5 ಕೋಟಿಯ ಬೃಹತ್ ಟ್ರೈನ್ ಎಂಜಿನ್ ಕಳ್ಳತನ: ಪತ್ತೆಹಚ್ಚಿದ್ದೇ ರೋಚಕ, ಭಾರತದಲ್ಲಿ ಎಲ್ಲವೂ ಸಾಧ್ಯ
ಭಾರತದಲ್ಲಿ ವಾಹನದ ಕಳ್ಳತನ ಇಂದಿಗೂ ಸಹ ಬಹುದೊಡ್ಡ ಸಮಸ್ಯೆ. ಈ ಕುರಿತಾದ ಹಲವಾರು ಪ್ರಕರಣಗಳನ್ನು ನಾವು ದಿನಂಪ್ರತಿ ಪೇಪರ್‌ಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಿರುತ್ತೇವೆ. ಬೆಂಗಳೂರಿನಲ್ಲಿ ಮನೆ ಮುಂದೆ ನಿಲ್ಲಿಸಿದ ವಾಹನಗಳು ರಾತ್ರೋ ರಾತ್ರಿ ನಾಪತ್ತೆಯಾಗುವುದು ಸಾಮಾನ್ಯವಾಗಿ ಬಿಟ್ಟಿದೆ ಎಂಬುದು ಎಲ್ಲರಿಗೂ ತಿಳಿದಿದೆ.
ಇತ್ತೀಚೆಗಷ್ಟೇ ಸುಮಾರು 5 ಕೋಟಿ ರೂಪಾಯಿಗಳು ಬೆಲೆ ಬಾಳುವ ರೈಲಿನ ಎಂಜಿನ್ (Train Engine) ಕಳ್ಳತನವಾಗಿತ್ತು. ಇದನ್ನು ಒಂದು ಕಡೆಯಿಂದ ಇನ್ನೊಂದು ಕಡೆ ಸಾಗಿಸುವ ಸಂಧರ್ಭದಲ್ಲಿ ಈ ರೈಲಿನ ಇಂಜಿನ್ ನಾಪತ್ತೆಯಾಗಿತ್ತು. ವರದಿಗಳ ಪ್ರಕಾರ ಇದನ್ನು ಸಬ್ ಕಾಂಟ್ರಾಕ್ಟರ್ ಕಳ್ಳತನ ಮಾಡಿದ್ದರೆಂದು ಮಾಹಿತಿಗಳು ಹರಿದಾಡುತ್ತಿತ್ತು.

ಇಷ್ಟು ದೊಡ್ಡ ಗಾತ್ರದ ಇಂಜಿನ್ (Train Engine) ಕಾಣೆಯಾಗಿದ್ದು ಎಲ್ಲರ ಮಧ್ಯೆ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿತ್ತು. ಇದೀಗ ಮತ್ತೆ ಈ ವಿಷಯ ಸುದ್ದಿಯಲ್ಲಿದೆ. ಈ ಬಾರಿ ಸುದ್ದಿಯಲ್ಲಿರುವುದು ಕಾಣೆಯಾದ ರೈಲಿನ ಇಂಜಿನ್ ಇದೀಗ ಪತ್ತೆಯಾಗಿರುವ ಕಾರಣಕ್ಕೆ. ಹೌದು, ಕೊನೆಗೂ ಕಾಣೆಯಾಗಿದ್ದ ಭಾರೀ ಗಾತ್ರದ ರೈಲ್ವೇ ಎಂಜಿನ್ ಅನ್ನು ಪೊಲೀಸರು ಟ್ರೇಸ್ ಮಾಡಿ ಪತ್ತೆ ಹಚ್ಚಿದ್ದಾರೆ.
