ಶೀಘ್ರದಲ್ಲಿಯೇ ರಸ್ತೆಗಿಳಿಯಲಿವೆ 500 ಹೊಸ ಬಸ್ಸುಗಳು

ಈಗ ಪ್ರಯಾಣಿಕರು ಬಸ್‌ಗಳಿಗಾಗಿ ಬಹಳ ಸಮಯ ಕಾಯಬೇಕಾದ ವಾತಾವರಣವಿದೆ. ಪ್ರಯಾಣಿಕರ ಕಾಯುವ ಸಮಯವನ್ನು ಕಡಿಮೆ ಮಾಡಲು ಹೆಚ್ಚಿನ ಬಸ್‌ಗಳ ಅವಶ್ಯಕತೆಯಿದೆ. ಈಗ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸುವ ಕಾರ್ಯವನ್ನು ಚುರುಕುಗೊಳಿಸಲಾಗಿದೆ.

ಶೀಘ್ರದಲ್ಲಿಯೇ ರಸ್ತೆಗಿಳಿಯಲಿವೆ 500 ಹೊಸ ಬಸ್ಸುಗಳು

ಶೀಘ್ರದಲ್ಲಿಯೇ 500 ಹೊಸ ಬಸ್ಸುಗಳು ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ರಸ್ತೆಗಿಳಿಯಲಿವೆ. ಕರೋನಾ ವೈರಸ್ ಎರಡನೇ ಅಲೆಯ ಆರ್ಭಟದ ಹಿನ್ನೆಲೆಯಲ್ಲಿಮಹಾರಾಷ್ಟ್ರದಲ್ಲಿ ಲಾಕ್‌ಡೌನ್ ಜಾರಿಗೊಳಿಸಲಾಗಿತ್ತು. ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡು ಬರುತ್ತಿರುವುದರಿಂದ ಮಹಾರಾಷ್ಟ್ರ ಸರ್ಕಾರವು ಲಾಕ್‌ಡೌನ್'ನಲ್ಲಿ ಸಡಿಲಿಕೆ ನೀಡಿದೆ.

ಶೀಘ್ರದಲ್ಲಿಯೇ ರಸ್ತೆಗಿಳಿಯಲಿವೆ 500 ಹೊಸ ಬಸ್ಸುಗಳು

ಮಹಾರಾಷ್ಟ್ರದಲ್ಲಿ ಕಳೆದ ಸೋಮವಾರದಿಂದ ಖಾಸಗಿ ಕಚೇರಿ ಸೇರಿದಂತೆ ಹಲವು ಸಂಘ ಸಂಸ್ಥೆಗಳನ್ನು ತೆರೆಯಲಾಗಿದೆ. ಇದರಿಂದ ಪ್ರತಿದಿನ ಸುಮಾರು 2 ಲಕ್ಷ ಪ್ರಯಾಣಿಕರು ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ.

ಶೀಘ್ರದಲ್ಲಿಯೇ ರಸ್ತೆಗಿಳಿಯಲಿವೆ 500 ಹೊಸ ಬಸ್ಸುಗಳು

ಬಸ್‌ಗಳಿಗೆ ಬೇಡಿಕೆ ಹೆಚ್ಚಾಗಿರುವುದರಿಂದ ಪ್ರಯಾಣಿಕರು ಬಸ್‌ಗಳಿಗಾಗಿ ಹೆಚ್ಚು ಸಮಯ ಕಾಯಬೇಕಾದ ವಾತಾವರಣವಿದೆ. ಈಗ ಖರೀದಿಸಲಾಗುವ 500 ಹೊಸ ಬಸ್‌ಗಳಲ್ಲಿ 400 ಬಸ್‌ಗಳು ಎಸಿ ಮಿನಿ ಬಸ್‌ಗಳಾಗಿವೆ.

ಶೀಘ್ರದಲ್ಲಿಯೇ ರಸ್ತೆಗಿಳಿಯಲಿವೆ 500 ಹೊಸ ಬಸ್ಸುಗಳು

400 ಎಸಿ ಮಿನಿ ಬಸ್‌ಗಳನ್ನು ಎರಡು ಹಂತಗಳಲ್ಲಿ ತಲಾ 200 ಬಸ್‌ಗಳಂತೆ ಪರಿಚಯಿಸಲಾಗುವುದು. 100 ಎಲೆಕ್ಟ್ರಿಕ್ ಬಸ್ಸುಗಳನ್ನು ಸಹ ಖರೀದಿಸಲಾಗುವುದು. ಕಳೆದ ಏಪ್ರಿಲ್‌ ತಿಂಗಳಿನಲ್ಲಿಯೇ 200 ಎಸಿ ಮಿನಿ ಬಸ್‌ಗಳನ್ನು ರಸ್ತೆಗಿಳಿಸ ಬೇಕಾಗಿತ್ತು.

ಶೀಘ್ರದಲ್ಲಿಯೇ ರಸ್ತೆಗಿಳಿಯಲಿವೆ 500 ಹೊಸ ಬಸ್ಸುಗಳು

ಆದರೆ ಕರೋನಾ ವೈರಸ್ ಎರಡನೇ ಅಲೆಯಿಂದಾಗಿ ವಿಳಂಬವಾಗಿತ್ತು. ಈಗ ಬಸ್‌ಗಳನ್ನು ಪರಿಚಯಿಸುವ ಕೆಲಸ ಭರದಿಂದ ಸಾಗಿದೆ. ಹೊಸ ಬಸ್‌ಗಳ ಆಗಮನದ ನಂತರ ಪ್ರಯಾಣಿಕರು ಬಸ್‌ಗಳಿಗೆ ಕಾಯುವ ಅವಧಿ ಕಡಿಮೆಯಾಗುವ ನಿರೀಕ್ಷೆಗಳಿವೆ.

ಶೀಘ್ರದಲ್ಲಿಯೇ ರಸ್ತೆಗಿಳಿಯಲಿವೆ 500 ಹೊಸ ಬಸ್ಸುಗಳು

ಭಾರತದಲ್ಲಿ ಕರೋನಾ ವೈರಸ್‌ನ ಎರಡನೇ ಅಲೆಯ ಪ್ರಭಾವ ನಿಧಾನವಾಗಿ ಕಡಿಮೆಯಾಗುತ್ತಿರುವುದರಿಂದ ಆಯಾ ರಾಜ್ಯ ಸರ್ಕಾರಗಳು ಲಾಕ್‌ಡೌನ್'ನಿಂದ ಹಲವು ಕ್ಷೇತ್ರಗಳಿಗೆ ವಿನಾಯಿತಿ ನೀಡುತ್ತಿವೆ. ಇದರಿಂದ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗತೊಡಗಿದೆ.

ಶೀಘ್ರದಲ್ಲಿಯೇ ರಸ್ತೆಗಿಳಿಯಲಿವೆ 500 ಹೊಸ ಬಸ್ಸುಗಳು

ಉತ್ತರ ರಾಜ್ಯಗಳಲ್ಲಿ ಪರಿಸ್ಥಿತಿಯು ಸಹಜ ಸ್ಥಿತಿಯತ್ತ ಮರಳುತ್ತಿದೆ. ದಕ್ಷಿಣ ರಾಜ್ಯಗಳಲ್ಲಿಯೂ ಪರಿಸ್ಥಿತಿಯು ನಿಧಾನವಾಗಿ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಲಾಕ್‌ಡೌನ್ ಅವಧಿಯಲ್ಲಿ ವಶಪಡಿಸಿಕೊಂಡಿದ್ದ ವಾಹನಗಳನ್ನು ಪೊಲೀಸರು ಅವುಗಳ ಮಾಲೀಕರಿಗೆ ಹಿಂತಿರುಗಿಸುತ್ತಿದ್ದಾರೆ.

ಶೀಘ್ರದಲ್ಲಿಯೇ ರಸ್ತೆಗಿಳಿಯಲಿವೆ 500 ಹೊಸ ಬಸ್ಸುಗಳು

ಅಗತ್ಯ ಕೆಲಸವಿದ್ದರೆ ಮಾತ್ರ ಮನೆಯಿಂದ ಹೊರ ಹೋಗಿ. ತಪ್ಪದೆ ಫೇಸ್ ಮಾಸ್ಕ್ ಧರಿಸಿ. ಹೆಚ್ಚುವರಿ ರಕ್ಷಣೆಗಾಗಿ ಎರಡು ಫೇಸ್ ಮಾಸ್ಕ್ ಧರಿಸುವುದು ಉತ್ತಮ.ಇದರಿಂದ ಕರೋನಾ ವೈರಸ್‌ ಸೋಂಕು ಹರಡುವುದರಿಂದ ಪಾರಾಗಬಹುದು.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
500 new buses to operate in Mumbai soon. Read in Kannada.
Story first published: Thursday, June 10, 2021, 12:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X