಾರಿನಲ್ಲಿ ನೀಡಲಾಗಿದೆ.
MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು
ಈ ಕಾರಿನಲ್ಲಿ ಎಡಗೈ ಡ್ರೈವ್ ಸ್ಟೀಯರಿಂಗ್ ನೀಡಲಾಗಿದೆ. ಈ ಕಾರಿನಲ್ಲಿ ಅಳವಡಿಸಲಾಗಿರುವ ಬ್ರೌನ್ ಲೆದರ್ ಸೀಟುಗಳು ಈ ಕಾರಿಗೆ ಕ್ಲಾಸಿಕ್ ಲುಕ್ ನೀಡುತ್ತವೆ. ಈ ಕಾರಿನಲ್ಲಿ ನಾಲ್ಕು ವೆಂಟ್, ಇನ್ಸ್'ಟ್ರೂಮೆಂಟ್ ಕ್ಲಸ್ಟರ್ ಹಾಗೂ ಮ್ಯೂಸಿಕ್ ಸಿಸ್ಟಂಗಳನ್ನು ನೀಡಲಾಗಿದೆ.
42 ವರ್ಷಗಳ ನಂತರವೂ ಈ ಕಾರಿನ ಇಂಟಿರಿಯರ್'ನಲ್ಲಿರುವ ಯಾವುದೇ ಉಪಕರಣಗಳಿಗೆ ಹಾನಿಯಾಗಿಲ್ಲ. ಮರ್ಸಿಡಿಸ್ ಬೆಂಝ್ ಡಬ್ಲ್ಯು 123 ಎಸ್ಯುವಿಯಾಗಿದ್ದು 1970ರ ದಶಕದಲ್ಲಿ ಬಹಳ ಜನಪ್ರಿಯವಾಗಿತ್ತು.
MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್
ಈ ಕಾರಿನಲ್ಲಿ ರೂಫ್ ರೇಲ್, ಎಲೆಕ್ಟ್ರಿಕ್ ವಿಂಡೋ, ಸನ್ರೂಫ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಸೆಂಟ್ರಲ್ ಲಾಕಿಂಗ್ನಂತಹ ಹಲವಾರು ಫೀಚರ್'ಗಳನ್ನು ಅಳವಡಿಸಲಾಗಿದೆ.
ಈ ಫೀಚರ್'ಗಳನ್ನು ಆ ಸಮಯದಲ್ಲಿ ಅತ್ಯಾಧುನಿಕ ಫೀಚರ್'ಗಳೆಂದು ಪರಿಗಣಿಸಲಾಗಿತ್ತು. ಮರ್ಸಿಡಿಸ್ ಬೆಂಝ್ ಡಬ್ಲ್ಯು 123 ಎಸ್ಯುವಿಯಲ್ಲಿ 3.0 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ.
MOST READ:ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು
ಈ ಎಂಜಿನ್ 77 ಬಿಹೆಚ್ಪಿ ಪವರ್ ಹಾಗೂ 155 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರು 4 ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್ ಹೊಂದಿದ್ದು ರೇರ್ ವ್ಹೀಲ್'ಗಳಿಗೆ ಪವರ್ ಕಳುಹಿಸುತ್ತದೆ.
ಮೂಲ: ಬ್ರಿಂಗ್ ಎ ಟ್ರೈಲರ್