ರಸ್ತೆಯಲ್ಲಿ ಪ್ರತಿ 10 ಕಾರುಗಳಲ್ಲಿ 6 ಬಿಳಿ ಬಣ್ಣದ್ದಾಗಿವೆ! ಇದರ ಹಿಂದಿನ ರಹಸ್ಯವೇನು?
ಹೆದ್ದಾರಿಗಳಲ್ಲಿ ಅಥವಾ ಬಿಸಿಲಿನ ವಾತಾವರಣದಲ್ಲಿ ಗಾಢ ಬಣ್ಣದ ಕಾರಿಗೆ ಹೋಲಿಸಿದರೆ ಬಿಳಿ ಬಣ್ಣದ ಕಾರಿನಲ್ಲಿ ಹವಾನಿಯಂತ್ರಣ (AC) ಬಳಕೆ ಶೇ13 ರಷ್ಟು ಕಡಿಮೆಯಾಗಬಹುದು. ಬಿಳಿ ಅಥವಾ ಸಿಲ್ವರ್‌ನಂತಹ ಹಗುರವಾದ ಬಣ್ಣಗಳು ಇತರ ಬಣ್ಣಗಳಂತೆ ಸೂರ್ಯನ ಬೆಳಕನ್ನು ಹೀರಿಕೊಳ್ಳುವ ಬದಲು ಪ್ರತಿಬಿಂಬಿಸುತ್ತವೆ, ಇದು ತಂಪಾದ ಕ್ಯಾಬಿನ್ ತಾಪಮಾನಕ್ಕೆ ಕಾರಣವಾಗುತ್ತದೆ. ಹೀಗಾಗಿ ಒಳಾಂಗಣವನ್ನು ತಂಪಾಗಿಸಲು ಹೆಚ್ಚಿನ AC ಅಗತ್ಯವಿರುವುದಿಲ್ಲ, ಇದರಿಂದ ಮೈಲೇಜ್ ಕೂಡ ಹೆಚ್ಚಾಗಿ ಸಿಗುತ್ತದೆ ಎಂದು ಅಧ್ಯಯನಗಳು ಹೇಳುತ್ತಿವೆ. ಬನ್ನಿ ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.
ಬಿಳಿ ಬಣ್ಣದ ಕಾರಿಗೆ ಹೋಲಿಸಿದರೆ ಕಪ್ಪು ಕಾರಿಗೆ ಶೇ13 ಹೆಚ್ಚಿನ AC ಸಾಮರ್ಥ್ಯದ ಅಗತ್ಯವಿದೆ ಎಂದು ಒಂದು ಅಧ್ಯಯನದಲ್ಲಿ ಕಂಡುಹಿಡಿಯಲಾಗಿದೆ. ಬಿಳಿ ಬಣ್ಣದ ಕಾರುಗಳಲ್ಲಿ AC ಬಳಕೆಯಲ್ಲಿನ ಈ ಕಡಿತವು ಎಂಜಿನ್‌ನಿಂದ ಕಡಿಮೆ ಶಕ್ತಿಯನ್ನು ಪಡೆಯುವುದರಿಂದ ಮೈಲೇಜ್‌ನಲ್ಲಿ ಶೇ2 ರಷ್ಟು ಸುಧಾರಣೆಗೆ ಕಾರಣವಾಗುತ್ತದೆ. ಅನುಮಾನವಿದ್ದರೆ ನೀವು ಒಂದೇ ಸಮಯದಲ್ಲಿ ಬಿಸಿಲಿನಲ್ಲಿ ಬಿಳಿ ಹಾಗೂ ಕಪ್ಪು ಬಣ್ಣದ ಕಾರುಗಳನ್ನು ಪಕ್ಕ-ಪಕ್ಕದಲ್ಲಿ ನಿಲ್ಲಿಸಿ ಕ್ಯಾಬಿನ್ ತಾಪಮಾನವನ್ನು ಪರಿಶೀಲಿಸಬಹುದು.

ಬಿಳಿ ಬಣ್ಣದ ಕಾರಿನಲ್ಲಿ ಕ್ಯಾಬಿನ್ ಗಾಳಿಯ ಉಷ್ಣತೆಯು ಗಾಢ ಬಣ್ಣದ ಕಾರಿ (Dark - colored car)ಗಿಂತ ಸುಮಾರು 10°F ತಂಪಾಗಿರಬಹುದು, ಇದು ಬಿಸಿಲಿನಲ್ಲಿ ಲಾಂಗ್ ಡ್ರೈವ್‌ಗಳ ಸಮಯದಲ್ಲಿ AC ಬಳಕೆಯ ಅಗತ್ಯವನ್ನು ಮತ್ತಷ್ಟು ಕಡಿಮೆ ಮಾಡುತ್ತದೆ. ಆದ್ದರಿಂದ, ಬಿಸಿಲಿನ ಪರಿಸ್ಥಿತಿಗಳಲ್ಲಿ ಹೆದ್ದಾರಿ ಚಾಲನೆ ಮಾಡುವಾಗ ಬಿಳಿ ಬಣ್ಣದ ಕಾರನ್ನು ಆಯ್ಕೆ ಮಾಡುವುದರಿಂದ AC ಬಳಕೆಯನ್ನು ಸುಮಾರು ಶೇ13 ರಷ್ಟು ಗಮನಾರ್ಹವಾಗಿ ಕಡಿಮೆ ಮಾಡಬಹುದು.
ಇಂಧನ ಉಳಿತಾಯದ ಮೇಲಿನ ಸಕಾರಾತ್ಮಕ ಪರಿಣಾಮವು ಚಿಕ್ಕದಾಗಿದ್ದರೂ (ಸಾಮಾನ್ಯವಾಗಿ ಶೇ1 ರಿಂದ 2 ರಷ್ಟು), ದೀರ್ಘ ಹೆದ್ದಾರಿ ಪ್ರಯಾಣಗಳಂತಹ ನೂರಾರು ಕಿಲೋಮೀಟರ್‌ಗಳಲ್ಲಿ, ಬಿಳಿ ಕಾರು ಸಾಧಾರಣವಾದರೂ ಅಳೆಯಬಹುದಾದ ಉಳಿತಾಯವನ್ನು ನೀಡುತ್ತದೆ. ವಿಶೇಷವಾಗಿ ಬಿಸಿ ಪ್ರದೇಶಗಳಲ್ಲಿ ಅಥವಾ ಗರಿಷ್ಠ ಬೇಸಿಗೆಯಲ್ಲಿ ಇದರಿಂದ ಲಾಭ ಪಡೆಯಬಹುದು ಎಂದು ತಜ್ಞರು ಹೇಳುತ್ತಾರೆ.

ಈ ದಕ್ಷತೆಯ ಪ್ರಯೋಜನವು ಮುಖ್ಯವಾಗಿ ನೇರ ಯಾಂತ್ರಿಕ ಸುಧಾರಣೆಗಳಿಂದಲ್ಲ, ಬದಲಾಗಿ AC ಬಳಕೆಯಲ್ಲಿನ ಇಳಿಕೆಯಿಂದಾಗಿದೆ. ಅಂದರೆ ಕ್ಯಾಬಿನ್ ಅನ್ನು ಆರಾಮದಾಯಕವಾಗಿಸಲು AC ವ್ಯವಸ್ಥೆಯು ಹೆಚ್ಚು ಶ್ರಮಿಸಬೇಕಾಗಿಲ್ಲ. ಆದ್ದರಿಂದ, ಬಿಳಿ ಕಾರನ್ನು ಆಯ್ಕೆ ಮಾಡುವುದರಿಂದ ದೀರ್ಘ ಬಿಸಿಲಿನ ಡ್ರೈವ್‌ಗಳ ಸಮಯದಲ್ಲಿ ಒಟ್ಟಾರೆ ಮೈಲೇಜ್ ಸ್ವಲ್ಪ ಸುಧಾರಿಸಬಹುದು.
ಬಿಳಿ ಬಣ್ಣದ ಕಾರಿನ ಇತರ ಲಾಭಗಳು: ಭಾರತದ ಬಿಸಿಲಿನ ವಾತಾವರಣದಲ್ಲಿ ಅಲ್ಟ್ರಾ ವೈಲೆಟ್ ಕಿರಣಗಳು ಹೆಚ್ಚಾಗಿ ಬಣ್ಣ ಮಸುಕಾಗುವಿಕೆಗೆ ಕಾರಣವಾಗುತ್ತವೆ. ಬಣ್ಣವು ತನ್ನ ಹೊಳಪನ್ನು ಕಳೆದುಕೊಂಡರೂ ಸಹ, ಗಾಢ ಬಣ್ಣಗಳಿಗೆ ಹೋಲಿಸಿದರೆ ಬಿಳಿ ಬಣ್ಣವು ಮಸುಕಾಗುವಿಕೆಯು ಕಡಿಮೆ ಇರುತ್ತದೆ. ಬಣ್ಣವು ಮಸುಕಾಗಿದ್ದರೂ ಸಹ, ದೂರದಿಂದ ಅಷ್ಟಾಗಿ ಕಾಣುವುದಿಲ್ಲ.

ಬಿಳಿ ಕಾರಿಗೆ ಪುನಃ ಬಣ್ಣ ಬಳಿಯುವುದು ಸುಲಭ, ಏಕೆಂದರೆ ಬಿಳಿ ಬಣ್ಣವು ಸುಲಭವಾಗಿ ಲಭ್ಯವಿದ್ದು, ದುಬಾರಿ ಕಸ್ಟಮ್ ಟಿಂಟಿಂಗ್ ಅಗತ್ಯವಿಲ್ಲ. ಇನ್ನು ಗಾಢ ಬಣ್ಣಳಾದ ಕೆಂಪು ಮತ್ತು ಕಪ್ಪು, ಪ್ರತಿದಿನ ನೇರ ಸೂರ್ಯನ ಬೆಳಕಿಗೆ ಒಡ್ಡಿಕೊಂಡಾಗ ಬಣ್ಣ ಮಸುಕಾಗುವ ಮತ್ತು ಗೋಚರಿಸುವ ತೇಪೆಗಳಿಗೆ ಹೆಚ್ಚು ಒಳಗಾಗುತ್ತವೆ. ಹಾಗಾಗಿ ಬಿಳಿ ಕಾರುಗಳನ್ನು ನಿರ್ವಹಿಸುವುದು ಸುಲಭವಾಗುತ್ತದೆ.
ಹೆಚ್ಚಿನ ಮರುಮಾರಾಟ ಮೌಲ್ಯ: ಭಾರತದಲ್ಲಿ ಮರುಮಾರಾಟ ಮಾರುಕಟ್ಟೆ (ಸೆಕೆಂಟ್ ಹ್ಯಾಂಡ್ ಮಾರುಕಟ್ಟೆ) ಯಲ್ಲಿ ಬಿಳಿ ಕಾರುಗಳಿಗೆ ಬೇಡಿಕೆ ಹೆಚ್ಚಾಗಿರುತ್ತದೆ. ಉದ್ಯಮದ ಮಾಹಿತಿಯ ಪ್ರಕಾರ, 2024 ರಲ್ಲಿ ವಿಶ್ವಾದ್ಯಂತ ಮಾರಾಟವಾದ ಶೇ 49 ರಷ್ಟು ಕಾರುಗಳು ಬಿಳಿ ಬಣ್ಣದ್ದಾಗಿವೆ. ಭಾರತದಲ್ಲಿ, ರಸ್ತೆಯಲ್ಲಿರುವ 10 ಕಾರುಗಳಲ್ಲಿ ಸುಮಾರು 6 ಕಾರುಗಳು ಬಿಳಿ ಬಣ್ಣದ್ದಾಗಿದ್ದವು ಎಂದು ವರದಿಗಳು ಹೇಳಿವೆ.
ಇದರರ್ಥ ಖರೀದಿದಾರರು ಹೆಚ್ಚಾಗಿ ಹುಡುಕುವುದು ಮತ್ತು ಪ್ರೀಮಿಯಂ ಬೆಲೆಯನ್ನು ಪಡೆಯುವುದರಲ್ಲಿ ಇತರ ಬಣ್ಣಗಳಿಗೆ ಹೋಲಿಸಿದರೆ ಬಿಳಿ ಬಣ್ಣವು ಬೇಡಿಕೆ ಪಡೆದುಕೊಂಡಿದೆ. ತಟಸ್ಥ ಬಣ್ಣಗಳು - ವಿಶೇಷವಾಗಿ ಬಿಳಿ - ತಮ್ಮ ಮೌಲ್ಯವನ್ನು ಉತ್ತಮವಾಗಿ ಹಿಡಿದಿಟ್ಟುಕೊಳ್ಳುತ್ತವೆ. ಇವು ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಲ್ಲಿವೆ ಎಂದು ಡೀಲರ್‌ಶಿಪ್‌ಗಳು ಸಹ ಹೇಳುತ್ತಿವೆ.


Click it and Unblock the Notifications