ಇದೀಗ ಕಾಣೆಯಾಗಿದ್ದ ರೈಲ್ವೇ ಎಂಜಿನ್ (Train Engine) ಅನ್ನು ಪತ್ತೆ ಹಚ್ಚಿದ ಪೊಲೀಸರು ಅದನ್ನು ಮುಂಬೈಗೆ ಹಿಂದಿರುಗಿಸಿದ್ದಾರೆ. ಮಾಹಿತಿಗಳ ಪ್ರಕಾರ ಕಾಣೆಯಾಗಿದ್ದ ಈ ಎಂಜಿನ್ ಅನ್ನು ಮುಂಬೈನಿಂದ ಹರ್ಯಾಣದ ಕಾಲ್ಕ ಎಂಬ ಕಡೆ ರವಾನೆ ಮಾಡುವುದಕ್ಕಾಗಿ ಶ್ರೀ ಜೆಬಿ ಗ್ರೈನ್ ಡೀಲರ್ಸ್ ಎಂಬ ಕಂಪನಿಗೆ ಕಾಂಟ್ರಾಕ್ಟ್ ನೀಡಲಾಗಿತ್ತು.

ಇಷ್ಟು ಮಾತ್ರವಲ್ಲದೇ ಇದನ್ನು ಹರ್ಯಾಣದಿಂದ ವಾಪಸ್ ತರುವ ಜವಾಬ್ದಾರಿಯನ್ನು ಸಹ ಇದೇ ಶ್ರೀ ಜೆಬಿ ಗ್ರೈನ್ ಡೀಲರ್ಸ್ ಕಂಪನಿಯೇ ವಹಿಸಿಕೊಂಡಿತ್ತು. ಕಾಂಟ್ರಾಕ್ಟ್ ನಲ್ಲಿ ಹೇಳಿರುವಂತೆ ಈ ಕಂಪನಿಯ ಸಬ್ ಕಾಂಟ್ರಾಕ್ಟರ್ ರೈಲಿನ ಎಂಜಿನ್ ಅನ್ನು ಯಶಸ್ವಿಯಾಗಿ ಮುಂಬೈನಿಂದ ಹರ್ಯಾಣದ ಕಲ್ಕಾ ವನ್ನು ತಲುಪಿಸಿತ್ತು. ನಂತರ ಅಲ್ಲಿಂದ ZDM 3 ಎಂಜಿನ್ ಅನ್ನು ವಾಪಸ್ ತರಬೇಕಿತ್ತು.
ಇದಕ್ಕೆಲ್ಲ ಸೇರಿ ಸುಮಾರು 4.25 ಲಕ್ಷ ರೂಗಳನ್ನು ಶ್ರೀ ಜೆಬಿ ಗ್ರೈನ್ ಡೀಲರ್ಸ್ ಕಂಪನಿಯು ಸಂಬಳವಾಗಿ ಕೇಳಿಕೊಂಡಿತ್ತು. ವಾಪಸ್ ಎಂಜಿನ್ (Train Engine) ತೆಗೆದುಕೊಂಡು ಹೊರಟ ಸಬ್ ಕಾಂಟ್ರಾಕ್ಟರ್ ಮಿಸ್ಟರ್ ಶರ್ಮಾ ಎಂಬಾತ ಅದನ್ನು ತಲುಪಿಸಿರಲಿಲ್ಲ. ಇದರಿಂದ ಶಂಕೆಗೊಂಡ ಶ್ರೀ ಜೆಬಿ ಗ್ರೈನ್ ಡೀಲರ್ಸ್ ಸಬ್ ಕಾಂಟ್ರಾಕ್ಟರ್ ಶರ್ಮಾ ಮೇಲೆ ಕೇಸ್ ದಾಖಲಿಸಿದ್ದರು.
ಕೇಸ್ ದಾಖಲಿಸಿಕೊಂಡ ಪೊಲೀಸರು ಶರ್ಮಾ ಅವರನ್ನು ವಿಚಾರಣೆ ನಡೆಸಿದಾಗ ಸತ್ಯ ಸಂಗತಿ ಹೊರಬಿದ್ದಿದೆ. ದೊರೆತ ಮಾಹಿತಿಗಳ ಪ್ರಕಾರ ರೈಲಿನ ಎಂಜಿನ್ (Train Engine) ರಾಜ್‌ಸ್ಥಾನ್ ನ ಪೆಟ್ರೋಲ್ ಬಂಕ್ ಒಂದರಲ್ಲಿ ಪತ್ತೆ ಹಚ್ಚಲಾಗಿದೆ. ರೈಲಿನ ಎಂಜಿನ್ ಪತ್ತೆ ಹಚ್ಚಿದ ನಂತರ ಅದನ್ನು ಪೊಲೀಸರು ಮುಂಬೈಗೆ ಮರಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications